Amruthadhaare ಜೈದೇವನ ಕೊಲೆಗೆ ಕಾರಣ ಮದುವೆನಾ, ಬಿಗ್ಬಾಸಾ? ಏನಿದು ಅಸಲಿ ವಿಷ್ಯ
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವನ ಪಾತ್ರವು ಅಂತ್ಯಗೊಂಡಿದೆ. ಜೀವಾ ಹೊಡೆತದಿಂದ ಸತ್ತಂತೆ ತೋರಿಸಲಾಗಿದ್ದು, ಈ ಪಾತ್ರದ ಅಂತ್ಯದ ಹಿಂದೆ ನಟ ರಾಣವ್ ಗೌಡ ಅವರ ಮದುವೆ ಅಥವಾ ಬಿಗ್ ಬಾಸ್ ಸ್ಪರ್ಧೆಯಂತಹ ಕಾರಣಗಳಿರಬಹುದೆಂದು ಊಹಿಸಲಾಗಿದೆ.

ಜೈದೇವನ ಅಂತ್ಯ
ಅಮೃತಧಾರೆಯಲ್ಲಿ (Amruthadhaare) ಜೈದೇವನ ಅಂತ್ಯ ಹಾಡಿದಂತೆ ತೋರಿಸಲಾಗಿದೆ. ಮಧುರಾ ಮತ್ತು ಮಿಂಚುವನ್ನು ಕಿಡ್ನ್ಯಾಪ್ ಮಾಡಿದ್ದ ಜೈದೇವ, ಮಿಂಚುವನ್ನು ಕೊಲ್ಲಲು ಬಂದ ಕಾರಣದಿಂದ ಆತನ ತಲೆಗೆ ಜೀವಾ ಹೊಡೆದಿದ್ದಾನೆ.
ಕಥೆ ಮುಗಿಯಿತು
ಈ ಸಂದರ್ಭದಲ್ಲಿ ಆತ ಬಿದ್ದಿದ್ದು, ಅಲ್ಲಿಯೇ ಇದ್ದ ಮಧುರಾ ಆತ ಸತ್ತು ಹೋದ ಎಂದು ಹೇಳಿದ್ದಾಳೆ. ಅಲ್ಲಿಗೆ ಜೈದೇವನ ಕಥೆ ಮುಗಿದು ಹೋಗಿದೆ.
ಹಿಂದಿರೋ ಉದ್ದೇಶ ಏನು?
ಹಾಗಿದ್ದರೆ ಜೈದೇವನ ಕಥೆ ಮುಗಿಸಿರೋ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಇದೀಗ ಕುತೂಹಲ ಕಾಡುತ್ತಿದೆ.
ಮದುವೆಗಾಗಿ ಸಾವಾ?
ಅಷ್ಟಕ್ಕೂ ಜೈದೇವ್ ಪಾತ್ರಧಾರಿ ರಾಣವ್ ಗೌಡ (Ranav Gowda) ಅವರ ಮದುವೆ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ರಾಧಾ ಭಗವತಿ ಅವರ ಜೊತೆ ಫಿಕ್ಸ್ ಆಗಿದೆ. ಇವರು ಮೊದಲು ಅಮೃತಧಾರೆಯಲ್ಲಿ ಮಲ್ಲಿಯಾಗಿದ್ದಾಗಲೇ ಮಾತುಕತೆ ನಡೆದಿತ್ತು. ರಾಧಾ ಎಲ್ಎಲ್ಬಿ ಸೀರಿಯಲ್ ಮುಗಿದಿದೆ. ಈಗ ಜೈದೇವನ ಕಥೆಯನ್ನು ಫಿನಿಷ್ ಮಾಡುವ ಜೊತೆಗೆ, ಮದುವೆಗೆ ಮುನ್ಸೂಚನೆ ಬರೆದಿದ್ದಾರಾ ಎನ್ನುವುದು ವೀಕ್ಷಕರ ಅಭಿಮತ.
ಬಿಗ್ಬಾಸ್ಗಾಗಿ ಸತ್ತಿದ್ದಾ?
ಅದೇ ಇನ್ನೊಂದೆಡೆ, ಬಿಗ್ಬಾಸ್ ಸೀಸನ್ 13 ಆರಂಭ ಆಗುವುದರಲ್ಲಿದ್ದು, ಅದರಲ್ಲಿ ರಾಣವ್ ಗೌಡ ಅವರು ಸ್ಪರ್ಧಿಸಲಿದ್ದಾರೆಯೇ ಎನ್ನುವ ಗುಮಾನಿಯೂ ಇನ್ನೊಂದೆಡೆ ಇದೆ.
ಹಿಂದಿರೋ ಕಾರಣ ಏನು?
ಆದ್ದರಿಂದ ಅಮೃತಧಾರೆಯಲ್ಲಿ ಜೈದೇವನನ್ನು ಸಾಯಿಸಿರುವ ಹಿಂದೆ ಬೇರೊಂದೇ ಕಾರಣ ಇದ್ದಿರಬಹುದು ಎಂದು ಊಹಿಸಲಾಗಿದೆ. ಸೀರಿಯಲ್ನಲ್ಲಿ ಈ ಪರಿಯ ಟ್ವಿಸ್ಟ್ ಕೊಟ್ಟು, ಜೈದೇವನನ್ನು ಎಲ್ಲಿಗೆ ಕಳುಹಿಸಿದ್ದಾರೆ ಎನ್ನುವ ಕುತೂಹಲ ಸದ್ಯಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

