ಕಳಪೆ ಗುಣಮಟ್ಟದ ಕಾರಣ ನೀಡಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎವರೆಸ್ಟ್‌ ಮತ್ತು ಲಾಲ್ಜೀ ಗೋಧೂ ಕಂಪನಿಗಳ ಇಂಗು ಮಾರಾಟವನ್ನು ನಿಷೇಧಿಸಿದೆ. ಈ ಕ್ರಮ ತಕ್ಷಣದಿಂದ ಜಾರಿಗೆ ಬಂದಿದ್ದು, ಎವರೆಸ್ಟ್‌ನ ಇತರ ಮೂರು ಮಸಾಲಾ ಉತ್ಪನ್ನಗಳಲ್ಲೂ ನಿಯಮ ಉಲ್ಲಂಘನೆ ಪತ್ತೆಯಾಗಿದೆ.

ನವದೆಹಲಿ: ಕಳಪೆ ಗುಣಮಟ್ಟ ಹಿನ್ನೆಲೆ ಎವರೆಸ್ಟ್‌ ಫುಡ್‌ ಪ್ರಾಡಕ್ಟ್ಸ್ ಮತ್ತು ಲಾಲ್ಜೀ ಗೋಧೂ ಕಂಪನಿಗಳ ಇಂಗು ಮಾರಾಟಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿರ್ಬಂಧ ವಿಧಿಸಿದೆ.

ನಿಷೇಧಿತ ಆದೇಶ

ಈ ಕುರಿತು ಎಫ್‌ಎಸ್‌ಎಸ್‌ಎಐ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಮತ್ತು ಲಾಲ್ಜೀ ಗೋಧೂ ಕಂಪನಿಯ ಉತ್ಪನ್ನಗಳ ಇಂಗು ಕಳಪೆ ಗುಣಮಟ್ಟದ್ದಾಗಿರುವುದರಿಂದ ಅವುಗಳ ವಿರುದ್ಧ ನಿಷೇಧಿತ ಆದೇಶಗಳನ್ನು ಹೊರಡಿಸಲಾಗಿದೆ’ ಎಂದಿದೆ. ತಕ್ಷಣದಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಎವರೆಸ್ಟ್‌ವಿರುದ್ಧ ತಪ್ಪಾಗಿ ಬ್ರ್ಯಾಂಡ್‌ ಮಾಡಿರುವ ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ: ಟಾಟಾ ಗ್ರೂಪ್‌ನಲ್ಲಿ ಬಿಗ್ ಸಂಚಲನ, ತನ್ನ ಪಾಲಿನ ಷೇರು ಪಡೆದುಕೊಂಡು ಹೊರಬರಲು ಶಾಪೂರ್ಜಿ ಪಲ್ಲೊಂಜಿ ಗ್ರೂಪ್ ನಿರ್ಧಾರ!

ಎವರೆಸ್ಟ್‌ನ ಎಗ್ ಕರಿ ಮಸಾಲ, ಚಿಕನ್ ಮಸಾಲ ಮತ್ತು ಗರಂ ಮಸಾಲಗಳಲ್ಲಿಯೂ ಸಹ ಎಫ್‌ಎಸ್‌ಎಸ್‌ಎಐ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಿದೆ. ಆದಾಗ್ಯೂ, ಈ ಮೂರು ಉತ್ಪನ್ನಗಳನ್ನು ನಿಷೇಧಿಸಿಲ್ಲ.

ಇದನ್ನೂ ಓದಿ: ಭೂಕಂಪದಿಂದ ಬಚಾವಾಗಿ ಹೊರಬಂದ ಉದ್ಯೋಗಿ, ಮನುಷ್ಯತ್ವ ಮರೆತ ಕಂಪನಿ ಸೂಚನೆಯಂತೆ ಅಂಗಡಿಯೊಳಗೆ ಹಣ ತರಲು ಹೋಗಿ ಯುವತಿ ಸಾವು!

Scroll to load tweet…