- Home
- Life
- Relationship
- Bigg Boss ಮನೆಯಲ್ಲಿದ್ದಾಗ ಲವ್ ಮಾಡಿದ್ರು, ಹೊರಗೆ ಬಂದು ಮೋಸ ಮಾಡಿದ್ರು: ಕಣ್ಣೀರು ಹಾಕಿದ ಇಶಾನಿ
Bigg Boss ಮನೆಯಲ್ಲಿದ್ದಾಗ ಲವ್ ಮಾಡಿದ್ರು, ಹೊರಗೆ ಬಂದು ಮೋಸ ಮಾಡಿದ್ರು: ಕಣ್ಣೀರು ಹಾಕಿದ ಇಶಾನಿ
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಾದ ಇಶಾನಿ ಮತ್ತು ಮೈಕಲ್ ಅಜಯ್ ಅವರ ಪ್ರೇಮ ಕಥೆಗೆ ಹೊಸ ತಿರುವು ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಮೈಕಲ್ ತೋರಿದ್ದು ನಾಟಕದ ಪ್ರೀತಿ, ಗೇಮ್‌ಗಾಗಿ ನನ್ನ ಭಾವನೆಗಳ ಜೊತೆ ಆಟವಾಡಿದ್ದಾನೆ ಎಂದು ಇಶಾನಿ ಆರೋಪಿಸಿದ್ದಾರೆ.

ಬಿಗ್ಬಾಸ್ ಮನೆಯ ಆಟಗಳು
ಬಿಗ್ಬಾಸ್ ಮನೆಯೊಳೆ ನಡೆಯುವ ಜಗಳ, ಅತಿರೇಕಕ್ಕೆ ಹೋಗುವ ಲವ್ ಮ್ಯಾಟರ್, ಕೆಲವು ಭಾಷೆಗಳಲ್ಲಿ ಈ ಪ್ರೀತಿಯ ವಿಷ್ಯ ಮಂಚದ ಮಟ್ಟಕ್ಕೂ ಹೋಗಿ, ಅದನ್ನು ಪ್ರಸಾರ ಮಾಡುವುದು, ಕೊನೆಗೆ ವೀಕ್ ಎಂಡ್ನಲ್ಲಿ ಕ್ಲಾಸ್ ತೆಗೆದುಕೊಳ್ಳುವವುದು... ಹೀಗೆ ಎಲ್ಲವೂ ನಾಟಕ, ಇದು ಸ್ಕ್ರಿಪ್ಟೆಡ್ ಎನ್ನುವ ಗಂಭೀರ ಆರೋಪ ಇದೆ. ಪ್ರತಿಬಾರಿಯೂ ಒಂದೋ ಎರಡೋ ಜೋಡಿ ಈ ರೀತಿ ಇರುವುದನ್ನು ಪ್ರತಿಯೊಂದು ಸೀಸನ್ನಲ್ಲಿಯೂ ನೋಡಬಹುದಾಗಿದ್ದು, ಬಹುತೇಕವು ಎಲ್ಲವೂ ಇಲ್ಲಿ ಮೊದಲೇ ನಿಗದಿಯಾಗಿರುವಂಥದ್ದು, ಕೊನೆಗೆ ಅತಿರೇಕಕ್ಕೆ ಹೋಗುವುದು ಇದೆ ಎನ್ನಲಾಗುತ್ತದೆ.
ಸೀಸನ್ 10ರ ಲವ್ ಬರ್ಡ್ಸ್
ಅದೇ ರೀತಿ, ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸದ್ದು ಮಾಡಿದ ಲವ್ ಬರ್ಡ್ಸ್ ಗಾಯಕಿ ಇಶಾನಿ ಹಾಗೂ ಮಾಡೆಲ್ ಮೈಕಲ್ ಅಜಯ್. ಬಿಗ್ಬಾಸ್ ಮನೆಯಲ್ಲಿ ನಡೆಯುವ ಲವ್ವು ಹೊರಗೆ ಬಂದ ಮೇಲೆ ಏನೆಲ್ಲಾ ಟರ್ನ್ ತೆಗೆದುಕೊಳ್ಳುತ್ತದೆ ಎನ್ನುವುದು ಬಿಗ್ಬಾಸ್ ಷೋನೇ ಪ್ರಪಂಚ ಎಂದುಕೊಂಡು ಅದನ್ನು ಫಾಲೋ ಮಾಡುವ ಅಸಂಖ್ಯ ವೀಕ್ಷಕರಿಗೆ ತಿಳಿದದ್ದೇ. ಅದೇ ರೀತಿ ಇಶಾನಿ ಮತ್ತು ಮೈಕಲ್ ಅಜಯ್ ವಿಷ್ಯದಲ್ಲಿಯೂ ಆಗಿದ್ದು, ಅದೀಗ ಮತ್ತೆ ದೊಡ್ಡದಾಗಿದೆ.
ಪ್ರೇಮ ಕಥೆಗೆ ಹೊಸ ತಿರುವು
ಈ ಜೋಡಿಯ ಹಳೆಯ ಪ್ರೇಮ ಕಥೆಗೆ ಈಗ ಹೊಸ ತಿರುವು ಸಿಕ್ಕಿದೆ. ಒಬ್ಬರನ್ನು ಒಬ್ಬರು ಬಿಟ್ಟಿರಲಾಗದೇ ಇದ್ದ ಈ ಜೋಡಿ, ಈಗ ಕಿತ್ತಾಟ ಮಾಡಿಕೊಂಡು ದೂರವಾಗಿದೆ. ಇತ್ತೀಚೆಗೆ ನಡೆದ ತಮ್ಮ ‘ಟಾಕ್ಸಿಕ್ ಎಂಪೈರ್’ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಇಶಾನಿ, ಮೈಕಲ್ ಅಜಯ್ ವಿರುದ್ಧ ಮೋಸದ ಆರೋಪ ಮಾಡಿದ್ದಾರೆ.
ಎಲ್ಲವೂ ನಾಟಕ
“ಬಿಗ್ ಬಾಸ್ ಮನೆಯಲ್ಲಿದ್ದಾಗ ಮೈಕಲ್ ತೋರಿಸಿದ್ದ ಪ್ರೀತಿಯೆಲ್ಲವೂ ಬರೀ ನಾಟಕವಾಗಿತ್ತು. ಶೋಗೆ ಹೋಗುವ ಮುನ್ನವೇ ಅವರಿಗೆ ಬೇರೊಬ್ಬ ಗರ್ಲ್‌ಫ್ರೆಂಡ್ ಇದ್ದರು ಎಂಬ ಆಘಾತಕಾರಿ ಸತ್ಯ ನನಗೆ ಹೊರಬಂದ ಮೇಲಷ್ಟೇ ತಿಳಿಯಿತು” ಎಂದು ಗೋಳೋ ಎಂದಿದ್ದಾರೆ.
ನನ್ನನ್ನು ಯಾಮಾರಿಸಿದ
ನಾನು ಮೈಕಲ್‌ನನ್ನು ಮನಸಾರೆ ಪ್ರೀತಿಸಿದ್ದೆ. ಆದರೆ ಆಗಿದ್ದೇ ಬೇರೆ. ಅವನ ಕಡೆಯಿಂದ ನಿಜವಾದ ಪ್ರೀತಿ ಇರಲಿಲ್ಲ. ಗೇಮ್‌ಗಾಗಿ ನನ್ನ ಭಾವನೆಗಳ ಜೊತೆ ಚೆಲ್ಲಾಟವಾಡಿ ಯಾಮಾರಿಸಿದ ಎಂದು ಹೇಳಿಕೊಂಡಿದ್ದಾರೆ. ಸದ್ಯ ನಾವಿಬ್ಬರೂ ಕೇವಲ ಸಾಮಾನ್ಯ ಸ್ನೇಹಿತರಾಗಿ ಮಾತ್ರ ಉಳಿದುಕೊಂಡಿದ್ದೇವೆ ಎಂದಿದ್ದಾರೆ.
ಫಿಟ್‌ನೆಸ್ ಮೇಲೆ ಗಮನ
ಅಂದಹಾಗೆ ಸದ್ಯ, ಮೈಕಲ್ ಅಜಯ್ ತಮ್ಮ ಫಿಟ್‌ನೆಸ್ ಮೇಲೆ ಫೋಕಸ್ಡ್ ಆಗಿದ್ದಾರೆ. ಅವರು ತಮ್ಮ ಗರ್ಲ್‌ಫ್ರೆಂಡ್ ಜೊತೆಗಿದ್ದು, ಆಗಾಗ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾಗೂ ವೀಡಿಯೊಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

