ಮುಟ್ಟಾದಾಗ ನೀವು ಎಂದಾದರೂ ಈಜುಕೊಳ ಅಥವಾ ನದಿ, ಸಮುದ್ರಗಳಲ್ಲಿ ಈಜಲು ಮುಂದಾಗಿದ್ದೀರಾ? ಬ್ಲೀಡಿಂಗ್‌ ಆಗುತ್ತಿರುವಾಗ ನೀರಿಗೆ ಇಳಿಯುವ ಧೈರ್ಯ ಮಾಡುವ ಮಹಿಳೆಯರು ಕಡಿಮೆ. ಆದರೆ, ಒಂದೊಮ್ಮೆ ನೀವು ನೀರಿಗೆ ಇಳಿದರೂ ರಕ್ತಸ್ರಾವ ಆಗುವುದಿಲ್ಲ, ಭಯ ಬೇಡ. 

ಮುಟ್ಟಿಗೆ (Menstruation) ಸಂಬಂಧಿಸಿದಂತೆ ಅನೇಕ ಭ್ರಮೆಗಳು ಮಹಿಳೆಯರಲ್ಲಿವೆ. ಅಂಥದ್ದೇ ಒಂದು ಕಲ್ಪನೆ (Myth) ಎಂದರೆ, ನೀರಿನಲ್ಲಿದ್ದುಕೊಂಡು ಮುಟ್ಟಾಗುವುದನ್ನು ತಡೆಯಬಹುದು ಎಂದು! ಬೇಸಿಗೆ ಶುರುವಾಗಿರುವ ಈ ಸಮಯದಲ್ಲಿ ನೀರಿನಲ್ಲಿ ಆಟವಾಡುವ ಅಥವಾ ಹೆಚ್ಚು ಸಮಯ ಕಳೆಯುವ ಕಲ್ಪನೆ ಖುಷಿ ನೀಡಬಹುದು. ಆದರೆ, ನೀರಿನಲ್ಲಿದ್ದುಕೊಂಡು ಮುಟ್ಟಾಗುವುದನ್ನು ತಡೆಯುವುದು ಸಾಧ್ಯವಿಲ್ಲ, ಬದಲಿಗೆ ಬ್ಲೀಡಿಂಗ್‌ (Bleeding) ಅನ್ನು ಅಲ್ಪಕಾಲ ತಡೆಯಬಹುದು. ಹೌದು, ಸ್ವತಃ ಮಹಿಳೆ(Women)ಯರಿಗೇ ಅಚ್ಚರಿಯಾಗಬಹುದು. ನೀರಿನಲ್ಲಿರುವಾಗ ಬ್ಲೀಡಿಂಗ್‌ ಆಗುವುದಿಲ್ಲ.

ನ್ಯೂಯಾರ್ಕ್‌ ಮೂಲದ ವೈದ್ಯೆ ಮಿಶೆಲ್ (Michele) ಹೌಗ್‌ಟನ್‌ ಅವರು ಹೇಳುವಂತೆ, ಮಹಿಳೆಯರು ನೀರಿನಾಳದಲ್ಲಿದ್ದರೂ, ಪರ್ವತದ ತುತ್ತತುದಿಯಲ್ಲಿದ್ದರೂ ಮುಟ್ಟಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಏನಾದರೂ ಹಾರ್ಮೋನ್‌ (Hormone) ವ್ಯತ್ಯಾಸದಿಂದ ಪೀರಿಯೆಡ್‌ (Period) ಒಂದೊಂದು ತಿಂಗಳು ತಪ್ಪಬಹುದೇ ಹೊರತು ಗರ್ಭಕೋಶ ತನ್ನ ಕಾರ್ಯವನ್ನು ಎಂದಿಗೂ ಸ್ಥಗಿತಗೊಳಿಸುವುದಿಲ್ಲ. ನೀರಿನಲ್ಲಿ ಹೆಚ್ಚು ಕಾಲ ಇದ್ದರೂ ಮುಟ್ಟಾಗುವುದು ತಪ್ಪುವುದಿಲ್ಲ. ಆದರೆ, ನೀರಿನಲ್ಲಿದ್ದಷ್ಟು ಸಮಯ ರಕ್ತಸ್ರಾವವಾಗುವುದಿಲ್ಲ.

ನೀರಿನಲ್ಲಿದ್ದಾಗ ಬ್ಲೀಡಿಂಗ್‌ ಆಗುವುದಿಲ್ಲ. ಇದರಿಂದಾಗಿ ಮುಟ್ಟು ನಿಂತಿದೆ ಎನ್ನುವ ಭಾವನೆ ನಿಮಗೆ ಮೂಡಬಹುದು ಅಷ್ಟೆ. ಇದಕ್ಕೆ ಕಾರಣ ನೀರಿನ ಒತ್ತಡ. ಜನನಾಂಗದ ಸುತ್ತಮುತ್ತ ನೀರಿನ ಒತ್ತಡ ಏರ್ಪಟ್ಟಾಗ ಒಳಗಿನ ಸ್ರಾವ ಹೊರಗೆ ಬರುವುದಿಲ್ಲ. ನೀರಿನ ಒತ್ತಡದಿಂದಾಗಿ ಮುಟ್ಟು ಅಲ್ಲಿಯೇ ನಿಲ್ಲುತ್ತದೆ. ಇದಕ್ಕೆ ಗುರುತ್ವಾಕರ್ಷಣೆಯೇ (Gravity) ಕಾರಣ. ದೇಹದ ಒಳಗಿನಿಂದ ರಕ್ತದ ಹರಿವನ್ನು ಗುರುತ್ವಾಕರ್ಷಣೆಯ ಶಕ್ತಿ ಎದುರಿಸುತ್ತದೆ. ಇಲ್ಲಿ ಯಾವುದೇ ಜೈವಿಕ ಅಂಶದ ಮ್ಯಾಜಿಕ್‌ (Magic) ನಡೆಯುವುದಿಲ್ಲ. ಇದು ಸಂಪೂರ್ಣವಾಗಿ ದೈಹಿಕ ಸ್ಥಿತಿಗೆ ಸಂಬಂಧಿಸಿದ್ದು ಎನ್ನುತ್ತಾರೆ ಡಾ.ಹೌಗ್‌ಟನ್.‌ ಪ್ರೌಢಶಾಲೆಯಲ್ಲಿ ಬರುವ ಗುರುತ್ವಾಕರ್ಷಣೆಯ ನಿಯಮವನ್ನು ಇಲ್ಲಿ ಒಮ್ಮೆ ನೆನಪಿಸಿಕೊಳ್ಳಬಹುದು.

ನೀರಿನಲ್ಲಿದ್ದಷ್ಟು ಸಮಯ ಬ್ಲೀಡಿಂಗ್‌ ಆಗುವುದಿಲ್ಲ. ಆದರೆ, ನೀರಿನಿಂದ ಆಚೆ ಬಂದಾಕ್ಷಣ ಬ್ಲೀಡಿಂಗ್‌ ಆಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.
ಇನ್ನೇನು ಬೇಸಿಗೆ ಶುರುವಾಗಿದೆ. ಪ್ರವಾಸದ (Travel) ಯೋಜನೆಯನ್ನೂ ನೀವು ಮಾಡಿರಬಹುದು. ಆದರೆ, ಪೀರಿಯೆಡ್‌ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪ್ರವಾಸದ ಐಡಿಯಾ ಬಿಡಬೇಡಿ. ಏಕೆಂದರೆ, ಒಂದೊಮ್ಮೆ ಮುಟ್ಟಾದರೂ ನೀರಿನಲ್ಲಿ ಬ್ಲೀಡಿಂಗ್‌ ಆಗುವ ಸಮಸ್ಯೆಯಿಲ್ಲ. ಆದರೆ, ಆಚೆ ಬಂದಾಕ್ಷಣ ಬ್ಲೀಡಿಂಗ್‌ ಶುರುವಾಗುತ್ತದೆ. ಹೀಗಾಗಿ, ಈ ಸಮಯದಲ್ಲಿ ಟ್ಯಾಂಪೂನ್‌ (Tampon) ಅಥವಾ ಮೆನ್‌ ಸ್ಟ್ರುವಲ್‌ ಕಪ್‌ (Cup) ಬಳಕೆ ಮಾಡುವುದು ಸೂಕ್ತ.

Bad Breath ಮುಜುಗರ ತರುತ್ತಿದೆಯೇ? ಇಷ್ಟ್ ಮಾಡಿ ಸಾಕು..

ಇನ್ನೂ ಒಂದು ಸಮಸ್ಯೆಯಿದೆ, ಅದೆಂದರೆ, ನೈಸರ್ಗಿಕ ವಾತಾವರಣದಲ್ಲಿ ಅಂದರೆ ನದಿ ಅಥವಾ ಸಮುದ್ರಗಳಲ್ಲಿ ಈಜುವಾಗ ದೇಹದಿಂದ ರಕ್ತ ಹೊರಬಂದರೆ ಶಾರ್ಕ್‌ ಅಥವಾ ಇತರೆ ಪ್ರಾಣಿಗಳು ಆಕರ್ಷಣೆಗೆ ಒಳಗಾಗುತ್ತವೆ ಎನ್ನುವ ಭಯವೂ ಅನೇಕ ಮಹಿಳೆಯರಲ್ಲಿ ಇರಬಹುದು. ಇದೂ ಸಹ ಸಂಪೂರ್ಣವಾಗಿ ಆಧಾರರಹಿತವಾದದ್ದು ಎನ್ನಲಾಗಿದೆ. ಡಾ.ಹೌಗ್‌ಟನ್‌ ಅವರ ಪ್ರಕಾರ, ಒಂದು ಈಜುಕೊಳದಲ್ಲಿ ಹಲವಾರು ಮುಟ್ಟಾದ ಮಹಿಳೆಯರು ಈಜಿದರೂ ನೀರಿನ ಬಣ್ಣ ಕಿಂಚಿತ್ತೂ ಬದಲಾಗುವುದಿಲ್ಲ. ಕೆಂಪಾಗುವುದು ಹಾಗಿರಲಿ, ಕನಿಷ್ಠ ಪಕ್ಷ ಅತ್ಯಲ್ಪ ಪ್ರಮಾಣದಲ್ಲಿ ಗುಲಾಬಿ ಬಣ್ಣಕ್ಕೂ ತಿರುಗುವುದಿಲ್ಲ. ಏಕೆಂದರೆ, ಆರೋಗ್ಯವಂತ ಮಹಿಳೆಯರಿಗೆ ದಿನಕ್ಕೆ ಕೆಲವೇ ಮಿಲಿಲೀಟರ್‌ ನಷ್ಟು ಬ್ಲೀಡಿಂಗ್‌ ಆಗುತ್ತದೆ.

Leelavathi And Vinod Raj: ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಲೀಲಾವತಿ ನಿರ್ಧಾರ

ಸ್ವಿಮ್ಮಿಂಗ್‌ಗೆ (Swimming) ಉತ್ತಮ ರಕ್ಷಣೆ ಯಾವ್ದು?
ಟ್ಯಾಂಪೂನ್‌, ಮೆನ್‌ ಸ್ಟ್ರುವಲ್‌ ಕಪ್‌ ಅಥವಾ ಮೆನ್‌ ಸ್ಟ್ರುವಲ್‌ ಡಿಸ್ಕ್‌ ಗಳು ಸ್ವಿಮ್ಮಿಂಗ್‌ ಮಾಡಲು ಉತ್ತಮ ಆಯ್ಕೆಗಳು. ನೀರಿನಲ್ಲಿರುವಾಗ ಬ್ಲೀಡಿಂಗ್‌ ನ ಭಯವಿರುವುದಿಲ್ಲ. ಹಾಗೂ ಇವುಗಳಿಂದ ಸೋರಿಕೆಯೂ ಆಗುವುದಿಲ್ಲ. ಹೀಗಾಗಿ, ನಿಶ್ಚಿಂತೆಯಿಂದ ಮಹಿಳೆಯರು ಪೀರಿಯೆಡ್‌ ಸಮಯದಲ್ಲಿ ನೀರಿಗೆ ಇಳಿಯಬಹುದು ಎನ್ನುತ್ತಾರೆ ಡಾ.ಹೌಗ್‌ಟನ್.
ಹಾಗೆಯೇ ಟ್ಯಾಂಪೂನ್‌ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಹೆಚ್ಚು ಸ್ರಾವ ಹೀರಿಕೊಳ್ಳುವ ಸಾಮರ್ಥ್ಯದ ಟ್ಯಾಂಪೂನ್‌ ಗಳಿಂದ ಟಾಕ್ಸಿಕ್‌ ಶಾಕ್‌ ಸಿಂಡ್ರೋಮ್‌ ಎನ್ನುವ ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಳ್ಳಬಹುದು.