Airtel plan : ಏರ್ಟೆಲ್ ತನ್ನ ಹಲವಾರು ಜನಪ್ರಿಯ ಬಜೆಟ್ ಪ್ರಿಪೇಯ್ಡ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ.ಇನ್ನೂ ಕೆಲವು ಬೆಲೆಗಳನ್ನು ಹೆಚ್ಚಿಸಿದೆ. ಇದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ‌

ಏರ್ಟೆಲ್ , ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ತನ್ನ ಪೋರ್ಟ್ಫೋಲಿಯೊದಿಂದ ಹಲವಾರು ಜನಪ್ರಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ತೆಗೆದುಹಾಕಿದೆ.

ಗ್ರಾಹಕರಿಗೆ ಏರ್ಟೆಲ್ ಶಾಕ್

ಏರ್ಟೆಲ್ ನ ಕೆಲ ಪ್ರಸಿದ್ಧ ರಿಚಾರ್ಜ್ ಪ್ಲಾನ್ ಇನ್ಮುಂದೆ ಗ್ರಾಹಕರಿಗೆ ಸಿಗೋದಿಲ್ಲ. ಏರ್ಟೆಲ್ ಕೈಗೆಟುಕುವ ರೀಚಾರ್ಜ್ ಯೋಜನೆಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಇದ್ರಲ್ಲಿ 299 ರೂಪಾಯಿ, 319 ರೂಪಾಯಿ, 579 ರೂಪಾಯಿ, 619 ರೂಪಾಯಿ, 649 ರೂಪಾಯಿ ಮತ್ತು 799 ರೂಪಾಯಿ ಪ್ಲಾನ್ ಸೇರಿದೆ.

299 ಯೋಜನೆ ಏಕೆ ವಿಶೇಷವಾಗಿತ್ತು?

ಏರ್ಟೆಲ್ ನ 299 ರೂಪಾಯಿ ಯೋಜನೆ ಬಜೆಟ್ ಬಳಕೆದಾರರಲ್ಲಿ ಬಹಳ ಜನಪ್ರಿಯವಾಗಿತ್ತು. ಇದು ದಿನಕ್ಕೆ 1GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 28 ದಿನಗಳ ಮಾನ್ಯತೆಯೊಂದಿಗೆ 100 ಎಸ್ ಎಂಎಸ್ ಸೌಲಭ್ಯವನ್ನು ನೀಡುತ್ತಿತ್ತು.

ಏರ್ಟೆಲ್ ನ 319 ರೂಪಾಯಿ, 649 ಮತ್ತು 799 ರೂಪಾಯಿ ಪ್ಲಾನ್, ಪ್ರಿಪೇಯ್ಡ್ ಪ್ಲಾನ್ ಆಗಿವೆ. ಈ ಪ್ಲಾನ್ ಗಳು ವಿಭಿನ್ನ ಮಾನ್ಯತೆಯೊಂದಿಗೆ 1.5GB ದೈನಂದಿನ ಡೇಟಾದಂತಹ ಪ್ರಯೋಜನಗಳನ್ನು ನೀಡುತ್ತಿದ್ದವು. ಈ ಪ್ಲಾನ್ ಗಳನ್ನು ಏಕೆ ರದ್ದು ಮಾಡಿದೆ ಎನ್ನುವ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.

ಏರ್ಟೆಲ್ ನ 579 ರೂಪಾಯಿ ಮತ್ತು 619 ರೂಪಾಯಿ ಯೋಜನೆಗಳನ್ನು ಏಕಕಾಲದಲ್ಲಿ ಸ್ಥಗಿತಗೊಳಿಸಿಲ್ಲ. ಪ್ರಸ್ತುತ, ಈ ಯೋಜನೆಗಳು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಲಯಗಳಲ್ಲಿ ಲಭ್ಯವಿಲ್ಲ. ಆದರೆ ಉಳಿದ ಪ್ರದೇಶದ ಜನರು ಈ ಪ್ಲಾನ್ ಲಾಭ ಪಡೆಯಬಹುದು.

ಕೆಲ ಪ್ಲಾನ್ ರದ್ದು ಮಾಡಿರುವ ಏರ್ಟೆಲ್ ಕೆಲ ಪ್ಲಾನ್ ಬೆಲೆ ಏರಿಸಿದೆ. ಏರ್ಟೆಲ್ ತನ್ನ 859 ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು ಏರಿಸಿದೆ. ಗ್ರಾಹಕರು ಈಗ 859 ರೂಪಾಯಿ ಬದಲು 899 ರೂಪಾಯಿ ಪಾವತಿಸಬೇಕು. ಆದ್ರೆ ಬೆಲೆ ಏರಿದ್ರೂ ಯಾವುದೇ ಹೆಚ್ಚುವರಿ ಸೌಲಭ್ಯವನ್ನು ಯೋಜನೆಯಲ್ಲಿ ನೀಡಲಾಗ್ತಿಲ್ಲ. ಬೆಲೆ ಏರಿಕೆ ಹಾಗೂ ಪ್ರಸಿದ್ಧ ಪ್ಲಾನ್ ರದ್ದಾಗಿರುವ ಬಗ್ಗೆ ಗ್ರಾಹಕರಲ್ಲಿ ಟೆನ್ಷನ್ ಹೆಚ್ಚಾಗಿದೆ. ಭವಿಷ್ಯದಲ್ಲಿ ಏರ್ಟೆಲ್ ಉಳಿದ ಪ್ಲಾನ್ ಬೆಲೆ ಏರಿಕೆಯಾಗುವ ಸಾಧ್ಯತೆ ಬಗ್ಗೆಯೂ ಚರ್ಚೆಯಾಗ್ತಿದೆ.