ಪಾಕಿಸ್ತಾನ ನಾಯಕ ಬಾಬರ್ ಅಜಮ್ 15 ರೂಪಾಯಿ ಹೇರ್ ಡೈ ಹೊಡೆದು ಇಂಗ್ಲೆಂಡ್‌ನ ಕಿಂಗ್ ಚಾರ್ಲ್ಸ್ ಬೇಟಿಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದೆ. ಏನಿದು ಘಟನೆ?
ಲಂಡನ್ (ಸೆ.03) ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಬಾರಿ 15 ರೂಪಾಯಿ ಹೇರ್ ಡೈ ವಿಚಾರದಲ್ಲಿ ಬಾಬರ್ ಅಜಮ್ ಟ್ರೋಲ್ ಆಗಿದ್ದಾರೆ. ಕಿಂಗ್ ಚಾರ್ಲ್ಸ್ ಬೇಟಿಯಾಗಲು ಆಗಮಿಸಿದ ಬಾಬರ್ ಅಜಮ್ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಬಾಬರ್ ಅಜಮ್ ತಲೆಕೂದಲಿನ ಕಾರಣಕ್ಕೆ ಈ ಬಾರಿ ಟ್ರೋಲ್ ಆಗಿದ್ದಾರೆ. ಹೇರ್ ಡೈ ಹೊಡೆದಂತೆ ಮಾತ್ರವಲ್ಲ, ಹಣೆ ಮೇಲೆ ಹೇರ್ ಡೈ ಉಳಿದಂತಿರುವ ಕಲೆಗಳು ಈ ಟ್ರೋಲ್‌ಗೆ ಕಾರಣಾಗಿದೆ.
15 ರೂಪಾಯಿ ಹೇರ್ ಡೈ ಲುಕ್
ಬಿಳಿ ಟಿ ಶರ್ಟ್ ಧರಿಸಿ ಬಾಬರ್ ಅಜಮ್ ಆಗಮಿಸಿದ್ದಾರೆ. ವಾಹನದಿಂದ ಇಳಿದು ಕಿಂಗ್ ಚಾರ್ಲ್ಸ್ ಬೇಟಿಯಾಗಲು ಅರಮನೆಯತ್ತ ಸಾಗುತ್ತಿರುವಾಗ ಮಾಧ್ಯಮಗಳು, ಪಾಪಾರಾಜಿಗಳು ಫೋಟೋ, ವಿಡಿಯೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಈ ವಿಡಿಯೋಗಳು ಸೋಶಿಯಲ್ ಮೀಡಿಯಾ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ಬಾಬರ್ ಅಜಮ್ ಲುಕ್ ನೋಡಿ ಜನ ಚೀಪ್ ಆ್ಯಂಡ್ ಬೆಸ್ಟ್ ಪಾಕಿಸ್ತಾನ ಕ್ರಿಕೆಟಿಗ ಎಂದಿದ್ದಾರೆ. ಬಾಬರ್ ಅಜಮ್ ಹೇರ್ ಸ್ಟೈಲ್ ಹಾಗೂ ಲುಕ್ ನೋಡಿ ಜನ ಕೇವಲ 15 ರೂಪಾಯಿ ಹೇರ್ ಡೈ ಹೊಡದರೆ ಹೀಗೆ ಆಗುತ್ತೆ. ಕನಿಷ್ಠ 200 ರೂಪಾಯಿ ಡೈ ಆದ್ರೂ ಹೊಡಯಬಹುದಿತ್ತು ಎಂದು ಟ್ರೋಲ್ ಮಾಡಿದ್ದಾರೆ.
ಒಂದು ದಿನ ಮುಂಚೆ ಹೇರ್ ಡೈ
ಬಾಬಾರ್ ಅಜಮ್ ಹಾಗೂ ತಂಡದ ಇತರ ಆಟಾಗರರು ಕಿಂಗ್ ಚಾರ್ಲ್ಸ್ ಬೇಟಿಯಾಗಲು ಆಗಮಿಸಿದ್ದಾರೆ. ಈ ಪೈಕಿ ಬಾಬರ್ ಅಜಮ್ ಟ್ರೋಲ್ ಆಗಿದ್ದಾರೆ. ಬಾಬರ್ ಅಜಮ್ ಬೇಟಿಗೂ ಒಂದು ದಿನ ಮೊದಲು ಹೇರ್ ಡೈ ಹಾಕಿದ್ದಾರೆ. ಕನಿಷ್ಠ 2 ದಿನ ಮೊದಲು ಹಾಕಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಬಾಬರ್ ಅಜಮ್ ಹೇರ್ ಕಡು ಕಪ್ಪು ಬಣ್ಣದಲ್ಲಿ ಕಾಣಿಸುತ್ತಿದೆ. ಜೊತೆಗೆ ಹೇರ್ ಡೈ ಹೊಡೆಯುವಾಗ ಹಣೆ, ಕಿವಿಗಳ ಮೇಲೆ ತಾಗಿದಾಗ ಉಳಿಯುವ ಕಪ್ಪು ಕಲೆಗಳಂತೆ ಬಾಬರ್ ಅಜಮ್ ಮುಖದಲ್ಲೂ ಕಾಣಿಸುತ್ತಿದೆ. ಹೀಗಾಗಿ ಹಲವರು 15 ರೂಪಾಯಿ ಹೇರ್ ಡೈ ಹೊಡೆದು ಪಾಕಿಸ್ತಾನ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ್ದಾರೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ.
ಕಳೆದ ತಿಂಗಳು ಬಾಬರ್ ಅಜಮ್ ಪಾಕಿಸ್ತಾನದ ನಾಯಕನಾಗ ಮರಳಿದ್ದಾರೆ. ಶಾ ಮಸೂದ್ ಬದಲು ಬಾಬರ್ ಅಜಮ್ ಪಾಕ್ ತಂಡದ ನಾಯಕನಾಗಿದ್ದಾರೆ. ಆದರೆ ಇಂಜುರಿ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇಂಗ್ಲೆಂಡ್ ವಿರುದ್ಧ 0-2 ಹಿನ್ನಡೆಯಲ್ಲಿರುವ ಪಾಕಿಸ್ತಾನ ಸೆಪ್ಟೆಂಬರ್ 9 ರಂದು ಮೂರನೇ ಟೆಸ್ಟ್ ಪಂದ್ಯ ಆಡಲಿದೆ. ನಾಯಕನಾಗಿ ಮರಳಿದ ಸರಣಿಯಲ್ಲೇ ಬಾಬರ್ ಅಜಮ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವೈಟ್ ವಾಶ್ ಮುಖಭಂಗ ಭೀತಿಯಲ್ಲಿದ್ದಾರೆ.


