MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Technology
  • ಒಂದೇ ರೀಚಾರ್ಜ್, 4 ಸಿಮ್‌ಗಳಿಗೆ ಉಚಿತ ಕರೆ, 5G ಡೇಟಾ! ಏರ್‌ಟೆಲ್‌ನ ಈ ಫ್ಯಾಮಿಲಿ ಪ್ಲಾನ್ ಬಗ್ಗೆ ತಿಳ್ಕೊಳ್ಳಿ!

ಒಂದೇ ರೀಚಾರ್ಜ್, 4 ಸಿಮ್‌ಗಳಿಗೆ ಉಚಿತ ಕರೆ, 5G ಡೇಟಾ! ಏರ್‌ಟೆಲ್‌ನ ಈ ಫ್ಯಾಮಿಲಿ ಪ್ಲಾನ್ ಬಗ್ಗೆ ತಿಳ್ಕೊಳ್ಳಿ!

ಏರ್‌ಟೆಲ್ ಕಂಪನಿಯು ಗ್ರಾಹಕರಿಗೆ ಹೊಸ ಫ್ಯಾಮಿಲಿ ಪ್ಲಾನ್ ಪರಿಚಯಿಸಿದೆ. ಕುಟುಂಬದಲ್ಲಿ ಹಲವು ಸದಸ್ಯರು ಏರ್‌ಟೆಲ್ ಸಿಮ್ ಬಳಸುತ್ತಿದ್ದಾರೆ. ಒಂದೇ ಫ್ಯಾಮಿಲಿ ಪ್ಯಾಕ್ ರಿಚಾರ್ಜ್‌ನಡಿ ನಾಲ್ವರು ಉಚಿತವಾಗಿ ಡೇಟಾ, ಕರೆ, ಇನ್ನಿತರ ಹಲವು ಪ್ರಯೋಜನ ಪಡೆಯಬಹುದಾಗಿದೆ. ವಿವರವಾಗಿ ತಿಳಿಯಿರಿ.

2 Min read
Author : Ravi Janekal
Published : Sep 03 2026, 10:12 AM IST
Share this Photo Gallery
  • FB
  • TW
  • Linkdin
  • Whatsapp
15
ಏರ್‌ಟೆಲ್ ಫ್ಯಾಮಿಲಿಗೆ ಗುಡ್‌ನ್ಯೂಸ್
Image Credit : Asianet News

ಏರ್‌ಟೆಲ್ ಫ್ಯಾಮಿಲಿಗೆ ಗುಡ್‌ನ್ಯೂಸ್

ಈಗ ಪ್ರತಿಯೊಬ್ಬರ ಬಳಿಯೂ ಮೊಬೈಲ್ ಫೋನ್‌ಗಳಿವೆ. ಪ್ರತಿ ಮೊಬೈಲ್‌ಗೂ ಒಂದರಿಂದ ಎರಡು ಸಿಮ್‌ಗಳಿರುವುದು ಸಾಮಾನ್ಯ. ಒಂದು ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರೆ. ನಾಲ್ವರ ಬಳಿಯೂ ನಾಲ್ಕು ಮೊಬೈಲ್, ನಾಲ್ಕಾರು ಸಿಮ್ ಇದ್ದೇ ಇರುತ್ತೆ. ಪ್ರತಿ ತಿಂಗಳು ನಾಲ್ವರು ಪ್ರತ್ಯೇಕವಾಗಿ ರೀಚಾರ್ಜ್ ಸಾವಿರಾರು ರೂಾಯಿ ರಿಚಾರ್ಜ್ ಮಾಡಿಸಿದ್ರೆ ಅಲ್ಲಿಗೆ ತಿಂಗಳಿಗೆ ನಾಲ್ಕು ಸಾವಿರ ಖರ್ಚಾದಂತಾಯ್ತು. ಪ್ರತಿ ತಿಂಗಳು ನಾಲ್ಕು ಸಾವಿರ ರಿಚಾರ್ಜ್ ಅಂದ್ರೆ ಬಜೆಟ್ ಮೇಲೆ ಹೊಡೆತ ಬಿದ್ದಂತೆ. ಅದರ ಬದಲು ಒಂದೇ ರೀಚಾರ್ಜ್‌ನಲ್ಲಿ ನಾಲ್ವರು ಡಾಟಾ ಪ್ಯಾಕ್ ಬಳಸುವಂತಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಯೋಚನೆ ಬರುತ್ತಲ್ಲವ? ನಿಮ್ಮ ಯೋಚನೆ ಇದೀಗ ನಿಜವಾಗಿದೆ. ಏರ್‌ಟೆಲ್ ಅಂಥದ್ದೊಂದು ಫ್ಯಾಮಿಲಿ ಪ್ಲ್ಯಾನ್ ಪರಿಚಯಿಸಿದ. ಒಂದೇ ಸಿಮ್‌ಗೆ ಒಮ್ಮೆ ರಿಚಾರ್ಜ್ ಮಾಡಿಸಿದ್ರೆ ನಾಲ್ವರು ಕರೆ, ಡಾಟಾ ಬಳಸಬಹುದಾಗಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಏರ್‌ಟೆಲ್ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆ
Image Credit : stockPhoto

ಏರ್‌ಟೆಲ್ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆ

ಏರ್‌ಟೆಲ್ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆ ವಿಶೇಷತೆ ಎಂದರೆ ಇಲ್ಲಿ ಒಂದೇ ಪ್ಲಾನ್, ಒಂದೇ ಸಿಮ್‌ಗೆ ರಿಚಾರ್ಜ್ ಮಾಡಿಸಿದ್ರೆ ಸಾಕು. ಅಂದರೆ ಒಂದೇ ಬಿಲ್, ಒಂದು ಕುಟುಂಬದ ನಾಲ್ಕರು ಸದಸ್ಯರು ಬಳಸುವ ಸಿಮ್‌ಗಳ ನಂಬರ್‌ ಗೂ ರಿಚಾರ್ಜ್ ಆದಂತೆ. ಇಂಥದ್ದೊಂದು ಆಯ್ಕೆ ಗ್ರಾಹಕರಿಗೆ ಏರ್‌ಟೆಲ್ ಪರಿಚಯಿಸಿದೆ. ಒಂದೇ ಕುಟುಂಬದಲ್ಲಿನ ಏರ್‌ಟೆಲ್ ಸಂಖ್ಯೆಗಳ ಸಂಖ್ಯೆಯನ್ನು ಅವಲಂಬಿಸಿ, 2, 3, ಅಥವಾ 4 ಸಂಪರ್ಕಗಳಿಗೆ ನಿಮಗೆ ಬೇಕಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಗಮನಿಸಬೇಕು ಎಲ್ಲ ಸದಸ್ಯರ ಸಿಮ್‌ಗಳು ಏರ್‌ಟೆಲ್‌ ಇರಬೇಕು. ಬೇರೆ ಬೇರೆ ಕಂಪನಿಗಳಲ್ಲ.

Related Articles

Related image1
BSNL ಗ್ರಾಹಕರಿಗೆ ಗುಡ್ ನ್ಯೂಸ್: ದಿನಕ್ಕೆ 2GB ಡೇಟಾ, ಅನ್‌ಲಿಮಿಟೆಡ್ ಕಾಲ್ಸ್..! ಹೊಸ ಆಫರ್‌ಗೆ ಜಿಯೋ, ಏರ್‌ಟೆಲ್ ಕಂಗಾಲು
Related image2
Airtel Recharge Plans: ಗ್ರಾಹಕರಿಗೆ ಏರ್ಟೆಲ್‌ ಶಾಕ್‌ ! ಕೆಲ ಜನಪ್ರಿಯ ರಿಚಾರ್ಜ್‌ ಪ್ಲಾನ್‌ ಬಂದ್‌
35
ಮನೆಯಲ್ಲಿ ಎರಡು ಸಿಮ್‌ಗಳಿದ್ರೆ ಎಷ್ಟು ರಿಚಾರ್ಜ್?
Image Credit : Asianet News

ಮನೆಯಲ್ಲಿ ಎರಡು ಸಿಮ್‌ಗಳಿದ್ರೆ ಎಷ್ಟು ರಿಚಾರ್ಜ್?

ನಿಮ್ಮ ಕುಟುಂಬದಲ್ಲಿ ಇಬ್ಬರ ಬಳಿ ಏರ್‌ಟೆಲ್ ನಂಬರ್‌ಗಳಿದ್ದರೆ ನೀವು ₹699 ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಮೇಲೆ ರಿಚಾರ್ಜ್ ಮಾಡಿಸಿದ್ರೆ ಈ ಯೋಜನೆಯು ಒಂದು ಪ್ರೈಮರಿ, ಇನ್ನೊಂದು ಆಡ್‌-ಆನ್ ಸಂಪರ್ಕ ನೀಡುತ್ತೆ. ಇದರೊಂದಿಗೆ ಅನಿಯಮಿತ 4G/5G ಡೇಟಾ, ಅನಿಯಮಿತ ಸ್ಥಳೀಯ ಮತ್ತು STD ಕರೆ ಮತ್ತು ಎರಡೂ ಸಂಖ್ಯೆಗಳಿಗೆ ದಿನಕ್ಕೆ 100 SMS ನೀಡುತ್ತದೆ. ಅಲ್ಲದೆ 6 ತಿಂಗಳ ಅಮೆಜಾನ್ ಪ್ರೈಮ್, 12 ತಿಂಗಳ ಜಿಯೋಹಾಟ್‌ಸ್ಟಾರ್ ಮೊಬೈಲ್ ಸಬ್‌ಸ್ಕ್ರಿಪ್ಷನ್ ಸಿಗುತ್ತೆ. ಇಷ್ಟು ಅಲ್ಲದೆ 100GB ಗೂಗಲ್ ಒನ್ ಕ್ಲೌಡ್ ಸ್ಟೋರೇಜ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂನಂತಹ ಡಿಜಿಟಲ್ ಆಫರ್‌ಗಳು ಸೇರಿವೀ. ₹699 ಬೆಲೆ GST ಗಿಂತ ಮೊದಲು, ಮತ್ತು ತೆರಿಗೆಗಳನ್ನು ಸೇರಿಸಿದ ನಂತರ ಬಿಲ್ ಮೊತ್ತ ಹೆಚ್ಚಾಗಿರುತ್ತೆ..

45
3 ಸಿಮ್‌ಗಳಿಗೆ ಎಷ್ಟು ರಿಚಾರ್ಜ್ ಮಾಡಿಸಬೇಕು?
Image Credit : Google

3 ಸಿಮ್‌ಗಳಿಗೆ ಎಷ್ಟು ರಿಚಾರ್ಜ್ ಮಾಡಿಸಬೇಕು?

ಒಂದು ನಿಮ್ಮ ಕುಟುಂಬದಲ್ಲಿ ಮೂರು ಏರ್‌ಟೆಲ್ ಸಂಖ್ಯೆಗಳು ಬಳಸುತ್ತಿದ್ದರೆ ನೀವು ₹999 ಬೆಲೆಯ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ರಿಚಾರ್ಜ್ ಮಾಡಿಸಬೇಕು. ಇದು ಒಂದು ಕೂಡ ಒಂದು ಪ್ರೈಮರಿ ಮತ್ತು ಎರಡು ಆಡ್-ಆನ್ ಸಂಪರ್ಕಗಳನ್ನು ನೀಡುತ್ತದೆ. ಇದು ಅನ್‌ಲಿಮಿಟೆಡ್ 4G/5G ಡೇಟಾ, ಕರೆ ಮತ್ತು ಮೂರು ಸಂಖ್ಯೆಗಳಲ್ಲಿ ದಿನಕ್ಕೆ 100 SMS ನೀಡುತ್ತದೆ. ಇದರ ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್, 12 ತಿಂಗಳ ಜಿಯೋಹಾಟ್‌ಸ್ಟಾರ್ ಮೊಬೈಲ್, 100GB ಗೂಗಲ್ ಒನ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂನಂತಹ ಸಹ ಇದರೊಂದಿಗೆ ಸೇರಿದೆ.. ₹999 ಬೆಲೆಯು ಜಿಎಸ್‌ಟಿ ಮೊದಲಿನದಾಗಿದೆ.

55
4 ಸಿಮ್‌ಗಳಿಗೆ ₹1,199 ಪ್ಲಾನ್
Image Credit : Google

4 ಸಿಮ್‌ಗಳಿಗೆ ₹1,199 ಪ್ಲಾನ್

ನಿಮ್ಮ ಕುಟುಂಬದಲ್ಲಿ ನಾಲ್ವರು ಏರ್‌ಟೆಲ್ ಸಂಖ್ಯೆಗಳನ್ನ ಬಳಸುತ್ತಿದ್ದರೆ, ನೀವು ರೂ. 1,199 ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಆಯ್ಕೆ ಮಾಡಬಹುದು. ಈ ಪ್ಲಾನ್ ಕೂಡ ಮೇಲಿನಂತೆಯೇ ಒಂದು ಪ್ರೈಮರಿ ಹಾಗೂ ಮೂರು ಆಡ್-ಆನ್ ಸಂಪರ್ಕಗಳನ್ನು ನೀಡುತ್ತದೆ. ಅನ್‌ಲಿಮಿಟೆಡ್ 4G/5G ಡೇಟಾ, ಸ್ಥಳೀಯ ಮತ್ತು STD ಕರೆ ಮತ್ತು ದಿನಕ್ಕೆ 100 SMS ಎಲ್ಲಾ ಸಂಖ್ಯೆಗಳಿಗೂ ಉಚಿತ.. Amazon Prime, JioHotstar, Google One, Airtel Xstream Play ನಂತಹ ಹಲವು ಸೌಲಭ್ಯ ಪಡೆಯಬಹುದು. ಈ ಪ್ಲಾನ್‌ ಮೂಲ ಬೆಲೆ ತಿಂಗಳಿಗೆ ರೂ. 1,199 ಆಗಿದ್ದು, GST ಹೆಚ್ಚುವರಿಯಾಗಿ ಸೇರಿಸಲಾಗಿದೆ.

ಇಡೀ ಬಿಲ್ ಒಂದರಲ್ಲೇ

ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ನ ಒಂದು ಪ್ರಯೋಜನವೆಂದರೆ, ಎಲ್ಲರೂ ಪ್ರತ್ಯೇಕವಾಗಿ ರಿಚಾರ್ಜ್ ಮಾಡಿಸಬೇಕಿಲ್ಲ. ಒಂದೇ ರೀಚಾರ್ಜ್, ಒಂದೇ ಬಿಲ್‌ನಲ್ಲಿ ಎಲ್ಲಾ ಕುಟುಂಬ ಸಂಖ್ಯೆಗಳಿಗೆ ಪ್ರಯೋಜನ ಸಿಗುತ್ತದೆ. ಆದರೆ ಒಂದು ಗಮನಿಸಬೇಕು. 5G ಬಳಸಲು, 5G ಮೊಬೈಲ್ ಇರಬೇಕು, ಜೊತೆಗೆ ಏರ್‌ಟೆಲ್ 5G ನೆಟ್‌ವರ್ಕ್ ಅಗತ್ಯವಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ತಂತ್ರಜ್ಞಾನ
ಸಿಮ್ ಕಾರ್ಡ್

Latest Videos
Recommended Stories
Recommended image1
ಬೈಕ್, ಕಾರು, ರೈಲು, ವಿಮಾನಗಳಿಗೆ ಹೆಡ್‌ಲೈಟ್ ಇರುವಂತೆ ಹಡಗುಗಳಿಗೆ ಇರಲ್ಲ ಯಾಕೆ?
Recommended image2
ಹಬ್ಬದ ಸೀಸನ್‌ನಲ್ಲೇ ಗ್ರಾಹಕರಿಗೆ ಶಾಕ್, ಒಪ್ಪೋ, ಶಿಯೋಮಿ ಸ್ಮಾರ್ಟ್‌ ಫೋನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ!
Recommended image3
ChatGPT ಬಳಸಿ ₹75,000 ನಕಲಿ ಡೊನೇಶನ್‌ ರಸೀದಿ ಸೃಷ್ಟಿ! ಕಳುಹಿಸಿದ್ದು ಸ್ವಂತ QR ಕೋಡ್, ಕತರ್ನಾಕ್ ಅರೆಸ್ಟ್!
Related Stories
Recommended image1
BSNL ಗ್ರಾಹಕರಿಗೆ ಗುಡ್ ನ್ಯೂಸ್: ದಿನಕ್ಕೆ 2GB ಡೇಟಾ, ಅನ್‌ಲಿಮಿಟೆಡ್ ಕಾಲ್ಸ್..! ಹೊಸ ಆಫರ್‌ಗೆ ಜಿಯೋ, ಏರ್‌ಟೆಲ್ ಕಂಗಾಲು
Recommended image2
Airtel Recharge Plans: ಗ್ರಾಹಕರಿಗೆ ಏರ್ಟೆಲ್‌ ಶಾಕ್‌ ! ಕೆಲ ಜನಪ್ರಿಯ ರಿಚಾರ್ಜ್‌ ಪ್ಲಾನ್‌ ಬಂದ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved