ಬಾಗಲಕೋಟೆ, ಆಲಮಟ್ಟಿ, ವಿಜಯಪುರದಿಂದ ಕಾಶಿಗೆ ನೇರ ರೈಲು ಸಂಪರ್ಕ; ಎಲ್ಲೆಲ್ಲಿ ನಿಲುಗಡೆ?
ಉತ್ತರ ಕರ್ನಾಟಕದ ಜನರಿಗಾಗಿ ಹುಬ್ಬಳ್ಳಿಯಿಂದ ವಾರಾಣಾಸಿಗೆ ನೇರ ರೈಲು ಸಂಚಾರ ಆರಂಭವಾಗಿದೆ. ಗದಗ, ಬಾದಾಮಿ, ಬಾಗಲಕೋಟೆ ಮತ್ತು ವಿಜಯಪುರ ಮಾರ್ಗವಾಗಿ ಸಾಗುವ ಈ ರೈಲಿನ ವೇಳಾಪಟ್ಟಿ, ನಿಲುಗಡೆ ಹಾಗೂ ಪ್ರಯಾಣದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಹುಬ್ಬಳ್ಳಿ ಟು ವಾರಾಣಾಸಿ
ಉತ್ತರ ಕರ್ನಾಟಕ ಭಾಗದ ಜನತೆ ನೇರವಾಗಿ ವಾರಾಣಾಸಿಗೆ ಹೋಗಬಹುದು. ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರದಿಂದ ನೇರ ರೈಲು ಲಭ್ಯವಿದ್ದು, ಆರಾಮದಾಯಕ ಪ್ರಯಾಣಕ್ಕೆ ಇದು ಸೂಕ್ತವಾಗಿದೆ. ಈ ರೈಲಿನ ಕುರಿತ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ರೈಲು ಸಂಖ್ಯೆ 17323
ಈ ರೈಲು ಪ್ರತಿ ಶುಕ್ರವಾರ ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ ನಿಲ್ದಾಣದಿಂದ ಸಂಜೆ 6.15ಕ್ಕೆ ತನ್ನ ಪ್ರಯಾಣವನ್ನು ಆರಂಭಿಸುತ್ತದೆ. ಈ ರೈಲು ಎರಡನೇ ಬೆಳಗ್ಗೆ 8.45ಕ್ಕೆ ವಾರಾಣಾಸಿಯನ್ನು ತಲುಪುತ್ತದೆ. ಒಟ್ಟು ಇದು 2,037 ಕಿ.ಮೀ ದೂರದ, 38 ಗಂಟೆಯ ದೀರ್ಘ ಪ್ರಯಾಣ ಆಗಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ನಿಲುಗಡೆ?
ಎಸ್‌ಎಸ್ಎಸ್ ಹುಬ್ಬಳ್ಳಿ ಜಂಕ್ಷನ್, ಗದಗ ಜಂಕ್ಷನ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ವಿಜಯಪುರ ನಿಲ್ದಾಣದಲ್ಲಿ ಈ ರೈಲು ನಿಲುಗಡೆಯನ್ನು ಹೊಂದಿದೆ. ರೈಲಿನ ಸಮಯ ಈ ರೀತಿಯಾಗಿದೆ.
ಗದಗ ಜಂಕ್ಷನ್: ರಾತ್ರಿ 7.40, ಬಾದಾಮಿ: ರಾತ್ರಿ 9 ಗಂಟೆ, ಬಾಗಲಕೋಟೆ: ರಾತ್ರಿ 9.30, ಆಲಮಟ್ಟಿ: ರಾತ್ರಿ 10.25, ವಿಜಯಪುರ: ರಾತ್ರಿ 11.35
ಮತ್ತಷ್ಟು ನಿಲ್ದಾಣಗಳಿಗೆ ಬೇಡಿಕೆ
ಹುಬ್ಬಳ್ಳಿಯಿಂದ ಆರಂಭವಾದ್ರೂ ಕರ್ನಾಟಕದ ಕೆಲವೇ ಕೆಲವು ನಿಲುಗಡೆಯನ್ನು ಹೊಂದಿದೆ. ಗದಗ ಬಳಿಕ ಮಲ್ಲಾಪುರ, ಗುಳೇದಗುಡ್ಡ ರೋಡ್, ಬಸವನವ ಬಾಗೇವಾಡಿ, ಇಂಡಿ ಮತ್ತು ಹೂಟಗಿ ಜಂಕ್ಷನ್‌ನಲ್ಲಿ ನಿಲುಗಡೆ ನೀಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಬರೋ ರೈಲು ಪ್ರಯಾಣಿಕರ ಗಮನಕ್ಕೆ; ಮೆಜೆಸ್ಟಿಕ್ ಬರುತ್ತಿಲ್ಲ ನಿಮ್ಮ ಟ್ರೈನ್
ರೈಲು ಸಂಖ್ಯೆ 17324
ಪ್ರತಿ ಭಾನುವಾರ ವಾರಾಣಾಸಿಯಿಂದ ರಾತ್ರಿ 8 ಗಂಟೆ 40 ನಿಮಿಷಕ್ಕೆ ತನ್ನ ಪ್ರಯಾಣ ಆರಂಭಿಸಿ, ಮಂಗಳವಾರ ಬೆಳಗ್ಗೆ 9 ಗಂಟೆ 30 ನಿಮಿಷಕ್ಕೆ ಹುಬ್ಬಳ್ಳಿ ನಿಲ್ದಾಣವನ್ನು ತಲುಪಲಿದೆ.
ಇದನ್ನೂ ಓದಿ: ಬೆಂಗಳೂರು–ವಿಜಯಪುರ ನೇರ ವಿಶೇಷ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಚಿವ MB ಪಾಟೀಲ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

