ವಾಹನ ಕಳ್ಳರು ಅತ್ಯಂತ ಸುಲಭವಾಗಿ ಕಳ್ಳತನ ಮಾಡುತ್ತಿದ್ದು, ಕೇವಲ 50 ಸೆಕೆಂಡ್‌ಗಳಲ್ಲಿ 50 ಲಕ್ಷ ರೂ. ಬೆಲೆಯ ಕಾರನ್ನು ಕದ್ದೊಯ್ದಿರುವ ವಿಡಿಯೋ ವೈರಲ್ ಆಗಿದೆ. ಕಳ್ಳರು ಯಾರೆಂದು ಗೊತ್ತಿದ್ದರೂ ಪೊಲೀಸರು ಸಾಮಾನ್ಯ ಜನರ ದೂರುಗಳಿಗೆ ಸ್ಪಂದಿಸುವುದಿಲ್ಲ ಎಂಬ ಸಾರ್ವಜನಿಕರ ಆಕ್ರೋಶ ಈ ಘಟನೆಯಿಂದ ಮತ್ತೆ ವ್ಯಕ್ತವಾಗಿದೆ.

ಬೆಂಗಳೂರು: ತಮ್ಮ ವಸ್ತುಗಳನ್ನು ಜೋಪಾನವಾಗಿಟ್ಟುಕೊಳ್ಳಲು ಮಾಲೀಕರು ಚಾಪೆ ಕೆಳಗೆ ನುಸುಳಿದರೆ, ಖದೀಮರು ರಂಗೋಲಿ ಕೆಳಗೆ ನುಸುಳುವುದು ಇದ್ದೇ ಇದೆ. ಅದು ಚಿಕ್ಕಪುಟ್ಟ ವಸ್ತುಗಳ ಕಳ್ಳತನದಿಂದ ಹಿಡಿದು ದೊಡ್ಡ ದೊಡ್ಡ ಮಟ್ಟದ ಕಳ್ಳತನದವರೆಗೂ ಇದು ಅನ್ವಯ ಆಗುತ್ತದೆ. ಅದರಲ್ಲಿಯೂ ಸೈಬರ್​ ಕ್ರಿಮಿನಲ್ಸ್​ ನೋಡಿದ್ರೆ ಅಬ್ಬಬ್ಬಾ ಇಷ್ಟೊಂದು ತಲೆ ಇರುವವರು ಯಾವುದಾದರೂ ಕಂಪೆನಿಯಲ್ಲಿ ಇದ್ದಿದ್ದರೆ ಅಥವಾ ದೇಶದ ರಕ್ಷಣಾ ಕ್ಷೇತ್ರದಲ್ಲಿ ಇದ್ದಿದ್ದರೆ ದೇಶ ಇನ್ನೂಮುಂದುವರೆಯುತ್ತಿತ್ತು. ಇಂಥ ಟ್ಯಾಲೆಂಟ್​ಗಳೆಲ್ಲಾ ಕ್ರಿಮಿನಲ್ಸ್​ ಆಗಿ ದೇಶಕ್ಕೆ ನಷ್ಟವಾಗುತ್ತಿದೆ ಎನ್ನುವಷ್ಟರ ಮಟ್ಟಿಗೆ ಮಾತನಾಡಿಕೊಳ್ಳುವುದು ಇದೆ.

ಕಳ್ಳರು ಯಾರೆಂದು ಗೊತ್ತಿದ್ದರೂ....

ಸೈಬರ್​ ಕ್ರಿಮಿನಲ್ಸ್​ ಭಾರಿ ದೊಡ್ಡ ಮಟ್ಟದ ಕಳ್ಳರು ಆದ್ರು ಬಿಡಿ. ಇಲ್ಲಿ ಹೇಳ್ತಿರೋದು ಕಾರುಗಳ್ಳರ ಬಗ್ಗೆ. ತಮ್ಮ ವಾಹನಗಳ ರಕ್ಷಣೆಗೆ ಮಾಲೀಕರು ಏನೆಲ್ಲಾ ಸರ್ಕಸ್​ ಮಾಡುವುದು ಇದೆ. ಆದರೆ ಕಳ್ಳರು ಅದನ್ನು ಅಷ್ಟೇ ಸುಲಭದಲ್ಲಿ ಎತ್ತಾಕಿಕೊಂಡು ಹೋಗಿಬಿಡುತ್ತಾರೆ. ಈಗ ಬಹುತೇಕ ಕಡೆಗಳಲ್ಲಿ ಸಿಸಿಟಿವಿ ಲಭ್ಯ ಇರುವ ಹಿನ್ನೆಲೆಯಲ್ಲಿ ಖದೀಮರ ಕೈಚಳಕ ಕಾಣಿಸುತ್ತದೆ. ಆದರೆ ಸಿಸಿಟಿವಿ ಇದ್ದರೂ, ಪೊಲೀಸರು ತಮ್ಮನ್ನು ಹಿಡಿಯೋದು ಕಷ್ಟ ಎನ್ನೋದು ಭಾರತದ ಕಳ್ಳರಿಗೆ ಚೆನ್ನಾಗಿ ಗೊತ್ತಿದೆ. ಕೆಲವು ಕಡೆಗಳಲ್ಲಿ ಇಂಥವರೇ ಕಳ್ಳರು ಎಂದು ಗೊತ್ತಿದ್ದರೂ, ವಾಹನ ಚಾಲಕರಿಗೆ ಅವರ ವಾಹನ ಸಿಗಲ್ಲ ಎನ್ನೋದೂ ವಾಹನ ಮಾಲೀಕರಿಗೆ ತಿಳಿದಿದೆ.

ಅದರಲ್ಲಿಯೂ ಬೈಕ್​ ಕಳ್ಳತನವಾದಾಗ, ಅದರ ಬಗ್ಗೆ ಪೊಲಿಸರಿಗೆ ದೂರು ಕೊಡಲು ಹೋದಾಗ ವಾಹನ ಮಾಲೀಕರು ಅನುಭವಿಸುವ ನೋವು ಆ ದೇವರಿಗೇ ಪ್ರೀತಿ. ತಮ್ಮ ಏರಿಯಾದಲ್ಲಿರುವ ಕಳ್ಳರು ಯಾರು ಎಂದು ಬಹುತೇಕ ಪೊಲೀಸರಿಗೆ ತಿಳಿದಿದ್ದರೂ, ಬೈಕ್​​ ಮಾತ್ರ ಸಿಗಲ್ಲ. ಅಲ್ಲಿ ಏನಾಗುತ್ತದೆ ಎನ್ನುವುದು ಬೈಕ್​ ಕಳೆದುಕೊಂಡವರು ಜಾಲತಾಣಗಳಲ್ಲಿ ಹಾಕುವ ಪೋಸ್ಟ್​ಗಳನ್ನು ನೋಡಿದರೆ ತಿಳಿಯುತ್ತದೆ ಬಿಡಿ. ವಿಐಪಿಗಳ ವಾಹನ ಕಳುವಾದರೆ ಯಾವ ರೀತಿಯ ಟ್ರೀಟ್​ಮೆಂಟ್​ ಸಿಗತ್ತೆ, ಸಾಮಾನ್ಯ ಜನರು ದೂರು ದಾಖಲಿಸಲು ಹೋದಾಗ, ಕೆಲವೊಮ್ಮೆ ಕಳ್ಳರು ಇವರೇ ಎಂದು ತೋರಿಸಿಕೊಟ್ಟರೂ ಅವರ ಪರಿಸ್ಥಿತಿ ಏನಾಗುತ್ತದೆ ಎನ್ನುವುದು ಹಲವು ಜನ ಹೇಳಿಕೊಳ್ಳುತ್ತಲೇ ಇರುತ್ತಾರೆ. ಇವೆಲ್ಲಾ ನೋಡಿದರೆ ಒಂದಷ್ಟು ಜನ ಪೊಲೀಸರು ಮಾಡುವ ಇಂಥ ಕೆಟ್ಟ ಕಾರ್ಯಗಳಿಂದ ಪೊಲೀಸರ ಮೇಲೆ ಜನರು ಎಷ್ಟರಮಟ್ಟಿಗೆ ವಿಶ್ವಾಸ ಇಟ್ಟುಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಇದು ಕಳ್ಳರಿಗೂ ವರದಾನವೂ ಆಗುತ್ತದೆ.

50 ಲಕ್ಷದ ಕಾರು...

ಇದೀಗ ಇಂಥದ್ದೇ ಒಂದು ಕಳ್ಳನ ವಿಡಿಯೋ ವೈರಲ್​ ಆಗಿದೆ. ಸ್ವಲ್ಪವೂ ಮೀನಾಮೇಷ ಎಣಿಸದೇ ರಾಜಾರೋಷವಾಗಿ ಕಳ್ಳನೊಬ್ಬ ಸುಮಾರು 50 ಲಕ್ಷ ಬೆಲೆ ಬಾಳುವ ಕಾರನ್ನು ಹೇಗೆ ಐವತ್ತೇ ಸೆಕೆಂಡ್​ನಲ್ಲಿ ಎಗರಿಸಿದ್ದಾನೆ ಎನ್ನುವ ಸಿಸಿಟಿವಿ ಫುಟೇಜ್​ ವೈರಲ್​ ಆಗಿದೆ. ರಸ್ತೆ ಮೇಲೆ ನಿಲ್ಲಿಸಿರುವ ವಾಹವನ್ನು ಈತ ಆರಾಮಾಗಿ ಬಂದು ಅದನ್ನು ತೆಗೆದು ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ಇದರ ಬಗ್ಗೆ ಇದೀಗ ವಿಭಿನ್ನ ರೀತಿಯ ಕಮೆಂಟ್ಸ್​ ಬರುತ್ತಿದ್ದು, ಹೆಚ್ಚಿನವರು, ಮತ್ತದೇ ಪೊಲೀಸರು ವಿಷಯವನ್ನು ಹೇಳುತ್ತಿದ್ದಾರೆ.

View post on Instagram