MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • ದಾವೂದ್​ ಜೊತೆ ಸಂಚಲನ ಮೂಡಿಸಿದ್ದ ಆ ಫೋಟೋ: 30 ವರ್ಷಗಳ ಬಳಿಕ ಗುಟ್ಟು ರಟ್ಟು ಮಾಡಿದ ನಟಿ ಮಂದಾಕಿನಿ

ದಾವೂದ್​ ಜೊತೆ ಸಂಚಲನ ಮೂಡಿಸಿದ್ದ ಆ ಫೋಟೋ: 30 ವರ್ಷಗಳ ಬಳಿಕ ಗುಟ್ಟು ರಟ್ಟು ಮಾಡಿದ ನಟಿ ಮಂದಾಕಿನಿ

80-90ರ ದಶಕದ ಜನಪ್ರಿಯ ನಟಿ ಮಂದಾಕಿನಿ ಅವರ ವೃತ್ತಿಜೀವನವು ದಾವೂದ್ ಇಬ್ರಾಹಿಂ ಜೊತೆಗಿನ ಒಂದು ಫೋಟೋದಿಂದಾಗಿ ಹೇಗೆ ಕುಸಿಯಿತು ಎಂಬುದನ್ನು ವಿವರಿಸಲಾಗಿದೆ. 63ನೇ ವಯಸ್ಸಿನಲ್ಲಿ ಆ ವಿವಾದಾತ್ಮಕ ಫೋಟೋ ಮತ್ತು 'ರಾಮ್ ತೇರಿ ಗಂಗಾ ಮೈಲಿ' ಚಿತ್ರದ ದೃಶ್ಯಗಳ ಹಿಂದಿನ ನೈಜ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.

2 Min read
Author : Suchethana D
Published : Sep 19 2026, 04:25 PM IST
Share this Photo Gallery
  • FB
  • TW
  • Linkdin
  • Whatsapp
16
ಹಾಟ್​ ನಟಿ ಮಂದಾಕಿನಿ
Image Credit : Social Media

ಹಾಟ್​ ನಟಿ ಮಂದಾಕಿನಿ

80-90ರ ದಶಕದ ಹಾಟ್​ ನಟಿ ಮಂದಾಕಿನಿ, ಬಾಲಿವುಡ್‌ನ ಒಂದು ಕಾಲದ ಬಹು ಬೇಡಿಕೆಯ ನಟಿ. ಈಕೆಯ ಕಾಲ್‌ಶೀಟ್‌ಗಾಗಿ ಹೀರೋಗಳು, ನಿರ್ಮಾಪಕರು, ನಿರ್ದೇಶಕರು ಕೂಡ ಕಾದು ನಿಲ್ಲುತ್ತಿದ್ದರು. ಆಮೇಲೆ ವಿಧಿ ಹಾಗೂ ಕಾಲ ಈಕೆಯನ್ನು ಎಲ್ಲೆಲ್ಲಿಗೋ ಒಯ್ದು ಬಿಟ್ಟಿತು. ಈಕೆಯ ಜೀವನದಲ್ಲಿ ನಡೆದ ಪರಿವರ್ತನೆಗಳನ್ನು ನೋಡುವುದು ಕುತೂಹಲಕಾರಿ. ಮಂದಾಕಿನಿ ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಒಮ್ಮೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ಕಾಣಿಸಿಕೊಂಡರು. ಮುಂದೆ ಅದೇ ಆಕೆಯ ಕರಿಯರ್‌ಗೆ ಮುಳುವಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದಾವೂದ್ ಇಬ್ರಾಹಿಂನೊಂದಿಗೆ ಥಳಕು
Image Credit : SOCIAL MEDIA

ದಾವೂದ್ ಇಬ್ರಾಹಿಂನೊಂದಿಗೆ ಥಳಕು

1994ರಲ್ಲಿ ನಡೆದ ಘಟನೆಯ ಬಳಿಕ ಮಂದಾಕಿನಿಯ ಹೆಸರು ದಾವೂದ್ ಇಬ್ರಾಹಿಂನೊಂದಿಗೆ ಸೇರಿಕೊಳ್ಳಲಾರಂಭಿಸಿತು. ಆಕೆಯ ಚಲನಚಿತ್ರ ಕರಿಯರ್ ಇಳಿಮುಖವಾಗಲು ಪ್ರಾರಂಭಿಸಿತು. ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ದಾವೂದ್ ಇಬ್ರಾಹಿಂ ಜೊತೆಗಿದ್ದ ಮಂದಾಕಿನಿಯ ಚಿತ್ರಗಳು ಕಾಣಿಸಿಕೊಂಡಾಗ ಎಲ್ಲೆಡೆ ಸಂಚಲನ ಉಂಟಾಯಿತು. ದಾವೂದ್ ಜೊತೆ ಮಂದಾಕಿನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಮಾತುಗಳು ಇಂಡಸ್ಟ್ರಿಯಲ್ಲಿ ಹರಿದಾಡಿದವು. ದಾವೂದ್ ಜೊತೆ ಮಂದಾಕಿನಿ ಇರುವ ಈ ಚಿತ್ರಗಳು ಆಗ ವೈರಲ್ ಆಗಿದ್ದವು.

Related Articles

Related image1
ನಟಿ ಮೇಘಾ ಶೆಟ್ಟಿ ಕ್ಯೂಟ್​ ಫೋಟೋಶೂಟ್​: ಪಡ್ಡೆಗಳ ನಿದ್ದೆಗೆಡಿಸಿದ 'ಜೊತೆ ಜೊತೆಯಲಿ' ತಾರೆ
Related image2
ಅಮ್ಮನಾದ ಮೇಲೆ ದೇಹ ಬದಲಾವಣೆ: ಕತ್ರಿನಾ ಕೈಫ್​ ಬಾಡಿ ಷೇಮಿಂಗ್​ ಮಾಡ್ತಿರೋರ ಚಳಿ ಬಿಡಿಸಿದ ನಟಿ ರಮ್ಯಾ
36
ಫೋಟೋ ಕುರಿತು ಸ್ಪಷ್ಟನೆ
Image Credit : instagram

ಫೋಟೋ ಕುರಿತು ಸ್ಪಷ್ಟನೆ

ಇದೀಗ ಮಂದಾಕಿನಿ ಅವರಿಗೆ 63 ವರ್ಷ ವಯಸ್ಸು. ಇದೀಗ 1990ರ ದಶಕದಲ್ಲಿ ಸೆರೆಯಾಗಿದ್ದ ದಾವೂದ್​ ಇಬ್ರಾಹಿಂ ಜೊತೆಗಿನ ಫೋಟೋ ಕುರಿತು ANI ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ತಮಗೆ ದಾವೂದ್ ಇಬ್ರಾಹಿಂ ಯಾವುದೇ ವೈಯಕ್ತಿಕ ಆಹ್ವಾನ ನೀಡಿರಲಿಲ್ಲ, ಬದಲಿಗೆ ತಾವು ಶೋಗೆ ದುಬೈಗೆ ತೆರಳಿದ್ದಾಗಿ ಮಂದಾಕಿನಿ ಹೇಳಿದ್ದಾರೆ. ಅಲ್ಲಿ ಅವರೂ ಬಂದಿದ್ದರು, ನಾನೂ ಹೋಗಿದ್ದೆ ವಿನಾ, ಈ ಕುರಿತು ಮೊದಲೇ ತಿಳಿದಿರಲಿಲ್ಲ. ಜನರು ಏನೆಲ್ಲಾ ಮಾತನಾಡಿಕೊಳ್ಳುತ್ತಾರೆ ಅಥವಾ ಬರೆಯುತ್ತಾರೆ ಎಂಬುದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ. ಒಬ್ಬ ಕಲಾವಿದೆಯಾಗಿ ನಾವು ಸಾರ್ವಜನಿಕವಾಗಿ ಅನೇಕ ಜನರನ್ನು ಭೇಟಿಯಾಗಬೇಕಾಗುತ್ತದೆ ಎಂದಿದ್ದಾರೆ.

46
ಸಿನಿಮಾರಂಗದ ಹಾದಿಗೆ ಹಾನಿ
Image Credit : Mandakini Thakur FACE BOOK

ಸಿನಿಮಾರಂಗದ ಹಾದಿಗೆ ಹಾನಿ

ಆ ವಿವಾದದಿಂದ ನನ್ನ ಸಿನಿಮಾರಂಗದ ಹಾದಿಗೆ ಸಾಕಷ್ಟು ಹಾನಿಯಾಯಿತು. ಅಂತಹ ಸಂದರ್ಭಗಳಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಅಥವಾ ವದಂತಿಗಳನ್ನು ಎದುರಿಸಲು ಒಂದು ಸರಿಯಾದ ಮ್ಯಾನೇಜ್‌ಮೆಂಟ್ ತಂಡವಿರಬೇಕು ಎಂಬುದು ನನಗೆ ತಡವಾಗಿ ಅರಿವಾಯಿತು. ನಾನು ಆ ಸಮಯದಲ್ಲಿ ಎಲ್ಲೆಡೆ ಆ ವದಂತಿಗಳನ್ನು ನಿರಾಕರಿಸುತ್ತಲೇ ಇದ್ದೆ, ಎಂದು ಅವರು ನೆನಪಿಸಿಕೊಂಡಿದ್ದಾರೆ.

56
ಹಣಕಾಸಿನ ಸುಳಿವು
Image Credit : instagram

ಹಣಕಾಸಿನ ಸುಳಿವು

80ರ ದಶಕದಲ್ಲಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದ್ದ ಭೂಗತ ಲೋಕದ ಪ್ರಭಾವ ಅಥವಾ ಹಣಕಾಸಿನ ನೆರವಿನ ಬಗ್ಗೆ ತಮಗೆ ಯಾವುದೇ ಸುಳಿವಿರಲಿಲ್ಲ ಎಂದ ನಟಿ, ನಂತರ ಬಂದ ಸಿನಿಮಾಗಳನ್ನು ನೋಡಿಯೇ ನನಗೆ ಈ ವಿಷಯಗಳ ಅರಿವಾಯಿತು ಎಂದಿದ್ದಾರೆ.

66
ರಾಮ್ ತೇರಿ ಗಂಗಾ ಮೈಲಿ ವಿವಾದ
Image Credit : instagram

ರಾಮ್ ತೇರಿ ಗಂಗಾ ಮೈಲಿ ವಿವಾದ

1985ರಲ್ಲಿ ರಾಜ್ ಕಪೂರ್ ನಿರ್ದೇಶನದ 'ರಾಮ್ ತೇರಿ ಗಂಗಾ ಮೈಲಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಮಂದಾಕಿನಿ, ಆ ಕಾಲದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ರಾಜ್ ಕಪೂರ್ ನಿರ್ದೇಶನದ ಈ ಚಿತ್ರವು ಭಾರಿ ಹಿಟ್ ಆಗಿತ್ತು. ಆದಾಗ್ಯೂ, ಚಿತ್ರದ ಹಲವಾರು ದೃಶ್ಯಗಳು ನಂತರ ಚರ್ಚೆ ಮತ್ತು ವಿವಾದದ ವಿಷಯವಾಯಿತು. ಮಂದಾಕಿನಿ ಅವರು ಬಿಳಿ ಸೀರೆಯಲ್ಲಿ ಚಿತ್ರೀಕರಿಸಲಾದ "ತುಜೆ ಬುಲಾಯೆನ್ ಯೇ ಮೇರಿ ಬೆಹೆನೇನ್" ಹಾಡಿನಲ್ಲಿ ಜಲಪಾತದ ದೃಶ್ಯ ಮತ್ತು ವಿವಾದಾತ್ಮಕ ಹಾಲುಣಿಸುವ ದೃಶ್ಯದ ಬಗ್ಗೆ ಮಾತನಾಡಿದರು. ಈ ದೃಶ್ಯಗಳ ಉದ್ದೇಶ ಚಿತ್ರದಲ್ಲಿ ಮುಗ್ಧತೆ ಮತ್ತು ಶುದ್ಧತೆಯನ್ನು ಚಿತ್ರಿಸುವುದು ಎಂದು ಅವರು ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಬಾಲಿವುಡ್
ಸಂಬಂಧಗಳು
ಪ್ರೀತಿ
 

Latest Videos
Recommended Stories
Recommended image1
'ಸಿಟಿ ಲೈಟ್ಸ್' ಜೀವನದಲ್ಲಿ ಹುಷಾರಾಗಿ ಇರಬೇಕು: ಬೀದಿ ದೀಪ ಅಯ್ಯೋ ಪಾಪ ಬದುಕು ಶಾಪ!
Recommended image2
ಹಳ್ಳಿಯಲ್ಲಿ ಶಾಲೆಯಿಲ್ಲ, ಮನುಷ್ಯರ ಅನಾಹುತಕ್ಕೆ ಪ್ರಾಣಿಗಳು ಹೊಣೆ: ಹೇಗಿದೆ 'ವಾರಿಯರ್' ಸಿನಿಮಾ?
Recommended image3
ಶಾಲಾ ದಿನಗಳ ಸ್ನೇಹ, ಪ್ರೇಮ, ತರ್ಲೆ ತಾಪತ್ರಯ: ಹೇಗಿದೆ ಶ್ರೀನಗರ ಕಿಟ್ಟಿ-ಮೇಘನಾ ರಾಜ್ ಸಿನಿಮಾ?
Related Stories
Recommended image1
ನಟಿ ಮೇಘಾ ಶೆಟ್ಟಿ ಕ್ಯೂಟ್​ ಫೋಟೋಶೂಟ್​: ಪಡ್ಡೆಗಳ ನಿದ್ದೆಗೆಡಿಸಿದ 'ಜೊತೆ ಜೊತೆಯಲಿ' ತಾರೆ
Recommended image2
ಅಮ್ಮನಾದ ಮೇಲೆ ದೇಹ ಬದಲಾವಣೆ: ಕತ್ರಿನಾ ಕೈಫ್​ ಬಾಡಿ ಷೇಮಿಂಗ್​ ಮಾಡ್ತಿರೋರ ಚಳಿ ಬಿಡಿಸಿದ ನಟಿ ರಮ್ಯಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved