MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
Teacher's Day Wishes 2026
ISRO GSLV F17 Launch
Bengaluru Suburban Rail
Bike Taxi Approval
Karnataka KPSC Scam
Bengaluru Airport Flyover
Mysuru Dasara 2026 Scehdule
Rohit Sharma Retirement Rumors
Gowri Ganesha Festival
Yeshwantpur Mangaluru Vande Bharat
India Iran Relationship
  • Home
  • Automobile
  • Car News
  • ಫಾರ್ಚನರ್ ಪ್ರತಿಸ್ಪರ್ಧಿ, ಆದರೆ ಕೈಗೆಟುಕುವ ಬೆಲೆಯಲ್ಲಿ ಕಿಯಾ ಸೊರೆಂಟೋ ಕಾರು ಲಾಂಚ್

ಫಾರ್ಚನರ್ ಪ್ರತಿಸ್ಪರ್ಧಿ, ಆದರೆ ಕೈಗೆಟುಕುವ ಬೆಲೆಯಲ್ಲಿ ಕಿಯಾ ಸೊರೆಂಟೋ ಕಾರು ಲಾಂಚ್

ಟೋಯೋಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿ, ಆದರೆ ಫಾರ್ಚುರ್ ಕಾರಿಗಿಂತ ಭಾರಿ ಕಡಿಮೆ ಬೆಲೆಯಲ್ಲಿ ಕಿಯಾ ಸೊರೆಂಟೋ ಕಾರು ಭಾರತದಲ್ಲಿ ಲಾಂಚ್ ಆಗಿದೆ. ಹೈಬ್ರಿಡ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

2 Min read
Author : Chethan Kumar
Published : Sep 04 2026, 08:36 PM IST
Share this Photo Gallery
  • FB
  • TW
  • Linkdin
  • Whatsapp
15
ಟೋಯೋಟಾ ಫಾರ್ಚುನರ್ ಕಾರಿನ ಪ್ರತಿಸ್ಪರ್ಧಿ ಸೊರೆಂಟೋ
Image Credit : Kia Sorento

ಟೋಯೋಟಾ ಫಾರ್ಚುನರ್ ಕಾರಿನ ಪ್ರತಿಸ್ಪರ್ಧಿ ಸೊರೆಂಟೋ

ಟೋಯೋಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಕಿಯಾ ಬಹುನಿರೀಕ್ಷಿತ ಸೊರೆಂಟೋ ಕಾರು ಭಾರತದಲ್ಲಿ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಫಾರ್ಚುನರ್ ಕಾರಿಗಿಂತ ಕಡಿಮೆ ಬೆಲೆಗೆ ಸೊರೆಂಟೋ ಕಾರು ಬಿಡುಗಡೆಯಾಗಿದೆ. ಆಕರ್ಷಕ ಡಿಸೈನ್, ಹೆಚ್ಚು ಸ್ಥಳವಕಾಶ, ಅತ್ಯಾಧುನಿಕ ತಂತ್ರಜ್ಞಾನ ಅಡಾಸ್ ಲೆವೆಲ್ 2, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಅಸಿಸ್ಟೆನ್ಸ್, ಪವರ್‌ಫುಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳ ಸೊರೆಂಟೋ ಕಾರು ಲಾಂಚ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹೊಸ ಕಾರಿನ ಬೆಲೆ
Image Credit : Kia sorento

ಹೊಸ ಕಾರಿನ ಬೆಲೆ

ಹೊಸ ಕಿಯಾ ಸೊರೆಂಟೋ ಕಾರಿನ ಬೆಲೆ ಕೇವಲ 27.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದು ಟೋಯೋಟಾ ಫಾರ್ಚುನರ್, ಸ್ಕೋಡಾ ಕೋಡಿಯಾಕ್ ಸೇರಿದಂತೆ ಈ ಸೆಗ್ಮೆಂಟ್‌ನಲ್ಲಿನ ಇತರ ಕಾರುಗಳಿಗೆ ಹೋಲಿಸಿದೆರೆ ಅತೀ ಕಡಿಮೆಯಾಗಿದೆ. ಸೊರೆಂಟ್ ಕಾರಿನಲ್ಲಿ ಡೀಸೆಲ್ ಎಂಜಿನ್ ಹಾಗೂ ಹೈಬ್ರಿಡ್ ಆಯ್ಕೆ ಲಭ್ಯವಿದೆ. ಇದರಲ್ಲಿ 9 ಟ್ರಿಮ್ ವೇರಿಯೆಂಟ್ ಲಭ್ಯವಿದೆ. ಡೀಸೆಲ್ ಬೇಸ್ ಮಾಡೆಲ್ ಬೆಲೆ 27.99 ಲಕ್ಷ ರೂಪಾಯಿ. ಇನ್ನು ಟಾಪ್ ಹೈಬ್ರಿಡ್ ಬ್ಲಾಕ್ ಲೈನ್ AWD ವೇರಿಯೆಂಟ್ ಬೆಲೆ 40.39 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)

Related Articles

Related image1
ಕೇವಲ 11.45 ಲಕ್ಷ ರೂ, ಬೆಂಗಳೂರಲ್ಲಿ ಹೊಸ ಮಹೀಂದ್ರ BE 6 ಸ್ಪೋರ್ಟೆಕ್ ಕಾರು ಬಿಡುಗಡೆ
Related image2
7 ಸೀಟರ್‌ ಫ್ಯಾಮಿಲಿ ಕಾರ್ ಖರೀದಿಸುವ ಪ್ಲಾನ್ ಇದೆಯಾ? ಅವಸರ ಬೇಡ, ಜಪಾನ್‌ನಿಂದ ಬರ್ತಿದೆ ಹೊಸ ಕಾರು!
35
ಕಾರಿನ ಎಂಜಿನ್
Image Credit : Kia sorento

ಕಾರಿನ ಎಂಜಿನ್

ಸೊರೆಂಟೋ ಪವರ್‌ಫುಲ್ ಎಂಜಿನ್ ಹೊಂದಿದೆ. 1.6 ಲೀಟರ್ ಟರ್ಬೋ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. 180hp ಪವರ್ ಹಾಗೂ 65hp ಎಲೆಕ್ಟ್ರಿಕ್ ಮೋಟಾರ್‌ನಿಂದ ಒಟ್ಟು 245hp ಪವರ್ ಸಾಮರ್ಥ್ಯ ಹೊಂದಿದೆ. ಆಲ್ ವ್ಹೀಲ್ ಡ್ರೈವ್ ಈ ಕಾರಿನಲ್ಲಿದೆ. ಇನ್ನು 2.2 ಲೀಟರ್ ಡೀಸೆಲ್ ಎಂಜಿನ್ ಕಾರು 193hp ಪವರ್ ಹಾಗೂ 442Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.

45
ಕಿಯಾ ಎಐ ಫೀಚರ್
Image Credit : Kia sorento

ಕಿಯಾ ಎಐ ಫೀಚರ್

ಕಿಯಾದ ಅತ್ಯಾಧುನಿಕ ಎಐ ಫೀಚರ್ ಇದರಲ್ಲಿದೆ. ವಾಯ್ಸ್ ಮೂಲಕ ಕಾರು ನಿಯಂತ್ರಿಸಲು ಸಾಧ್ಯವಿದೆ. ಹೇ ಕಿಯಾ ಎಂದು ಸೂಚನೆ ನೀಡಿದರೆ ಕಾರು ಅದರಂತೆ ಕಾರ್ಯನಿರ್ವಹಿಸುತ್ತದೆ. ಇದೇ ವೇಳೆ ಮ್ಯಾನ್ಯುಯೆಲ್ ಇಂಟಿಗ್ರೇಶನ್ ಕೂಡ ಸಪೋರ್ಟ್ ಮಾಡಲಿದೆ. ಅಡಾಸ್ ಲೆವೆಲ್ 2 ತಂತ್ರಜ್ಞಾನ ಇದರಲ್ಲಿದೆ.

55
10 ಏರ್‌ಬ್ಯಾಗ್ ಸೇರಿ ಗರಿಷ್ಠ ಸುರಕ್ಷತೆ
Image Credit : Kia sorento

10 ಏರ್‌ಬ್ಯಾಗ್ ಸೇರಿ ಗರಿಷ್ಠ ಸುರಕ್ಷತೆ

ಕಿಯಾ ಸೊರೆಂಟೋ ಕಾರಿನಲ್ಲಿ ಸುರಕ್ಷತಾ ಫೀಚರ್ಸ್ ಲಭ್ಯವಿದೆ. 10 ಏರ್‌ಬ್ಯಾಗ್ ನೀಡಲಾಗಿದೆ. ಸಾಮಾನ್ಯವಾಗಿ 7 ಏರ್‌ಬ್ಯಾಗ್ ನೀಡಲಾಗುತ್ತದೆ. ಆದರೆ ಹೆಚ್ಚಿನ ಸುರಕ್ಷತೆಗಾಗಿ 10 ನೀಡಲಾಗಿದೆ. ಡ್ರೈವಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಕೊಲಿಶನ್ ಅವಾಯ್ಡೆನ್ಸ್ ಸೇರಿದಂತೆ 30ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿದೆ. N3 ಪ್ಲಾಟ್‌ಫಾರ್ಮ್‌‌ನಲ್ಲಿ ಈ ಕಾರು ನಿರ್ಮಾಣಗೊಂಡಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಾರುಗಳು
ಆಟೋಮೊಬೈಲ್
ಭಾರತ ಸುದ್ದಿ

Latest Videos
Recommended Stories
Recommended image1
ಟಾಟಾ ಕಾರ್‌ ಖರೀದಿಸಲು ಸುವರ್ಣಾವಕಾಶ, ಕರ್ವ್‌ನಿಂದ ಹ್ಯಾರಿಯರ್‌ವರೆಗೆ ಲಕ್ಷಗಟ್ಟಲೆ ಡಿಸ್ಕೌಂಟ್‌
Recommended image2
600 KM ಮೈಲೇಜ್, 543hp ಪವರ್, ಟಾಟಾದ ರೇಂಜ್ ರೋವರ್ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಆರಂಭ
Recommended image3
ಕಾರ್‌ ಎಸಿಯಿಂದ ತಂಪಾದ ಗಾಳಿ ಬರ್ತಿಲ್ವಾ?: ಮೆಕ್ಯಾನಿಕ್ ಬಳಿ ಹೋಗುವ ಮುನ್ನ ಈ 5 ಟಿಪ್ಸ್ ಟ್ರೈ ಮಾಡಿ!
Related Stories
Recommended image1
ಕೇವಲ 11.45 ಲಕ್ಷ ರೂ, ಬೆಂಗಳೂರಲ್ಲಿ ಹೊಸ ಮಹೀಂದ್ರ BE 6 ಸ್ಪೋರ್ಟೆಕ್ ಕಾರು ಬಿಡುಗಡೆ
Recommended image2
7 ಸೀಟರ್‌ ಫ್ಯಾಮಿಲಿ ಕಾರ್ ಖರೀದಿಸುವ ಪ್ಲಾನ್ ಇದೆಯಾ? ಅವಸರ ಬೇಡ, ಜಪಾನ್‌ನಿಂದ ಬರ್ತಿದೆ ಹೊಸ ಕಾರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved