MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Entertainment
  • TV Talk
  • 10 ತಿಂಗಳ ಮಗುವನ್ನು ಗಂಡನ ಕೈಗೆ ಒಪ್ಪಿಸಿ ತೆಲುಗು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಕನ್ನಡ ನಟಿ!!

10 ತಿಂಗಳ ಮಗುವನ್ನು ಗಂಡನ ಕೈಗೆ ಒಪ್ಪಿಸಿ ತೆಲುಗು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಕನ್ನಡ ನಟಿ!!

ಕನ್ನಡ ಮತ್ತು ತೆಲುಗು ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರೈ, ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ 'ಬಿಗ್ ಬಾಸ್ ತೆಲುಗು ಸೀಸನ್ 10'ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ತಾಯಿಯಾದ ಅವರು, ತಮ್ಮ 10 ತಿಂಗಳ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಶೋಗೆ ಬಂದಿರುವುದು ಕುತೂಹಲ ಕೆರಳಿಸಿದೆ.

2 Min read
Author : Gowthami K
Published : Sep 07 2026, 01:04 PM IST
Share this Photo Gallery
  • FB
  • TW
  • Linkdin
  • Whatsapp
15
ಬಿಗ್ ಬಾಸ್ ತೆಲುಗು 10 ರಂಗಕ್ಕೆ ಕನ್ನಡದ ಪ್ರತಿಭೆ ಚೈತ್ರಾ ರೈ
Image Credit : Asianet News

ಬಿಗ್ ಬಾಸ್ ತೆಲುಗು 10 ರಂಗಕ್ಕೆ ಕನ್ನಡದ ಪ್ರತಿಭೆ ಚೈತ್ರಾ ರೈ

ಒಳ್ಳೆಯ ಕಥೆ ಮತ್ತು ಥೀಮ್ ಇದ್ದರೆ ಪ್ರೇಕ್ಷಕರ ಮನಸ್ಸು ಗೆಲ್ಲುವುದು ಕಷ್ಟವೇನಲ್ಲ. ಈ ಮಾತು ‘ಬಿಗ್ ಬಾಸ್’ ಆಟಕ್ಕೂ ಪಕ್ಕಾ ಅನ್ವಯಿಸುತ್ತದೆ. ಸ್ಪರ್ಧಿಗಳಲ್ಲಿ ದೃಢ ಮನಸ್ಸು ಹಾಗೂ ಮನರಂಜನೆ ನೀಡುವ ಸಾಮರ್ಥ್ಯವಿದ್ದರೆ ಮಾತ್ರ ಆ ಸೀಸನ್ ಸೂಪರ್ ಹಿಟ್ ಆಗುತ್ತದೆ. ಇದೀಗ ತೆಲುಗು ಕಿರುತೆರೆ ವೀಕ್ಷಕರ ಬಹುದಿನಗಳ ಕಾಯುವಿಕೆಗೆ ತೆರೆಬಿದ್ದಿದ್ದು, ಅಕ್ಕಿನೇನಿ ನಾಗಾರ್ಜುನ ನಿರೂಪಣೆಯಲ್ಲಿ ‘ಬಿಗ್ ಬಾಸ್ ತೆಲುಗು ಸೀಸನ್ 10’ ಭಾನುವಾರದಿಂದ (ಸೆಪ್ಟೆಂಬರ್ 6) ವೈಭವೋಪೇತವಾಗಿ ಆರಂಭವಾಗಿದೆ. ‘ದಶಾವತಾರಂ’ ಎಂಬ ವಿಶೇಷ ಥೀಮ್ ಹೊಂದಿರುವ ಈ ಮೈಲಿಗಲ್ಲಿನ ಸೀಸನ್‌ಗೆ ಕನ್ನಡ ಮತ್ತು ತೆಲುಗು ಕಿರುತೆರೆಯ ಜನಪ್ರಿಯ ನಟಿ ಮಂಗಳೂರು ಮೂಲದ ಚೈತ್ರಾ ರೈ ಸ್ಪರ್ಧಿಯಾಗಿ ಧುಮುಕಿದ್ದಾರೆ. ಕನ್ನಡ ಬಿಗ್‌ಬಾಸ್ ಸೀಸನ್ 13ರ ಜೊತೆ ಜೊತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಕೂಡ ಒಂದೇ ದಿನ ಆರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹತ್ತು ತಿಂಗಳ ಮಗುವನ್ನು ಬಿಟ್ಟು ಬಿಗ್ ಬಾಸ್‌ಗೆ ಕನ್ನಡತಿ ಚೈತ್ರಾ ಎಂಟ್ರಿ!
Image Credit : Asianet News

ಹತ್ತು ತಿಂಗಳ ಮಗುವನ್ನು ಬಿಟ್ಟು ಬಿಗ್ ಬಾಸ್‌ಗೆ ಕನ್ನಡತಿ ಚೈತ್ರಾ ಎಂಟ್ರಿ!

ಇದೀಗ ತೆಲುಗು ಬಿಗ್‌ಬಾಸ್‌ ಸೀಸನ್ 10ಕ್ಕೆ ಇಬ್ಬರು ಕನ್ನಡ ತಾರೆಯರು ಗ್ರ್ಯಾಂಡ್ ಎಂಟ್ರಿ ಪಡೆದಿದ್ದಾರೆ. ಅದುವೇ ಮೈಸೂರಿನ ಮುಖೇಶ್ ಗೌಡ ಮತ್ತು ಮಂಗಳೂರಿನ ಚೈತ್ರಾ ರೈ. ಆದರೆ ಇದರಲ್ಲಿ ವಿಶೇಷ ಎನ್ನುವುದಕ್ಕಿಂತ ಆಶ್ಚರ್ಯ ಏನಂದ್ರೆ ತನ್ನ 10 ತಿಂಗಳ ಮಗುವನ್ನು ಬಿಟ್ಟು ಚೈತ್ರಾ ಅವರು ಬಿಗ್‌ಬಾಸ್‌ ತೆಲುಗಿಗೆ ಹೋಗಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಮಗುವಿನ ತಾಯಿಯಾಗಿರುವ ಚೈತ್ರಾ ರೈ, ಕೇವಲ 10 ತಿಂಗಳ ಪುಟ್ಟ ಮಗಳನ್ನು ಮನೆಯಲ್ಲಿ ಬಿಟ್ಟು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡು ರಿಯಾಲಿಟಿ ಶೋಗೆ ಬಂದಿರುವ ಚೈತ್ರಾ ರೈ, ತಮ್ಮ ಸದಾಶಯ ಮತ್ತು ಆಟದ ವೈಖರಿಯಿಂದ ತೆಲುಗು ಬಿಗ್ ಬಾಸ್ ಮನೆಯಲ್ಲಿ ಎಷ್ಟರಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Related image1
Bigg Boss ಶೋ ಆರಂಭದಲ್ಲಿಯೇ ಬಿಗ್ ಟ್ವಿಸ್ಟ್; ವಿಶೇಷ ವ್ಯಕ್ತಿಗೆ ಸಿಕ್ತು ಕಿಚ್ಚನ ಮೊದಲ ಚಪ್ಪಾಳೆ
Related image2
ತೆಲುಗು ಬಿಗ್‌ಬಾಸ್‌ 10ಕ್ಕೆ ಕನ್ನಡದ ಮೂವರು ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ, ಎಲ್ಲಿಯವರು? ಇಲ್ಲಿದೆ ನೋಡಿ
35
ನೆಗೆಟಿವ್ ಪಾತ್ರದಲ್ಲಿ ಮಿಂಚಿರುವ ಚೈತ್ರಾ
Image Credit : Asianet News

ನೆಗೆಟಿವ್ ಪಾತ್ರದಲ್ಲಿ ಮಿಂಚಿರುವ ಚೈತ್ರಾ

ಮಂಗಳೂರು ಮೂಲದ ಬಿ.ಡಿ. ವಾಸು ರೈ ಮತ್ತು ಗುಲಾಬಿ ರೈ ದಂಪತಿಯ ಪುತ್ರಿಯಾಗಿ ಮಾರ್ಚ್ 29, 1990 ರಂದು ಜನಿಸಿದ ಚೈತ್ರಾ ರೈ, 2009ರಲ್ಲಿ 'ಕುಸುಮಾಂಜಲಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ 'ಬೊಂಬೆಯಾಟವಯ್ಯ', 'ಗೆಜ್ಜೆಪೂಜೆ', 'ಬಣ್ಣದ ಬುಗುರಿ', 'ಪೌರ್ಣಮಿ', 'ನಾಗಮಣಿ' ಹಾಗೂ 'ಯುಗಾದಿ'ಯಂತಹ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ವಿಶೇಷವಾಗಿ ಜೀ ಕನ್ನಡದ ಸೂಪರ್ ಹಿಟ್ 'ರಾಧಾ ಕಲ್ಯಾಣ' ಧಾರಾವಾಹಿಯ 'ವಿಶಾಖ' ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ಅವರು ಕನ್ನಡಿಗರ ಮನೆಮಾತಾದರು. ಪರದೆಯ ಮೇಲೆ ಖಳನಟಿಯಾಗಿ ನೆನಪಿನಲ್ಲಿ ಉಳಿಯುವ ಚೈತ್ರಾ, ನಿಜ ಜೀವನದಲ್ಲಿ ತದ್ವಿರುದ್ಧ ವ್ಯಕ್ತಿತ್ವದವರು. 2014ರಲ್ಲಿ 'ಜಂಬೂ ಸವಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರು.

45
ತೆಲುಗು ರಂಗದಲ್ಲಿ ಸಕ್ಸಸ್:
Image Credit : Asianet News

ತೆಲುಗು ರಂಗದಲ್ಲಿ ಸಕ್ಸಸ್:

2017ರಲ್ಲಿ 'ಅಷ್ಟ ಚಮ್ಮಾ' ಧಾರಾವಾಹಿಯ ಮೂಲಕ ತೆಲುಗು ರಂಗ ಪ್ರವೇಶಿಸಿದ ಚೈತ್ರಾ, ಆನಂತರ ಹಿಂತಿರುಗಿ ನೋಡಲೇ ಇಲ್ಲ. ಅತ್ತರಿಂಟ್ಲು ಅಕ್ಕ ಚೆಲ್ಲುಲು , ಅಳ ಮೊದಲಿಂದಿ , ಅತ್ತೋ ಅತ್ತಮ್ಮ ಕುತ್ರೋ , ದಟ್ಸ್ ಮಹಾಲಕ್ಷ್ಮಿ , ಒಕರಿಕಿ ಒಕರು ಹಾಗೂ ಮನಸುನ ಮನಸ್ಯೆ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿ ತೆಲುಗು ಪ್ರೇಕ್ಷಕರ ನೆಚ್ಚಿನ ನಟಿಯಾದರು. ಕನ್ನಡಕ್ಕಿಂತಲೂ ಹೆಚ್ಚು ತೆಲುಗು ಕಿರುತೆರೆಯಲ್ಲಿಯೇ ಬ್ಯುಸಿಯಾದರು.

55
ವೈಯಕ್ತಿಕ ಜೀವನ ಮತ್ತು ಕುಟುಂಬ:
Image Credit : Asianet News

ವೈಯಕ್ತಿಕ ಜೀವನ ಮತ್ತು ಕುಟುಂಬ:

ಮಂಗಳೂರಿನಲ್ಲಿ ಪ್ರಸನ್ನ ಶೆಟ್ಟಿ ಎಂಬುವವರನ್ನು ಅರೇಂಜ್ಡ್ ಮ್ಯಾರೇಜ್ ವಿವಾಹವಾದ ಚೈತ್ರಾ, ಸದ್ಯ ವೈಯಕ್ತಿಕ ಜೀವನದಲ್ಲೂ ಸುಂದರ ಕುಟುಂಬವನ್ನು ಹೊಂದಿದ್ದಾರೆ. ಇವರ ಪತಿ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಈ ದಂಪತಿಗೆ 2021 ರಲ್ಲಿ ಮೊದಲ ಮಗಳು 'ನಿಷ್ಕಾ ಶೆಟ್ಟಿ' ಜನಿಸಿದಳು. ಇತ್ತೀಚೆಗಷ್ಟೇ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಚೈತ್ರಾ, ಮಗಳಿಗೆ 'ಪ್ರಿಷ್ಕಾ ಶೆಟ್ಟಿ' (ದೈವಿಕ ಆತ್ಮ ಅಥವಾ ದೇವರ ಅಮೂಲ್ಯ ಕೊಡುಗೆ ಎಂಬ ಅರ್ಥ) ಎಂದು ಹೆಸರಿಟ್ಟಿದ್ದಾರೆ. ಎರಡನೇ ಮಗುವಿಗೆ 10 ತಿಂಗಳು ತುಂಬಿದೆ.

ಇನ್ನು ನಟಿ ಚೈತ್ರಾ ರೈ ತಮ್ಮ ತೂಕದ ಕಾರಣಕ್ಕೆ ಎದುರಾದ ನಕಾರಾತ್ಮಕ ಕಾಮೆಂಟ್ ಹಾಗೂ ಬಾಡಿ ಶೇಮಿಂಗ್‌ ಅನ್ನು ಸವಾಲಾಗಿ ಸ್ವೀಕರಿಸಿ, ಕೇವಲ 3 ತಿಂಗಳಲ್ಲಿ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವರ್ಕೌಟ್ ಮೂಲಕ ತಮ್ಮ ತೂಕವನ್ನು 82 ಕೆಜಿಯಿಂದ 60 ಕೆಜಿಗೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜನ ಆಡಿದ ಟೀಕೆಗಳೇ ತಮ್ಮ ಈ ಅದ್ಭುತ ಫಿಟ್ನೆಸ್ ರೂಪಾಂತರಕ್ಕೆ ಪ್ರೇರಣೆಯಾಯಿತು ಎಂದು ಅವರು ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಿಗ್ ಬಾಸ್
ಟಿವಿ ಶೋ
ಕರ್ನಾಟಕ ಸುದ್ದಿ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಅಮೃತಧಾರೆ ಸೀರಿಯಲ್ ಪ್ರೇಮಿಗಳಿಗೆ ಸಂತಸದ ಸುದ್ದಿ: ಭೂಮಿಕಾಳ ಹೊಸ ಪಯಣ ಆರಂಭದ ಸುಳಿವು
Recommended image2
ತೆಲುಗು ಬಿಗ್‌ಬಾಸ್‌ 10ಕ್ಕೆ ಕನ್ನಡದ ಮೂವರು ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ, ಎಲ್ಲಿಯವರು? ಇಲ್ಲಿದೆ ನೋಡಿ
Recommended image3
ಬಿಗ್‌ ಬಾಸ್‌ ಮನೆಯಲ್ಲಿ ಓಂ ಪ್ರಕಾಶ್‌ ರಾವ್‌ 2ನೇ ಇನ್ನಿಂಗ್ಸ್‌; ʻಹುಚ್ಚʼ ನಾಯಕಿಯ ಅಕ್ಕನೇ ಇವರ ಧರ್ಮಪತ್ನಿ
Related Stories
Recommended image1
Bigg Boss ಶೋ ಆರಂಭದಲ್ಲಿಯೇ ಬಿಗ್ ಟ್ವಿಸ್ಟ್; ವಿಶೇಷ ವ್ಯಕ್ತಿಗೆ ಸಿಕ್ತು ಕಿಚ್ಚನ ಮೊದಲ ಚಪ್ಪಾಳೆ
Recommended image2
ತೆಲುಗು ಬಿಗ್‌ಬಾಸ್‌ 10ಕ್ಕೆ ಕನ್ನಡದ ಮೂವರು ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ, ಎಲ್ಲಿಯವರು? ಇಲ್ಲಿದೆ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved