ಯೋಗ, ವರ್ಕೌಟ್ ಫೋಟೋಗಳನ್ನು ಹಂಚಿಕೊಂಡ ಶ್ರೀದೇವಿ ಪುತ್ರಿ; ಸಖತ್ ವೈರಲ್
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಜಾಹ್ನವಿ ಇದೀಗ ಮೇ ತಿಂಗಳಲ್ಲಿ ವರ್ಕೌಟ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಜಾಹ್ನವಿ ಇದೀಗ ಮೇ ತಿಂಗಳಲ್ಲಿ ವರ್ಕೌಟ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಫಿಟ್ನೆಸ್, ಡಯಟ್, ಯೋಗ, ವರ್ಕೌಟ್ ಅಂತ ಬ್ಯುಸಿ ಇರುವ ಜಾಹ್ನವಿ ಎಲ್ಲಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜಾಹ್ನವಿ ಹಾಟ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರದುಬಂದಿದೆ. ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ.
ನಟಿಮಣಿಯರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗೆ ಜಾಹ್ನವಿ ಕಪೂರ್ ಕೂಡ ಫಿಟ್ನೆಸ್ ಕಡೆ ಹೆಚ್ಚು ಗಮನ ಕೊಡುತ್ತಾರೆ. ಯೋಗ ಮತ್ತು ಜಿಮ್ ಮಾಡುವ ನಟಿ ಜಾಹ್ನವಿ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಯೋಗ ಮಾಡುತ್ತಿರುವ ಫೋಟೋ ಜೊತೆ ಮತ್ತೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಜಾಹ್ನವಿ ಸಹೋದರಿ ಖುಷಿ ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವೆಬ್ ಸೀರಿಸ್ ನಲ್ಲಿ ಖುಷಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಫಸ್ಟ್ ಲುಕ್ ರಿಲೀಸ್ ಆಗಿದ್ದು ಜಾಹ್ನವಿ ಸಂತಸ ಹಂಚಿಕೊಂಡಿದ್ದರು.
ಜಾಹ್ನವಿ ಕಪೂರ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಕೊನೆಯದಾಗಿ ಜಾಹ್ನವಿ, ರಾಜ್ ಕುಮಾರ್ ರಾವ್ ಜೊತೆ ರೂಹಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಮತ್ತೆ ರಾಜ್ ಕುಮಾರ್ ರಾವ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ.
ಜಾಹ್ನವಿ ಕಪೂರ್ ಬಳಿ ಸದ್ಯ ರಾಜ್ ಕುಮಾರ್ ರಾವ್ ಜೊತೆ ಮಿಸ್ಟರ್ ಅಂಡ್ ಮಿಸೆಸ್ ಮಹಿ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ. ಗುಡ್ ಲಕ್ ಜೆರ್ರಿ, ಬವಾಲ್, ಮಿಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಜಾಹ್ನವಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.