Cleaning Hacks: ಬಾತ್‌ರೂಮ್ ಜಗ್ ಮೇಲಿರುವ ಹಠಮಾರಿ ಕಲೆ ತೆಗೆಯುವ ಸುಲಭ ಉಪಾಯಗಳು
ಬಾತ್‌ರೂಮ್‌ನಲ್ಲಿ ಬಳಸುವ ಬಕೆಟ್ ಮತ್ತು ಮಗ್/ಜಗ್ ಗಳ ಮೇಲಿನ ಹಠಮಾರಿ ಜಿಡ್ಡುಕಲೆಗಳನ್ನು ತೆಗೆದುಹಾಕಲು ಹಲವು ಮನೆಮದ್ದುಗಳಿವೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಈ ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

ಬಾತ್‌ರೂಮ್‌ನಲ್ಲಿರುವ ಬಕೆಟ್ ಅಥವಾ ಮಗ್
ಮನೆಯಲ್ಲಿರುವ ವಸ್ತುಗಳನ್ನು ನಿಯಮಿತವಾಗಿ ಸ್ವಚ್ಛ ಮಾಡುತ್ತಿದ್ದರೆ ಜಿಡ್ಡುಕಲೆಗಳು ಉಂಟಾಗಲ್ಲ. ಅದರಲ್ಲಿಯೂ ಬಾತ್‌ರೂಮ್‌ನಲ್ಲಿರುವ ಬಕೆಟ್ ಅಥವಾ ಮಗ್ ಅಥವಾ ಸಿಟ್ಟಿಂಗ್ ಟೇಬಲ್‌ಗಳು ಹೆಚ್ಚು ಸಮಯ ನೀರಿನಲ್ಲಿ ಮತ್ತು ಸೋಪಿನಂತಹ ಮಾರ್ಜಕಗಳಿಗೆ ಒಡ್ಡಿಕೊಳ್ಳೋದರಿಂದ ಹಠಮಾರಿ ಕಲೆಗಳು ಉಂಟಾಗುತ್ತವೆ. ಈ ಕಲೆಗಳನ್ನು ಸುಲಭವಾಗಿ ಹೇಗೆ ತೆಗೆಯಬೇಕೆಂದು ನೋಡೋಣ ಬನ್ನಿ.
ಬೇಕಿಂಗ್ ಸೋಡಾ ಮತ್ತು ವಿನೇಗರ್
ಎರಡು ಟೀ ಸ್ಪೂನ್ ಬೇಕಿಂಗ್ ಸೋಡಾಗೆ ಒಂದು ಟೀ ಸ್ಪೂನ್‌ನಷ್ಟು ವಿನೇಗರ್ ಸೇರಿಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್‌ನ್ನು ಕೊಳೆಯಾಗಿರುವ ಭಾಗದ ಮೇಲೆ ನಯವಾಗಿ ಸವರಿ 10 ರಿಂದ 15 ನಿಮಿಷ ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಂಡ್ರೆ ನಿಮ್ಮ ಮಗ್ ಹೊಸದರಂತೆ ಕಾಣಿಸುತ್ತದೆ.
ಬೇಕಿಂಗ್ ಸೋಡಾ ಮತ್ತು ನಿಂಬೆರಸ
ಮೇಲಿನಂತೆ ಬೇಕಿಂಗ್ ಸೋಡಾಗೆ ವಿನೇಗರ್ ಬದಲಾಗಿ ನಿಂಬೆರಸ ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ನಿಂದ ಕೊಳೆಯಾಗಿರುವ ಮಗ್‌ನ್ನು ಉಜ್ಜಿಕೊಳ್ಳಿ. ನಂತರ ಸ್ವಚ್ಛ ನೀರಿನಿಂದ ತೊಳೆದ್ರೆ ಮಗ್ ಕ್ಲೀನ್ ಆಗಲಿದೆ. ಈ ಪೇಸ್ಟ್‌ನೇ ಸೋಪಿನ ಪುಡಿಯಂತೆ ಬಳಕೆ ಮಾಡಬಹುದು.
ಬಿಸಿನೀರು
ಮಗ್ ತುಂಬಾನೇ ಕೊಳೆಯಾಗಿದ್ರೆ ಬಿಸಿನೀರಿನಲ್ಲಿ 10 ರಿಂದ 15 ನಿಮಿಷ ನೆನೆಸಿಟ್ಟುಕೊಳ್ಳಿ. ನಂತರ ಬಟ್ಟೆ ತೊಳೆಯುವ ಸಾಬೂನಿನ ಪುಡಿಯಿಂದ ಚೆನ್ನಾಗಿ ಉಜ್ಜಿ. ಹೀಗೆ ಮಾಡೋದರಿಂದ ಮಗ್ ಸ್ವಚ್ಛಗೊಳ್ಳುತ್ತದೆ. ನಿಮ್ಮಲ್ಲಿ ಬೇಕಿಂಗ್ ಸೋಡಾ/ವಿನಗೇರ್/ನಿಂಬೆರಸ ಇಲ್ಲದಿದ್ರೆ ಈ ಉಪಾಯವನ್ನು ಬಳಸಬಹುದು.
ಮಾರುಕಟ್ಟೆಯಲ್ಲಿವೆ ವಿವಿಧ ಉತ್ಪನ್ನ
ಇಂತಹ ಹಠಮಾರಿ ಕಲೆಗಳನ್ನು ತೆಗೆದುಹಾಕಲು ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಬಗೆಬಗೆಯ ಉತ್ಪನ್ನಗಳು ಸಿಗುತ್ತವೆ. ಈ ಮೇಲಿನ ಮೂರು ಉಪಾಯಗಳಿಂದ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆ ಅಥವಾ ಕುರ್ಚಿಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
