MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • News
  • India News
  • ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಬರೋಬ್ಬರಿ 17 ಕೋಟಿ ಮೌಲ್ಯದ ನಕಲಿ ನೋಟುಗಳು ಪತ್ತೆ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಬರೋಬ್ಬರಿ 17 ಕೋಟಿ ಮೌಲ್ಯದ ನಕಲಿ ನೋಟುಗಳು ಪತ್ತೆ

ಸಹಾರನ್‌ಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಬರೋಬ್ಬರಿ 17 ಕೋಟಿ ರು. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿವೆ. ಆರ್‌ಬಿಐ ತನಿಖೆ ವೇಳೆ ಈ ಹಗರಣ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹಿರಿಯ ಮ್ಯಾನೇಜರ್‌ಗಳನ್ನು ಅಮಾನತುಗೊಳಿಸಿ, ತನಿಖೆ ಮುಂದುವರಿಸಲಾಗಿದೆ.

1 Min read
Author : Kannadaprabha News
Published : Sep 03 2026, 07:32 AM IST
Share this Photo Gallery
  • FB
  • TW
  • Linkdin
  • Whatsapp
14
17 ಕೋಟಿ ರು. ಮೌಲ್ಯದ ನಕಲಿ ನೋಟುಗಳು
Image Credit : Google

17 ಕೋಟಿ ರು. ಮೌಲ್ಯದ ನಕಲಿ ನೋಟುಗಳು

ಸಹಾರನ್‌ಪುರದಲ್ಲಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ(ಪಿಎನ್‌ಬಿ) ನೋಟು ಶೇಖರಣಾ ವಿಭಾಗದಲ್ಲಿ ಬರೋಬ್ಬರಿ 17 ಕೋಟಿ ರು. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದೆ. ಇದರ ಬೆನ್ನಲ್ಲೇ ತನಿಖೆಗೆಂದು ಉತ್ತರಪ್ರದೇಶ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಅತ್ತ ಬ್ಯಾಂಕ್‌ 3 ಸೀನಿಯರ್‌ ಮ್ಯಾನೇಜರ್‌ಗಳನ್ನು ಅಮಾನತುಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
RBI ಅಧಿಕಾರಿಗಳ ತನಿಖೆ
Image Credit : Social Media

RBI ಅಧಿಕಾರಿಗಳ ತನಿಖೆ

ಆಗಸ್ಟ್‌ನಲ್ಲಿ ಜೈಪುರದಲ್ಲಿರುವ ಆರ್‌ಬಿಐ ಶಾಖೆಗೆ ಜಮೆ ಮಾಡಲೆಂದು 11.50 ಕೋಟಿ ರು.ವನ್ನು ಇಲ್ಲಿನ ಪಿಎನ್‌ಬಿಯಿಂದ ಕಳಿಸಲಾಗಿತ್ತು. ಎಣಿಸಿ ನೋಡಿದಾಗ, ಅದರಲ್ಲಿ 4.3 ಲಕ್ಷ ರು. ಕಡಿಮೆ ಇರುವುದು ಪತ್ತೆಯಾಗಿತ್ತು. ನಡೆದಿರಬಹುದಾದ ಅವ್ಯವಹಾರದ ಪತ್ತೆಗೆಂದು ರಾಜ್ಯ ಪೊಲೀಸ್, ಬ್ಯಾಂಕ್ ಮತ್ತು ಆರ್‌ಬಿಐ ಅಧಿಕಾರಿಗಳು ತನಿಖೆ ಆರಂಭಿಸಿದರು.

Related Articles

Related image1
ಬ್ಯಾಂಕ್ ಚೆಕ್‌ಗಳಲ್ಲಿ ಮೊತ್ತ ಬರೆದ ಮೇಲೆ Only ಎಂದು ಏಕೆ ಬರೆಯುತ್ತಾರೆ; ಮಹತ್ವದ ಕಾರಣ ತಿಳಿದುಕೊಳ್ಳಿ
Related image2
Viral brain teaser: ಈ ಚಿತ್ರದಲ್ಲಿ ಅಡಗಿರುವ ಬ್ಯಾಂಕ್ ಹೆಸರು ಹುಡುಕಬಲ್ಲಿರಾ?
34
500 ರು. ಮುಖಬೆಲೆಯ ನಕಲಿ ನೋಟುಗಳ 148 ಕಟ್ಟುಗಳು
Image Credit : our own

500 ರು. ಮುಖಬೆಲೆಯ ನಕಲಿ ನೋಟುಗಳ 148 ಕಟ್ಟುಗಳು

ಆ.9ರಂದು ಪ್ರಾರಂಭವಾದ ಲೆಕ್ಕಪರಿಶೋಧನೆ ವೇಳೆ, ಚೆಸ್ಟ್‌ನಲ್ಲಿದ್ದ ನೋಟುಗಳನ್ನು ಪರಿಶೀಲಿಸಲಾಗಿದ್ದು, 500 ರು. ಮುಖಬೆಲೆಯ ನಕಲಿ ನೋಟುಗಳ 148 ಕಟ್ಟುಗಳು ಪತ್ತೆಯಾಗಿದ್ದವು. ಇದರ ಒಟ್ಟು ಮೊತ್ತ 7.40 ಕೋಟಿ ರು. ಆಗಿತ್ತು. ತನಿಖೆಯನ್ನು ಮುಂದುವರಿಸಿದಾಗ ಇನ್ನಷ್ಟು ನಕಲಿ ನೋಟುಗಳ ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ 17 ಕೋಟಿ ರು. ಎಂದು ತಿಳಿದುಬಂದಿದೆ.

44
3 ಬ್ಯಾಂಕ್‌ ಸಿಬ್ಬಂದಿಯನ್ನು ಅಮಾನತು
Image Credit : our own

3 ಬ್ಯಾಂಕ್‌ ಸಿಬ್ಬಂದಿಯನ್ನು ಅಮಾನತು

ಸಿಸಿಟೀವಿ ಪರಿಶೀಲನೆ ವೇಳೆ ಪಾರ್ಟ್‌ಟೈಂ ಕೆಲಸಕ್ಕಿದ್ದ ವಿಶಾಲ್ ಕುಮಾರ್‌ ಎಂಬಾತ ಚೆಸ್ಟ್‌ನಿಂದ ನೋಟಗಳನ್ನು ಎತ್ತಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 3 ಬ್ಯಾಂಕ್‌ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ನಕಲಿ ದಾಖಲೆ ಸೃಷ್ಟಿ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ವಂಚನೆಯ ಆರೋಪ ಹೊರಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಬ್ಯಾಂಕ್
ಆರ್‌ಬಿಐ
ಹಣ (Hana)

Latest Videos
Recommended Stories
Recommended image1
ಆಪರೇಷನ್‌ ಸಿಂದೂರ ವೀರ, ಬೆಂಗಳೂರಿನ ಮಾಜಿ ವಿದ್ಯಾರ್ಥಿ ರಾಮಮಂದಿರದ CEO ಜೀತೇಂದ್ರ ಮಿಶ್ರಾ
Recommended image2
India Latest News Live: ಆಪರೇಷನ್‌ ಸಿಂದೂರ ವೀರ, ಬೆಂಗಳೂರಿನ ಮಾಜಿ ವಿದ್ಯಾರ್ಥಿ ರಾಮಮಂದಿರದ CEO ಜೀತೇಂದ್ರ ಮಿಶ್ರಾ
Recommended image3
ಗಂಡನ ಆದಾಯ ಮೀರಿ ಪತ್ನಿಗೆ ಜೀವನಾಂಶ ನೀಡಲಾಗದು: ದೆಹಲಿ ಕೋರ್ಟ್ ಮಹತ್ವದ ಅಭಿಪ್ರಾಯ
Related Stories
Recommended image1
ಬ್ಯಾಂಕ್ ಚೆಕ್‌ಗಳಲ್ಲಿ ಮೊತ್ತ ಬರೆದ ಮೇಲೆ Only ಎಂದು ಏಕೆ ಬರೆಯುತ್ತಾರೆ; ಮಹತ್ವದ ಕಾರಣ ತಿಳಿದುಕೊಳ್ಳಿ
Recommended image2
Viral brain teaser: ಈ ಚಿತ್ರದಲ್ಲಿ ಅಡಗಿರುವ ಬ್ಯಾಂಕ್ ಹೆಸರು ಹುಡುಕಬಲ್ಲಿರಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved