MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮಧು ಗೌಡನ ಅನ್‌ಫಾಲೋ ಮಾಡ್ತಿರೋ ಫ್ಯಾನ್ಸ್: '9 ವರ್ಷದ ಪರಿಶ್ರಮ ಹಾಳು ಮಾಡ್ಕೋಬೇಡಿ' ಎಂದಿದ್ದೇಕೆ?

ಮಧು ಗೌಡನ ಅನ್‌ಫಾಲೋ ಮಾಡ್ತಿರೋ ಫ್ಯಾನ್ಸ್: '9 ವರ್ಷದ ಪರಿಶ್ರಮ ಹಾಳು ಮಾಡ್ಕೋಬೇಡಿ' ಎಂದಿದ್ದೇಕೆ?

Madhu Gowda Instagram: ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಮಧು ಗೌಡ ಅವರಿಗೆ ಅವರದ್ದೇ ಫಾಲೋವರ್ಸ್‌ಗಳು ಬಿಗ್ ಶಾಕ್ ನೀಡಿದ್ದಾರೆ! ಸಾವಿರಾರು ಮಂದಿ ಅವರನ್ನು ಅನ್‌ಫಾಲೋ ಮಾಡುತ್ತಿದ್ದು, ಈ ಬಗ್ಗೆ ಇಲ್ಲಿದೆ ಮಾಹಿತಿ.

2 Min read
Author : Ashwini HR
Published : Sep 20 2026, 06:59 PM IST
Share this Photo Gallery
  • FB
  • TW
  • Linkdin
  • Whatsapp
15
ಸಾಮಾಜಿಕ ಜಾಲತಾಣದಲ್ಲಿ ವೈರಲ್
Image Credit : Instagram

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಧು ಗೌಡ (Madhu Gowda) ಅವರ ಇತ್ತೀಚಿನ ಕಂಟೆಂಟ್ ಶೈಲಿ ಮತ್ತು ಅವರ ಫಾಲೋವರ್ಸ್‌ಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅನ್‌ಫಾಲೋ ಮಾಡಿದ ಬರೋಬ್ಬರಿ 28,322 ಫಾಲೋವರ್ಸ್!
Image Credit : karnatakanomad Instagram

ಅನ್‌ಫಾಲೋ ಮಾಡಿದ ಬರೋಬ್ಬರಿ 28,322 ಫಾಲೋವರ್ಸ್!

ಮಧು ಗೌಡ ಅವರ ಇನ್‌ಸ್ಟಾಗ್ರಾಮ್ ಅಂಕಿ-ಅಂಶಗಳನ್ನು (Analytics) ವಿವರಿಸಿರುವ ಅವರು, "ಮಧು ಗೌಡ ಅವರು ಇತ್ತೀಚೆಗೆ ಮಾಡುತ್ತಿರುವ ಕೆಲವು ತಪ್ಪುಗಳಿಂದಾಗಿ ಕಳೆದ ಕೇವಲ 3 ತಿಂಗಳುಗಳಲ್ಲಿ ಸುಮಾರು 28,322 ಫಾಲೋವರ್ಸ್ ಅವರನ್ನು ಅನ್‌ಫಾಲೋ (Unfollow) ಮಾಡಿದ್ದಾರೆ" ಎಂದು ಅಂಕಿ-ಅಂಶವನ್ನು ಹೊರಹಾಕಿದ್ದಾರೆ.

Related Articles

Related image1
ಸೀಮಂತ ಶಾಸ್ತ್ರ ಸಮಾರಂಭದಂದು ಕಣ್ಣೀರಿಟ್ಟ ಮಧು ಗೌಡ ಅತ್ತೆ.. ನೆಟ್ಟಿಗರಿಂದ ಕೇಳಿಬಂತು ಹೀಗೊಂದು ಕಾಮೆಂಟ್
Related image2
ಒಂದೇ ವಾರ.. 70 ಲಕ್ಷ ವೀವ್ಸ್, 5 ಲಕ್ಷ ಆದಾಯ! ವೈರಲ್ ಆದ ವಿಡಿಯೋದಿಂದ ಮಧು ಗೌಡ ಗಳಿಸಿದ್ದು ಇಷ್ಟೊಂದಾ?
35
ಹೊಗಳುತ್ತಿದ್ದವರೇ ರೋಸ್ಟ್ ಮಾಡುತ್ತಿದ್ದಾರೆ
Image Credit : karnatakanomad Instagram

ಹೊಗಳುತ್ತಿದ್ದವರೇ ರೋಸ್ಟ್ ಮಾಡುತ್ತಿದ್ದಾರೆ

ಕಳೆದ 31 ರಿಂದ 32 ವಾರಗಳ ಹಿಂದೆ ಮಧು ಗೌಡ ಅವರ ಪ್ರತಿಯೊಂದು ಪೋಸ್ಟ್‌ಗೂ ನೆಟ್ಟಿಗರು ಅತ್ಯಂತ ಪ್ರೀತಿಯಿಂದ, ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಸ್ವಂತ ಫಾಲೋವರ್ಸ್‌ಗಳೇ ಅವರನ್ನು ಕಮೆಂಟ್ ಬಾಕ್ಸ್‌ನಲ್ಲಿ ಟ್ರೋಲ್ ಮತ್ತು ರೋಸ್ಟ್ ಮಾಡುತ್ತಿದ್ದಾರೆ. ಕಂಟೆಂಟ್‌ನಲ್ಲಿ ಗುಣಮಟ್ಟ ಕಡಿಮೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

45
ಮೈಸೂರಿನವರಾಗಿ ಅಭಿಮಾನಿ ನೀಡಿದ ಕಿವಿಮಾತು
Image Credit : karnatakanomad Instagram

ಮೈಸೂರಿನವರಾಗಿ ಅಭಿಮಾನಿ ನೀಡಿದ ಕಿವಿಮಾತು

ಮೈಸೂರಿನವರಾಗಿ ಅಭಿಮಾನಿ ನೀಡಿದ ಕಿವಿಮಾತು
9 ವರ್ಷದ ಕಠಿಣ ಪರಿಶ್ರಮ: “ನೀವು ಇಷ್ಟು ದೊಡ್ಡ ಮಟ್ಟದ ಫಾಲೋವರ್ಸ್‌ಗಳನ್ನು, ಜನರ ಪ್ರೀತಿಯನ್ನು ಗಳಿಸಲು ಬರೋಬ್ಬರಿ 9 ವರ್ಷಗಳ ಕಾಲ ಕಷ್ಟಪಟ್ಟಿದ್ದೀರಿ. ಅಂತಹ ಕಷ್ಟಪಟ್ಟು ಕಟ್ಟಿದ ಹೆಸರನ್ನು ಕೇವಲ ಒಂದೇ ವರ್ಷದಲ್ಲಿ ಕಳೆದುಕೊಳ್ಳಬೇಡಿ”.

ಉಪಯುಕ್ತ ಕಂಟೆಂಟ್ ನೀಡಿ: "ಮಧು ಗೌಡ ಅವರಿಗೆ ಇತ್ತೀಚೆಗಷ್ಟೇ ಮಗು ಜನಿಸಿದೆ (ನಾರ್ಮಲ್ ಡೆಲಿವರಿ). ಆದ್ದರಿಂದ ಹೆರಿಗೆಯ ನಂತರದ ದಿನಗಳಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? (After Pregnancy Care) ಮತ್ತು ನಾರ್ಮಲ್ ಡೆಲಿವರಿ ಟಿಪ್ಸ್‌ನಂತಹ ಜನರಿಗೆ ನಿಜವಾಗಿಯೂ ಉಪಯೋಗವಾಗುವ ಮಾಹಿತಿಪೂರ್ಣ (Informative) ಕಂಟೆಂಟ್‌ಗಳನ್ನು ಮಾಡಿ."

55
ಕಂಟೆಂಟ್ ಬದಲಾಯಿಸಿಕೊಳ್ಳಲು ಮನವಿ
Image Credit : Instagram

ಕಂಟೆಂಟ್ ಬದಲಾಯಿಸಿಕೊಳ್ಳಲು ಮನವಿ

ಜನರು ನಿಮ್ಮನ್ನು ಅನ್‌ಫಾಲೋ ಮಾಡುತ್ತಿರುವುದನ್ನು ಮತ್ತು ನೆಗೆಟಿವ್ ಕಮೆಂಟ್ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ. ಟ್ರೋಲ್‌ಗಳಿಗೆ ಆಹಾರವಾಗುವ ಬದಲು, ಸಮಾಜಕ್ಕೆ ಒಳ್ಳೆಯ ಸಂದೇಶ ಹಾಗೂ ಮಾಹಿತಿ ಕೊಡುವಂತಹ ಕಂಟೆಂಟ್ ಕ್ರಿಯೇಟ್ ಮಾಡಿ ನಿಮ್ಮ ಹಿಂದಿನ ಗೌರವವನ್ನು ಮತ್ತೆ ಸಂಪಾದಿಸಿ ಎಂದು ಅಬಿಮಾನಿಯಾಗಿ, ಹಿತೈಷಿಯಾಗಿ ವಿನಂತಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹಲವು ನೆಟ್ಟಿಗರು ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
 

Latest Videos
Recommended Stories
Recommended image1
ಸನ್‌ ಉದಯದಲ್ಲಿ ನವಶಕ್ತಿ ವೈಭವ ದೈವೀಕ ಕಥಾ ಸರಣಿ, ಅಕ್ಟೋಬರ್‌ 11 ರಿಂದ ವೀಕ್ಷಿಸಲು ರೆಡಿಯಾಗಿ
Recommended image2
'ಗೌರಿ ಪುತ್ರ'ದಲ್ಲಿ ರಿತ್ವಿಕ್‌ಗೆ ಅಮ್ಮನಾಗಿ ಎಂಟ್ರಿಕೊಟ್ಟ ಅನು ಪ್ರಭಾಕರ್, ನಾಯಕಿಯಾಗಿ 'ಗಟ್ಟಿಮೇಳ' ಸುಂದರಿ!
Recommended image3
Amruthadhaare Serial: ಮನೆಗೆ ಎಂಟ್ರಿ ಕೊಟ್ಟಾಯ್ತು ಭೂಮಿಕಾ! ಜೈದೇವ್​, ಶಕುಂತಲಾಗೆ ಜೈಲೂಟ ಫಿಕ್ಸ್​
Related Stories
Recommended image1
ಸೀಮಂತ ಶಾಸ್ತ್ರ ಸಮಾರಂಭದಂದು ಕಣ್ಣೀರಿಟ್ಟ ಮಧು ಗೌಡ ಅತ್ತೆ.. ನೆಟ್ಟಿಗರಿಂದ ಕೇಳಿಬಂತು ಹೀಗೊಂದು ಕಾಮೆಂಟ್
Recommended image2
ಒಂದೇ ವಾರ.. 70 ಲಕ್ಷ ವೀವ್ಸ್, 5 ಲಕ್ಷ ಆದಾಯ! ವೈರಲ್ ಆದ ವಿಡಿಯೋದಿಂದ ಮಧು ಗೌಡ ಗಳಿಸಿದ್ದು ಇಷ್ಟೊಂದಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved