MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Sports
  • Cricket
  • Shivam Dube Family: ಮುಸ್ಲಿಂ ಆದರೂ ಸಂಪೂರ್ಣವಾಗಿ ಹಿಂದೂ ಆಚರಣೆಗಳನ್ನು ಪಾಲಿಸುವ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ!

Shivam Dube Family: ಮುಸ್ಲಿಂ ಆದರೂ ಸಂಪೂರ್ಣವಾಗಿ ಹಿಂದೂ ಆಚರಣೆಗಳನ್ನು ಪಾಲಿಸುವ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ!

ಟೀಂ ಇಂಡಿಯಾ ಆಟಗಾರ ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್, ಕೇವಲ ಕ್ರಿಕೆಟಿಗನ ಪತ್ನಿಯಾಗಿ ಉಳಿಯದೆ ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಧರ್ಮಗಳ ಅಡೆತಡೆಗಳನ್ನು ಮೀರಿ ದುಬೆ ಅವರನ್ನು ವಿವಾಹವಾದ ಅಂಜುಮ್, ಅವರ ಕ್ರಿಕೆಟ್ ಪಯಣದಲ್ಲಿ ಬೆಂಬಲವಾಗಿ ನಿಂತಿದ್ದಾರೆ.

2 Min read
Author : Sumanth SN
Published : Sep 14 2026, 10:41 AM IST
Share this Photo Gallery
  • FB
  • TW
  • Linkdin
  • Whatsapp
17
ಶಿವಂ ದುಬೆ ಪತ್ನಿ, ತೆರೆಮರೆಯ ಈ ಬಾಲಿವುಡ್ ನಟಿ ಯಾರು?
Image Credit : instagram.com @anjum1786

ಶಿವಂ ದುಬೆ ಪತ್ನಿ, ತೆರೆಮರೆಯ ಈ ಬಾಲಿವುಡ್ ನಟಿ ಯಾರು?

ಕ್ರಿಕೆಟ್ ಮೈದಾನದಲ್ಲಿ ಅಭಿಮಾನಿಗಳ ಕಣ್ಣು ಸದಾ ಸಿಕ್ಸಸ್‌ಗಳನ್ನು ಸಿಡಿಸುವ ಆಟಗಾರನ ಮೇಲೆಯೇ ಇರುತ್ತದೆ. ಇಂತಹ ಆಟಗಾರರು ನಿವೃತ್ತಿಯಾದರೂ ಅವರ ದಾಖಲೆಗಳು ಹಾಗೂ ಆಟದ ಬಗ್ಗೆ ಪದೇ ಪದೇ ಮಾತನಾಡಿಕೊಳ್ಳುತ್ತೇವೆ. ಆದರೆ ಪ್ರತಿಯೊಬ್ಬ ಆಟಗಾರನ ಹಿಂದೆಯೂ ಆತನಿಗೆ ಕಷ್ಟದ ಸಮಯದಲ್ಲಿ ಬೆನ್ನುಲುಬಾಗಿ ನಿಂತ ವ್ಯಕ್ತಿಯೊಬ್ಬರು ಇರ್ತಾರೆ. ಅದರಲ್ಲೂ ಯುವ ಕ್ರಿಕೆಟಿಗರ ಜೀವನದಲ್ಲಿ ಅವರ ಜೀವನ ಸಂಗಾತಿಯ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಟೀಂ ಇಂಡಿಯಾ ಆಟಗಾರ ಶಿವಂ ದುಬೆ ಅವರ ಜೀವನದಲ್ಲು ಇಂತಹ ವಿಶೇಷ ವ್ಯಕ್ತಿಯೊಬ್ಬರು ಇದ್ದರೆ. ಅದು ಬೇರೆ ಯಾರು ಅಲ್ಲ, ಶಿವಂ ದುಬೆ ಪತ್ನಿ ಅಂಜುಮ್ ಖಾನ್. ಕೇವಲ ಸ್ಟಾರ್ ಕ್ರಿಕೆಟಿಗನ ಪತ್ನಿಯಾಗಿ ಮಾತ್ರವಲ್ಲದೇ, ಮನರಂಜನೆ ಕ್ಷೇತ್ರದಲ್ಲಿ ತಪ್ಪದೇ ಒಂದು ಗುರುತು ಮೂಡಿಸಿದ್ದಾರೆ. ಈ ಸ್ಟೋರಿಯಲ್ಲಿ ಅಂಜುಮ್ ಖಾನ್ ಅವರ ವೈಯುಕ್ತಿಕ ಜೀವನ ಹಾಗೂ ವೃತ್ತಿ ಜೀವನದ ಕುರಿತ ಅಚ್ಚರಿಯ ಸಂಗತಿಗಳನ್ನು ತಿಳಿದುಕೊಳ್ಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಮನರಂಜನೆ ಕ್ಷೇತ್ರದಲ್ಲಿ ಚಾಪು ಮೂಡಿಸಿರುವ ಅಂಜುಮ್ ಖಾನ್
Image Credit : instagram.com @anjum1786

ಮನರಂಜನೆ ಕ್ಷೇತ್ರದಲ್ಲಿ ಚಾಪು ಮೂಡಿಸಿರುವ ಅಂಜುಮ್ ಖಾನ್

ಮನಿ ಕಂಟ್ರೋಲ್ ವರದಿಯ ಅನ್ವಯ, ಅಂಜುಮ್ ಖಾನ್ 1986 ಸೆಪ್ಟೆಂಬರ್ 2ರಂದು ಉತ್ತರ ಪ್ರದೇಶದಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿಂದಲೂ ಕಲೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಅಂಜುಮ್ ಖಾನ್, ಅಲಿಗಢ್ ವಿವಿಯಿಂದ ಫೈನ್ ಆರ್ಟ್ಸ್ ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದರು. ಈ ಕ್ಷೇತ್ರದಲ್ಲಿಯೇ ವೃತ್ತಿ ಜೀವನವನ್ನು ಆರಂಭಿಸಿದ ಅವರು, ಮಾಡೆಲಿಂಗ್ ರಂಗಕ್ಕೆ ಎಂಟ್ರಿಯಾಗಿ ಅಲ್ಲಿಂದ ಮನರಂಜನಾ ಕ್ಷೇತ್ರಕ್ಕೂ ಕಾಲಿಟ್ಟಿದ್ದರು.

Related Articles

Related image1
Bengaluru: ನದಿ ಸ್ವಚ್ಛಗೊಳಿಸಿ ಖ್ಯಾತಿ ಪಡೆದಿದ್ದ ಬಿಟ್ಟು ತಬಾಹಿಗೆ ಶಾಕ್! ಬೆಂಗಳೂರಿನ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನದಲ್ಲಿ ಏನಾಯ್ತು?
Related image2
Bagalakote: ಮಾಳಿಂಗರಾಯನ ಪವಾಡ, ಹಿಂದಿನ ದಾಖಲೆಗಳು ಉಡೀಸ್‌! ಲಕ್ಷ ಲಕ್ಷಕ್ಕೆ ಸೇಲ್ ಆಯ್ತು ಪವಿತ್ರ ತೆಂಗಿನಕಾಯಿ!
37
ಬಾಲಿವುಡ್ ಸಿನಿಮಾಗಳಿಗೆ ಕಂಠದಾನ
Image Credit : instagram.com @anjum1786

ಬಾಲಿವುಡ್ ಸಿನಿಮಾಗಳಿಗೆ ಕಂಠದಾನ

ಕೇವಲ ಮಾಡೆಲ್ ಮಾತ್ರವಲ್ಲದೇ, ನಟಿಯಾಗಿ, ವಾಯ್ಸ್ ಓವರ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿರುವ ಅಂಜುಮ್ ಖಾನ್, ಬಾಲಿವುಡ್ ಸಿನಿಮಾಗಳಲ್ಲಿ ಹಲವು ಪಾತ್ರಗಳಿಗೆ ಕಂಠದಾನ ಮಾಡಿದ್ದಾರೆ. ಡಬ್ಬಿಂಗ್ ಸಿನಿಮಾಗಳಿಗೆ ಸೀಮಿತವಾಗದೆ, ಧಾರಾವಾಹಿಗಳು, ಮ್ಯೂಸಿಕ್ ವಿಡಿಯೋಗಳಲ್ಲಿಯೂ ನಟಿಸಿದ್ದರು. ಇನ್ನು, ಸ್ಟಾರ್ ಕ್ರಿಕೆಟಿಗರಾಗಿದ್ದ ದುಬೆ ಅವರನ್ನು ಮದುವೆಯಾಗಿ, ಅಂಜುಮ್ ಮಾತ್ರ ತಮ್ಮ ವೃತ್ತಿ ಜೀವನ ಗುರಿಯನ್ನು ಮರೆಯಲಿಲ್ಲ.

47
ಹಲವು ವರ್ಷ ಡೇಟಿಂಗ್, ಬಳಿಕ ಮದುವೆ!
Image Credit : instagram.com @anjum1786

ಹಲವು ವರ್ಷ ಡೇಟಿಂಗ್, ಬಳಿಕ ಮದುವೆ!

ಅಂದಹಾಗೇ, ಶಿವಮ್ ದುಬೆ ಮತ್ತು ಅಂಜುಮ್ ಖಾನ್ ಲವ್ ಸ್ಟೋರಿ ಒಂದು ಬಾಲಿವುಡ್ ರೆಮ್ಯಾಂಟಿಕ್ ಸಿನಿಮಾದಂತಿದೆ. ಕಾಮನ್ ಫ್ರೆಂಡ್ ಒಬ್ಬರ ಕಾರಣದಿಂದ ಭೇಟಿಯಾದ ಇಬ್ಬರು, ಕೆಲವು ದಿನಗಳಲ್ಲೇ ಸ್ನೇಹಿತರಾಗಿದ್ದರು. ಕೊನೆಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು. ಇಲ್ಲಿ ಅಚ್ಚರಿಯ ವಿಚಾರ ಎಂದರೆ, ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಪ್ರತಿಯೊಂದು ಸಣ್ಣ ವಿಚಾರವೂ ಒಂದಲ್ಲ ಒಂದು ಸಮಯದಲ್ಲಿ ರಿವೀಲ್ ಆಗುತ್ತದೆ. ಆದರೆ ಈ ಇಬ್ಬರು ಕೂಡ ಹಲವು ವರ್ಷ ಯಾವುದೇ ಗಾಸಿಪ್ ಗಳಿಗೆ ಅವಕಾಶ ಕೊಡದೆ ಹಲವು ವರ್ಷ ಡೇಟಿಂಗ್ ಮಾಡಿದ್ದರು.

57
ಅದ್ದೂರಿಯಾಗಿ ನಡೆದ ಮದುವೆ ಸಮಾರಂಭ
Image Credit : instagram.com @anjum1786

ಅದ್ದೂರಿಯಾಗಿ ನಡೆದ ಮದುವೆ ಸಮಾರಂಭ

ಇಬ್ಬರದ್ದು, ಬೇರೆ ಬೇರೆ ಧರ್ಮಗಳಾದ ಕಾರಣ ಮದುವೆ ವಿಚಾರದ ಬಂದಾಗ ಕೆಲವು ಅಡ್ಡಿಗಳು ಎದುರಾಗಿತ್ತು. ಆದರೆ ಈ ಎಲ್ಲಾ ಸಮಸ್ಯೆಗಳನ್ನ ಮೀರಿ ಇಬ್ಬರು ಎರಡು ಧರ್ಮಗಳನ್ನು ಗೌರವಿಸುತ್ತಾ 2021, ಜುಲೈ 16ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯಗಳಂತೆ ದಂಪತಿಯ ಮದುವೆ ಅದ್ದೂರಿಯಾಗಿ ನಡೆದಿತ್ತು.

67
ವೈಫಲ್ಯದ ಸಮಯದಲ್ಲೂ ಬೆನ್ನೆಲುಬಾಗಿ ನಿಂತಿದ್ದ ಅಂಜುಮ್ ಖಾನ್
Image Credit : instagram.com @anjum1786

ವೈಫಲ್ಯದ ಸಮಯದಲ್ಲೂ ಬೆನ್ನೆಲುಬಾಗಿ ನಿಂತಿದ್ದ ಅಂಜುಮ್ ಖಾನ್

ಶಿವಂ ದುಬೆ ಅವರ ಕ್ರಿಕೆಟ್ ಜರ್ನಿ ಅಷ್ಟು ಸುಲಭದ ಹಾದಿಯಾಗಿರಲಿಲ್ಲ, ಆರ್ಥಿಕ ಸಮಸ್ಯೆಯಂದ 14 ವಯಸ್ಸಿಗೆ ಕ್ರಿಕೆಟ್‌ಗೆ ಗುಡ್‌ಬೈ ಹೇಳಬೇಕಾಗಿ ಬಂತು. ಮತ್ತೆ 19ರ ವಯಸ್ಸಿನಲ್ಲಿ ಬ್ಯಾಟ್ ಹಿಡಿದುಕೊಂಡಿದ್ದ ದುಬೆ ಶ್ರಮವಹಿಸಿ ಕಮ್ ಬ್ಯಾಕ್ ಮಾಡಿದ್ದರು. ಅದರಲ್ಲೂ ರಣಜಿ ಟ್ರೋಫಿಯಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಸಿಡಿಸಿದ್ದ ದುಬೆ, ಅಲ್ಲಿಂದ ಟೀಂ ಇಂಡಿಯಾಗೂ ಎಂಟ್ರಿ ಕೊಟ್ಟಿದ್ದರು. 2026 ಟಿ20 ವರ್ಲ್ಡ್ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾದ ಸದಸ್ಯರಾಗಿದ್ದ ದುಬೆ, ನಿನ್ನೆ ಅಫ್ಘಾನ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲೂ ಸ್ಥಾನ ಪಡೆದುಕೊಂಡಿದ್ದರು. ಈ ಜರ್ನಿಯಲ್ಲಿ ಅಂಜುಮ್ ಖಾನ್ ಅವರು ದುಬೆ ಅವರಿಗೆ ಬಿಗ್ಗೆಸ್ಟ್ ಚಿಯರ್ ಲೀಡರ್ ಎಂದರೆ ತಪ್ಪಾಗುವುದಿಲ್ಲ. ವೈಫಲ್ಯ ಅನುಭವಿಸಿ ಟೀಂ ಇಂಡಿಯಾದಿಂದ ಹೊರಬಿದ್ದ ಸಂದರ್ಭದಲ್ಲಿಯೂ ಗಟ್ಟಿಯಾಗ ಅವರೊಂದಿಗೆ ನಿಂತಿದ್ದ ಅಂಜುಮ್ ಖಾನ್, ಬೆಸ್ಟ್ ಸಪೋರ್ಟ್‌ ನೀಡಿದ್ದರು.

77
ಇಬ್ಬರು ಮುದ್ದಾದ ಮಕ್ಕಳ ಪೋಷಕರು!
Image Credit : instagram.com @anjum1786

ಇಬ್ಬರು ಮುದ್ದಾದ ಮಕ್ಕಳ ಪೋಷಕರು!

2022ರಲ್ಲಿ ಮೊದಲ ಮಗುವಿಗೆ ಸ್ವಾಗತ ಕೋರಿದ್ದ ಶಿವಂ ದುಬೆ, ಅಂಜುಮ್ ಖಾನ್ ದಂಪತಿ, ಮಗುವಿಗೆ ಅಯಾನ್ ಎಂದು ಹೆಸರಿಟ್ಟಿದ್ದರು. 2025ರ ಜನವರಿಯಲ್ಲಿ ದಂಪತಿ ಮೆಹವಿಶ್ ಎಂಬ ಹೆಣ್ಣು ಮಗುವಿನ ಪೋಷಕರಾದರು. ಇನ್ನು, ಕುಟುಂಬದೊಂದಿಗೆ ಕಳೆಯುವ ಸಂತಸದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಅಂಜುಮ್ ಖಾನ್, ತಮ್ಮದೇ ಆದ ಫಾಲೋವರ್ಸ್ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಿತಿಯನ್ನು ಕಾಯ್ದುಕೊಳ್ಳುತ್ತಲೇ ಅಭಿಮಾನಿಗಳೊಂದಿಗೆ ಸಹಜವಾಗಿ ಬೆರೆಯುವ ಅಂಜುಮ್ ಅವರ ರೀತಿ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಬಹುದು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಕ್ರಿಕೆಟ್
ಟೀಮ್ ಇಂಡಿಯಾ
ಬಿಸಿಸಿಐ

Latest Videos
Recommended Stories
Recommended image1
11,167 ರನ್ ಬಾರಿಸಿದರೂ ಭಾರತಕ್ಕೆ ಆಡಲಿಲ್ಲ... ಆದರೂ ವರ್ಲ್ಡ್ ಕಪ್ ಗೆದ್ದುಕೊಟ್ಟ ಈ ಅನ್-ಲಕ್ಕಿ ಕ್ರಿಕೆಟರ್ ಯಾರು?
Recommended image2
ಏಷ್ಯಾ ಟಿ20 ಗೆದ್ದರೂ ಭಾರತಕ್ಕೆ ಕಪ್ ಇಲ್ಲ; ಪಾಕ್ ಸಚಿವನಿಗೆ ಮುಖಭಂಗ ಮಾಡಿದ ಭಾರತೀಯ ವನಿತೆಯರು!
Recommended image3
ಸೂರ್ಯವಂಶಿನಾ ಬೆಂಚ್‌ನಲ್ಲಿ ಕೂರಿಸಿ ಬ್ಯಾಟಿಂಗ್‌ಗೆ ಬಂದ ಸಂಜು, ಮತ್ತೆ ನಂಬಿಕೆ ಹುಸಿ ಮಾಡಿ ಪೆವಿಲಿಯನ್‌ಗೆ ಓಡಿದ್ರು
Related Stories
Recommended image1
Bengaluru: ನದಿ ಸ್ವಚ್ಛಗೊಳಿಸಿ ಖ್ಯಾತಿ ಪಡೆದಿದ್ದ ಬಿಟ್ಟು ತಬಾಹಿಗೆ ಶಾಕ್! ಬೆಂಗಳೂರಿನ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನದಲ್ಲಿ ಏನಾಯ್ತು?
Recommended image2
Bagalakote: ಮಾಳಿಂಗರಾಯನ ಪವಾಡ, ಹಿಂದಿನ ದಾಖಲೆಗಳು ಉಡೀಸ್‌! ಲಕ್ಷ ಲಕ್ಷಕ್ಕೆ ಸೇಲ್ ಆಯ್ತು ಪವಿತ್ರ ತೆಂಗಿನಕಾಯಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved