Asianet Suvarna News Asianet Suvarna News

Period Health: ಮುಟ್ಟಿನ ವಾಸನೆ ತಡೆಯಲು ಇಲ್ಲಿವೆ ಟಿಪ್ಸ್!

ಯೋನಿಯ ಸ್ವಚ್ಛತೆಗೆ ಪ್ರತಿಯೊಬ್ಬ ಮಹಿಳೆಯರು ಹೆಚ್ಚಿನ ಗಮನ ನೀಡ್ಬೇಕು. ಅದ್ರಲ್ಲೂ ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಮುಖ್ಯವಾಗುತ್ತದೆ. ಕೆಲವೊಂದು ಟಿಪ್ಸ್ ಪಾಲನೆ ಮಾಡಿದ್ರೆ ಮುಟ್ಟಿನ ಸಮಯದಲ್ಲಿ ಕಾಡುವ ವಾಸನೆಯಿಂದ ದೂರವಿರಬಹುದು.
 

How To Get Rid Of Period Smell Here Are 5 Hacks
Author
Bangalore, First Published Jun 22, 2022, 2:42 PM IST

ಪ್ರತಿಯೊಬ್ಬ ಮಹಿಳೆಯ ಮುಟ್ಟಿ (Menstrual )ನ ಅವಧಿ ಭಿನ್ನವಾಗಿರುತ್ತದೆ. ಕೆಲವರು ಮುಟ್ಟಿನ ಸಮಯದಲ್ಲಿ ಅತಿಯಾದ ನೋವು (Pain) ಅನುಭವಿಸ್ತಾರೆ. ಮತ್ತೆ ಕೆಲವರಿಗೆ ರಕ್ತಸ್ರಾವ (Bleeding ) ಹೆಚ್ಚಾಗುತ್ತದೆ. ಹಾಗೆ ಮುಟ್ಟಿನ ಸಮಯದಲ್ಲಿ ರಕ್ತದ ವಾಸನೆ (smell) ಕೂಡ ಭಿನ್ನವಾಗಿರುತ್ತದೆ. ಪ್ರತಿಯೊಬ್ಬ ಮಹಿಳೆಯಲ್ಲೂ ಭಿನ್ನ ವಾಸನೆಯಿರುತ್ತದೆ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಯೋನಿಯ ವಾಸನೆ ಪರಿಮಳಯುಕ್ತವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಅಷ್ಟು ಸುಲಭವಲ್ಲ. ಅದ್ರಲ್ಲೂ ಮುಟ್ಟಿನ ಸಮಯದಲ್ಲಿ ಯೋನಿ ವಾಸನೆ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಮುಟ್ಟಿನ ಬ್ಲಡ್ ವಿವಿಧ ಅಂಶಗಳನ್ನು ಅವಲಂಬಿಸಿ ವಿಭಿನ್ನ ವಾಸನೆಯನ್ನು ಹೊಂದಿರುತ್ತದೆ. ಇಂದು ನಾವು ವಾಸನೆಗೆ ಕಾರಣ ಹಾಗೂ ಅದರ ನಿಯಂತ್ರಣ ಹೇಗೆ ಎಂಬುದನ್ನು ಹೇಳ್ತೇವೆ. 

ಕೆಲವು ಸಾಮಾನ್ಯ ಮುಟ್ಟಿನ ವಾಸನೆಗಳು : 
 
ಲೋಹೀಯ ವಾಸನೆ : ಕೆಲವೊಮ್ಮೆ ರಕ್ತವು ಲೋಹೀಯ ವಾಸನೆಯನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಅದರಲ್ಲಿ ಕಬ್ಬಿಣದಂಶ ಹೆಚ್ಚಿರುತ್ತದೆ. ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಆದ್ರೆ ಈ ವಾಸನೆ ಮುಟ್ಟು ಮುಗಿದ ನಂತ್ರವೂ ಇದ್ದರೆ ಎಚ್ಚರಿಕೆ ವಹಿಸಬೇಕಾಗುತ್ತದೆ. 

ಕೊಳೆತ ವಾಸನೆ : ಮುಟ್ಟಿನ ಸಂದರ್ಭದಲ್ಲಿ  ಕೊಳೆತ ವಾಸನೆಯ ಅನುಭವವಾಗ್ತಿದ್ದರೆ ಇದಕ್ಕೆ ಕಾರಣ ಬ್ಯಾಕ್ಟೀರಿಯಾದ ಜೊತೆಗೆ ರಕ್ತ ಮತ್ತು ಅಂಗಾಂಶಗಳ ನಿರ್ಗಮನವಾಗಿದೆ. ಹರಿವು ಅಧಿಕವಾಗಿರುವ ದಿನಗಳಲ್ಲಿ ವಾಸನೆಯು ಬಲವಾಗಿರುತ್ತದೆ. ಕೊಳೆತ ವಾಸನೆಯು ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಅನ್ನು ಹೆಚ್ಚು ಕಾಲ ಬಳಸುವುದ್ರಿಂದಲೂ ಸಂಭವಿಸುತ್ತದೆ.

Beauty Sleep: ಕಣ್ತುಂಬಾ ನಿದ್ದೆ ಮಾಡೋಕೆ ಇವಿಷ್ಟನ್ನು ತಿನ್ನಿ, ಮತ್ತಷ್ಟು ಚೆಂದ ಕಾಣ್ತೀರಿ

ಮೀನಿನ ವಾಸನೆ (Fishy Smell) : ಈ ವಾಸನೆಯು ಸಾಮಾನ್ಯ ವಾಸನೆಗಿಂತ ಹೆಚ್ಚು ಪ್ರಬಲವಾಗಿದೆ. ಮೀನಿನ ವಾಸನೆಯು ಸಾಮಾನ್ಯವಾಗಿ ಸೋಂಕಿನಂತಹ ವೈದ್ಯಕೀಯ ಸಮಸ್ಯೆಯನ್ನು ಸೂಚಿಸುತ್ತದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಕಿರಿಕಿರಿ ಅಥವಾ ತುರಿಕೆ ರೋಗಲಕ್ಷಣಗಳನ್ನು ಹೊಂದಿದ್ದರೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ. 

ಮುಟ್ಟಿನ ಸಮಯದಲ್ಲಿ ವಾಸನೆ ನಿಯಂತ್ರಣ ವಿಧಾನ : 

ನೈರ್ಮಲ್ಯ (hygiene) : ಮುಟ್ಟಿನ ಸಂದರ್ಭದಲ್ಲಿ ಮೀನಿನ ವಾಸನೆ ಬರ್ತಿದ್ದರೆ ಪ್ಯಾಡ್ ಬದಲಿಸುವ ಅಗತ್ಯವಿದೆ ಎಂದರ್ಥ. ಪ್ರತಿ 4 ರಿಂದ 5 ಗಂಟೆಗಳಿಗೊಮ್ಮೆ ನಿಮ್ಮ ಪ್ಯಾಡ್‌ಗಳು ಅಥವಾ ಟ್ಯಾಂಪೂನ್‌ಗಳನ್ನು ಬದಲಾಯಿಸಬೇಕು. ಬ್ಲೀಡಿಂಗ್ ಕಡಿಮೆಯಿದ್ದರೂ ಮೂತ್ರ ವಿಸರ್ಜನೆಗೆ ಹೋದಾಗ ಯೋನಿಯನ್ನು ಸ್ವಚ್ಛಗೊಳಿಸಬೇಕು. ಹಾಗೆ ಒಂದೇ ಬಾರಿ ಎರಡು ಪ್ಯಾಡ್ ಧರಿಸಬೇಡಿ. ಇದು ವಾಸನೆ ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಈ ಸಮಯದಲ್ಲಿ ರೇಜರ್ ಬಳಕೆ ಬೇಡ.

ಪ್ರತಿದಿನ ಸ್ನಾನ ಮಾಡಿ (Take Bath) : ಮುಟ್ಟಿನ ಅವಧಿಯಲ್ಲಿ ನೈರ್ಮಲ್ಯ  ಕಾಪಾಡಿಕೊಳ್ಳಲು ಮತ್ತು ಅಹಿತಕರ ವಾಸನೆಯನ್ನು ತಪ್ಪಿಸಲು ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕು. ಬಿಸಿನೀರನ್ನು ಸಹ ಬಳಸಬಹುದು. ಬಿಸಿ ನೀರು ಮುಟ್ಟಿನ ನೋವು ಮತ್ತು ಸೆಳೆತನವನ್ನು ಕಡಿಮೆ ಮಾಡುತ್ತದೆ. ಸ್ನಾನ ಮಾಡುವಾಗ ಯೋನಿಯ ಹೊರಭಾಗಗಳನ್ನು ನೀರಿನಿಂದ ಮಾತ್ರ ಸ್ವಚ್ಛಗೊಳಿಸಬೇಕು.

ಹತ್ತಿ ಬಟ್ಟೆಯ ಬಳಕೆ (Cotton Cloth) : ಬಿಗಿಯಾದ ಪ್ಯಾಂಟ್ ಅಥವಾ ಬಿಗಿಯಾದ ಒಳ ಉಡುಪು ಧರಿಸುವುದ್ರಿಂದ ಯೋನಿಯೊಳಗೆ ಆಮ್ಲಜನಕ ಹೋಗುವುದಿಲ್ಲ. ಇದು ಮುಟ್ಟಿನ ಸಮಯದಲ್ಲಿ ವಾಸನೆಯನ್ನು ಉಂಟುಮಾಡುತ್ತದೆ. ಮುಟ್ಟಿನ ಅವಧಿಯಲ್ಲಿ ಹತ್ತಿಯ ಒಳ ಉಡುಪನ್ನು ಧರಿಸಬೇಕು. 

Sexy Figure : ಪುರುಷರ ಬಯಕೆ ಹೆಚ್ಚಿಸುತ್ತೆ ಮಹಿಳೆಯರ ಈ ಅಂಗ

ಮುಟ್ಟಿನ ಕಪ್ ಬಳಸಿ (She Cup) : ಮುಟ್ಟಿನ ಅವಧಿ ವಾಸನೆಯನ್ನು ತಪ್ಪಿಸಲು ಪ್ಯಾಡ್‌ಗಳು ಮತ್ತು ಟ್ಯಾಂಪೂನ್‌ಗಳ ಬದಲಿಗೆ ಮುಟ್ಟಿನ ಕಪ್‌ ಬಳಸಿ. ಮುಟ್ಟಿನ ಕಪ್ ಗಳನ್ನು ದೀರ್ಘಕಾಲದವರೆಗೆ (10-12 ಗಂಟೆಗಳವರೆಗೆ) ಧರಿಸಬಹುದು. ಇದು ನಿಮ್ಮ ಯೋನಿಯ pH ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಮುಟ್ಟಿನ ವೇಳೆ ವಾಸನೆ ಬರುವುದಿಲ್ಲ.

ಪರಿಮಳಯುಕ್ತ ಉತ್ಪನ್ನ : ಯೋನಿಯನ್ನು ಯಾವಾಗ್ಲೂ ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸಬೇಕು. ರಾಸಾಯನಿಕ ಉತ್ಪನ್ನಗಳನ್ನು ಬಳಸಬಾರದು. ಇದು ಕಿರಿಕಿರಿ ಮತ್ತು ಅಲರ್ಜಿಗೆ ಕಾರಣವಾಗಬಹುದು.  

ಈ ನಿಯಮಗಳನ್ನು ಪಾಲಿಸುವ ಜೊತೆಗೆ ನೀವು ಸಾಕಷ್ಟು ಪ್ರಮಾಣದಲ್ಲಿ ನೀರಿನ ಸೇವನೆ ಮಾಡ್ಬೇಕು. ಹಾಗೆಯೇ ಪೌಷ್ಟಿಕ ಆಹಾರವನ್ನು ಸೇವಿಸ್ಬೇಕು.  

 

How To Get Rid Of Period Smell Here Are 5 Hacks


 

Follow Us:
Download App:
  • android
  • ios