MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • TV Talk
  • ಬಿಗ್ ಬಾಸ್ ಮನೆಯಲ್ಲಿ ಕಾಮನರ್ಸ್ ಗ್ಯಾಂಗ್ ಛಿದ್ರ! ಧನುಷ್-ಶಾಸ್ತ್ರಿ ನಿರ್ಧಾರದಿಂದ ಆಟಕ್ಕೆ ಹೊಸ ತಿರುವು

ಬಿಗ್ ಬಾಸ್ ಮನೆಯಲ್ಲಿ ಕಾಮನರ್ಸ್ ಗ್ಯಾಂಗ್ ಛಿದ್ರ! ಧನುಷ್-ಶಾಸ್ತ್ರಿ ನಿರ್ಧಾರದಿಂದ ಆಟಕ್ಕೆ ಹೊಸ ತಿರುವು

Bigg Boss Kannada: ಮಂಜನ ಸ್ವಾರ್ಥದ ಆಟದಿಂದ ಬೇಸತ್ತು ಧನುಷ್ ಮತ್ತು ಕಿರಣ್ ಶಾಸ್ತ್ರಿ ದೂರವಾಗಲು ನಿರ್ಧರಿಸಿದ್ದರೆ, ಮತ್ತೊಂದೆಡೆ ಮಂಜ ಮತ್ತು ಲಿಖಿತ್ ವರ್ತನೆಗೆ ವೀಕ್ಷಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ ಇಂದು ನಡೆಯಲಿರುವ ಕಿಚ್ಚನ ಪಂಚಾಯಿತಿಯಲ್ಲಿ ಏನಾಗಬಹುದು? ಇಲ್ಲಿದೆ ಸಂಪೂರ್ಣ ವಿವರ.

2 Min read
Author : Ashwini HR
Published : Sep 19 2026, 12:14 PM IST
Share this Photo Gallery
  • FB
  • TW
  • Linkdin
  • Whatsapp
14
ಅಂತರ ಕಾಯ್ದುಕೊಳ್ಳಲು ನಿರ್ಧಾರ
Image Credit : Colors Kannada YT

ಅಂತರ ಕಾಯ್ದುಕೊಳ್ಳಲು ನಿರ್ಧಾರ

ಅಂತರ ಕಾಯ್ದುಕೊಳ್ಳಲು ನಿರ್ಧಾರ
ಬಿಗ್ ಬಾಸ್ ಕನ್ನಡದ ಮನೆಯಲ್ಲಿ ದಿನಗಳು ಕಳೆದಂತೆ ಸ್ನೇಹ, ವಿಶ್ವಾಸದ ಲೆಕ್ಕಾಚಾರಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೊಬ್ಬರು ಬಿಟ್ಟುಕೊಡದೆ ಒಗ್ಗಟ್ಟಿನಿಂದ ಆಡುತ್ತಿದ್ದ ಮಂಜ, ಧನುಷ್, ಲಿಖಿತ್ ಮತ್ತು ಕಿರಣ್ ಶಾಸ್ತ್ರಿ ಅವರ ಮಧ್ಯೆ ಇದೀಗ ಬಿರುಕು ಮೂಡಿದೆ. ಮಂಜನ ಸ್ವಾರ್ಥದ ಆಟವನ್ನು ಸೂಕ್ಷ್ಮವಾಗಿ ಗಮನಿಸಿರುವ ಧನುಷ್ ಮತ್ತು ಕಿರಣ್ ಶಾಸ್ತ್ರಿ, ಆತನಿಂದ ಅಂತರ ಕಾಯ್ದುಕೊಳ್ಳಲು ನಿರ್ಧಾರಕ್ಕೆ ಬಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ನಮ್ಮ ಆಟ ನಾವು ಆಡೋಣ
Image Credit : Colors Kannada YT

ನಮ್ಮ ಆಟ ನಾವು ಆಡೋಣ

ನಮ್ಮ ಆಟ ನಾವು ಆಡೋಣ 
ಮನೆಯ ಒಂದು ಮೂಲೆಯಲ್ಲಿ ರಹಸ್ಯವಾಗಿ ಕುಳಿತು ಮಾತನಾಡಿಕೊಂಡ ಧನುಷ್ ಮತ್ತು ಶಾಸ್ತ್ರಿ, ಮಂಜನ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. "ಮಂಜ ತನ್ನ ಸ್ವಾರ್ಥಕ್ಕಾಗಿ ನಮ್ಮಿಬ್ಬರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾನೆ. ಆತ ಟಾಸ್ಕ್ ಆಡುವುದಕ್ಕಿಂತ ಹೆಚ್ಚಾಗಿ ಮನೆಯ ಇತರ ಸದಸ್ಯರ ಕಾಲೆಳೆಯುವುದು, ಎಲ್ಲರನ್ನೂ ಕೆಣಕುವುದರಲ್ಲೇ ಕಾಲ ಕಳೆಯುತ್ತಿದ್ದಾನೆ. ಕನಿಷ್ಠ ಪಕ್ಷ ಲಿಖಿತ್ ಆದರೂ ಆಟವಾಡುತ್ತಾನೆ. ಆದರೆ ಮಂಜನಿಗೆ ಸಪೋರ್ಟ್ ಮಾಡುತ್ತಾ, ಆತನ ಮಾತು ಕೇಳಿಕೊಂಡು ಹೋದರೆ ನಮ್ಮ ಆಟವೇ ಹಾಳಾಗುತ್ತದೆ. ಹಾಗಾಗಿ ಇನ್ಮೇಲೆ ನಾವು ಯಾರ ಹಂಗೂ ಇಲ್ಲದೆ ನಮ್ಮ ಆಟ ನಾವು ಆಡೋಣ. ವಾಸ್ತವವಾಗಿ ಮನೆಯಲ್ಲಿರುವ ಉಳಿದವರು ಕೂಡ ನಮ್ಮನ್ನು ಬೆಂಬಲಿಸುತ್ತಲೇ ಬಂದಿದ್ದಾರೆ" ಎಂದು ಇಬ್ಬರೂ ಚರ್ಚಿಸಿ ತಮ್ಮದೇ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ.

Related Articles

Related image1
ಬಿಗ್ ಬಾಸ್ ಮನೆಯಲ್ಲಿ ಕೈಬಳೆ ಸದ್ದು ಬೆನ್ನಲ್ಲೇ 'ಗಂಡಸ್ತನ ಪ್ರಶ್ನೆ'! ಮಂಜು ನೀನು ಗಂಡಸೇ ಅಲ್ಲವೆಂದ ಕಾವ್ಯ!
Related image2
ಬಿಗ್ ಬಾಸ್ ಗ್ರ್ಯಾಂಡ್‌ ಓಪನಿಂಗ್‌ ದಿನ ನಡೆದ ಈ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರಾ? ಸುದೀಪ್ ವ್ಯಕ್ತಿತ್ವಕ್ಕೆ ನೆಟ್ಟಿಗರು ಫಿದಾ
34
ಲಿಖಿತ್ ಕೂಡ ಅದೇ ಹಾದಿಯಲ್ಲಿ
Image Credit : Colors Kannada YT

ಲಿಖಿತ್ ಕೂಡ ಅದೇ ಹಾದಿಯಲ್ಲಿ

ಲಿಖಿತ್ ಕೂಡ ಅದೇ ಹಾದಿಯಲ್ಲಿ
ವಿಶೇಷವೆಂದರೆ, ಈ ವಾರ ಮಂಜನ ವರ್ತನೆ ಮನೆಯೊಳಗಷ್ಟೇ ಅಲ್ಲದೆ, ಹೊರಗಿರುವ ವೀಕ್ಷಕರಿಗೂ ತೀವ್ರ ಅಸಮಾಧಾನ ತಂದಿದೆ. ಬೇರೆಯವರನ್ನು ಸದಾ ಗೋಳುಹೊಯ್ದುಕೊಳ್ಳುವ ಮಂಜನ ಆಟದ ಶೈಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ‘ಅಗ್ನಿ ಪರೀಕ್ಷೆ’ಯಲ್ಲಿ ಗೆದ್ದು ಕಾಮನ್ ಮ್ಯಾನ್ ಸ್ಪರ್ಧಿಯಾಗಿ ಭರವಸೆ ಮೂಡಿಸಿದ್ದ ಲಿಖಿತ್ ಸಹ, ಇತ್ತೀಚೆಗೆ ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಆರಂಭದಲ್ಲಿ ಸಿಕ್ಕ ಬೆಂಬಲವನ್ನು ಲಿಖಿತ್ ತಮ್ಮ ಅತಿಯಾದ ಆತ್ಮವಿಶ್ವಾಸದಿಂದ ಕಳೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ.

