- Home
- Karnataka Districts
- ಬೆಂಗಳೂರು–ವಿಜಯಪುರ ನೇರ ವಿಶೇಷ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಚಿವ MB ಪಾಟೀಲ್
ಬೆಂಗಳೂರು–ವಿಜಯಪುರ ನೇರ ವಿಶೇಷ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಚಿವ MB ಪಾಟೀಲ್
ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್‌ನ್ಯೂಸ್ ನೀಡಿದ್ದಾರೆ. ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲನ್ನು ಶಾಶ್ವತಗೊಳಿಸಬೇಕು ಮತ್ತು ಪ್ರಯಾಣದ ಸಮಯವನ್ನು ಬದಲಾಯಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು–ವಿಜಯಪುರ ನಡುವಿನ ನೇರ ರೈಲು
ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್‌ನ್ಯೂಸ್ ನೀಡಿದ್ದಾರೆ. ಉತ್ತರ ಕರ್ನಾಟಕದ ಪ್ರಯಾಣಿಕರ ಅಗತ್ಯ ಹಾಗೂ ಬೆಂಗಳೂರು–ವಿಜಯಪುರ ನಡುವಿನ ಹೆಚ್ಚುತ್ತಿರುವ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಯಶವಂತಪುರ–ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.
ಬಹುಕಾಲದ ಬೇಡಿಕೆಗೆ ದೊರೆತ ಮತ್ತೊಂದು ಸಕಾರಾತ್ಮಕ ಸ್ಪಂದನೆ
ಈ ಹಿಂದೆ ಈ ರೈಲು ಸೇವೆಯನ್ನು ಕೇವಲ ಜೂನ್ 29ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಇದೇ ವರ್ಷದ ಆಗಸ್ಟ್ 31ರವರೆಗೆ ಸೇವೆಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಸತತ ಪ್ರಯತ್ನಗಳ ಫಲವಾಗಿ ವಾರಕ್ಕೊಮ್ಮೆ ಆರಂಭಗೊಂಡಿದ್ದ ಈ ರೈಲು ಸೇವೆಯನ್ನು ಇದೇ ಜೂನ್ 1ರಿಂದ ವಾರದಲ್ಲಿ ಎರಡು ದಿನಗಳ ಸೇವೆಯಾಗಿ ವಿಸ್ತರಿಸಲಾಗಿದೆ. ಇದು ಉತ್ತರ ಕರ್ನಾಟಕದ ಜನರ ಬಹುಕಾಲದ ಬೇಡಿಕೆಗೆ ದೊರೆತ ಮತ್ತೊಂದು ಸಕಾರಾತ್ಮಕ ಸ್ಪಂದನೆಯಾಗಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಗತ್ಯ ಸುಧಾರಣೆ
ಮುಂದಿನ ದಿನಗಳಲ್ಲಿ ಈ ರೈಲು ಸೇವೆಯನ್ನು ಶಾಶ್ವತಗೊಳಿಸುವುದು, ಪ್ರತಿದಿನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಅಗತ್ಯ ಸುಧಾರಣೆಗಳನ್ನು ತರುವವರೆಗೆ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ.
ಪ್ರಯಾಣಿಕರಿಂದ ಸಚಿವರಿಗೆ ಮನವಿ
ಎಂ.ಬಿ.ಪಾಟೀಲ್ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಜನರು, ದಯವಿಟ್ಟು ಈ ರೈಲ್ ಟೈಮ್ ಅನ್ನು ವಿಜಯಪುರ ಇಂದ ರಾತ್ರಿ 7.30ಕ್ಕೆ ಹೊರಟು ಯಶವಂತಪುರ್ ಬೆಳಗ್ಗೆ 5.30ಗೆ ಮುಟ್ಟುವ ಹಾಗೆ ಸಮಯ ಬದಲಾಯಿಸಿ. ಈಗ ಟ್ರೈನ್ 3:30 to 4am ಹಾಗೆ ಬಂದು ತಲುಪುವುದರಿಂದ ತುಂಬಾ ಪ್ರಯಾಣಿಕರು ಬಸ್ ಸೌಲಭ್ಯ ವಿಲ್ಲದೆ ಒದ್ದಾಡುತ್ತಾರೆ ಎಂದು ಮನವಿ ಮಾಡಿಕೊಂಡದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ, 5 ಜಿಲ್ಲೆಯ ಪ್ರವಾಸಿಗರಿಗೆ ಇದೊಂದು ಆಫರ್!
ಸಮಯ ಬದಲಾವಣೆ ಮತ್ತು ಶಾಶ್ವತ ರೈಲಿಗಾಗಿ ಮನವಿ
ಈ ರೈಲು ವಿಜಯಪುರದಿಂದ ಬೆಂಗಳೂರಿಗೆ ಹೋಗಲು ಬಹಳ ಉತ್ತಮವಾಗಿದೆ. ಇದನ್ನು ಶಾಶ್ವತ ಮಾಡುವುದು ಒಂದು ಭಾಗವಾದರೆ ಸಮಯ ಬದಲಾವಣೆ ಎರಡನೇ ಭಾಗವಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Bengaluru K-Ride Suburban Rail: ಹೊಸೂರು-ದೇವನಹಳ್ಳಿ ಸೇರಿ ಕೆ-ರೈಡ್‌ನ 3 ರೈಲುಗಳ ಸೇವೆ ಶೀಘ್ರ ಆರಂಭ!

