ಇಂಟರ್ನೆಟ್ ಆನ್ ಇದ್ದರೂ, ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಬರುವ ಮೆಸೇಜ್‌ಗಳಿಗೆ ಸಿಂಗಲ್ ಟಿಕ್ ಮಾತ್ರ ಕಾಣಿಸುವಂತೆ ಮಾಡುವ ಟ್ರಿಕ್ ಒಂದಿದೆ. ವಾಟ್ಸ್​ಆ್ಯಪ್​ನ ಪ್ರಾಕ್ಸಿ ಸೆಟ್ಟಿಂಗ್ಸ್ ಬದಲಾಯಿಸುವ ಮೂಲಕ, ನೀವು ಆನ್‌ಲೈನ್‌ನಲ್ಲಿದ್ದರೂ ಆಫ್‌ಲೈನ್‌ನಲ್ಲಿದ್ದಂತೆ ತೋರಿಸಬಹುದು, ಈ ಮೂಲಕ ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡಬಹುದು.

ಈಗ ಇಂಟರ್​ನೆಟ್​ ಇಲ್ಲದೇ ಜನರು ಬದುಕುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿದೆ. ಒಂದು ಹೊತ್ತಿನ ಊಟ ಬಿಟ್ಟಾರು, ಕೊನೆಗೆ ಉಸಿರು ಬೇಕಾದ್ರೂ ಬಿಟ್ಟಾದು, ಸ್ಮಾರ್ಟ್​ಫೋನ್​ ಇಲ್ಲದೇ ಜೀವನ ನಡೆಯುವುದು ಕಷ್ಟ ಎನ್ನುವ ಸ್ಥಿತಿ ಆಗಿಹೋಗಿದೆ. ಒಂದು ಕ್ಷಣ ಇಂಟರ್​ನೆಟ್​ ಏನಾದ್ರೂ ಸಮಸ್ಯೆಯಾಗಿ ಬಿಟ್ಟರೆ, ಜೀವವೇ ಹೋದಷ್ಟು ಸಂಕಷ್ಟ ಹಲವರಿಗೆ ಆಗುವುದು ಇದೆ. ಆ ಪರಿಯಲ್ಲಿ ಫೋನ್​ ದಾಸರಾಗಿರುವವರೇ ಎಷ್ಟೋ ಮಂದಿ.

ವಾಟ್ಸ್​ಆ್ಯಪ್​ನಲ್ಲಿ ಸಿಂಗಲ್​ ಟಿಕ್​

ಕೆಲವೊಮ್ಮೆ ಯಾವುದೇ ವಿಡಿಯೋ ನೋಡುತ್ತಿದ್ದರೆ, ಅಥವಾ ವಾಟ್ಸ್ಆ್ಯಪ್​ನಲ್ಲಿ ಇನ್ನಾರದೋ ಜೊತೆ ಮಾತನಾಡುತ್ತಿದ್ದರೆ ಇಂಟರ್​ನೆಟ್​ ಆನ್​ ಮಾಡಿಕೊಳ್ಳಲೇಬೇಕು. ಆ ಸಮಯದಲ್ಲಿ ಯಾರಾದರೂ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್​ ಮಾಡಿದ್ರೆ ಡಬಲ್​ ಟಿಕ್​ ಬಂದು ಬಿಡುತ್ತದೆ. ಆಗ ನೀವು ಆನ್​ಲೈನ್​ನಲ್ಲಿ ಇರುವುದು ತಿಳಿಯುತ್ತದೆ, ಇಲ್ಲವೇ ಇಂಟರ್​ನೆಟ್​ ಆನ್​ನಲ್ಲಿ ಇರುವುದು ತಿಳಿದು ಹೋಗುತ್ತದೆ. ಈಗ ಹೆಚ್ಚಿನವರು, ತಾವು ಮೆಸೇಜ್​ ನೋಡಿದ್ದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಬ್ಲೂಟಿಕ್​ ಆಫ್​ ಮಾಡಿಟ್ಟುಕೊಳ್ಳುತ್ತಾರೆ, ಲಾಸ್ಟ್​ ಸೀನ್​ ಆಪ್ಷನ್​ ಕೂಡ ತೆಗೆದುಬಿಡುತ್ತಾರೆ. ಇಂಥ ಕಳ್ಳರು ಹಲವರು ಇದ್ದಾರೆ.

ಹೀಗೆ ಮಾಡಿ ನೀವು

ಆದರೆ ಇದೇನೇ ಮಾಡಿದ್ರೂ ಡಬಲ್​ ಟಿಕ್​ ಬಂದು ಬಿಟ್ಟರೆ ಇಂಟರ್​ನೆಟ್​ ಆನ್​ ಇದೆ ಎಂದು ಸುಲಭದಲ್ಲಿ ಸಿಕ್ಕಿಬೀಳುತ್ತಾರೆ. ಅಯ್ಯೋ, ಇದಕ್ಕೆ ಯಾವುದೂ ಆಪ್ಷನ್​ ಇಲ್ವಲ್ಲಪ್ಪಾ ಎಂದು ಸಂಕಟಪಡಬೇಕಾಗಿಲ್ಲ. ಏಕೆಂದ್ರೆ ಮೊಬೈಲ್​ನಲ್ಲಿ ನಿಮಗೆ ಏನೇನು ಕಳ್ಳಾಟ ಮಾಡಲು ಬೇಕೋ ಎಲ್ಲಾ ವ್ಯವಸ್ಥೆಗಳನ್ನು ಬಹುತೇಕ ಎಲ್ಲಾ ಸ್ಮಾರ್ಟ್​ಫೋನ್​ಗಳಲ್ಲಿ ತಯಾರಕರು ಮಾಡಿಯೇ ಕೊಟ್ಟಿರುತ್ತಾರೆ. ಹಾಗಿದ್ದರೆ ನೆಟ್​ ಆನ್​ ಇದ್ದರೂ, ನೀವು ಇಂಟರ್​ನೆಟ್​ ಆನ್​ ಮಾಡಿಕೊಂಡು ವಿಡಿಯೋ ನೋಡುತ್ತಿದ್ದರೂ, ವಾಟ್ಸ್​ಆ್ಯಪ್​ನಲ್ಲಿ ಯಾರಾದ್ರೂ ಮೆಸೇಜ್​ ಕಳಿಸಿದ್ರೆ ಅವರಿಗೆ ಸಿಂಗಲ್​ ಟಿಕ್​ ಕಾಣಿಸಿ, ಬಹುಶಃ ನೆಟ್​ ಆನ್​ ಮಾಡಿಲ್ಲ ಎಂದುಕೊಳ್ಳುವಂತೆ ಮಾಡಬಹುದಾ? ಹೌದು. ಹೀಗೆ ಮಾಡಬಹುದು.

ಅದಕ್ಕಾಗಿ ನೀವುಮಾಡಬೇಕಿರುವುದು ಇಷ್ಟು...

- ಮೊದಲಿಗೆ ವಾಟ್ಸ್​ಆ್ಯಪ್​ ಓಪನ್​ ಮಾಡಿ

- ಬಲಭಾಗದ ಮೇಲುಗಡೆ ಇರುವ ಮೂರು ಡಾಟ್​ ಮೇಲೆ ಕ್ಲಿಕ್​ ಮಾಡಿ

- ಸೆಟ್ಟಿಂಗ್​ ಓಪನ್​ ಮಾಡಿ

- ಕೆಳಗಡೆ ಸ್ಕ್ರಾಲ್​ ಮಾಡುತ್ತಾ ಹೋದರೆ ನಿಮಗೆ ಸ್ಟೋರೇಜ್​ ಆ್ಯಂಡ್​ ಡಾಟಾ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

- ಬಳಿಕ Proxy ಆಪ್ಷನ್​ ಮೇಲೆ ಕ್ಲಿಕ್​ ಮಾಡಿ.

- ಯೂಸ್​​ ಪ್ರಾಕ್ಸಿ ಎನ್ನೋದು ಆಫ್​ ಆಗಿದ್ದರೆ ಆನ್​ ಮಾಡಿ

- ಕೆಳಗಡೆ ನಿಮಗೆ ಸಂಖ್ಯೆ ಕಾಣಿಸುತ್ತದೆ. ಅದನ್ನು 1.1.1.1 ಎಂದು ರೀಟೈಪ್​ ಮಾಡಿ

- ಕೆಳಗಡೆ ಇರುವ ರೈಟ್​ಮಾರ್ಕ್​ ಅಂದರೆ ಓಕೆ ಎನ್ನೋದನ್ನು ಕ್ಲಿಕ್ ಮಾಡಿ.

- ಒಂದು ವೇಳೆ ನಿಮ್ಮ ಕೆಲಸ ಆದ ಮೇಲೆ ಡಬಲ್​ ಟಿಕ್​ ಬೇಕು ಎಂದರೆ, ಯೂಸ್​ ಪ್ರಾಕ್ಸಿ ಅನ್ನು ಮತ್ತೆ ಆನ್​ ಮಾಡಿ. ಆಗ 1.1.1.443 ಎನ್ನುವ ಆಪ್ಷನ್​ತಾನಾಗಿಯೇ ಆನ್​ ಆಗುತ್ತದೆ.