44
ಇಂದಿನ ಸಂಚಿಕೆಯಲ್ಲಿ ಏನಾಗುತ್ತೆ?
Image Credit : Colors Kannada YT

ಇಂದಿನ ಸಂಚಿಕೆಯಲ್ಲಿ ಏನಾಗುತ್ತೆ?

ಇಂದಿನ ಸಂಚಿಕೆಯಲ್ಲಿ ಏನಾಗುತ್ತೆ?
ಇಂದು ಬಹುನಿರೀಕ್ಷಿತ 'ಕಿಚ್ಚನ ಪಂಚಾಯಿತಿ' ಪ್ರಸಾರವಾಗಲಿದ್ದು, ಈ ಹೊತ್ತಿನಲ್ಲೇ ಧನುಷ್ ಮತ್ತು ಶಾಸ್ತ್ರಿ ಇಂತಹ ನಿರ್ಧಾರಕ್ಕೆ ಬಂದಿರುವುದು ಆಟಕ್ಕೆ ಹೊಸ ತಿರುವು ನೀಡಿದೆ. ಇಡೀ ವಾರ ಮನೆಯಲ್ಲಿ ಅಶಾಂತಿ ಸೃಷ್ಟಿಸಿದ ಮಂಜನಿಗೆ ಕಿಚ್ಚ ಸುದೀಪ್ ಚಾಟಿ ಬೀಸಲಿದ್ದಾರಾ? ಲಿಖಿತ್ ವರ್ತನೆಯ ಬಗ್ಗೆ ವೀಕ್ಷಕರ ಅಸಮಾಧಾನವನ್ನು ಸುದೀಪ್ ಪ್ರಸ್ತಾಪಿಸಲಿದ್ದಾರಾ? ಮತ್ತು ಒಡೆದುಹೋದ ಈ ಗೆಳೆಯರ ಬಳಗಕ್ಕೆ ಪಂಚಾಯಿತಿಯಲ್ಲಿ ಸಿಗುವ ತೀರ್ಪು ಏನು ಎಂಬುದನ್ನು ತಿಳಿಯಲು ಇಂದಿನ ಸಂಚಿಕೆಯನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
 

Latest Videos
Recommended Stories
Recommended image1
'ಬಿಗ್‌ ಬಾಸ್‌'ನಲ್ಲಿ ವಿಜಯ್ ಸೇತುಪತಿ ಹೇಳಿದ 'ಆ ಮಾತು' ಸಿಎಂ ವಿಜಯ್‌ಗೆ ಲಿಂಕ್ ಆಗಿ ಭಾರೀ ಕೋಲಾಹಲ ಸೃಷ್ಟಿ!
Recommended image2
Jagaddhatri Serial: ಡಾನ್ಸ್​ ಮಾಡಿ, ವಿಜಯ ಸೂರ್ಯ ಜೊತೆ ರೀಲ್ಸ್​ಗೆ ಅವಕಾಶ ಪಡೆಯಿರಿ- ನಟನಿಂದ ಬಿಗ್​ ಆಫರ್​
Recommended image3
ನಾ ನಿನ್ನ ಬಿಡಲಾರೆ ಹಿತಾ@ 9: ನಟನೆಯಿಂದ ಮೋಡಿ ಮಾಡ್ತಿರೋ ಮಹಿತಾಳ ಕುತೂಹಲದ ಸ್ಟೋರಿ ಇಲ್ಲಿದೆ
Related Stories
Recommended image1
ಬಿಗ್ ಬಾಸ್ ಮನೆಯಲ್ಲಿ ಕೈಬಳೆ ಸದ್ದು ಬೆನ್ನಲ್ಲೇ 'ಗಂಡಸ್ತನ ಪ್ರಶ್ನೆ'! ಮಂಜು ನೀನು ಗಂಡಸೇ ಅಲ್ಲವೆಂದ ಕಾವ್ಯ!
Recommended image2
ಬಿಗ್ ಬಾಸ್ ಗ್ರ್ಯಾಂಡ್‌ ಓಪನಿಂಗ್‌ ದಿನ ನಡೆದ ಈ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರಾ? ಸುದೀಪ್ ವ್ಯಕ್ತಿತ್ವಕ್ಕೆ ನೆಟ್ಟಿಗರು ಫಿದಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved