- Home
- Entertainment
- ₹2,500 ಕೋಟಿ ನಷ್ಟವಾದರೂ ನಂ.1 ಶ್ರೀಮಂತ ನಟ ಸ್ಥಾನ ಉಳಿಸಿಕೊಂಡ ಶಾರುಖ್ ಖಾನ್; ನಂ.2 ನಟನ ಬಳಿ ಅರ್ಧದಷ್ಟು ಹಣವಿಲ್ಲ!
₹2,500 ಕೋಟಿ ನಷ್ಟವಾದರೂ ನಂ.1 ಶ್ರೀಮಂತ ನಟ ಸ್ಥಾನ ಉಳಿಸಿಕೊಂಡ ಶಾರುಖ್ ಖಾನ್; ನಂ.2 ನಟನ ಬಳಿ ಅರ್ಧದಷ್ಟು ಹಣವಿಲ್ಲ!
ಕಳೆದೊಂದು ವರ್ಷದಲ್ಲಿ ಭರ್ಜರಿ 2,500 ಕೋಟಿ ರು. ಹಣವನ್ನುಯ ನಷ್ಟ ಮಾಡಿಕೊಂಡರೂ ಸಹ ಭಾರತದ ನಂಬರ್ 1 ಶ್ರೀಮಂತ ನಟರ ಸ್ಥಾನವನ್ನು ಬಾಲಿವುಡ್ ಬಾದ್‌ಶಾ ಖ್ಯಾತಿಯ ಶಾರುಖ್ ಖಾನ್ ಉಳಿಸಿಕೊಂಡಿದ್ದಾರೆ. ಅವರ ಆಸ್ತಿ ಮೌಲ್ಯವೆಷ್ಟು? ಉಳಿದಂತೆ ನಂಬರ್ 2,3 ಹಾಗೂ 4ನೇ ಸ್ಥಾನದಲ್ಲಿ ಯಾರಿದ್ದಾರೆ ನೋಡಿ.

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮತ್ತೊಮ್ಮೆ ದೇಶದ ಅತಿ ಶ್ರೀಮಂತ ನಟ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. 'ಹರೂನ್ ಇಂಡಿಯಾ 2026' ನೇ ಸಾಲಿನ ಭಾರತದ ಶ್ರೀಮಂತ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಬರೋಬ್ಬರಿ 10,000 ಕೋಟಿ ರೂಪಾಯಿಗಳ ಆಸ್ತಿ ಹೊಂದಿರುವ ಮೂಲಕ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶಾರುಖ್ ಖಾನ್ ಅವರ ಒಟ್ಟು ಆಸ್ತಿಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕಳೆದ ವರ್ಷ ಅವರ ಒಟ್ಟು ಆಸ್ತಿ ಮೌಲ್ಯ 12,490 ಕೋಟಿ ರೂಪಾಯಿಗಳಷ್ಟಿತ್ತು. ಈ ವರ್ಷ ಅದು 10,000 ಕೋಟಿ ರೂ.ಗೆ ಕುಸಿದಿದ್ದರೂ, ಅವರು ನೂತನ ಪಟ್ಟಿಯಲ್ಲೂ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆಸ್ತಿಯಲ್ಲಿ ಅವರ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ 'ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್', ಐಪಿಎಲ್ ಕ್ರಿಕೆಟ್ ತಂಡ 'ಕೋಲ್ಕತಾ ನೈಟ್‌ರೈಡರ್ಸ್' (KKR) ಹಾಗೂ ಇತರ ಹೂಡಿಕೆಗಳು ಮತ್ತು ವ್ಯವಹಾರಗಳ ಗಳಿಕೆ ಸೇರಿದೆ.
ಪರದೆ ಹಿಂದಿನ ಇತರೆ ಶ್ರೀಮಂತ ನಟರು ಯಾರು?
2ನೇ ಸ್ಥಾನ: ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ಅವರು 4,000 ಕೋಟಿ ರೂಪಾಯಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
3ನೇ ಸ್ಥಾನ: ಬಾಲಿವುಡ್‌ನ ಭಾಯಿಜಾನ್ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್ 3,000 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದಾರೆ.
4ನೇ ಸ್ಥಾನ: ಡ್ಯಾನ್ಸಿಂಗ್ ಸ್ಟಾರ್ ಹೃತಿಕ್ ರೋಷನ್ 2,500 ಕೋಟಿ ರೂಪಾಯಿ ಆಸ್ತಿಯೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸಿನಿಮಾ ರಂಗದ ಜೊತೆಗೆ ಬ್ಯುಸಿನೆಸ್ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಮೂಲಕ ಈ ನಟರು ದೇಶದ ಶ್ರೀಮಂತ ಸೆಲೆಬ್ರಿಟಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹರೂನ್ ಇಂಡಿಯಾ ವರದಿ ತಿಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

