MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Yash Toxic Movie Live Updates
Toxic Movie Review
Karnataka Cabinet Reshuffle
KPSC Exam Scam
Karnataka BJP Padayatra
RSS vs Priyank Kharge
Onion Price Hike
FSSAI New Guidelines
Ajit Doval China Visit
Operation Sindoor 2025
  • Home
  • Sports
  • Cricket
  • ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ ರಜತ್‌ ಪಾಟೀದಾರ್..! ಆರ್‌ಸಿಬಿಯಿಂದ 5, CSK 2 ಆಟಗಾರರಿಗೆ ಸ್ಥಾನ..!

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ ರಜತ್‌ ಪಾಟೀದಾರ್..! ಆರ್‌ಸಿಬಿಯಿಂದ 5, CSK 2 ಆಟಗಾರರಿಗೆ ಸ್ಥಾನ..!

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ರಜತ್ ಪಾಟೀದಾರ್, ಇದೀಗ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.

2 Min read
Author : Naveen Kodase
Published : Aug 26 2026, 12:27 PM IST
Share this Photo Gallery
  • FB
  • TW
  • Linkdin
  • Whatsapp
16
ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಆಯ್ಕೆ ಮಾಡಿದ ರಜತ್ ಪಾಟೀದಾರ್
Image Credit : stockPhoto

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಆಯ್ಕೆ ಮಾಡಿದ ರಜತ್ ಪಾಟೀದಾರ್

ಸತತ 17 ಸೀಸನ್‌ನಿಂದಲೂ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟೀದಾರ್ ನಾಯಕರಾಗುತ್ತಿದ್ದಂತೆಯೇ ಸತತ ಎರಡು ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೆಲ್ಲದರ ನಡುವೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ 11 ಆಟಗಾರರನ್ನೊಳಗೊಂಡ ಬಲಿಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಪಾಟೀದಾರ್ ಆಯ್ಕೆ ಮಾಡಿದ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆರಂಭಿಕರಾಗಿ ಗೇಲ್-ಕೊಹ್ಲಿ
Image Credit : Getty

ಆರಂಭಿಕರಾಗಿ ಗೇಲ್-ಕೊಹ್ಲಿ

ರಜತ್ ಪಾಟೀದಾರ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡದಲ್ಲಿ ಆರಂಭಿಕರನ್ನಾಗಿ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಕೊಹ್ಲಿ ಆರ್‌ಸಿಬಿಯ ರನ್ ಮಷೀನ್ ಆಗಿ ಗುರುತಿಸಿಕೊಂಡಿದ್ದು, ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ. ಇನ್ನು ಯೂನಿವರ್ಸಲ್ ಬಾಸ್ ಖ್ಯಾತಿಯ ಗೇಲ್ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಏಕಾಂಗಿಯಾಗಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂದಿಗೂ ಐಪಿಎಲ್‌ನ ವೈಯುಕ್ತಿಕ ಗರಿಷ್ಠ ಸ್ಕೋರ್ ಗೇಲ್ ಹೆಸರಿನಲ್ಲಿದೆ.

Related Articles

Related image1
IPL ಆಸೆ ತೋರಿಸಿ ಲಂಕಾ ಬ್ಯಾಟರ್ ಬಲಿ ಪಡೆದ ಯಶಸ್ವಿ ಜೈಸ್ವಾಲ್..! ಹಿಂಗೆಲ್ಲಾ ಸ್ಲೆಡ್ಜಿಂಗ್ ಮಾಡ್ತಾರಾ?
Related image2
RCB ಗೇಮ್‌ ಚೇಂಜರ್ ಡಿಕೆ, ಚೆನ್ನೈ ಸೂಪರ್ ಕಿಂಗ್ಸ್ ಹೆಡ್ ಕೋಚ್ ಆಗ್ತಾರಾ? ಹೊಸ ಬಾಂಬ್ ಸಿಡಿಸಿದ ಮ್ಯಾಥ್ಯೂ ಹೇಡನ್..!
36
ಸಾಕಷ್ಟು ಬಲಿಷ್ಠವಾಗಿದೆ ಮಧ್ಯಮ ಕ್ರಮಾಂಕ:
Image Credit : Getty

ಸಾಕಷ್ಟು ಬಲಿಷ್ಠವಾಗಿದೆ ಮಧ್ಯಮ ಕ್ರಮಾಂಕ:

ಪಾಟೀದಾರ್ ಮಧ್ಯಮ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್‌ಗೆ ಮೂರನೇ ಸ್ಥಾನ ನೀಡಿದ್ದರೇ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾಗೆ ನಾಲ್ಕನೇ ಹಾಗೂ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರಿಗೆ ಐದನೇ ಸ್ಥಾನ ನೀಡಿದ್ದಾರೆ. ಈ ಮೂವರು ಬ್ಯಾಟರ್‌ಗಳು ದಶಕಗಳ ಕಾಲ ಐಪಿಎಲ್ ಆಳಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

