ಗರ್ಭಿಣಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು ಸಾಮಾನ್ಯ ಸಮಸ್ಯೆ. ಶೇ.10ರಷ್ಟು ಗರ್ಭಿಣಿಯರು ಒಂದಿಲ್ಲೊಂದು ಹಂತದಲ್ಲಿ ಇದರಿಂದ ಬಳಲುತ್ತಾರೆ. ಆದರೆ, ಗುಡ್ ನ್ಯೂಸ್ ಎಂದರೆ, ಆರಂಭದಲ್ಲೇ ಗುರುತಿಸಿದರೆ ಇದನ್ನು ಸುಲಭವಾಗಿ ಗುಣಪಡಿಸಿಕೊಳ್ಳಬಹುದು. ಆದರೆ, ಕೆಲವೊಮ್ಮೆ ಲಕ್ಷಣಗಳ ಕೊರತೆಯಿಂದಾಗಿ ಇದನ್ನು ಗುರುತಿಸುವುದು ತಡವಾಗಬಹುದು, ಆಗ ಮಾತ್ರ ಪರಿಸ್ಥಿತಿ ಅಪಾಯಕಾರಿಯಾಗಬಲ್ಲದು. ಸುಮಾರು ಶೇ.25ರಷ್ಟು ಮೂತ್ರ ನಾಳದ ಸೋಂಕು ಕಿಡ್ನಿ ಇನ್ಫೆಕ್ಷನ್ ಆಗಿ ಬೆಳವಣಿಗೆಯಾಗುತ್ತದೆ. ಇದು ತಾಯಿ ಹಾಗೂ ಮಗುವಿಬ್ಬರ ಜೀವಕ್ಕೂ ಅಪಾಯ ತರಬಲ್ಲದು. 

ಪ್ರಗ್ನೆನ್ಸಿಯಲ್ಲಿ ಮೂತ್ರನಾಳದ ಸೋಂಕು ಏಕೆ ಸಾಮಾನ್ಯ ಹಾಗೂ ಅದಕ್ಕೇನು ಚಿಕಿತ್ಸೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 

ಗರ್ಭಿಣಿಯರ ಕಾಡೋ ಹೊಟ್ಟೆ ನೋವು, ಮಗುವಿನ ಮೇಲಾಗೋ ಎಫೆಕ್ಟ್...

ನೀವು ಗರ್ಭಿಣಿಯಾಗಿದ್ದರೂ, ಅಲ್ಲದಿದ್ದರೂ ಸೆಕ್ಸ್ ಮೂತ್ರನಾಳದ ಸೋಂಕು ಹರಡುವ ಮೊದಲ ಶತ್ರು. ಏಕೆಂದರೆ ಯೋನಿಯಲ್ಲಿನ ಬ್ಯಾಕ್ಟೀರಿಯಾ ಹಾಗೂ ಕೋಲನ್ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಯುರೆತ್ರಾಗೆ ಹರಡುತ್ತವೆ. ಅಲ್ಲದೆ ಸೆಕ್ಸ್‌ನಿಂದಾಗಿ ಮೂತ್ರಚೀಲ ಉರಿಯೂತ ಆಗಬಹುದು. ಆಗ ಬ್ಯಾಕ್ಟೀರಿಯಾಗಲು ಅಲ್ಲಿಯೇ ಮನೆ ಮಾಡಿಕೊಳ್ಳುತ್ತವೆ. ಮತ್ತೊಂದು ಕಾರಣವೆಂದರೆ ಹೆಚ್ಚು ಮೂತ್ರ ಪಾಸ್ ಮಾಡದೆ ಇರುವುದು. ಮೂತ್ರ ಪಾಸ್ ಮಾಡಿದಾಗ

ಬ್ಯಾಕ್ಟೀರಿಯಾಗಳನ್ನು ಅದು ಹೊರದಬ್ಬುತ್ತದೆ. 

ಪ್ರಗ್ನೆನ್ಸಿ ಮೂತ್ರನಾಳ ಸೋಂಕಿಗೆ ನೇರ ಕಾರಣವಲ್ಲ. ಆದರೆ, ಗರ್ಭಿಣಿಯಾದ ಸಂದರ್ಭದಲ್ಲಿ ದೇಹದ ಒಳಗಾಗುವ ಬದಲಾವಣೆಗಳು ಸೋಂಕು ಬೇಗ ತಗುಲುವಂತೆ ಮಾಡಬಲ್ಲವು. ಅಲ್ಲದೆ, ಗರ್ಭಿಣಿಯರಲ್ಲಾಗುವ ಹಾರ್ಮೋನ್ ಬದಲಾವಣೆಗಳು ಕೂಡಾ ಬ್ಯಾಕ್ಟೀರಿಯಾಗಳಿಗೆ ಸೂಕ್ತ ವೇದಿಕೆ ಒದಗಿಸಿಕೊಡುತ್ತವೆ. ಗರ್ಭಕೋಶ ದೊಡ್ಡದಾಗಿರುವುದರಿಂದ ಅದು ನಿಮಗೆ ಪೂರ್ತಿ ಬ್ಲ್ಯಾಡರ್ ಖಾಲಿ ಮಾಡಲು ಅಡ್ಡಿ ಮಾಡುತ್ತದೆ. ಇದರಿಂದ ಒಳಗೇ ಉಳಿದ ಮೂತ್ರದಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತದೆ. 

ಮೂತ್ರನಾಳ ಸೋಂಕಿನ ಸಾಮಾನ್ಯ ಲಕ್ಷಣಗಳು

ಕೆಲ ಪ್ರಗ್ನೆಂಟ್ ಮಹಿಳೆಯರಲ್ಲಿ ಯಾವುದೇ ಸಮಸ್ಯೆಯ ಲಕ್ಷಣ ಗೋಚರಿಸದಿರಬಹುದು. ಹಾಗಾಗಿಯೇ ವೈದ್ಯರು ಈ ಕುರಿತು ತಪಾಸಣೆ ಮಾಡುವುದಿದೆ. ಇನ್ನು ಮೂತ್ರ ನಾಳ ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ,

- ಯಾವಾಗಲೂ ಮೂತ್ರ ಪಾಸ್ ಮಾಡಬೇಕಿನಿಸುವುದು

ಮಾನಸಿಕವಾಗಿ, ದೈಹಿಕವಾಗಿ ಹೆಣ್ಣನ್ನು ಹೈರಾಣಿಗಿಸೋ ಗರ್ಭಪಾತ!

- ಮೂತ್ರ ಮಾಡುವಾಗ ಉರಿ ಅಥವಾ ಸುಟ್ಟಂಥ ಅನುಭವ

- ಮೂತ್ರ ವಿಪರೀತ ವಾಸನೆ

- ಮೂತ್ರದಲ್ಲಿ ರಕ್ತ ಹೋಗುವುದು

- ಯೋನಿ ಭಾಗದಲ್ಲಿ ನೋವು

ಪ್ರಗ್ನೆನ್ಸಿಯಲ್ಲಾಗುವ ಮೂತ್ರ ನಾಳ ಸೋಂಕಿಗೆ ಚಿಕಿತ್ಸೆ

ಯಾವುದೇ ಸಂದರ್ಭದಲ್ಲಾದರೂ ಮೂತ್ರನಾಳ ಸೋಂಕಿಗೆ ಚಿಕಿತ್ಸೆ ಸುಲಭವಿದೆ. ಆದರೆ, ಕೆಲವೊಮ್ಮೆ ಗರ್ಭಿಣಿಯರು ಎಲ್ಲ ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳುವಂತಿಲ್ಲ. ಪ್ರಗ್ನೆನ್ಸಿಯ ಎಷ್ಟನೇ ತಿಂಗಳಿನಲ್ಲಿದ್ದೀರಿ, ಯಾವ ಮಟ್ಟಿನ ಸೋಂಕಾಗಿದೆ ಎಂಬುದರ ಆಧಾರದ ಮೇಲೆ ಆ್ಯಂಟಿ ಬಯೋಟಿಕ್ ನೀಡಬಹುದೋ, ಬೇಡವೋ ನಿರ್ಧರಿಸಲಾಗುತ್ತದೆ. ಪ್ರಗ್ನೆನ್ಸಿಯಲ್ಲಿ ಮೂತ್ರನಾಳ ಸೋಂಕನ್ನು ತಡೆಗಟ್ಟಲು ಇದೇ ಮಾರ್ಗವೆಂದಿಲ್ಲ. ಆದರೆ, ಬರುವ ಸಂಭವಗಳನ್ನು ಕಡಿಮೆ ಮಾಡಲು ನೀವೊಂದಿಷ್ಟು ಕ್ರಮಗಳನ್ನು ತೆಗೆದುಕೊಳ್ಳಬಹುದು. 

ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ; ಮನೆಯಲ್ಲೇ ಇದೆ ಮದ್ದು

- ಸ್ವಚ್ಛತೆ

ಮೂತ್ರವಾದ ಬಳಿಕ ಹಿಂದಿನಿಂದ ಮುಂದೆ ಒರೆಸಿಕೊಳ್ಳಿ. ಆಗ ಬ್ಯಾಕ್ಟೀರಿಯಾ ಹರಡುವುದಿಲ್ಲ. 

- ನೀರು ಕುಡಿಯಿರಿ

ಮೂತ್ರ ಮಾಡುವುದರಿಂದ ಬ್ಯಾಕ್ಟೀರಿಯಾವನ್ನೂ ಮೂತ್ರದಿಂದ ಹೊರ ಹಾಕಬಹುದು. ಹಾಗಾಗಿ, ಹೆಚ್ಚು ಹೆಚ್ಚು ನೀರು ಕುಡಿಯಿರಿ.

- ಪದೇ ಪದೆ ಮೂತ್ರ ಮಾಡಿ

ಮೂತ್ರ ಮಾಡಬೇಕೆನಿಸಿದಾಗೆಲ್ಲ ಕಟ್ಟಿಕೊಳ್ಳುವ ಅಭ್ಯಾಸ ಬಿಟ್ಟು ಹೋಗಿ ಮೂತ್ರ ಮಾಡಿ ಬನ್ನಿ. ಅಷ್ಟೇ ಅಲ್ಲ, ಪೂರ್ತಿ ಮೂತ್ರ ಪಾಸ್ ಮಾಡಲು ಪ್ರಯತ್ನಿಸಿ.

- ಉತ್ತಮ ಆಹಾರ ಸೇವನೆ

ಚಾಕೋಲೇಟ್ ಹಾಗೂ ಕೆಫಿನ್ ಮೂತ್ರನಾಳದ ಸೋಂಕು ಹೆಚ್ಚಿಸಬಲ್ಲವು. ಅವುಗಳನ್ನು ಅವಾಯ್ಡ್ ಮಾಡಿ ಹಸಿರು ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.

- ಕ್ರ್ಯಾನ್‌ಬೆರಿ ಜ್ಯೂಸ್

ಕ್ರ್ಯಾನ್‌ಬೆರಿ ಜ್ಯೂಸ್ ಇ-ಕೊಲಿ ಬ್ಲ್ಯಾಡರ್‌ನಲ್ಲಿ ನಿಲ್ಲದಂತೆ ನೋಡಿಕೊಳ್ಳುತ್ತದೆ. ಹಾಗಾಗಿ, ಸಾಧ್ಯವಾದರೆ ಅದನ್ನು ಆಗಾಗ ಸೇವಿಸಿ.