MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • Tatto ಕಥೆ, ಸೌಂದರ್ಯ ಜೊತೆ: ಮೈಮೇಲಿನ ಒಂದೊಂದು ಹಚ್ಚೆಗೂ ಒಂದೊಂದು ಕಥೆ ಹೇಳಿದ Bigg Boss ಬೋಲ್ಡ್ ಬ್ಯೂಟಿ

Tatto ಕಥೆ, ಸೌಂದರ್ಯ ಜೊತೆ: ಮೈಮೇಲಿನ ಒಂದೊಂದು ಹಚ್ಚೆಗೂ ಒಂದೊಂದು ಕಥೆ ಹೇಳಿದ Bigg Boss ಬೋಲ್ಡ್ ಬ್ಯೂಟಿ

ಬಿಗ್‌ಬಾಸ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ ತಮ್ಮ ಮೈಮೇಲಿರುವ ಟ್ಯಾಟೂಗಳ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಉಸಿರಿನ ಸಂಕೇತ, ಬುದ್ಧ ಮತ್ತು ನೃತ್ಯದ ಶ್ರೇಷ್ಠತೆಯನ್ನು ಸಾರುವ ಸಂಸ್ಕೃತ ಶ್ಲೋಕದ ಟ್ಯಾಟೂಗಳ ಅರ್ಥವನ್ನು ಅವರು ವಿವರಿಸಿದ್ದಾರೆ.

2 Min read
Author : Suchethana D
Published : Sep 18 2026, 07:07 PM IST
Share this Photo Gallery
  • FB
  • TW
  • Linkdin
  • Whatsapp
16
ಟ್ಯಾಟೂ ಪ್ರೇಮಿ ಸೌಂದರ್ಯ
Image Credit : colorskannadaofficial Instagram

ಟ್ಯಾಟೂ ಪ್ರೇಮಿ ಸೌಂದರ್ಯ

ಬಿಗ್​ಬಾಸ್​ 13 (Bigg Boss 13)ರ ಪ್ರೊಮೋ ರಿಲೀಸ್​ ಆದಾಗ, ಟ್ಯಾಟೂ ಮೂಲಕವೇ ಇಂಟ್ರಡ್ಯೂಸ್​ ಮಾಡಿದ್ದ ಬ್ಯೂಟಿಯೇ ಮಂದಳೂರು ಮೂಲದ, ಸೌಂದರ್ಯ ಶೆಟ್ಟಿ. ಸಖತ್ ಬೋಲ್ಡ್ ಆಗಿರೋ ಸೌಂದರ್ಯ, ಫಿಟ್‌ನೆಸ್ ಪ್ರೇಮಿಯೂ ಹೌದು. ಈಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಇವರ ಮೈತುಂಬಾ ಇರುವ ಹಚ್ಚೆಯ ಗುಟ್ಟನ್ನು ಬಿಚ್ಚಿಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಉಸಿರಿನ ಸಂಕೇತ
Image Credit : colorskannadaofficial Instagram

ಉಸಿರಿನ ಸಂಕೇತ

Tatto ಕಥೆ, ಸೌಂದರ್ಯ ಜೊತೆ ಎನ್ನುವ ಕ್ಯಾಪ್ಷನ್​ ನೀಡಿ, ಸೌಂದರ್ಯ ಅವರ ಟ್ಯಾಟೂ ಕಥೆಯನ್ನು ತೋರಿಸಲಾಗಿದೆ. ಕೈತುಂಬಾ ಇರುವ ಟ್ಯಾಟೂಗಳಲ್ಲಿ ಕೆಲವೊಂದು ಟೈಮ್​ಪಾಸ್​ ಟ್ಯಾಟೂ ಅಂದಿದ್ದಾರೆ. ಬಲಗೈಯಲ್ಲಿ ಇರುವ ಟ್ಯಾಟೂ ಒಂದು ಉಸಿರಿನ ಸಂಕೇತ. ನಾವು ಎಂದಿಗೂ ಉಸಿರಿನ ಜೊತೆ ಇರುತ್ತೇವೆ ಎನ್ನುವುದರ ಸಂಕೇತ ಎಂದಿದ್ದಾರೆ.

Related Articles

Related image1
Bigg Boss ಮನೆಯೊಳಗೆ ನಟಿ ವೈಷ್ಣವಿ ಕೌಂಡಿನ್ಯ ಮದುವೆ ಮಾತುಕತೆ: ಕನಸಿನ ಹುಡುಗನ ಬಗ್ಗೆ ಮನಬಿಚ್ಚಿ ಮಾತು
Related image2
Bigg Boss ಟ್ರೋಫಿ ಬೇಡವೆಂದು 7 ಬಿಳಿ ಕುದುರೆಗೆ ಮ್ಯಾನಿಫೆಸ್ಟ್- ತಲೆ ಬಳಿಯೇ ಬಂದ ಹಾವು : ರೋಚಕ ಘಟನೆ ನೆನೆದ ಆನಂದ್​
36
ಸಂಸ್ಕೃತ ಶ್ಲೋಕ ಹೇಳಿದ ಸೌಂದರ್ಯ
Image Credit : Others

ಸಂಸ್ಕೃತ ಶ್ಲೋಕ ಹೇಳಿದ ಸೌಂದರ್ಯ

ಒಂದು ಬುದ್ಧನನ್ನು ಪ್ರತಿನಿಧಿಸುವ ಟ್ಯಾಟೂ ಎಂದಿದ್ದರೆ, ಸೊಂಟದ ಮೇಲಿನ ಟ್ಯಾಟೂ ಒಂದನ್ನು ತೋರಿಸಿ ಸಂಸ್ಕೃತ ಶ್ಲೋಕವನ್ನು ಹೇಳಿದ್ದಾರೆ. ಸೌಂದರ್ಯಂಗೆ ನೃತ್ಯವೇ ಸುಂದರ ಎನ್ನುವುದು ಇದರ ತಾತ್ಪರ್ಯ. ಆದ್ದರಿಂದ ಸೌಂದರ್ಯ ಹೆಸರಿನ ನನಗೆ ನೃತ್ಯವೇ ಶ್ರೇಷ್ಠ ಎನ್ನುವುದನ್ನು ಈ ಟ್ಯಾಟೂ ತೋರಿಸುತ್ತದೆ ಎಂದಿದ್ದಾರೆ.

46
ಸೌಂದರ್ಯ ಶೆಟ್ಟಿ ಕುರಿತು
Image Credit : Colors Kannada

ಸೌಂದರ್ಯ ಶೆಟ್ಟಿ ಕುರಿತು

ಇನ್ನು ಸೌಂದರ್ಯ ಶೆಟ್ಟಿ (Bigg Boss Soundarya Shetty) ಕುರಿತು ಹೇಳುವುದಾದರೆ, ಅವರೇ ತಮ್ಮನ್ನು ಬಿಗ್​ಬಾಸ್​ನಲ್ಲಿ ಹೀಗೆ ಇಂಟ್ರಡ್ಯೂಸ್​ ಮಾಡಿಕೊಂಡಿದ್ದರು. ನಾನು ತುಂಬಾ ಕನ್ಫಿಡೆಂಟ್, ಸ್ಟೈಲಿಶ್ ಹುಡುಗಿ. ನಾನು ಹುಟ್ಟಿದ್ದು ಮಸ್ಕಟ್‌ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಸದ್ಯ ನಾನು ಇರೋದು ಮುಂಬೈನಲ್ಲಿ. ನಾನು ಕರ್ನಾಟಕದವಳು. ನನಗೆ ಕನ್ನಡಿಗರ ಸಪೋರ್ಟ್ ಬೇಕು. ಕನ್ನಡಿಗರ ಪ್ರೀತಿ ಬೇಕು. ನನ್ನನ್ನ ಕನ್ನಡಿಗರು ಇಷ್ಟ ಪಡ್ತಾರೆ ಅಂದುಕೊಳ್ತೀನಿ’’ ಎಂದಿದ್ದರು.

56
ಡ್ಯಾನ್ಸ್ ನನ್ನ ವೈಬ್‌
Image Credit : Social Media

ಡ್ಯಾನ್ಸ್ ನನ್ನ ವೈಬ್‌

‘’ನನಗೆ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್, ಸ್ಟೈಲಿಂಗ್ ಅಂದ್ರೆ ಇಷ್ಟ. ವೀಕೆಂಡ್‌ ಬಂತೂಂದ್ರೆ ಪಾರ್ಟಿ, ನೈಟ್ ಲೈಫ್, ಮ್ಯೂಸಿಕ್, ಡ್ಯಾನ್ಸ್ ನನ್ನ ವೈಬ್‌ ಎಂದಿದ್ದರು. ನನಗೆ ಟ್ರಾವೆಲ್ ಮಾಡೋದು ಇಷ್ಟ. ಎಲ್ಲೇ ಟ್ರಾವೆಲ್ ಮಾಡಿದರೂ, ಅಲ್ಲಿಂದ ಒಂದು ಮೆಮೊರಿ ತರ್ತೀನಿ. ನನ್ನ ಮೈಮೇಲೆ ಇರುವ ಒಂದೊಂದು ಟ್ಯಾಟೂಗೂ ಒಂದೊಂದು ಸ್ಟೋರಿ ಇದೆ’’ ಎಂದಿದ್ದರು ಸೌಂದರ್ಯ ಶೆಟ್ಟಿ.

66
ಇದ್ದದ್ದನ್ನೆಲ್ಲಾ ನೇರವಾಗಿ ಹೇಳ್ತೀನಿ
Image Credit : Social Media

ಇದ್ದದ್ದನ್ನೆಲ್ಲಾ ನೇರವಾಗಿ ಹೇಳ್ತೀನಿ

‘’ನಾನು ಅನಿಸಿದ್ದನ್ನ ನೇರವಾಗಿ ಹೇಳಿಬಿಡ್ತೀನಿ. ಮೈಂಡ್‌ನಿಂದ ಆಡೋಕೆ ಇಳಿದರೆ, ಎಲ್ಲರನ್ನ ಖಂಡಿತ ಮ್ಯೂನಿಪುಲೇಟ್ ಮಾಡ್ತೀನಿ. ನಾನು ಇದ್ದ ‘ಸ್ಪ್ಲಿಟ್ಸ್ ವಿಲ್ಲಾ ಸೀಸನ್ 16’ ಬ್ಲಾಕ್ ಬಸ್ಟರ್ ಆಯ್ತು. ಈಗ ಕರ್ನಾಟಕದಲ್ಲೂ ನನಗೆ ಜನರ ಪ್ರೀತಿ ಬೇಕಿದೆ’’ ಅಂತಂದಿದ್ದಾರೆ ಸೌಂದರ್ಯ ಶೆಟ್ಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಕಲರ್ಸ್ ಕನ್ನಡ
ಸೌಂದರ್ಯ ಶೆಟ್ಟಿ
ಟಿವಿ ಶೋ
ರಿಯಾಲಿಟಿ ಶೋ
 

Latest Videos
Recommended Stories
Recommended image1
ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!
Recommended image2
ಅಮ್ಮನಾದ ಮೇಲೆ ದೇಹ ಬದಲಾವಣೆ: ಕತ್ರಿನಾ ಕೈಫ್​ ಬಾಡಿ ಷೇಮಿಂಗ್​ ಮಾಡ್ತಿರೋರ ಚಳಿ ಬಿಡಿಸಿದ ನಟಿ ರಮ್ಯಾ
Recommended image3
ಅಜಿತ್ ‘ಡೇರ್ ಡೆವಿಲ್’ನಿಂದ ಮೋಹನ್‌ಲಾಲ್ ಔಟ್: ಇವರ ಜಾಗಕ್ಕೆ ಬರ್ತಿದ್ದಾರಾ ಕಿಚ್ಚ ಸುದೀಪ್?
Related Stories
Recommended image1
Bigg Boss ಮನೆಯೊಳಗೆ ನಟಿ ವೈಷ್ಣವಿ ಕೌಂಡಿನ್ಯ ಮದುವೆ ಮಾತುಕತೆ: ಕನಸಿನ ಹುಡುಗನ ಬಗ್ಗೆ ಮನಬಿಚ್ಚಿ ಮಾತು
Recommended image2
Bigg Boss ಟ್ರೋಫಿ ಬೇಡವೆಂದು 7 ಬಿಳಿ ಕುದುರೆಗೆ ಮ್ಯಾನಿಫೆಸ್ಟ್- ತಲೆ ಬಳಿಯೇ ಬಂದ ಹಾವು : ರೋಚಕ ಘಟನೆ ನೆನೆದ ಆನಂದ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved