ಕೇವಲ 11.45 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಹೊಸ ಮಹೀಂದ್ರ BE 6 ಸ್ಪೋರ್ಟೆಕ್ ಕಾರು ಬೆಂಗಳೂರಲ್ಲಿ ಬಿಡುಗಡೆಯಾಗಿದೆ. ಹೊಸ ಕಾರಿನ ಮೈಲೇಜ್, ಬ್ಯಾಟರಿ ಸಬ್‌ಸ್ಕಿಪ್ಶನ್ ಆಯ್ಕೆ ಸೇರಿದಂತೆ ಸಂಪೂರ್ಣ ಡಿಟೇಲ್ ಇಲ್ಲಿದೆ.

ಬೆಂಗಳೂರು (ಆ.29) ಎಲೆಕ್ಟ್ರಿಕ್ ಕಾರಿನಲ್ಲಿ ಕ್ರಾಂತಿ ಮಾಡಿರುವ ಮಹೀಂದ್ರ ಇತ್ತೀಚೆಗೆ ಹೊಸ ಎಡಿಶನ್ ಮಹೀಂದ್ರ BE 6 ಸ್ಪೋರ್ಟೆಕ್ ಕಾರು ಅನಾವರಣ ಮಾಡಿದೆ. ಇದೀಗ ಬೆಂಗಳೂರಿನಲ್ಲಿ ಮಹೀಂದ್ರ ಹೊಚ್ಚ ಹೊಸ ಕಾರನ್ನು ಪರಿಚಯಿಸಿದೆ. ವಿಶೇಷ ಅಂದರೆ ಈ ಕಾರಿನ ಆರಂಭಿಕ ಬೆಲೆ ಕೇವಲ 11.45 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಬ್ಯಾಟರಿ ಸಬ್‌ಸ್ಕ್ರಿಪ್ಶನ್ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ ಈ ಬೆಲೆಯಲ್ಲಿ ಲಭ್ಯವಾಗಲಿದೆ.

ಮಹೀಂದ್ರ BE 6 ಸ್ಪೋರ್ಟೆಕ್ ಕಾರಿನ ಬೆಲೆ

ಮಹೀಂದ್ರ BE 6 ಸ್ಪೋರ್ಟೆಕ್ ಕಾರಿನಲ್ಲಿ ಬ್ಯಾಟರಿ ಆ್ಯಸ್ ಎ ಸರ್ವೀಸ್ (BaaS) ಆಯ್ಕೆ ನೀಡಿದೆ. ಈ ಆಯ್ಕೆಯಲ್ಲಿ ಕಾರು ಖರೀದಿಸಿದರೆ ಕೇವಲ 11.45 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ. ಬಳಿಕ ಬ್ಯಾಟರಿ ಬಳಕೆಗೆ ಪ್ರತಿ ಕಿಲೋಮೀಟರ್‌ಗೆ 3.75 ರೂಪಾಯಿ ವೆಚ್ಚವಾಗಲಿದೆ. ಮೂರು ಬ್ಯಾಟರಿ ಪ್ಯಾಕ್ ವೇರಿಯೆಂಟ್‌ನಲ್ಲಿ ಈ ಕಾರು ಲಭ್ಯವಿದೆ. 59 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಕಾರನ್ನು BaaS ಮೂಲಕ 11.45 ಲಕ್ಷ ರೂನಲ್ಲಿ ಹಾಗೂ TWO ವೇರಿಯೆಂಟ್ 12.95 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇನ್ನು ಬ್ಯಾಟರಿ ಜೊತೆ ಖರೀದಿ ಮಾಡುವ ಗ್ರಾಹಕರಿಗೆ ಇದೇ 59 ಕಿಲೋವ್ಯಾಟ್ ಕಾರು 19.45 ಲಕ್ಷ ರೂಪಾಯಿ ಬೆಲೆ ಹಾಗೂ TWO ವೇರಿಯೆಂಟ್ ಕಾರು 20.95 ಲಕ್ಷ ರೂಪಾಯಿ,THREE ವೇರಿಯೆಂಟ್ ಕಾರು 21.95 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

70 ಕಿಲೋವ್ಯಾಟರ್ ಬ್ಯಾಟರಿ ಪ್ಯಾಕ್ ಕಾರು THREE ವೇರಿಯೆಂಟ್‌ಗೆ 22.95 ಲಕ್ಷ ರೂಪಾಯಿ, THREE+ ವೇರಿಯೆಂಟ್ ಕಾರಿಗೆ 23.95 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇನ್ನು 79 ಕಿಲೋವ್ಯಾಟ್ ಬ್ಯಾಟರಿ ಕಾರಿನ THREE+ ವೇರಿಯೆಂಟ್‌ಗೆ 24.95 ಲಕ್ಷ ರೂಪಾಯಿ, FOUR ಹಾಗೂ ಲಾಂಚ್ ಎಡಿಶನ್ ಕಾರಿಗೆ 26.95 ಲಕ್ಷ ರೂಪಾಯಿ, ಫಾರ್ಮುಲಾ ಇ ಫ್ರೀಡಂ ಎಡಿಶನ್ ಕಾರಿಗೆ 24.45 ಲಕ್ಷ ರೂಪಾಯಿ, FE FOUR ವೇರಿಯೆಂಟ್ ಕಾರಿಗೆ 26.95 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

12 ಬಣ್ಣ , ಎಐ ಟೆಕ್

12 ಬಣ್ಣಗಳಲ್ಲಿ ಮಹೀಂದ್ರ BE 6 ಸ್ಪೋರ್ಟೆಕ್ ಕಾರು ಲಭ್ಯವಿದೆ. ವಿಶೇಷ ಅಂದರೆ ಪ್ರತಿ ವೇರಿಯೆಂಟ್ ಕಾರಿನಲ್ಲಿ ಟ್ರಿಪಲ್ ಸ್ಕ್ರೀನ್ ಡಿಜಿಟಲ್ ಡಿಸ್‌ಪ್ಲೇ ನೀಡಲಾಗಿದೆ. ಇನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆರ್ಕಿಟೆಕ್ಚರ್ ಆಗಿರುವ MAIA ಆಧಾರಿತ ಆರು ಹೊಸ TEQ ಸೂಟ್‌ಗಳನ್ನು ನೀಡಲಾಗಿದೆ. ಸಾಫ್ಟ್‌ವೇರ್ ಡಿಫೈನ್ಡ್ ವೆಹಿಕಲ್ ಪರಿಕಲ್ಪನೆಯ ಭಾಗವಾಗಿರುವ ಈ ತಂತ್ರಜ್ಞಾನ, ವಾಹನವನ್ನು ಹೆಚ್ಚು ಸ್ಪಂದನಶೀಲ, ಸುರಕ್ಷಿತ, ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವಂತೆ ರೂಪಿಸುತ್ತದೆ. ಮಹೀಂದ್ರಾ ಹೇಳಿದೆ. ಗೂಗಲ್ ಜೆಮಿನಿ TEQ_Talk ಸೇರಿದಂತೆ 17 ಎಐ ಏಜೆಂಟ್‌ಗಳ ಮೂಲಕ 100ಕ್ಕೂ ಹೆಚ್ಚು ಪ್ರಮುಖ ಕಾರ್ಯಗಳು ಮತ್ತು 48 ಆ್ಯಪ್‌ಗಳಿಗೆ ಸಪೋರ್ಟ್ ನೀಡಲಿದೆ.

ಮಹೀಂದ್ರ ವಿಶೇಷ ಫೀಚರ್

ಕಾರಿನೊಳಗಿನ ಗೇಮಿಂಗ್ ಸೂಟ್, BYOD ಮೋಡ್, ಪ್ರೈವೇಟ್ ಆಡಿಯೊ, ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್ ಸೇರಿದಂತೆ ಎಂಟರ್ಟೈನ್ಮೆಂಟ್ ಸಿಸ್ಟಮ್ ನೀಡಲಾಗಿದೆ. TEQ_Driveನಲ್ಲಿ ಕಸ್ಟಮ್ ಡ್ರೈವ್ ಮೋಡ್, ಡ್ರಿಫ್ಟ್ ಮೋಡ್, ಟ್ರೈಬ್ ಡ್ರೈವ್, ರಿವೈವ್ ಮತ್ತು ರಿವೈವ್ SOS ವೈಶಿಷ್ಟ್ಯಗಳಿವೆ. ಫಾರ್ಮುಲಾ E ಫ್ರೀಡಂ ಎಡಿಷನ್‌ಗೆ ಮಾತ್ರ ವಿಶೇಷವಾಗಿ ಆಕ್ಸಿಲರೇಷನ್ ಬೂಸ್ಟ್‌ ದೊರೆಯಲಿದೆ.

ಐಫೋನ್, ಆ್ಯಪಲ್ ವಾಚ್, ಆಂಡ್ರಾಯ್ಡ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಜತೆಗೆ ಎನ್‌ಎಫ್‌ಸಿ ಕೀ ಕಾರ್ಡ್‌ಗಳಲ್ಲಿಯೂ ಕಾರ್ಯನಿರ್ವಹಿಸುವ ಕಾರ್ ಕನೆಕ್ಟಿವಿಟಿ ಕನ್ಸೋರ್ಟಿಯಂ (CCC) ನೀಡಲಾಗಿದೆ. TEQ_xting ವಿಭಾಗದಲ್ಲಿ ವೈಯಕ್ತಿಕ ಟೇಲ್‌ಗೇಟ್‌ನಲ್ಲಿ ಮೇಸೇಜ್ ನೀಡಲು ಸಾಧ್ಯವಿದೆ. ಟೈಲ್‌ಗೇಟ್‌ನಲ್ಲಿ ಕಸ್ಟಮೈಸ್ಡ್ ಮೆಸೇಜ್‌ಗಳನ್ನು ಹಾಕಬಹುದು.