- Home
- Entertainment
- TV Talk
- Bigg Boss ಗಗನ್ ಸ್ಕೂಲ್ಡೇಸ್ ಆ ರಹಸ್ಯ ಪ್ರೇಮಕಥೆ: ಅವಳ ನಗುವಿಗಾಗಿ ಮಾಡಿದ್ದೇನು? ರೋಚಕ ಘಟನೆ ನೆನೆದ ನಟ
Bigg Boss ಗಗನ್ ಸ್ಕೂಲ್ಡೇಸ್ ಆ ರಹಸ್ಯ ಪ್ರೇಮಕಥೆ: ಅವಳ ನಗುವಿಗಾಗಿ ಮಾಡಿದ್ದೇನು? ರೋಚಕ ಘಟನೆ ನೆನೆದ ನಟ
ಬಿಗ್‌ಬಾಸ್ ಸ್ಪರ್ಧಿ ಗಗನ್ ಚಿನ್ನಪ್ಪ ಅವರು ತಮ್ಮ ಶಾಲಾ ದಿನಗಳ ರಹಸ್ಯ ಪ್ರೇಮಕಥೆಯನ್ನು ಸಂಗೀತಾ ಭಟ್ ಜೊತೆ ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ಹುಡುಗಿಯ ಬ್ಯಾಗ್‌ನಲ್ಲಿ ಯಾರಿಗೂ ತಿಳಿಯದಂತೆ ಚಾಕಲೇಟ್ ಇಡುತ್ತಿದ್ದ ಘಟನೆಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ಸ್ಕೂಲ್ ಡೇಸ್ ಲವ್
ಸೀತಾರಾಮ ಸೀರಿಯಲ್ ರಾಮ್ ಉರ್ಫ್ Bigg Boss ಗಗನ್ ಚಿನ್ನಪ್ಪ ಅವರು ಬಿಗ್ಬಾಸ್ನಲ್ಲಿ ತಮ್ಮ ಸ್ಕೂಲ್ ಡೇಸ್ ಲವ್ಸ್ಟೋರಿಯನ್ನು ತೆರೆದಿಟ್ಟಿದ್ದಾರೆ. ಸಂಗೀತಾ ಭಟ್ ಅವರ ಜೊತೆ ಈ ಲವ್ಸ್ಟೋರಿಯನ್ನು ಅವರು ಹಂಚಿಕೊಂಡಿದ್ದಾರೆ.
ಒಂದು ವರ್ಷ ಚಿಕ್ಕವಳು
ನನಗಿಂತ ಒಂದು ವರ್ಷ ಚಿಕ್ಕವಳ ಜೊತೆಗೆ ನನ್ನ ಲವ್ ಆಗಿತ್ತು. ಆದರೆ ಹೇಳುವ ಧೈರ್ಯ ಇರಲಿಲ್ಲ. ಏನು ಮಾಡುವುದು ಎಂದು ತಿಳಿಯದೇ ಒಂದು ಪ್ಲ್ಯಾನ್ ಮಾಡಿದೆ ಎಂದಿದ್ದಾರೆ ಗಗನ್. ಅವಳ ಬ್ಯಾಗ್‌ನಲ್ಲಿ, ಚಾಕಲೇಟ್, ಹೂವು ಎಲ್ಲಾ ಇಡುತ್ತಿದ್ದೆ. ಯಾರು ಇಟ್ಟರು ಎಂದು ಅವಳಿಗೆ ತಿಳಿಯದೇ ಫುಲ್ ಶಾಕ್ ಆಗಿ ಹೋಗುತ್ತಿದ್ದಳು. ಕೊನೆಯವರೆಗೂ ಅವಳಿಗೆ ಇದನ್ನು ಯಾರು ಇಟ್ಟಿದ್ದು ಎಂದು ತಿಳಿಯಲೇ ಇಲ್ಲ ಎಂದಿದ್ದಾರೆ.
ಪಕ್ಕದಲ್ಲೇ ನಿಂತು ಜೋಕ್
ಶಾಲೆಯಲ್ಲಿ ಮಾರ್ಚ್ಫಾಸ್ಟ್ ಇದ್ದ ಸಮಯದಲ್ಲಿ ಅವಳ ಪಕ್ಕದಲ್ಲಿಯೇ ನಿಂತು ಜೋಕ್ ಮಾಡುತ್ತಿದ್ದೆ. ಅವಳಿಗೆ ಕೇಳುವಂತೆ ಜೋಕ್ಸ್ ಹೇಳುತ್ತಿದ್ದೆ. ಅವಳು ನಕ್ಕರೆ ನನಗೆ ಅದೇ ಸ್ವರ್ಗವಾಗಿತ್ತು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ವಾಹಿನಿ ಪ್ರೊಮೋ
ಇನ್ಸ್ಟಾಗ್ರಾಮ್, ಡಿಎಂ ಎಲ್ಲಾ ಇರುವ ಮೊದಲು ಫ್ಲರ್ಟಿಂಗ್ ಹೇಗೆ ಇರುತ್ತಿತ್ತು ಎನ್ನುವ ಕ್ಯಾಪ್ಷನ್ ನೀಡಿ ಕಲರ್ಸ್ ವಾಹಿನಿ ಈ ಪ್ರೊಮೋ ಶೇರ್ ಮಾಡಿಕೊಂಡಿದೆ.
ಲವ್ ಬ್ರೇಕಪ್
ಅಷ್ಟಕ್ಕೂ ಗಗನ್ ಅವರು ರಿಯಲ್ ಲೈಫ್ನಲ್ಲಿ ಗಗನಸಖಿಯೊಬ್ಬರ ಪ್ರೀತಿಗೆ ಬಿದ್ದು ಮೋಸ ಹೋಗಿದ್ದರು. ಆರು ವರ್ಷಗಳ ಲವ್ನಲ್ಲಿ ಬಿದ್ದು, ಕೊನೆಗೆ ಆಕೆ ಚೀಟರ್ ಎನ್ನುವುದು ತಿಳಿದಿತ್ತು ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು.
ಲವರ್ನಿಂದ ಮೋಸ
ನಾನು ಆಗ ʻಮಂಗಳಗೌರಿʼ ಸೀರಿಯಲ್ ಮಾಡುತ್ತಿದ್ದೆ. ನನಗೆ 50 ರಿಂದ 60 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ತುಂಬಾ ಕಷ್ಟ ಇತ್ತು ಆದರೆ ನಾನು ಹೇಳಿಕೊಳ್ಳುತ್ತಿರಲಿಲ್ಲ. ಒಂದು ಇಷ್ಯೂ ಆಯ್ತು ಸೀರಿಯಲ್ ಮಾಡಲ್ಲ ಅಂತ ಹೊರಗೆ ಬಂದೆ. ಬಳಿಕ ಸುಮಾರು ಎರಡು ವರ್ಷ ನನಗೆ ಬೇರೆ ಯಾವ ಆಫರ್ಸ್ ಕೂಡ ಇರಲಿಲ್ಲ. ಆಗ ಕಾರು ಕೂಡ ಮಾರಿದೆ, ಫೈನಾನ್ಶಿಯಲಿ ಕುಗ್ಗಿದಾಗ ಅವಳಿಗೆ ನನ್ನ ಮೇಲೆ ಆಸಕ್ತಿ ಕಡಿಮೆಯಾಯ್ತು. ನಂತರ ನನಗೆ ನಿಧಾನಕ್ಕೆ ಅರ್ಥ ಆಗುವಷ್ಟರಲ್ಲಿ ಅವರ ಮೇಲೆ ಹೀಗೆ ಸ್ವಲ್ಪ ಡೌಟ್ ಕೂಡ ಬಂತು. ಅವಳು ನನಗೆ ಚೀಟ್ ಮಾಡಿದ್ದಳು. ಹೀಗೆ ಆರು ವರ್ಷ ನಾನು ಟೈಮ್ ವೇಸ್ಟ್ ಮಾಡಿದೆ” ಎಂದು ಗಗನ್ ಚಿನ್ನಪ್ಪ ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

