MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Entertainment
  • ಮದುವೆಯಾಗಿ ವರ್ಷವಾಗುತ್ತಲೇ ನಗುಮೊಗದಲ್ಲಿ Anchor Anushree: ಕ್ಯೂಟ್ ಫೋಟೋಶೂಟ್​ ಹಿಂದಿನ ರಹಸ್ಯವೇನು

ಮದುವೆಯಾಗಿ ವರ್ಷವಾಗುತ್ತಲೇ ನಗುಮೊಗದಲ್ಲಿ Anchor Anushree: ಕ್ಯೂಟ್ ಫೋಟೋಶೂಟ್​ ಹಿಂದಿನ ರಹಸ್ಯವೇನು

ಆ್ಯಂಕರಿಂಗ್ ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಅನುಶ್ರೀ, ಪತಿ ರೋಷನ್ ಜೊತೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಡಿಸಿದ ವಿಶೇಷ ಫೋಟೋಶೂಟ್, ಅಭಿಮಾನಿಗಳಲ್ಲಿ 'ಗುಡ್ ನ್ಯೂಸ್' ಕುರಿತ ಕುತೂಹಲವನ್ನು ಹೆಚ್ಚಿಸಿದೆ.

2 Min read
Author : Suchethana D
Published : Sep 05 2026, 05:38 PM IST
Share this Photo Gallery
  • FB
  • TW
  • Linkdin
  • Whatsapp
16
ಆ್ಯಂಕರಿಂಗ್​ ಕ್ಷೇತ್ರದ ತಾರೆ
Image Credit : Anchor Anushree Instagram

ಆ್ಯಂಕರಿಂಗ್​ ಕ್ಷೇತ್ರದ ತಾರೆ

ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಎಂದರೆ ಅವರು ಆ್ಯಂಕರ್​ ಅನುಶ್ರೀ (Anchor Anushree). ಆ್ಯಂಕರಿಂಗ್​ ಎನ್ನುವ ಕಲೆ ಬೇಕು ಎಂದರೆ ಕರಗತವಾಗುವಂಥದ್ದಲ್ಲ. ಅದರಲ್ಲಿಯೂ ರಿಯಾಲಿಟಿ ಷೋ ಸಕ್ಸಸ್​ ಮಾಡುವಲ್ಲಿ ಆ್ಯಂಕರ್ಸ್​ ಪಾತ್ರ ಬಹು ಮುಖ್ಯವಾಗಿರುತ್ತದೆ. ಅವರಿಗೆ ಹೀಗೆಯೇ ಮಾತನಾಡಬೇಕು ಎಂದು ಮೊದಲೇ ಸ್ಕ್ರಿಪ್ಟ್​ ನೀಡುತ್ತಾರೆಯಾದರೂ, ಎಲ್ಲವೂ ಸ್ಕ್ರಿಪ್ಟ್​ನಿಂದಲೇ ನಡೆಯುವಂಥ ಕಲೆ ಆ್ಯಂಕರಿಂಗ್​ ಅಲ್ಲ. ಆ ಕ್ಷಣದಲ್ಲಿ, ಆ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವ, ಜನರನ್ನು ನಗಿಸುವ ಕಲೆ ಸುಲಭವೂ ಅಲ್ಲ. ಅದು ಒಲಿದಿರುವುದು ಆ್ಯಂಕರ್​ ಅನುಶ್ರೀ ಅವರಂಥ ಕೆಲವೇ ಕೆಲವು ಆ್ಯಂಕರ್​ಗಳಿಗೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮನ ಮೆಚ್ಚಿದ ಜೋಡಿ
Image Credit : Anchor Anushree Instagram

ಮನ ಮೆಚ್ಚಿದ ಜೋಡಿ

ಆ್ಯಂಕರ್​ ಅನುಶ್ರೀ ಅವರು ಸದ್ಯ ತಾವು ಮನಮೆಚ್ಚಿದ ಹುಡುಗ ರೋಷನ್​ ಅವರನ್ನು ಮದುವೆಯಾಗಿ ಸುಖಮಯ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಹಲವು ವರ್ಷಗಳಿಂದ ಅನುಶ್ರೀ ಎಲ್ಲಿಯೇ ಹೋದರೂ ಅವರಿಗೆ ಎದುರಾಗುತ್ತಿದ್ದ ಪ್ರಶ್ನೆ ಒಂದೇ. ಅದು ಮದುವೆ ಯಾವಾಗ ಎನ್ನುವುದು. ಎರಡು ವರ್ಷಗಳಿಂದ ಅನುಶ್ರೀ ಅವರು ರೋಷನ್​ ಅವರ ಜೊತೆ ಫ್ರೆಂಡ್​ಷಿಪ್​ನಲ್ಲಿ ಇದ್ದರೂ ಈ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಒಂದೇ ಸಲ ಮದುವೆಯ ಬಗ್ಗೆ ಮಾತನಾಡಿ ಸರ್​ಪ್ರೈಸ್​ ಕೊಟ್ಟಿದ್ದರು.

Related Articles

Related image1
Bigg Boss ಮನೆಯಲ್ಲಿದ್ದಾಗ ಲವ್​ ಮಾಡಿದ್ರು, ಹೊರಗೆ ಬಂದು ಮೋಸ ಮಾಡಿದ್ರು: ಕಣ್ಣೀರು ಹಾಕಿದ ಇಶಾನಿ
Related image2
Amruthadhaare ಜೈದೇವನ ಕೊಲೆಗೆ ಕಾರಣ ಮದುವೆನಾ, ಬಿಗ್​ಬಾಸಾ? ಏನಿದು ಅಸಲಿ ವಿಷ್ಯ
36
ಮೊದಲ ವಿವಾಹ ವಾರ್ಷಿಕೋತ್ಸವ
Image Credit : Anchor Anushree Instagram

ಮೊದಲ ವಿವಾಹ ವಾರ್ಷಿಕೋತ್ಸವ

ಇದೀಗ ಅನುಶ್ರೀ ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದಾಗಲೇ ವಿದೇಶದಲ್ಲಿ ಪತಿಯ ಜೊತೆ ಸುತ್ತಾಡಿ ಮಾಡಿ ಬಂದಿರುವ ನಟಿ, ಇದೀಗ ನಗುಮೊಗದಿಂದ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಇದರ ವಿಶೇಷ ಏನು ಎಂದು ಪ್ರಶ್ನಿಸುತ್ತಿದ್ದಾರೆ ಅನು ಫ್ಯಾನ್ಸ್​.

46
ಗುಡ್​ನ್ಯೂಸ್​ ಯಾವಾಗ?
Image Credit : Anchor Anushree Instagram

ಗುಡ್​ನ್ಯೂಸ್​ ಯಾವಾಗ?

ಅಷ್ಟಕ್ಕೂ ಅನುಶ್ರೀ ಅವರು ಮದುವೆಯಾಗುವ ಮುನ್ನ ಮದುವೆ ಯಾವಾಗ ಯಾವಾಗ ಎಂದು ಹೋದಲ್ಲಿ, ಬಂದಲ್ಲಿ ಪ್ರಶ್ನೆ ಎದುರಾಗುತ್ತಿತ್ತು. ಇದೀಗ ಮದುವೆಯಾಗಿ ವರ್ಷವಾಗಿದೆ. ಗುಡ್​ನ್ಯೂಸ್​ ಯಾವಾಗ ಎಂದುಪ್ರಶ್ನಿಸುತ್ತಿದ್ದಾರೆ. ಇದೀಗ ಈ ಕ್ಯೂಟ್​ ಫೋಟೋಶೂಟ್​ಗೂ ಅದೇ ಪ್ರಶ್ನೆ ಎದುರಾಗಿದೆ. ಏನಾದರೂ ವಿಶೇಷನಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

56
ಮುಳ್ಳಿನ ಹಾದಿ
Image Credit : Anchor Anushree Instagram

ಮುಳ್ಳಿನ ಹಾದಿ

18ನೇ ವಯಸ್ಸಿನಲ್ಲಿಯೇ ಆ್ಯಂಕರಿಂಗ್​ ಕ್ಷೇತ್ರಕ್ಕೆ ಬಂದಿರೋ ಅನುಶ್ರೀ ಅವರ ಈ ಪಯಣಕ್ಕೆ ಇದೀಗ 20 ವರ್ಷಗಳ ಸಂಭ್ರಮ. ಈ ಸಂದರ್ಭದಲ್ಲಿ, ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನೆದು ಅನುಶ್ರೀ ಜೀ ಕನ್ನಡ ವೇದಿಕೆಯಲ್ಲಿ ಭಾವುಕರಾಗಿದ್ದರು. ವೇದಿಕೆಯ ಮೇಲೆಯೇ ಕಣ್ಣೀರಾದರು. ಅನುಶ್ರೀ ಅವರು ಇಂದು ಈ ಮಟ್ಟಕ್ಕೆ ಬೆಳೆಯಬೇಕು ಎಂದರೆ, ಅದರ ಹಿಂದೆ ನೋವಿನ ಹಾದಿಗಳಿವೆ, ಮುಳ್ಳಿನ ಮೇಲೆ ನಡೆದ ದಿನಗಳಿವೆ. ಅದನ್ನೇ ನೆನೆದು ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ, ಇದೀಗ ಎಲ್ಲವನ್ನೂ ಮರೆತು ಪತಿಯ ಜೊತೆ ಸಂತಸದ ದಿನಗಳನ್ನು ಅನುಭವಿಸುತ್ತಿದ್ದಾರೆ. ಇವರಿಗೆ ಅಭಿಮಾನಿಗಳ ಪ್ರೀತಿಯ ಹಾರೈಕೆಯೂ ಜೊತೆಗಿದೆ.

66
ಗಗನಸಖಿ ಆಗುವ ಬಯಕೆ
Image Credit : Anchor Anushree Instagram

ಗಗನಸಖಿ ಆಗುವ ಬಯಕೆ

ಅಷ್ಟಕ್ಕೂ ಅನುಶ್ರೀ ಅವರಿಗೆ ಗಗನಸಖಿ ಆಗಬೇಕು ಎನ್ನುವ ಅದಮ್ಯ ಬಯಕೆ ಇತ್ತಂತೆ. ಅದಕ್ಕಾಗಿ ಕಂಡಕಂಡ ಜ್ಯೋತಿಷಿಗಳಿಗೆ ಜಾತಕ ತೋರಿಸುತ್ತಿದ್ದರಂತೆ. ಅವರು ನೀನು ತುಂಬಾ ಎತ್ತರಕ್ಕೆ ಹೋಗುತ್ತೀ ಎಂದಿದ್ದರು. ನಾನು ಎತ್ತರ ಎಂದಾಕ್ಷಣ ಆಕಾಶ ಎಂದುಕೊಂಡಿದ್ದೆ, ಗಗನಸಖಿ ಆಗ್ತೇನೆ ಎಂದು ಅಂದುಕೊಂಡಿದ್ದೆ ಎಂದು ಚಂದನ ವಾಹಿನಿಗೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟಿ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಂಕರ್ ಅನುಶ್ರೀ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ದೇವರೇ.. ದರ್ಶನ್ ಸಂಕಷ್ಟ ದೂರವಾಗಲಿ: ಮಗನಿಗಾಗಿ ವಿಶೇಷ ಪೂಜೆ ಸಲ್ಲಿಸಿದ ತಾಯಿ ಮೀನಾ ತೂಗುದೀಪ
Recommended image2
ಪಾತ್ರಕ್ಕಾಗಿ ದೇಹವನ್ನೇ ಬದಲಿಸಿಕೊಂಡ ನಟಿ… 58 ಕೆಜಿಯಿಂದ 72 ಕೆಜಿ, ಮತ್ತೆ Weight Loss!
Recommended image3
9ನೇ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ಮಿಂಚಿದ್ದ ಈ ಪುಟ್ಟ ಬಾಲಕಿ ಇಂದು ಸ್ಟಾರ್ ಹೀರೋಯಿನ್!
Related Stories
Recommended image1
Bigg Boss ಮನೆಯಲ್ಲಿದ್ದಾಗ ಲವ್​ ಮಾಡಿದ್ರು, ಹೊರಗೆ ಬಂದು ಮೋಸ ಮಾಡಿದ್ರು: ಕಣ್ಣೀರು ಹಾಕಿದ ಇಶಾನಿ
Recommended image2
Amruthadhaare ಜೈದೇವನ ಕೊಲೆಗೆ ಕಾರಣ ಮದುವೆನಾ, ಬಿಗ್​ಬಾಸಾ? ಏನಿದು ಅಸಲಿ ವಿಷ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved