MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • ಸರ್ಕ್ಯೂಟ್ ಹೌಸ್‌ನಲ್ಲಿ ವಿವಾದಿತ ನಟಿಗೆ ಕಾನೂನು ಬಾಹಿರ ರಾಜಾತಿಥ್ಯ: ಸಂಕಷ್ಟದಲ್ಲಿ ವಿಐಪಿಗಳು! ತನಿಖೆ ಆರಂಭ

ಸರ್ಕ್ಯೂಟ್ ಹೌಸ್‌ನಲ್ಲಿ ವಿವಾದಿತ ನಟಿಗೆ ಕಾನೂನು ಬಾಹಿರ ರಾಜಾತಿಥ್ಯ: ಸಂಕಷ್ಟದಲ್ಲಿ ವಿಐಪಿಗಳು! ತನಿಖೆ ಆರಂಭ

ಒಡಿಶಾದ ರೂರ್ಕೆಲಾ ಸರ್ಕ್ಯೂಟ್ ಹೌಸ್‌ನಲ್ಲಿ ವಯಸ್ಕ ಚಿತ್ರಗಳ ತಾರೆ ಟೀನಾ ನಂದಿಗೆ ವಿಐಪಿ ಸೌಲಭ್ಯ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಭಾರಿ ವಿವಾದ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿ ಶ್ರೇಣಿಯ ಅಧಿಕಾರಿಯ ಮಗ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

2 Min read
Author : Suchethana D
Published : Sep 19 2026, 01:15 PM IST
Share this Photo Gallery
  • FB
  • TW
  • Linkdin
  • Whatsapp
16
ಸರ್ಕ್ಯೂಟ್ ಹೌಸ್‌ನಲ್ಲಿ ನೀಲಿ ತಾರೆ ಸಂಚಲನ
Image Credit : Social Media

ಸರ್ಕ್ಯೂಟ್ ಹೌಸ್‌ನಲ್ಲಿ ನೀಲಿ ತಾರೆ ಸಂಚಲನ

ಒಡಿಶಾದ ರೂರ್ಕೆಲಾದ ಸರ್ಕ್ಯೂಟ್ ಹೌಸ್​ ಈಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಕಳೆದ ಆಗಸ್ಟ್​ನಲ್ಲಿ ರೂರ್ಕೆಲಾ ಪೊಲೀಸರು ಸರ್ಕ್ಯೂಟ್ ಹೌಸ್‌ನಲ್ಲಿ ಶೋಧ ನಡೆಸಿದ್ದಾಗ, ಅಲ್ಲಿ ಬಂದೂಕುಗಳು ಇದ್ದವು. ಆದರೆ ಇದೀಗ ಈ ಬಾರಿ ವಯಸ್ಕ ಅರ್ಥಾತ್​ ನೀಲಿ ತಾರೆಯೊಬ್ಬರ ವಿಡಿಯೋ ಸಂಚಲನ ಮೂಡಿಸಿದೆ. ಕಳೆದ ವರ್ಷ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಸರ್ಕ್ಯೂಟ್ ಹೌಸ್ ಅನ್ನು ಉದ್ಘಾಟಿಸಿದ್ದರು. ಆದರೆ ಇದಾಗಲೇ ಇದು ವಿವಾದಗಳ ಕೇಂದ್ರಬಿಂದುವಾಗಿದೆ. ಈ ವೈರಲ್​ ವಿಡಿಯೋದ ಪ್ರಕಾರ, ವಯಸ್ಕ ಚಲನಚಿತ್ರ ತಾರೆಗೆ ಸರ್ಕ್ಯೂಟ್ ಹೌಸ್‌ನಲ್ಲಿ ವಿಐಪಿ ಟ್ರೀಟ್​ಮೆಂಟ್​ ನೀಡಲಾಗಿದೆ. ಸರ್ಕಾರ ಈಗ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಯಾರೀ ನೀಲಿ ತಾರೆ?
Image Credit : Social Media

ಯಾರೀ ನೀಲಿ ತಾರೆ?

ಅಂದಹಾಗೆ ಈ ನಟಿ ಟೀನಾ ನಂದಿ. ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ 5 ನಿಮಿಷಗಳ ವಿಡಿಯೋ ಹಂಚಿಕೊಂಡ ಬಳಿಕ ಗಲಾಟೆ ಶುರುವಾಗಿದೆ. ಅದರಲ್ಲಿ, ಅವರು ಡಿಸೆಂಬರ್ 1, 2025 ರಂದು ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದರು ಮತ್ತು ತನಗಾಗಿ ಐಷಾರಾಮಿ ಆಡಿಯನ್ನು ವ್ಯವಸ್ಥೆ ಮಾಡಲಾಗಿತ್ತು ಮತ್ತು ತನ್ನ ಸೌಕರ್ಯಗಳನ್ನು ನೋಡಿಕೊಳ್ಳಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.

Related Articles

Related image1
OTPನೂ ಬರಲ್ಲ, ಲಿಂಕೂ ಬರಲ್ಲ; ಜೇಬಲ್ಲಿದ್ದ ಮೊಬೈಲ್​ನಿಂದ್ಲೇ ಹಣ ಮಾಯ! ಕೂಡಲೇ ಈ ಸೆಟ್ಟಿಂಗ್​ ಆಫ್​ ಮಾಡಿ
Related image2
ಮಹಿಳೆಯ ನಿಗೂಢ ಕೊಲೆ: ಅಪರಾಧಿಯನ್ನು ಹಿಡಿದುಕೊಟ್ಟ ಆಮ್ಲೆಟ್​ ಪೀಸ್​: ಪ್ರೇಮಿಗಾಗಿ ಬಂದಾಕೆಯ ದುರಂತ ಅಂತ್ಯ
36
ಯಾರಿಗೆಲ್ಲಾ ಅವಕಾಶ
Image Credit : Social Media

ಯಾರಿಗೆಲ್ಲಾ ಅವಕಾಶ

ಸರ್ಕ್ಯೂಟ್‌ ಹೌಸ್‌ನಲ್ಲಿ ಸಾಮಾನ್ಯವಾಗಿ ಹಿರಿಯ ಸರ್ಕಾರಿ ಅಧಿಕಾರಿಗಳು, ಸಚಿವರು, ಶಾಸಕರು, ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಇತರ ಗಣ್ಯರು ವಾಸ್ತವ್ಯ ಹೂಡಲು ಅವಕಾಶವಿದೆ. ನಿಯಮದಂತೆ ಸಂಬಂಧಿತ ಅಧಿಕಾರಿಗಳ ಅನುಮತಿ ಇದ್ದರಷ್ಟೇ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ, ಇವರಿಗೆ ಸಿಕ್ಕಿದ್ದು ಹೇಗೆ ಎನ್ನುವ ಚರ್ಚೆ ಶುರುವಾಗಿದೆ.

46
ಐಷಾರಾಮಿ ಕಾರಿನಲ್ಲಿ ಪ್ರಯಾಣ
Image Credit : Social Media

ಐಷಾರಾಮಿ ಕಾರಿನಲ್ಲಿ ಪ್ರಯಾಣ

ಟೀನಾ ನಂದಿ ಜಾರ್ಸುಗುಡಾ ವಿಮಾನ ನಿಲ್ದಾಣದಿಂದ ರೂರ್ಕೆಲಾಕ್ಕೆ ಐಷಾರಾಮಿ ಆಡಿ ಕಾರಿನಲ್ಲಿ ಪ್ರಯಾಣಿಸಿದ್ದರು. ರೂರ್ಕೆಲಾದ ಖಾಸಗಿ ಕಂಪನಿಯೊಂದರ ಸಿಇಒ ತಮ್ಮನ್ನ ರಿಸೀವ್‌ ಮಾಡಲು ಬರುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಕಂಪೆನಿಯ ಪ್ರಚಾರ ಕಾರ್ಯಕ್ರಮಕ್ಕಾಗಿ ನಗರಕ್ಕೆ ಬಂದಿದ್ದಾಗಿ ರೀಲ್ಸ್‌ನಲ್ಲಿ ಹೇಳಿದ್ದಾರೆ. ನನಗೆ ವಿಐಪಿಯ ರೀತಿ ಟ್ರೀಟ್​ಮೆಂಟ್​ ಸಿಕ್ಕಿದೆ. ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಮಗನನ್ನು ಭೇಟಿಯಾಗಲಿದ್ದೇನೆ ಎಂದಿದ್ದಾರೆ.

56
ಎಸ್​ಪಿ ಮಗನ ಬಂಧನ!
Image Credit : Social Media

ಎಸ್​ಪಿ ಮಗನ ಬಂಧನ!

ಈ ಪ್ರಕರಣದಲ್ಲಿ ರೂರ್ಕೆಲಾ ಪೊಲೀಸರು ಮೂವರನ್ನು ಪ್ರಶ್ನಿಸಿದ್ದಾರೆ. ಮೊದಲನೆಯದಾಗಿ, ಕೊಠಡಿ ಕಾಯ್ದಿರಿಸಲು ಕಾರಣರಾದ ವ್ಯಕ್ತಿ ಏಕೆ ಹಾಗೆ ಮಾಡಿದನೆಂದು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಪೊಲೀಸರು ಎಸ್‌ಪಿ ಶ್ರೇಣಿಯ ಅಧಿಕಾರಿಯ ಮಗನನ್ನು ಸಹ ಬಂಧಿಸಿದ್ದಾರೆ. ಇದರೊಂದಿಗೆ, ಖಾಸಗಿ ಕಂಪನಿಯ ಮಾಲೀಕರು ಮತ್ತು ಟ್ರಾವೆಲ್ ಆಪರೇಟರ್‌ನನ್ನು ಸಹ ಬಂಧಿಸಲಾಗಿದೆ. ಈ ವಿಷಯದಲ್ಲಿ ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಲಯದ ಡಿಐಜಿ ಹೇಳಿದರು.

66
ವಾಹನ ವ್ಯವಸ್ಥೆಯ ಬಗ್ಗೆಯೂ ತನಿಖೆ
Image Credit : Social Media

ವಾಹನ ವ್ಯವಸ್ಥೆಯ ಬಗ್ಗೆಯೂ ತನಿಖೆ

ವಾಹನ ವ್ಯವಸ್ಥೆಯ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಸ್ಥಳೀಯ ಟ್ರಾವೆಲ್‌ ಆಪರೇಟರ್‌ವೊಬ್ಬರು ಖಾಸಗಿ ಕಂಪನಿಯ ಹಿರಿಯ ಅಧಿಕಾರಿಯ ಮನವಿಯ ಮೇರೆಗೆ ಕಾರು ಒದಗಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಟೀನಾ ವಾಸ್ತವ್ಯ ಮತ್ತು ಸಾರಿಗೆ ವ್ಯವಸ್ಥೆಯ ನಡುವೆ ಯಾವುದೇ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನಟಿ
ಕ್ರೈಮ್ ನ್ಯೂಸ್
ಭಾರತ ಸುದ್ದಿ
ಒಡಿಶಾ
 

Latest Videos
Recommended Stories
Recommended image1
ಬಿಗ್ ಬಾಸ್ ಮನೆಯಲ್ಲಿ ಕಾಮನರ್ಸ್ ಗ್ಯಾಂಗ್ ಛಿದ್ರ! ಧನುಷ್-ಶಾಸ್ತ್ರಿ ನಿರ್ಧಾರದಿಂದ ಆಟಕ್ಕೆ ಹೊಸ ತಿರುವು
Recommended image2
ಟಾಕ್ಸಿಕ್ ಸಿನಿಮಾ ಈಗಲೂ ಪ್ರದರ್ಶನ ಕಾಣುತ್ತಿದೆಯೇ? ಯಶ್ ಸಿನಿಮಾದ ಒಟ್ಟೂ ಕಲೆಕ್ಷನ್ ಎಷ್ಟು? ರಿಯಾಲಿಟಿ ಏನು?!
Recommended image3
'ಬಿಗ್‌ ಬಾಸ್‌'ನಲ್ಲಿ ವಿಜಯ್ ಸೇತುಪತಿ ಹೇಳಿದ 'ಆ ಮಾತು' ಸಿಎಂ ವಿಜಯ್‌ಗೆ ಲಿಂಕ್ ಆಗಿ ಭಾರೀ ಕೋಲಾಹಲ ಸೃಷ್ಟಿ!
Related Stories
Recommended image1
OTPನೂ ಬರಲ್ಲ, ಲಿಂಕೂ ಬರಲ್ಲ; ಜೇಬಲ್ಲಿದ್ದ ಮೊಬೈಲ್​ನಿಂದ್ಲೇ ಹಣ ಮಾಯ! ಕೂಡಲೇ ಈ ಸೆಟ್ಟಿಂಗ್​ ಆಫ್​ ಮಾಡಿ
Recommended image2
ಮಹಿಳೆಯ ನಿಗೂಢ ಕೊಲೆ: ಅಪರಾಧಿಯನ್ನು ಹಿಡಿದುಕೊಟ್ಟ ಆಮ್ಲೆಟ್​ ಪೀಸ್​: ಪ್ರೇಮಿಗಾಗಿ ಬಂದಾಕೆಯ ದುರಂತ ಅಂತ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved