MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • Sandalwood
  • ಸ್ಯಾಂಡಲ್‌ವುಡ್‌ಗೆ ಹೊಸ ನಾಯಕಿ ಎಂಟ್ರಿ: ಮೋನಿಷಾ ವಿಜಯ್ ಮೇಲೆ ಹೆಚ್ಚಾಯ್ತು ನಿರೀಕ್ಷೆ

ಸ್ಯಾಂಡಲ್‌ವುಡ್‌ಗೆ ಹೊಸ ನಾಯಕಿ ಎಂಟ್ರಿ: ಮೋನಿಷಾ ವಿಜಯ್ ಮೇಲೆ ಹೆಚ್ಚಾಯ್ತು ನಿರೀಕ್ಷೆ

ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಕುಮಾರ್ ‘ಸಿಟಿಲೈಟ್ಸ್’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಆಕ್ಷನ್ ಸಿನಿಮಾದಲ್ಲಿ ಮೋನಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

2 Min read
Author : Govindaraj S
Published : Sep 18 2026, 07:38 PM IST
Share this Photo Gallery
  • FB
  • TW
  • Linkdin
  • Whatsapp
16
ಸ್ಯಾಂಡಲ್‌ವುಡ್‌ಗೆ ಎಂಟ್ರಿ
Image Credit : Monisha Instagram

ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹೊಸ ಪ್ರತಿಭೆಯ ಆಗಮನಕ್ಕೆ ವೇದಿಕೆ ಸಿದ್ಧವಾಗಿದೆ. ನಟ ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಕುಮಾರ್ ಇದೀಗ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ‘ಸಿಟಿಲೈಟ್ಸ್’ ಚಿತ್ರದ ಮೂಲಕ ಮೋನಿಷಾ ತಮ್ಮ ಸಿನಿ ಜರ್ನಿ ಆರಂಭಿಸುತ್ತಿದ್ದು, ಮೊದಲ ಸಿನಿಮಾದ ಮೇಲೆಯೇ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಿನಯ್‌ಗೆ ನಾಯಕಿಯಾಗಿ ಮೋನಿಷಾ
Image Credit : Monisha Instagram

ವಿನಯ್‌ಗೆ ನಾಯಕಿಯಾಗಿ ಮೋನಿಷಾ

ಸೆಪ್ಟೆಂಬರ್ 18ರಂದು ‘ಸಿಟಿಲೈಟ್ಸ್’ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆಕ್ಷನ್ ಹಿನ್ನೆಲೆಯ ಈ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಅವರಿಗೆ ಮೋನಿಷಾ ವಿಜಯ್ ಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Related Articles

Related image1
ಮೆಜೆಸ್ಟಿಕ್‌ನಲ್ಲಿ ನೈಜ ಬದುಕು ಕಂಡ ಮೋನಿಷಾ: 'ಸಿಟಿ ಲೈಟ್ಸ್' ಕುರಿತು ವಿನಯ್ ಹಂಚಿಕೊಂಡ ಅನುಭವವೇನು?
Related image2
‘ಬ್ರಿಡ್ಜರ್ಟನ್ ಮೀಟ್ಸ್ ಕರ್ನಾಟಕ’: ನಟ ದುನಿಯಾ ವಿಜಯ್​ ಪುತ್ರಿ ಮೋನಿಷಾ ‘ಸೌತ್ ಇಂಡಿಯನ್ ಡ್ರೀಮ್’ ಲುಕ್ ವೈರಲ್!
36
ಮೊದಲ ಸಿನಿಮಾದಲ್ಲೇ ನಾಯಕಿಯಾಗಿ ಮೋನಿಷಾ
Image Credit : Monisha Instagram

ಮೊದಲ ಸಿನಿಮಾದಲ್ಲೇ ನಾಯಕಿಯಾಗಿ ಮೋನಿಷಾ

ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ಮೋನಿಷಾ ವಿಜಯ್ ಕುಮಾರ್ ಅವರಿಗೆ ‘ಸಿಟಿಲೈಟ್ಸ್’ ಮೊದಲ ಸಿನಿಮಾ. ಅದರಲ್ಲೂ ತಂದೆಯ ಹೆಜ್ಜೆ ಗುರುತುಗಳನ್ನು ಅನುಸರಿಸಿ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಅವರ ಸಿನಿ ಪಯಣಕ್ಕೆ ಮತ್ತಷ್ಟು ವಿಶೇಷತೆ ನೀಡಿದೆ. ಚಿಕ್ಕಂದಿನಿಂದಲೇ ನಟಿಯಾಗಬೇಕು ಎಂಬ ಆಸೆ ಹೊಂದಿದ್ದ ಮೋನಿಷಾ, ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮಗಳ ಈ ಕನಸಿಗೆ ತಂದೆ ದುನಿಯಾ ವಿಜಯ್ ಕೂಡ ಬೆಂಬಲವಾಗಿ ನಿಂತಿದ್ದಾರೆ.

46
ಟ್ರೇಲರ್, ಹಾಡುಗಳಲ್ಲಿ ಗಮನ ಸೆಳೆದ ಮೋನಿಷಾ
Image Credit : Monisha Instagram

ಟ್ರೇಲರ್, ಹಾಡುಗಳಲ್ಲಿ ಗಮನ ಸೆಳೆದ ಮೋನಿಷಾ

ಸಿನಿಮಾ ಬಿಡುಗಡೆಯ ಮುನ್ನವೇ ‘ಸಿಟಿಲೈಟ್ಸ್’ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಈ ವಿಡಿಯೋಗಳಲ್ಲಿ ಮೋನಿಷಾ ಅವರ ನಟನೆ ಕೂಡ ಗಮನ ಸೆಳೆಯುತ್ತಿದ್ದು, ಮೊದಲ ಸಿನಿಮಾದಲ್ಲೇ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ನಟನೆಗೆ ಹೊಸಬರಾಗಿದ್ದರೂ, ಟ್ರೈಲರ್ ಮತ್ತು ಹಾಡುಗಳಲ್ಲಿ ಮೋನಿಷಾ ಕಾಣಿಸಿಕೊಂಡಿರುವ ರೀತಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

56
‘ಸಿಟಿಲೈಟ್ಸ್’ ಮೇಲೆ ಭಾರಿ ನಿರೀಕ್ಷೆ
Image Credit : Monisha Instagram

‘ಸಿಟಿಲೈಟ್ಸ್’ ಮೇಲೆ ಭಾರಿ ನಿರೀಕ್ಷೆ

ತಮ್ಮ ಮೊದಲ ಸಿನಿಮಾದ ಬಗ್ಗೆ ಮೋನಿಷಾ ವಿಜಯ್ ಕುಮಾರ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾಯಕಿಯಾಗಿ ಮೊದಲ ಹೆಜ್ಜೆಯಲ್ಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಳ್ಳಬೇಕು ಎಂಬುದು ಅವರ ಆಶಯ.

66
ಗುರುತು ಮೂಡಿಸಿಕೊಳ್ಳುತ್ತಾರಾ?
Image Credit : Monisha Instagram

ಗುರುತು ಮೂಡಿಸಿಕೊಳ್ಳುತ್ತಾರಾ?

ಒಂದೆಡೆ ರಾಜ್‌ಕುಮಾರ್ ಕುಟುಂಬದ ವಿನಯ್ ರಾಜ್‌ಕುಮಾರ್, ಮತ್ತೊಂದೆಡೆ ದುನಿಯಾ ವಿಜಯ್ ಪುತ್ರಿ ಮೋನಿಷಾ ವಿಜಯ್ ಕುಮಾರ್. ಹೀಗಾಗಿ ‘ಸಿಟಿಲೈಟ್ಸ್’ನಲ್ಲಿ ಈ ಹೊಸ ಜೋಡಿ ಹೇಗೆ ಮೋಡಿ ಮಾಡಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ. ಮೊದಲ ಸಿನಿಮಾದ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆಯ ಬ್ರೇಕ್ ಪಡೆಯುವ ನಿರೀಕ್ಷೆಯಲ್ಲಿರುವ ಮೋನಿಷಾ ವಿಜಯ್, ‘ಸಿಟಿಲೈಟ್ಸ್’ ಮೂಲಕ ತಮ್ಮದೇ ಆದ ಸಿನಿ ಗುರುತು ಮೂಡಿಸಿಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ದುನಿಯಾ ವಿಜಯ್
ನಟಿ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
 

Latest Videos
Recommended Stories
Recommended image1
ದರ್ಶನ್​ ಮನವಿ ಪುರಸ್ಕರಿಸಿದ ಹೈಕೋರ್ಟ್​: ನಟನಿಗೆ ತಾತ್ಕಾಲಿಕ ಬಿಗ್​ ರಿಲೀಫ್​- ನ್ಯಾಯಾಲಯ​ ಹೇಳಿದ್ದೇನು
Recommended image2
ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!
Recommended image3
ಸಿನಿಮಾ ನಟನೆ ನಿಲ್ಲಿಸಿದ್ಯಾಕೆ ಅನಂತ್ ನಾಗ್? ಕೊನೆಗೂ ಸತ್ಯ ಬಿಚ್ಚಿಟ್ಟ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ!
Related Stories
Recommended image1
ಮೆಜೆಸ್ಟಿಕ್‌ನಲ್ಲಿ ನೈಜ ಬದುಕು ಕಂಡ ಮೋನಿಷಾ: 'ಸಿಟಿ ಲೈಟ್ಸ್' ಕುರಿತು ವಿನಯ್ ಹಂಚಿಕೊಂಡ ಅನುಭವವೇನು?
Recommended image2
‘ಬ್ರಿಡ್ಜರ್ಟನ್ ಮೀಟ್ಸ್ ಕರ್ನಾಟಕ’: ನಟ ದುನಿಯಾ ವಿಜಯ್​ ಪುತ್ರಿ ಮೋನಿಷಾ ‘ಸೌತ್ ಇಂಡಿಯನ್ ಡ್ರೀಮ್’ ಲುಕ್ ವೈರಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved