ಒಂದಲ್ಲ, ಎರಡಲ್ಲ.. 'ಡಿಸಿ' ನಟಿಯ ಕೈಯಲ್ಲಿದೆ 8 ಸಿನಿಮಾಗಳು: ವಾಮಿಕಾ ಗಬ್ಬಿ ಹವಾ ಫುಲ್ ಜೋರು
ಡಿಸಿ ನಟಿ ವಾಮಿಕಾ ಗಬ್ಬಿ ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ‘ಗೂಢಚಾರಿ 2’, ‘ಪ್ರಹಾರ್’, ‘ಟಿಕಿ ಟಾಕ’, ‘ಇರವಾಕಲಂ’, ‘ಜೀನಿ’ ಸೇರಿದಂತೆ ಬರೋಬ್ಬರಿ 8 ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ಸಖತ್ ಬ್ಯುಸಿ
ಚಂಡಿಗಢ ಮೂಲದ ನಟಿ ವಾಮಿಕಾ ಗಬ್ಬಿ ಸದ್ಯ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ವಿಭಿನ್ನ ಭಾಷೆಗಳ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಅವರು, ಈಗ ಬಹುಬೇಡಿಕೆಯ ನಟಿಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬರೋಬ್ಬರಿ ಎಂಟು ಸಿನಿಮಾ
ಇತ್ತೀಚೆಗಷ್ಟೇ ‘ಡಿಸಿ’ ಸಿನಿಮಾದ ಮೂಲಕ ಗಮನ ಸೆಳೆದಿರುವ ವಾಮಿಕಾ ಗಬ್ಬಿ, ಸದ್ಯ ಒಂದಲ್ಲ, ಎರಡಲ್ಲ.. ಬರೋಬ್ಬರಿ ಎಂಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಪಂಜಾಬಿ ಚಿತ್ರರಂಗಗಳಲ್ಲಿ ಏಕಕಾಲಕ್ಕೆ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ.
‘ಗೂಢಚಾರಿ 2’ನಲ್ಲಿ ವಾಮಿಕಾ ಗಬ್ಬಿ
ವಾಮಿಕಾ ಗಬ್ಬಿ ನಟಿಸುತ್ತಿರುವ ಪ್ರಮುಖ ಸಿನಿಮಾಗಳಲ್ಲಿ ಉಜ್ವಲ್ ನಿಕಮ್ ಅವರ ಜೀವನವನ್ನು ಆಧರಿಸಿರುವ ಹಿಂದಿ ಸಿನಿಮಾ ‘ಪ್ರಹಾರ್’ ಕೂಡ ಒಂದು. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಸ್ಟಾರ್ ಯುವ ನಟ ಅಡವಿ ಶೇಷ್ ನಿರ್ದೇಶನದ ಬಹುನಿರೀಕ್ಷಿತ ‘ಗೂಢಚಾರಿ 2’ ಸಿನಿಮಾದಲ್ಲೂ ವಾಮಿಕಾ ಗಬ್ಬಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಅವರ ಕ್ರೇಜ್ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಸಾಲು ಸಾಲು ಅವಕಾಶ
ಮಲಯಾಳಂ ಚಿತ್ರರಂಗದಲ್ಲೂ ವಾಮಿಕಾ ಗಬ್ಬಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ‘ಟಿಕಿ ಟಾಕ’ ಎಂಬ ಮಲಯಾಳಂ ಸಿನಿಮಾದಲ್ಲಿ ಅವರು ನಟಿಸುತ್ತಿದ್ದು, ಇದು ಮಲಯಾಳಂನಲ್ಲಿ ಅವರ ಎರಡನೇ ಸಿನಿಮಾ ಎನ್ನಲಾಗಿದೆ. ಇನ್ನು ತಮಿಳು ಚಿತ್ರರಂಗದಲ್ಲೂ ವಾಮಿಕಾ ಗಬ್ಬಿಗೆ ಸಾಲು ಸಾಲು ಅವಕಾಶಗಳಿವೆ. ‘ಇರವಾಕಲಂ’ ಮತ್ತು ‘ಜೀನಿ’ ಎಂಬ ಎರಡು ತಮಿಳು ಸಿನಿಮಾಗಳಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪಂಜಾಬಿಯಲ್ಲೂ ಬ್ಯುಸಿ
ಹಿಂದಿಯಲ್ಲೂ ವಾಮಿಕಾ ಗಬ್ಬಿ ಬ್ಯುಸಿಯಾಗಿದ್ದಾರೆ. ‘ದಿಲ್ ಕಾ ದರ್ವಾಜಾ ಖೋಲ್ನಾ ಡಾರ್ಲಿಂಗ್’ ಹಾಗೂ ‘ಕೂಕು ಕಿ ಕುಂಡ್ಲಿ’ ಸಿನಿಮಾಗಳಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಇಷ್ಟಕ್ಕೆ ವಾಮಿಕಾ ಅವರ ಸಿನಿಮಾ ಪಯಣ ನಿಲ್ಲುವುದಿಲ್ಲ. ತಮ್ಮ ಮಾತೃಭಾಷೆಯ ಚಿತ್ರರಂಗವಾದ ಪಂಜಾಬಿಯಲ್ಲೂ ಅವರು ಬ್ಯುಸಿಯಾಗಿದ್ದು, ‘ಕಿಕ್ಲಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಸದ್ದು
ಹೀಗೆ ಒಂದೇ ಸಮಯದಲ್ಲಿ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಮೂಲಕ ವಾಮಿಕಾ ಗಬ್ಬಿ ದಕ್ಷಿಣ ಭಾರತ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ಪಾತ್ರಗಳು ಮತ್ತು ಸಾಲು ಸಾಲು ಸಿನಿಮಾಗಳ ಮೂಲಕ ಮುಂದಿನ ದಿನಗಳಲ್ಲಿ ವಾಮಿಕಾ ಗಬ್ಬಿ ಇನ್ನಷ್ಟು ಸದ್ದು ಮಾಡುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

