ಇಂಡಿಗೋ ಗಗನಸಖಿ ಶ್ವೇತಾ ಪಾಂಡೆ ತಮ್ಮ ತಂದೆಯ ಹುಟ್ಟುಹಬ್ಬದಂದು ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ಸರ್ಪ್ರೈಸ್ ಆಗಿ ಸ್ವಾಗತಿಸಿ ಗಮನ ಸೆಳೆದಿದ್ದಾರೆ. ತಂದೆಯ ಕಾಲಿಗೆ ನಮಸ್ಕರಿಸಿದ ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು ಮಗಳನ್ನು ಯೂನಿಫಾರ್ಮ್‌ನಲ್ಲಿ ವೈಯಕ್ತಿಕವಾಗಿ ತಂದೆ ಮೊದಲ ಬಾರಿಗೆ ಕಂಡು ಹೆಮ್ಮೆಪಟ್ಟ ಕ್ಷಣ ಇದಾಗಿದೆ.

ನವದೆಹಲಿ: ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಜನಮನ ಸೆಳೆಯುತ್ತವೆ. ಇತ್ತೀಚೆಗೆ ಇಂಡಿಗೋ (IndiGo) ವಿಮಾನ ಸಂಸ್ಥೆಯ ಗಗನಸಖಿಯೊಬ್ಬರು ತಮ್ಮ ತಂದೆಗೆ ಅವರ ಹುಟ್ಟುಹಬ್ಬದ ದಿನದಂದೇ ವಿಮಾನದೊಳಗೆ ಸರ್ಪ್ರೈಸ್ ನೀಡಿದ ಹೃದಯಸ್ಪರ್ಶಿ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.

ತಂದೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್

ಇಂಡಿಗೋ ವಿಮಾನ ಸಂಸ್ಥೆಯಲ್ಲಿ ಗಗನಸಖಿಯಾಗಿ (Flight Attendant) ಕೆಲಸ ಮಾಡುತ್ತಿರುವ ಶ್ವೇತಾ ಪಾಂಡೆ ಸರ್ಪ್ರೈಸ್ ಕೊಟ್ಟ ಮಗಳು. ತಮ್ಮ ತಂದೆಯ ಹುಟ್ಟುಹಬ್ಬದಂದು ವಿಶೇಷವಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ ಶ್ವೇತಾ, ತಂದೆ ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ತಾವೂ ಕರ್ತವ್ಯ ನಿರ್ವಹಿಸುವ ಮೂಲಕ ಸರ್ಪ್ರೈಸ್ ಪ್ಲಾನ್ ಮಾಡಿದ್ದರು. ತಮ್ಮ ಮಗಳು ಅದೇ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿದ್ದಾರೆ ಎಂಬ ಕನಿಷ್ಠ ಅರಿವೂ ಅವರ ತಂದೆಗೆ ಇರಲಿಲ್ಲ.

ಶ್ವೇತಾ ಪಾಂಡೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ.. ತಂದೆ ವಿಮಾನದೊಳಗೆ ಪ್ರವೇಶಿಸುತ್ತಿದ್ದಂತೆ ಇಂಡಿಗೋ ಯೂನಿಫಾರ್ಮ್‌ನಲ್ಲಿದ್ದ ಮಗಳು ಪ್ರೀತಿಯಿಂದ ನಸುನಗುತ್ತಾ ಅವರನ್ನು ಸ್ವಾಗತಿಸುತ್ತಾರೆ. ಬಳಿಕ ನಮ್ರತೆಯಿಂದ ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಕಣ್ಣೆದುರು ವೃತ್ತಿಪರ ಯೂನಿಫಾರ್ಮ್‌ನಲ್ಲಿ ನಿಂತಿರುವ ಮಗಳನ್ನು ನೋಡಿ ತಂದೆ ಆಶ್ಚರ್ಯಚಕಿತರಾಗುತ್ತಾರೆ ಮತ್ತು ಅವರ ಮುಖದಲ್ಲಿ ಮೂಡುವ ಹೆಮ್ಮೆಯ ನಗು ಇಡೀ ವಿಡಿಯೋದ ಅತ್ಯಂತ ಸುಂದರ ಕ್ಷಣವಾಗಿದೆ.

ನಾನು ಅವರ ವಿಮಾನದಲ್ಲಿದ್ದೇನೆ ಎಂಬ ವಿಷಯ ತಿಳಿದಿರಲಿಲ್ಲ. ಅಲ್ಲದೆ ಅವರು ನನ್ನನ್ನು ಮೊದಲ ಬಾರಿಗೆ ವೈಯಕ್ತಿಕವಾಗಿ ಯೂನಿಫಾರ್ಮ್‌ನಲ್ಲಿ ನೋಡುತ್ತಿದ್ದರು ಎಂದು ಶ್ವೇತಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಕೇವಲ ಹುಟ್ಟುಹಬ್ಬದ ಉಡುಗೊರೆಯಾಗಿರದೆ, ಮಗಳು ತನ್ನ ದೇಶಸೇವೆಯ ಅಥವಾ ವೃತ್ತಿಪರ ಯೂನಿಫಾರ್ಮ್‌ನಲ್ಲಿ ತಂದೆಯನ್ನು ವಿಮಾನಕ್ಕೆ ಸ್ವಾಗತಿಸಿದ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು.

ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ತಂದೆ ತನ್ನ ಮಗಳನ್ನು ಯೂನಿಫಾರ್ಮ್‌ನಲ್ಲಿ ಕಂಡು ಹೆಮ್ಮೆಪಡುವ ಅತ್ಯಂತ ಸುಂದರ ಕ್ಷಣವಿದು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇಂತಹ ಸುಂದರ ವಿಡಿಯೋಗಳು ತಕ್ಷಣವೇ ನಮ್ಮ ಮುಖದಲ್ಲಿ ಕಿರುನಗು ತರಿಸುತ್ತವೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

View post on Instagram