MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಈ ರೋಗವಿದ್ದರೆ, ಪಿರಿಯಡ್ಸ್ ಆದ್ರೂ ತಾಯಿಯಾಗಲು ಸಾಧ್ಯವಿಲ್ಲ!

ಈ ರೋಗವಿದ್ದರೆ, ಪಿರಿಯಡ್ಸ್ ಆದ್ರೂ ತಾಯಿಯಾಗಲು ಸಾಧ್ಯವಿಲ್ಲ!

ತಾಯಿಯಾಗೋದಂದ್ರೆ ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯುತ್ತಮ ಘಟ್ಟವಾಗಿದೆ. ಪ್ರತಿಯೊಬ್ಬ ಮಹಿಳೆಯೂ ತಾನು ತಾಯಿಯಾಗಬೇಕೆಂದು ಬಯಸುತ್ತಾಳೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಇದು ಸಾಧ್ಯವಾಗೋದಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಒಂದು ಅನೋವುಲೇಷನ್ ಕೂಡ ಆಗಿದೆ.

2 Min read
Suvarna News
Published : Jun 29 2022, 05:36 PM IST
Share this Photo Gallery
  • FB
  • TW
  • Linkdin
  • Whatsapp
111

ಒವುಲೇಷನ್ (ovulation) ಪ್ರಕ್ರಿಯೆಯಲ್ಲಿ ಎರಡು ಓವರಿಗಳಲ್ಲಿ ಯಾವುದಾದರೂ ಒಂದರಿಂದ ಎಗ್ ಬಿಡುಗಡೆಯಾಗುತ್ತೆ. ಈ ಎಗ್ ಗರ್ಭಿಣಿಯಾಗಲು ಸಹಾಯ ಮಾಡುತ್ತೆ,ಆದರೆ ಕೆಲವು ಮಹಿಳೆಯರಲ್ಲಿ, ನಿಯಮಿತ ಪಿರಿಯಡ್ಸ್ ಆದ್ರೂ ಒವುಲೇಷನ್ ಆಗೋದಿಲ್ಲ .ಓವರಿಯಿಂದ ಎಗ್ ಬಿಡುಗಡೆಯಾಗದಿದ್ದಾಗ, ಅದನ್ನು ಅನೋವುಲೇಷನ್ ಎಂದು ಕರೆಯಲಾಗುತ್ತೆ.

211

ಒವುಲೇಷನ್ ಆಗದೇ ಇರೋದನ್ನು ಕ್ರೋನಿಕ್ ಅನೋವುಲೇಷನ್ ಎಂದೂ ಕರೆಯಲಾಗುತ್ತೆ. ಈ ಸ್ಥಿತಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರಬಹುದು. ಇದುವೆ ಬಂಜೆತನಕ್ಕೆ(Infertlity) ಇದು ಸಾಮಾನ್ಯ ಕಾರಣವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಬಂಜೆತನದ ಪ್ರಕರಣಗಳಲ್ಲಿ ಸುಮಾರು 30 ಪ್ರತಿಶತದಷ್ಟು ಜನರಲ್ಲಿ ಅಂಡೋತ್ಪತ್ತಿ ಸಂಬಂಧಿತ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತೆ.

311

ಅನೋವುಲೇಷನ್ ಸಮಸ್ಯೆಗೆ ಕಾರಣಗಳು ಯಾವುವು?
ಅಂಡೋತ್ಪತ್ತಿಯು ಹಲವಾರು ಹಾರ್ಮೋನುಗಳನ್ನು ಒಳಗೊಂಡಿರುತ್ತೆ. ಇವುಗಳಲ್ಲಿ ಕೆಲವು ಗೊನಾಡೋಟ್ರೋಪಿನ್ ಬಿಡುಗಡೆ ಮಾಡುವ ಹಾರ್ಮೋನು(Harmone), FSH ಮತ್ತು LH. ಈ ಹಾರ್ಮೋನುಗಳಲ್ಲಿನ ಅಸಮತೋಲನದಿಂದಾಗಿ, ಅಂಡೋತ್ಪತ್ತಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.  

411

ಇದಲ್ಲದೆ, ಹೆಚ್ಚಿನ ಬಿಎಂಐ ಅಥವಾ ದೇಹದ ತೂಕದಿಂದಾಗಿ(Body weught), ಟೆಸ್ಟೋಸ್ಟೆರಾನ್ ನಂತೆ ದೇಹದಲ್ಲಿ ಹೆಚ್ಚಿನ ಆಂಡ್ರೋಜೆನ್ ಗಳಿದ್ದರೆ ರಾಸಾಯನಿಕ ಅಸಮತೋಲನ ಉಂಟಾಗಬಹುದು. ಇದು ಅಂಡೋತ್ಪತ್ತಿಗೆ ಕಾರಣವಾಗುತ್ತದೆ. ಅತಿಯಾದ ಒತ್ತಡವು ಅಂಡೋತ್ಪತ್ತಿಗಾಗಿ ಅಗತ್ಯವಿರುವ ಹಾರ್ಮೋನುಗಳಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು. 

511

ಪಿರಿಯಡ್ಸ್(Periods) ಸಮಯದಲ್ಲಿ ಯಾವುದೇ ಟೈಂನಲ್ಲಿ ಅನೋವುಲೇಷನ್ ಉಂಟಾಗಬಹುದು.  ಋತುಸ್ರಾವ ಅಥವಾ ಮೆನೋಪಾಸ್ ಮೊದಲು ಪ್ರಾರಂಭವಾದಾಗ ಇದು ಹೆಚ್ಚು ಸಾಮಾನ್ಯ. ಈ ಸಮಯದಲ್ಲಿ, ಹಾರ್ಮೋನುಗಳ ಅಸಮತೋಲನದಿಂದಾಗಿ ಅನೋವುಲೇಷನ್ ಉಂಟಾಗಬಹುದು.

611

ಅನೋವುಲೇಷನ್ ಲಕ್ಷಣಗಳು ಯಾವವು
ಪಿರಿಯಡ್ಸ್ ಸಮಯದಲ್ಲಿ ಹೆಚ್ಚಿನ ಸ್ರಾವ ಅಥವಾ ಕಡಿಮೆ ಬ್ಲೀಡಿಂಗ್(Bleeding) , ಪಿರಿಯಡ್ಸ್ ಆಗದಿರೋದು, ಅನಿಯಮಿತ ಋತುಚಕ್ರ, ಸರ್ವಿಕಲ್ ಮ್ಯೂಕಸ್ ಕೊರತೆ, ಅನಿಯಮಿತ ಬೇಸಲ್ ಬಾಡಿ ಟೆಂಪರೇಚರ್, ಇದರ ಕೆಲವು ಲಕ್ಷಣಗಳಾಗಿವೆ. ಅನೇಕ ಮಹಿಳೆಯರು ಅನೋವುಲೇಷನ್ನಲ್ಲಿ ಸಾಮಾನ್ಯ ಋತುಚಕ್ರ ಹೊಂದಿರುತ್ತಾರೆ.

711

ಅಂಡೋತ್ಪತ್ತಿ ಇಲ್ಲದೆಯೇ ಗರ್ಭಿಣಿಯಾಗಬಹುದೇ?
ಪುರುಷನ ಸ್ಪರ್ಮ್ ನಿಂದ ಯಾವಾಗ ಎಗ್ ಫರ್ಟಿಲೈಜ್ ಆಗುತ್ತದೋ ಆಗ ಮಾತ್ರ ಗರ್ಭಧಾರಣೆ (Pregnancy)ಸಾಧ್ಯ. ಅಂಡೋತ್ಪತ್ತಿ ಇಲ್ಲದೆ ಫಲವತ್ತತೆ ಇರೋದಿಲ್ಲ ಆಗ  ಗರ್ಭಧರಿಸಲು ಸಾಧ್ಯವಿಲ್ಲ. ಆದಾಗ್ಯೂ, ಕೆಲವು ಲೈಫ್ ಸ್ಟೈಲಿನಲ್ಲಿ ಬದಲಾವಣೆ ಮಾಡುವ ಮೂಲಕ ಮತ್ತು ಔಷಧಿಗಳ ಸಹಾಯದಿಂದ,  ಅನೋವುಲೇಷನ್ ಸರಿಪಡಿಸಬಹುದು.

811

ಅನೋವುಲೇಷನ್ ಗೆ ಚಿಕಿತ್ಸೆ
ಅನೋವುಲೇಷನ್ ಗೆ  ಚಿಕಿತ್ಸೆ ನೀಡಲು, ವೈದ್ಯರು ಈ ಕೆಳಗಿನ ಲೈಫ್ ಸ್ಟೈಲ್ ಬದಲಾವಣೆ ಮಾಡಬೇಕೆಂದು ಹೇಳುತ್ತಾರೆ. 
ನೀವು ಒಬೆಸಿಟಿ (Obesity)ಹೊಂದಿದ್ದರೆ, ಮೊದಲು ತೂಕ ಕಡಿಮೆ ಮಾಡಿಕೊಳ್ಳಿ. ಇದು ಉತ್ತಮ ಆರೋಗ್ಯಕ್ಕೆ ಸಹಾಯಕ. 

911

ಹೆವಿ ವರ್ಕೌಟ್(Heavy workout) ಮಾಡುತ್ತಿದ್ದರೆ, ಅದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
ನಿಮಗೆ ಒತ್ತಡ ಮತ್ತು ಆತಂಕವಿದ್ದರೆ, ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳಿ. ಯೋಗ, ಧ್ಯಾನ ಮಾಡಿ ಮನಸ್ಸನ್ನು ಶಾಂತವಾಗಿರಿಸಿ. 
ಸರಿಯಾದ ಡಯಟ್ ಪ್ಲಾನ್ ನಿಂದ ತೂಕ ಮತ್ತು ಆರೋಗ್ಯಕರ ಪಿರಿಯಡ್ಸ್ ಪಡೆಯಲು ಸಾಧ್ಯ 
 

1011

ಅನೋವುಲೇಷನ್ ಎಷ್ಟು ಸಮಯದವರೆಗೆ ಇರುತ್ತೆ?
ಅನೋವುಲೇಷನ್ ತಾತ್ಕಾಲಿಕ ಅಥವಾ ದೀರ್ಘಾವಧಿಯದ್ದಾಗಿರಬಹುದು. ಅದು ಅದರ ಕಾರಣವನ್ನು ಅವಲಂಬಿಸಿರುತ್ತೆ . ಹೆಚ್ಚಿನ ಸಂದರ್ಭಗಳಲ್ಲಿ ಲೈಫ್ ಸ್ಟೈಲ್(Lifestyle) ಬದಲಾವಣೆ ಮತ್ತು ಔಷಧಿಗಳ(Medicine) ಸಹಾಯದಿಂದ ಇದನ್ನು ಗುಣಪಡಿಸಬಹುದು.

1111

ಯಾರು ಅನೋವುಲೇಷನ್ ಹೊಂದುತ್ತಾರೆ 
ಯಾವುದೇ ಮಹಿಳೆ ಅಥವಾ ಹುಡುಗಿ 12 ಮತ್ತು 51 ವರ್ಷಗಳ ನಡುವೆ ಅನೋವುಲೇಷನ್ ಹೊಂದಬಹುದು. ನೀವು ಈಗ ಪಿರಿಯಡ್ಸ್ ಹೊಂದಲು ಪ್ರಾರಂಭಿಸಿದ್ದರೆ, ಮೆನೋಪಾಸ್(Menopause) ಹೊಂದಿದ್ದರೆ, ಪಿಸಿಒಎಸ್ ಹೊಂದಿದ್ದರೆ, ಲೊ ಅಥವಾ ಹೈ ಬಿಎಂಐ ಹೊಂದಿದರೆ ಆಗ ನೀವು ಅನೋವುಲೇಷನ್ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತೆ.

About the Author

SN
Suvarna News
ಗರ್ಭಧಾರಣೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved