- Home
- Life
- Health
- PMD: ಮೂತ್ರ ಮಾಡಿದ ಬಳಿಕ ಒಳಉಡುಪಿನಲ್ಲಿ ಲೀಕ್ ಆಗ್ತಿದೆಯಾ ? ಈ ಸಮಸ್ಯೆ ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೆ ಕುತ್ತು!
PMD: ಮೂತ್ರ ಮಾಡಿದ ಬಳಿಕ ಒಳಉಡುಪಿನಲ್ಲಿ ಲೀಕ್ ಆಗ್ತಿದೆಯಾ ? ಈ ಸಮಸ್ಯೆ ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೆ ಕುತ್ತು!
ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ನಂತರ ಕೆಲವು ಸೆಕೆಂಡ್‌ಗಳಲ್ಲಿ ಒಳಉಡುಪಿನಲ್ಲಿ ಮೂತ್ರ ಸೋರಿಕೆ ಆಗುತ್ತಿದೆಯೇ? ಈ ಸಮಸ್ಯೆ ಯಾವ ರೋಗದ ಗುಣಲಕ್ಷ್ನಣ? ಈ ಸಮಸ್ಯೆ ಏನು ಚಿಕಿತ್ಸೆ ಇಲ್ಲಿ ವಿವರವಾಗಿ ತಿಳಿಸಲಾಗಿದೆ.

PMD: ಮೂತ್ರ ಮಾಡಿದ ಬಳಿಕವೂ ಒಳಉಡುಪಿನಲ್ಲಿ ಲೀಕ್ ಆಗುತ್ತದೆಯೇ?
ಪ್ರತಿದಿನ ಮೂತ್ರ ಮಾಡುವುದು ಸಾಮಾನ್ಯ. ಒಬ್ಬ ವ್ಯಕ್ತಿ ದಿನಕ್ಕೆ ಮೂರರಿಂದ ಎಂಟು ಬಾರಿ ಮೂತ್ರ ಮಾಡುತ್ತಿದ್ದರೆ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಆದರೆ ಮೂತ್ರ ಮಾಡಿದ ಬಳಿಕ ಅಥವಾ ಶೌಚಾಲಯದಿಂದ ಹೊರಬಂದ ಕೆಲವು ಸೆಕೆಂಡ್‌ಗಳಲ್ಲಿ ಒಳ ಉಡುಪುನಲ್ಲಿ ಒಂದೆರಡು ಹನಿಗಳು ಮೂತ್ರ ಸೋರಿಕೆಯಾಗುವುದು ಸಾಮಾನ್ಯ ಎಂದೇ ಭಾವಿಸುತ್ತಾರೆ. ಆದರೆ ಈ ಸಮಸ್ಯೆ ಸಾಮಾನ್ಯ ಅಂತಾ ನಿರ್ಲಕ್ಷ್ಯ ಬೇಡ, PMD ಏಕೆ ಬರುತ್ತೆ, ಪ್ರಮುಖ ಲಕ್ಷಣಗಳೇನು? ಈ ಸಮಸ್ಯೆಗೆ ಚಿಕಿತ್ಸೆಗಳೇನು? ಎಂದು ತಿಳಿದುಕೊಳ್ಳುವುದು ಈ ಸಮಸ್ಯೆಯಿಂದ ಪಾರಾಗುವ ಮೊದಲ ಹೆಜ್ಜೆಯಾಗಿದೆ.
ಪಿಎಂಡಿ ಬಗ್ಗೆ ನಿರ್ಲಕ್ಶ್ಯ ಬೇಡ
ಈ ಸಮಸ್ಯೆ ನೋಡೋಕೆ ಸಮಸ್ಯೆನೇ ಅಲ್ಲ ಅನಿಸಿದ್ರೂ ಇದು ಪದೇಪದೆ ಆದಾಗ ಕಿರಿಕಿರಿ ಆಗುತ್ತೆ. ಅನೇಕ ಪುರುಷರಿಗೆ ಇದು ತುಂಬಾ ಸಮಸ್ಯೆ ತಂದೊಡ್ಡುತ್ತೆ. ಆತ್ಮವಿಶ್ವಾಸ ಕೊರತೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಆಫೀಸ್‌ನಲ್ಲಿದ್ದಾಗ, ಮೀಟಿಂಗ್ ನಲ್ಲಿದ್ದಾಗ, ತೆಳುವಾದ ಬಟ್ಟೆಗಳು ಧರಿಸಿದಾಗ ಈ ಸಮಸ್ಯೆಯಿಂದ ಮುಜುಗರ. ಮೂತ್ರ ಮಾಡುವಾಗ ಲೀಕ್ ಆಗದೆ ಶೌಚಾಲಯದಿಂದ ಹೊರಬಂದ ಕೆಲವು ಸೆಕೆಂಡ್‌ಗಳಲ್ಲಿ ಲೀಕ್ ಆಗುತ್ತಂದ್ರೆ ಏನೋ ಸಮಸ್ಯೆಯಿದೆ ಅಂತಾ ಅರ್ಥ. ಇದನ್ನ ವೈದ್ಯಕೀಯ ಭಾಷೆಯಲ್ಲಿ Post-micturition ಅಥವಾ PMD ಎಂದು ಕರೆಯುತ್ತಾರೆ.
ಏನಿದು PMD, ಯಾಕೆ ಬರುತ್ತೆ?
ಪಿಎಂಡಿ ಎಂದರೆ ಮೂತ್ರ ವಿಸರ್ಜನೆಯ ನಂತರ ಮೂತ್ರ ಸೋರಿಕೆಯಾಗುವುದು. ಇದರ ಪ್ರಮುಖ ಲಕ್ಷಣವೆಂದರೆ ಶೌಚಾಲಯದಿಂದ ಹೊರಬಂದ ಕೆಲವು ಸೆಕೆಂಡುಗಳು ಅಥವಾ ನಿಮಿಷಗಳ ನಂತರ ಹಠಾತ್ತನೆ ಮೂತ್ರ ವಿಸರ್ಜನೆಯಾಗುವುದು. ಈ ಸಮಸ್ಯೆ ಹೆಚ್ಚಾಗಿ ಮೂತ್ರನಾಳದ ಕೆಳಭಾಗದಲ್ಲಿ (ಬಲ್ಬಾರ್ ಮೂತ್ರನಾಳ) ಸ್ವಲ್ಪ ಪ್ರಮಾಣದ ಮೂತ್ರವು ಹಾಗೆ ಉಳಿದುಕೊಳ್ಳುವುದರಿಂದ ಉಂಟಾಗುತ್ತೆ. ಅನೇಕರು ಈ ಸಮಸ್ಯೆಯನ್ನು ನೇರವಾಗಿ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆ ಎಂದು ಭಾವಿಸಿ ಆತಂಕದಲ್ಲಿ ಬದುಕುತ್ತಾರೆ. ಕೆಲವರು ಈ ಸಮಸ್ಯೆ ಪರಿಹಾರಕ್ಕೆ ಚಾಟ್ ಜಿಪಿಟಿ, ಗೂಗಲ್ ಜೆಮಿನಿ ಇತರೆ ಆನ್‌ಲೈನ್‌ನಲ್ಲಿ ಓದುವ ತಪ್ಪು ಮಾಹಿತಿಯಿಂದ ಗೊಂದಲಕ್ಕೊಳಗಾಗುತ್ತಾರೆ. ಇನ್ನು ಕೆಲವರು ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ.
ವಯಸ್ಸಾದವರಿಗೆ ಮಾತ್ರ ಈ ಪಿಎಂಡಿ ಸಮಸ್ಯೆ?
ಪಿಎಂಡಿ ಬಗ್ಗೆ ಜನರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಈ ಸಮಸ್ಯೆ ವಯಸ್ಸಾದವರಿಗೆ ಮಾತ್ರ ಬರುತ್ತೆ ಎಂದು ನಂಬುತ್ತಾರೆ. ಆದರೆ ಇದು ತಪ್ಪು. ವಾಸ್ತವದಲ್ಲಿ ಯುವಕರಲ್ಲೂ ಈ ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳೆಂದರೆ ಶೌಚಾಲಯದಲ್ಲಿ ಎತ್ತರದ ಸ್ಥಳದಲ್ಲಿರುವುದು, ಸ್ನಾಯುಗಳು, ಮೂತ್ರ ಮಾಡುವಾಗ ಸರಿಯಾದ ಕ್ರಮದಲ್ಲಿ ನಿಲ್ಲದಿರುವುದು ಕಾರಣ. ಮೂತ್ರ ಮಾಡುವಾಗ ಕೆಲವು ಕೆಟ್ಟ ಅಭ್ಯಾಸಗಳು ಬಿಟ್ಟರೆ, ದಿನನಿತ್ಯ ವ್ಯಾಯಾಮ ಮಾಡುವುದರಿಂದ ಈ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.
ಬಹಳಷ್ಟು ವ್ಯಕ್ತಿ ಮೂಸರ್ಜನೆ ಮಾಡಿದ ತಕ್ಷಣ ಮೂತ್ರ ಸೋರಿಕೆಯಾಗುವುದರಿಂದ ತುಂಬಾ ಕಿರಿಕಿರಿ ಅನುಭವಿಸುತ್ತಾರೆ. ಆದರೆ ಈ ಸಮಸ್ಯೆ ಯಾರೊಂದಿಗಾದರೂ ಹೇಳಿಕೊಳ್ಳುವುದು ಮುಜುಗರದ ವಿಷಯವೆಂದು ಸಮಸ್ಯೆ ಹಾಗೆಯೇ ಮುಚ್ಚಿಡುತ್ತಾರೆ. ವೈದ್ಯರ ಬಳಿಯೂ ಹೇಳಿಕೆಕೊಳ್ಳಲಾಗದೆ ಇದೊಂದು ಸಾಮಾನ್ಯ ಸಮಸ್ಯೆ ಎಂದು, ಎಲ್ಲರಿಗೂ ಹೀಗೆ ಆಗುತ್ತೆ ಎಂದು ಭಾವಿಸಿ ನಿರ್ಲಕ್ಷ್ಯ ಮಾಡುತ್ತಾರೆ. ಸಮಸ್ಯೆ ಇನ್ನಷ್ಟು ಹೆಚ್ಚಾಗಲು ಕಾರಣವಾಗುತ್ತೆ.
PMD: ಪಿಎಂಡಿ ಕಾಯಿಲೆಯೇ? ಅಥವಾ ಸಾಮಾನ್ಯ ಸಮಸ್ಯೆಯೇ?
ಪಿಎಂಡಿ ಗಂಭೀರ ಕಾಯಿಲೆಯಲ್ಲ. ಮೂತ್ರನಾಳದಲ್ಲಿ ಸ್ವಲ್ಪ ಪ್ರಮಾಣ ಉಳಿದುಕೊಳ್ಳುವುದರಿಂದ ಈ ಈ ಸಮಸ್ಯೆ. ದುರ್ಬಲ ಸ್ನಾಯುಗಳು, ವ್ಯಾಯಾಮವಿಲ್ಲದ ಜೀವನಶೈಲಿಯಿಂದ ಈ ಸಮಸ್ಯೆ ಬರುತ್ತೆ ಎಂದು ತಜ್ಞರು ಹೇಳುತ್ತಾರೆ.
ಗಮನಿಸಿ: ಈ ಲೇಖನ ಆರೋಗ್ಯ ಲೇಖನಗಳಿಂದ ಸಂಪಾದಿಸಿದ ಕೇವಲ ಪ್ರಾಥಮಿಕ ಮಾಹಿತಿಯಾಗಿದೆ. ಮೂತ್ರ ವಿಸರ್ಜಿಸುವಾಗ ಉರಿ, ಮೂತ್ರ ವಿಸರ್ಜನೆ ದುರ್ಬಲವಾಗುವುದು, ಮೂತ್ರ ವಿಸರ್ಜಿಸಲು ಕಷ್ಟಪಡುವುದು, ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಅಥವಾ ನೋವು ಉಂಟಾಗುತ್ತಿದ್ದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

