- Home
- Entertainment
- TV Talk
- ಒಂದೇ ವಾರ.. 70 ಲಕ್ಷ ವೀವ್ಸ್, 5 ಲಕ್ಷ ಆದಾಯ! ವೈರಲ್ ಆದ ವಿಡಿಯೋದಿಂದ ಮಧು ಗೌಡ ಗಳಿಸಿದ್ದು ಇಷ್ಟೊಂದಾ?
ಒಂದೇ ವಾರ.. 70 ಲಕ್ಷ ವೀವ್ಸ್, 5 ಲಕ್ಷ ಆದಾಯ! ವೈರಲ್ ಆದ ವಿಡಿಯೋದಿಂದ ಮಧು ಗೌಡ ಗಳಿಸಿದ್ದು ಇಷ್ಟೊಂದಾ?
Madhu Gowda Income: ಜನಪ್ರಿಯ ಯೂಟ್ಯೂಬರ್ ಮಧು ಗೌಡ ಅವರು ತಾಯಿಯಾದ ಸಂಭ್ರಮದ ನಡುವೆಯೇ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೆಲವು ಮೂಲಗಳ ಪ್ರಕಾರ, ತಮ್ಮ ಡೆಲಿವರಿ ಸಂಬಂಧಿತ ವಿಡಿಯೋಗಳ ಮೂಲಕ ಕೇವಲ ಒಂದು ವಾರದಲ್ಲಿ 5 ಲಕ್ಷ ರೂಪಾಯಿ ಆದಾಯ ಗಳಿಸಿ, ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ.
ಖಡಕ್ ಉತ್ತರ ನೀಡಿದ ಮಧು ಗೌಡ
ಖಡಕ್ ಉತ್ತರ ನೀಡಿದ ಮಧು ಗೌಡ
ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಜನಪ್ರಿಯ ಯೂಟ್ಯೂಬರ್ ಮಧು ಗೌಡ ಈಗ ಸುದ್ದಿಯಲ್ಲಿದ್ದಾರೆ. ತಮ್ಮ ಬದುಕಿನ ಪ್ರತಿಯೊಂದು ಮೈಲಿಗಲ್ಲನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮಧು, ಇತ್ತೀಚೆಗೆ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಆದರೆ ಈ ಸಂಭ್ರಮದ ನಡುವೆ ಎದುರಾದ ಟ್ರೋಲ್‌ಗಳಿಗೆ ಅವರು ತಮ್ಮ ಯೂಟ್ಯೂಬ್ ಸಾಧನೆಯ ಮೂಲಕವೇ ಖಡಕ್ ಉತ್ತರ ನೀಡಿದ್ದಾರೆ.
ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದ ಮಧು
ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದ ಮಧು
ಮಧು ಗೌಡ ಅವರು ಗರ್ಭಿಣಿಯಾದ ದಿನದಿಂದ ಹಿಡಿದು ಡೆಲಿವರಿಗಾಗಿ ಆಸ್ಪತ್ರೆಗೆ ದಾಖಲಾದವರೆಗಿನ ಪ್ರತಿಯೊಂದು ಕ್ಷಣವನ್ನು ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಕೆಲವರು "ಪ್ರಪಂಚದಲ್ಲಿ ಈಕೆ ಒಬ್ಬಳೇ ಮಗು ಹೆತ್ತಿರೋದು", "ಕಲ್ಕಿ ಅಲ್ಲ ಮಿಲ್ಕಿ ಬಂದ್ಲು" ಎಂದೆಲ್ಲಾ ಟ್ರೋಲ್ ಮಾಡಿದ್ದರು. ಆದರೆ ಮಧು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ವಿಡಿಯೋ ಅಪ್‌ಲೋಡ್ ಮಾಡುವುದನ್ನು ನಿಲ್ಲಿಸಲಿಲ್ಲ. ಈಗ ಅದೇ ವಿಡಿಯೋಗಳು ಅವರಿಗೆ ಬಂಪರ್ ಆದಾಯ ತಂದುಕೊಟ್ಟಿವೆ.
ಕೇವಲ 7 ದಿನದಲ್ಲಿ 5 ಲಕ್ಷ ಸಂಭಾವನೆ!
ಕೇವಲ 7 ದಿನದಲ್ಲಿ 5 ಲಕ್ಷ ಸಂಭಾವನೆ!
ಮಧು ಗೌಡ ಹಂಚಿಕೊಂಡ ಡೆಲಿವರಿ ಸಂಬಂಧಿತ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿವೆ. ಒಂದು ಮೂಲದ ಪ್ರಕಾರ, ಕೇವಲ ಒಂದು ವಾರದ ಅವಧಿಯಲ್ಲಿ ಮಧು ಗೌಡ ಸುಮಾರು 5 ಲಕ್ಷ ರೂಪಾಯಿ ಸಂಭಾವನೆಯನ್ನು ಯೂಟ್ಯೂಬ್‌ನಿಂದ ಪಡೆದಿದ್ದಾರೆ ಎನ್ನಲಾಗಿದೆ. ಟ್ರೋಲ್ ಮಾಡಿದವರು ಬಾಯಿ ಮೇಲೆ ಬೆರಳಿಟ್ಟು ನೋಡುವಂತೆ ಮಾಡುವಲ್ಲಿ ಮಧು ಯಶಸ್ವಿಯಾಗಿದ್ದಾರೆ.
70 ಲಕ್ಷ ವೀಕ್ಷಣೆ ಕಂಡ ವಿಡಿಯೋಗಳು
70 ಲಕ್ಷ ವೀಕ್ಷಣೆ ಕಂಡ ವಿಡಿಯೋಗಳು
ಮಧು ಗೌಡ ಅವರ ಚಾನೆಲ್‌ನಲ್ಲಿ ಅಪ್‌ಲೋಡ್ ಆದ 'ಮನೆಗೆ ಲಕ್ಷ್ಮಿ ಬಂದಿದ್ದಾಳೆ' ಎಂಬ ವಿಡಿಯೋ ಸೇರಿದಂತೆ ಹಲವು ವಿಡಿಯೋಗಳು ಬರೋಬ್ಬರಿ 7 ಮಿಲಿಯನ್ (70 ಲಕ್ಷ) ವೀಕ್ಷಣೆಗಳನ್ನು ಪಡೆದಿವೆ. 25ನೇ ವಯಸ್ಸಿನಲ್ಲಿ ತಾಯಿಯಾದ ಸಂಭ್ರಮವನ್ನು ಹಂಚಿಕೊಂಡ ಮಧು ಅವರಿಗೆ ಸಾವಿರಾರು ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ದೊಡ್ಡ ಯಶಸ್ಸು ತಂದುಕೊಟ್ಟಿರುವುದು ವಿಶೇಷ
ದೊಡ್ಡ ಯಶಸ್ಸು ತಂದುಕೊಟ್ಟಿರುವುದು ವಿಶೇಷ
ಯೂಟ್ಯೂಬ್‌ನಲ್ಲಿ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ, ಮಧು ಗೌಡ ಮಾತ್ರ ಅದನ್ನು ಅಭಿಮಾನಿಗಳೊಂದಿಗಿನ ಬಾಂಧವ್ಯವಾಗಿ ನೋಡಿದ್ದಾರೆ. ಟ್ರೋಲರ್‌ಗಳು ವಿಡಂಬನೆ ಮಾಡುತ್ತಿದ್ದರೂ, ಅದೇ ವಿಡಿಯೋಗಳು ಲಕ್ಷಾಂತರ ಜನರನ್ನು ತಲುಪಿ ಅವರಿಗೆ ಆರ್ಥಿಕವಾಗಿಯೂ ದೊಡ್ಡ ಯಶಸ್ಸು ತಂದುಕೊಟ್ಟಿರುವುದು ವಿಶೇಷ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.