ಏರ್ ಇಂಡಿಯಾ ಪೈಲೆಟ್ ಲೇ ಓವರ್ ವೇಳೆ ಮೃತಪಟ್ಟ ಘಟನೆ ನಡೆದಿದೆ. ಅಸ್ವಸ್ಥರಾಗಿ ಬಿದ್ದಿದ್ದ ಪೈಲೆಟ್‌ನ ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಲೇ ಓವರ್ ವೇಳೆ ದಿಢೀರ್ ಆರೋಗ್ಯ ಏರುಪೇರಾಗಿದ್ದು ಹೇಗೆ?
ದೆಹಲಿ (ಸೆ.12) ಏರ್ ಇಂಡಿಯಾ ಪೈಲೆಟ್ ಲೇ ಓವರ್ ವೇಳೆ ಮೃತಪಟ್ಟ ಘಟನೆ ನಡೆದಿದೆ. ಮುಂಬೈ ಮೂಲಕ 40ರ ಹರೆಯದ ಪೈಲೆಟ್ ಲೇ ಓವರ್ ವೇಳೆ ದೆಹಲಿಯ ವಸಂತ್ ಕುಂಜ್ ಹೊಟೆಲ್‌ನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದಾರೆ. ತಕ್ಷಣವೇ ದೆಹಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಪೈಲೆಟ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಈ ಘಟನೆಯಿಂದ ಪೈಲೆಟ್‌ಗಳ ಆರೋಗ್ಯ ಕುರಿತು ಭಾರಿ ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಲೇಓವರ್ ವೇಳೆ ಪೈಲೆಟ್ ಆರೋಗ್ಯ ಏರುಪೇರಾಗುವ ಕುರಿತು ತೀವ್ರ ಚರ್ಚೆಯಾಗುತ್ತಿದೆ.
40ರ ಹರೆಯದ ಮುಂಬೈ ಮೂಲಕ ಪೈಲೆಟ್ ಸುದೀರ್ಘ ಏರ್ ಇಂಡಿಯಾ ಪ್ರಯಾಣ ಬಳಿ ಲೇಓವರ್ ಸಮಯದಲ್ಲಿದ್ದರು. ಲೇಓವರ್ ವೇಳೆ ವಸಂತ್ ಕುಂಜ್ ಹೊಟೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಆರೋಗ್ಯ ಏರುಪೇರಾಗಿದೆ. ಲೇಓವರ್ ಸಮಯದ ಕಾರಣ ಮತ್ತೆ ಪ್ರಯಾಣ ಮುಂದುವರಿಸಬೇಕಾದ ಕಾರಣ ವಿಶ್ರಾಂತಿಗೆ ಜಾರಿದ್ದರು. ಈ ವೇಳೆ ಆರೋಗ್ಯ ಸಮಸ್ಯೆ ಎದುರಾಗಿದೆ. ಈ ನಡುವೆ ಸಹೋದ್ಯೋಗಿಗಳು ಹೊಟೆಲ್‌ಗೆ ಬಂದಾಗ ಪೈಲೆಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ದೆಹಲಿ ಪೊಲೀಸರಿಂದ ತನಿಖೆ
ಘಟನೆ ಕುರಿತು ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೀಗ ವೈದ್ಯಕೀಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಪೈಲೆಟ್ ಸಾವಿಗೆ ನೈಜ ಕಾರಣವೇನು ಅನ್ನೋ ಕುರಿತು ವೈದ್ಯರ ವರದಿಯಲ್ಲಿ ಉಲ್ಲೇಖವಾಗಲಿದೆ. ಪ್ರಮುಖವಾಗಿ ಆರೋಗ್ಯದ ಕಾರಣವೇ ಅಥವಾ ಇತರ ಕಾರಣಗಳಿತ್ತಾ ಅನ್ನೋ ಕುರಿತು ಪೊಲೀಸರು ವೈದ್ಯರ ಜೊತೆ ಚರ್ಚಿಸಿದ್ದಾರೆ.
ಸಾಮಾನ್ಯವಾಗಿ ಸುದೀರ್ಘ ಹಾರಾಟದ ಬಳಿಕ ಲೇಓವರ್ ಸಮಯದಲ್ಲಿ ಪೈಲೆಟ್ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುವ ಕಾರಣ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸುತ್ತಾರೆ. ಇದೀಗ ಪೈಲೆಟ್ ಸಾವು ಲೇಓವರ್ ವೇಳೆ ಆರೋಗ್ಯದ ಮೇಲಿನ ಕಾಳಜಿ ಹೆಚ್ಚಿಸಿದೆ. ಘಟನೆಗೆ ಏರ್ ಇಂಡಿಯಾ ಆಘಾತ ವ್ಯಕ್ತಪಡಿಸಿದೆ. ಇದೇ ವೇಳೆ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಇಷ್ಟೇ ಅಲ್ಲ ಕುಟುಂಬಕ್ಕೆ ಎಲ್ಲಾ ನೆರವು ನೀಡುವುದಾಗಿ ಏರ್ ಇಂಡಿಯಾ ಹೇಳಿದೆ. ಏರ್ ಇಂಡಿಯಾ ಪೈಲೆಟ್ ಸಾವಿಗೆ ಸಹೋದ್ಯೋಗಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