46
ಇಬ್ಬರು ಸಾಲಿಡ್ ಮ್ಯಾಚ್‌ ಫಿನಿಶರ್ಸ್:
Image Credit : x

ಇಬ್ಬರು ಸಾಲಿಡ್ ಮ್ಯಾಚ್‌ ಫಿನಿಶರ್ಸ್:

ಇನ್ನು ಆಲ್ರೌಂಡರ್ ಹಾಗೂ ಮ್ಯಾಚ್ ಫಿನಿಶರ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದರೇ, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಜತ್ ಪಾಟೀದಾರ್ ಆಯ್ಕೆ ಮಾಡಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲಿಗೆ ಏಳು ಬಲಿಷ್ಠ ಬ್ಯಾಟರ್‌ಗಳನ್ನೊಳಗೊಂಡ ತಂಡವನ್ನು ಆರ್‌ಸಿಬಿ ನಾಯಕ ಆಯ್ಕೆ ಮಾಡಿದ್ದಾರೆ.

56
2 ವೇಗಿಗಳು, ಎರಡು ಸ್ಪಿನ್ನರ್‌ಗಳನ್ನೊಳಗೊಂಡ ಬೌಲಿಂಗ್ ಪಡೆ:
Image Credit : X/@ESPNcricinfo

2 ವೇಗಿಗಳು, ಎರಡು ಸ್ಪಿನ್ನರ್‌ಗಳನ್ನೊಳಗೊಂಡ ಬೌಲಿಂಗ್ ಪಡೆ:

ಇನ್ನುಳಿದಂತೆ ಆರ್‌ಸಿಬಿ ಮಾಜಿ ವೇಗಿ ಡೇಲ್ ಸ್ಟೇನ್ ಹಾಗೂ ಮುಂಬೈ ಇಂಡಿಯನ್ಸ್ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಜ್ಞ ವೇಗಿಗಳ ರೂಪದಲ್ಲಿ ಸ್ಥಾನ ಪಡೆದುಕೊಂಡರೆ, ಆರ್‌ಸಿಬಿ ಮಾಜಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಕೆಕೆಆರ್ ಮಾಂತ್ರಿಕ ಸ್ಪಿನ್ನರ್ ಸುನಿಲ್ ನರೇನ್ ಕೂಡಾ ಪಾಟೀದಾರ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

66
ರಜತ್ ಪಾಟೀದಾರ್‌ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಹೀಗಿದೆ:
Image Credit : ANI

ರಜತ್ ಪಾಟೀದಾರ್‌ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಹೀಗಿದೆ:

ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಎಂ ಎಸ್ ಧೋನಿ(ವಿಕೆಟ್ ಕೀಪರ್), ಸುನಿಲ್ ನರೈನ್, ಡೇಲ್ ಸ್ಟೇನ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ರಜತ್ ಪಾಟಿದಾರ್
ಕ್ರಿಕೆಟ್
ಐಪಿಎಲ್

Latest Videos
Recommended Stories
Recommended image1
ಐಪಿಎಲ್ ಕುರಿತು ಸೆಪ್ಟೆಂಬರ್‌ನಲ್ಲಿ ಮಹತ್ವದ ನಿರ್ಧಾರ, ಬಿಸಿಸಿಐನಲ್ಲಿ ತೀವ್ರಗೊಂಡ ಸರಣಿ ಸಭೆ
Recommended image2
ಸಿಎಸ್‌ಕೆ ತಂಡದ ಜತೆಗಿರಲು ದೊಡ್ಡ ಬೇಡಿಕೆಯಿಟ್ಟ ಮಹೇಂದ್ರ ಸಿಂಗ್ ಧೋನಿ..! ಆದ್ರೆ ಚೆನ್ನೈ ಫ್ರಾಂಚೈಸಿ ಜತೆಗಿನ ಮಹಿ ಮಾತುಕತೆ ಫೇಲ್
Recommended image3
ದುಲೀಫ್‌ ಟ್ರೋಫಿ: ಸೆಮೀಸ್‌ ರೇಸ್‌ನಲ್ಲಿ ರೋಚಕ ತಿರುವು
Related Stories
Recommended image1
IPL ಆಸೆ ತೋರಿಸಿ ಲಂಕಾ ಬ್ಯಾಟರ್ ಬಲಿ ಪಡೆದ ಯಶಸ್ವಿ ಜೈಸ್ವಾಲ್..! ಹಿಂಗೆಲ್ಲಾ ಸ್ಲೆಡ್ಜಿಂಗ್ ಮಾಡ್ತಾರಾ?
Recommended image2
RCB ಗೇಮ್‌ ಚೇಂಜರ್ ಡಿಕೆ, ಚೆನ್ನೈ ಸೂಪರ್ ಕಿಂಗ್ಸ್ ಹೆಡ್ ಕೋಚ್ ಆಗ್ತಾರಾ? ಹೊಸ ಬಾಂಬ್ ಸಿಡಿಸಿದ ಮ್ಯಾಥ್ಯೂ ಹೇಡನ್..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved