ಭಾರತದ ಪ್ರಧಾನಿ ನರೇಂದ್ರ ಮೋದಿಯುವರು ತಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು ವರ್ಷದ 365 ದಿನಗಳಲ್ಲಿ ಕನಿಷ್ಠ 300 ದಿನಗಳಲ್ಲಿ ‘ಇದನ್ನು’ ಸೇವಿಸುತ್ತಾರೆ. ಈ ಸೀಕ್ರೆಟ್‌ಅನ್ನು ಅವರೇ ಹಲವು ಪಾಡ್‌ಕಾಸ್ಟ್‌ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ

Prime Minister Narendra Modi Health Secrets-ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ರಹಸ್ಯ!

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ನಿನ್ನೆ, ಅಂದರೆ ಸೆಪ್ಟೆಂಬರ್ 17 ರಂದು ಇಡೀ ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ನರೇಂದ್ರ ಮೋದಿಯವರು ಸ್ವತಃ ತಮ್ಮ ಹುಟ್ಟುಹಬ್ಬವನ್ನು ಸಿಂಪಲ್ ಅಗಿ ಪ್ರತಿ ವರ್ಷ ಆಚರಿಸಿಕೊಳ್ಳುತ್ತಾರೆ. ಗುಜರಾತ್‌ನ ವಡ್‌ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17, 1950ರದಲ್ಲಿ ಜನಿಸಿದ್ದಾರೆ. ಮೋದಿಯವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ದೇಶಾದ್ಯಂತ 'ಸೇವಾ ದಿವಸ್' ಅಥವಾ ಸೇವಾ ಸಂಕಲ್ಪ ಅಭಿಯಾನವಾಗಿ ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ಆಚರಿಸಲಾಗುತ್ತದೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷವಾದ ಫಿಟ್‌ನೆಸ್ & ಆರೋಗ್ಯದ ರಹಸ್ಯ!

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷವಾದ ಫಿಟ್‌ನೆಸ್, ಆರೋಗ್ಯ ಹಾಗೂ ಆಧ್ಯಾತ್ಮಿಕ ಅಚರಣೆಗಳ ಬಗ್ಗೆ ಇಡೀ ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅವರು ಸಂಪೂರ್ಣವಾಗಿ ಸಸ್ಯಾಹಾರಿ ಎಂಬುದನ್ನು ಅವರೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಜೊತೆಗೆ, ಅವರ ದಿನಚರಿಯಲ್ಲಿ ವಯಸ್ಸಿಗೆ ತಕ್ಕ ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ ಸೇರಿದಂತೆ ದೇಹ ಹಾಗೂ ಮನಸ್ಸಿನ ಉತ್ತಮ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಂಗತಿಗಳಿಗೆ ವಿಶೇಷ ಸ್ಥಾನವಿದೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಮುಖ್ಯವಾಗಿ ಪ್ರಧಾನಿ ಮೋದಿಯವರು ನವರಾತ್ರಿಯ ಆ ಒಂಬತ್ತು ದಿವಸಗಳು ಕೇವಲ ನೀರು ಕುಡಿದು ವೃತ ಆಚರಿಸುತ್ತಾರೆ ಎಂಬುದೂ ಕೂಡ ಜಗಜ್ಜಾಹೀರಾಗಿರುವ ಸಂಗತಿ.

ರಾಜಕೀಯ, ಪಕ್ಷಗಳ ಭಿನ್ನತೆ ಏನೇ ಇದ್ದರೂ ಮೋದಿಯವರ ಉತ್ತಮ ಆರೋಗ್ಯದ ಬಗ್ಗೆ ಜಗತ್ತಿಗೆ ತಿಳಿದಿದೆ!

ದೇಶ, ಕಾಲ ಹಾಗೂ ರಾಜಕೀಯ, ಪಕ್ಷಗಳ ಭಿನ್ನತೆ ಏನೇ ಇದ್ದರೂ ಮೋದಿಯವರ ಉತ್ತಮ ಆರೋಗ್ಯವನ್ನು, ದಿನಚರಿಯನ್ನು ಜಗತ್ತು ಹಾಡಿಹೊಗಳುತ್ತದೆ. ಇಂಥ ಮೋದಿಯವರು ತಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು 'ಆ ಒಂದು ಪದಾರ್ಥ'ವನ್ನು ತಪ್ಪದೇ ತಿನ್ನುತ್ತಾರೆ. ಅದನ್ನು ಅವರೇ ಸ್ವತಃ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ?

ಹೌದು, ಭಾರತದ ಪ್ರಧಾನಿ ಮೋದಿಯುವರು ತಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು ವರ್ಷದ 365 ದಿನಗಳಲ್ಲಿ ಕನಿಷ್ಠ 300 ದಿನಗಳಲ್ಲಿ ಕಿಚಡಿಯನ್ನು ಸೇವಿಸುತ್ತಾರೆ. ಇದು ಸೀಕ್ರೆಟ್ ಏನೂ ಅಲ್ಲ. ಅವರೇ ಅದನ್ನು ಹಲವು ಪಾಡ್‌ಕಾಸ್ಟ್‌ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಕಿಚಡಿಯಲ್ಲಿ ಅಂಥ ವಿಶೇಷತೆ ಏನಿದೆ? ಅದರಲ್ಲಿ ಯಾವೆಲ್ಲ ಪರ್ದಾರ್ಥಗಳು ಸೇರಿಕೊಂಡಿವೆ? ಈ ಸ್ಟೋರಿ ನೋಡಿ..

ಕಿಚಡಿ

ಕಿಚಡಿಯಲ್ಲಿ ಏನೇನಿದೆ? ಮಾಡುವುದು ಹೇಗೆ?

ಹೊಟ್ಟೆಗೆ ಹಿತ ನೀಡುವ, ಮನಸ್ಸಿಗೆ ಮುದ ನೀಡುವ ಅತ್ಯುತ್ತಮ ಆಹಾರವೆಂದರೆ ಅದು ಆರೋಗ್ಯಕರ ಹೆಸರುಬೇಳೆ ಕಿಚಡಿ. ಹೆಸರುಬೇಳೆ ಕಿಚಡಿ ಎಂದರೆ ಅದು ಮಾತ್ರವಲ್ಲ, ಹೆಸರುಬೇಳೆ ಜೊತೆಗೆ ಇನ್ನೂ ಹಲವು ಪದಾರ್ಥಗಳು ಮಿಕ್ಸ್ ಆಗಿರುತ್ತವೆ. ಇದನ್ನು ತಯಾರಿಸುವುದು ಅತ್ಯಂತ ಸರಳವಾದರೂ, ಇದರ ಪೌಷ್ಟಿಕಾಂಶದ ಮೌಲ್ಯ ಅಪಾರ. ಭಾರತೀಯ ಪ್ರತಿಯೊಂದು ಮನೆಯಲ್ಲೂ ನೆಮ್ಮದಿಯ ಸಂಕೇತವಾಗಿರುವ ಈ ಸರಳ ಹಾಗೂ ರುಚಿಕರವಾದ ಕಿಚಡಿ ತಯಾರಿಸುವ ವಿಧಾನ ಇಲ್ಲಿದೆ ನೋಡಿ..

ಮೊದಲಿಗೆ, ಸಮಪ್ರಮಾಣದಲ್ಲಿ ಅಕ್ಕಿ ಮತ್ತು ಹೆಸರು ಬೇಳೆಯನ್ನು ತೆಗೆದುಕೊಳ್ಳಿ. ಹೆಸರು ಬೇಳೆಯು ಜೀರ್ಣಕ್ರಿಯೆಗೆ ಅತ್ಯುತ್ತಮ ಹಾಗೂ ಪ್ರೋಟೀನ್‌ಗಳಿಂದ ಸಮೃದ್ಧವಾಗಿದೆ. ಇವೆರಡನ್ನೂ ಮೂರ್ನಾಲ್ಕು ಬಾರಿ ಸ್ವಚ್ಛವಾಗಿ ತೊಳೆದು, ಕನಿಷ್ಠ ಇಪ್ಪತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಈ ಸಮಯದಲ್ಲಿ ನಿಮ್ಮಿಷ್ಟದ ಪೌಷ್ಟಿಕ ತರಕಾರಿಗಳಾದ ಕ್ಯಾರೆಟ್, ಹಸಿ ಬಟಾಣಿ, ಬೀನ್ಸ್ ಮತ್ತು ಆಲೂಗಡ್ಡೆಗಳನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.

ಈಗ ಪ್ರೆಷರ್ ಕುಕ್ಕರ್ ಅನ್ನು ಒಲೆಯ ಮೇಲಿಟ್ಟು, ಒಂದೆರಡು ಚಮಚ ಶುದ್ಧ ಹಸುವಿನ ತುಪ್ಪ ಹಾಕಿ. ತುಪ್ಪ ಕರಗಿ ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ ಚಿಟಪಟ ಎನ್ನಲು ಬಿಡಿ. ಜೀರಿಗೆಯ ಸುವಾಸನೆ ಹರಡುತ್ತಿದ್ದಂತೆ ಜೀರ್ಣಶಕ್ತಿ ಹೆಚ್ಚಿಸುವ ಸಣ್ಣಗೆ ಹೆಚ್ಚಿದ ಶುಂಠಿ, ಸ್ವಲ್ಪ ಇಂಗು ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಸಾಟಿ ಮಾಡಿ. ನಂತರ ಹೆಚ್ಚಿಟ್ಟುಕೊಂಡ ಬಣ್ಣಬಣ್ಣದ ತರಕಾರಿಗಳನ್ನು ಹಾಕಿ, ಒಂದೆರಡು ನಿಮಿಷಗಳ ಕಾಲ ಲಘುವಾಗಿ ಹುರಿಯಿರಿ. ಈ ತರಕಾರಿಗಳು ಕಿಚಡಿಗೆ ವಿಟಮಿನ್, ಖನಿಜಾಂಶ ಮತ್ತು ನಾರಿನಂಶದ ಬಲ ನೀಡುತ್ತವೆ.

ಇದಾದ ನಂತರ, ನೆನೆಸಿದ ಅಕ್ಕಿ ಮತ್ತು ಹೆಸರು ಬೇಳೆಯನ್ನು ನೀರು ಬಸಿಯುವಂತೆ ಮಾಡಿ ಕುಕ್ಕರ್‌ಗೆ ಸೇರಿಸಿ. ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಕಿಚಡಿ ಬೆಣ್ಣೆಯಂತೆ ಮೃದುವಾಗಿ ಬರಲು, ನೀವು ತೆಗೆದುಕೊಂಡ ಅಕ್ಕಿ-ಬೇಳೆಯ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ನೀರು ಸೇರಿಸುವುದು ಪ್ರಮುಖ ರಹಸ್ಯ.

ಕುಕ್ಕರ್ ಮುಚ್ಚಳ ಮುಚ್ಚಿ, ಮಧ್ಯಮ ಉರಿಯಲ್ಲಿ ಮೂರರಿಂದ ನಾಲ್ಕು ವಿಸಿಲ್ ಬರಿಸಿಕೊಳ್ಳಿ. ಪ್ರೆಷರ್ ಪೂರ್ತಿಯಾಗಿ ಆರಿದ ನಂತರ ಮುಚ್ಚಳ ತೆಗೆದು, ಮೇಲಿಂದ ತಾಜಾ ಕೊತ್ತಂಬರಿ ಸೊಪ್ಪು ಮತ್ತು ಇನ್ನೊಂದು ಚಮಚ ಹಸುವಿನ ತುಪ್ಪ ಬೆರೆಸಿ. ಘಮಘಮಿಸುವ, ಬಿಸಿಬಿಸಿಯಾದ ಸಾತ್ವಿಕ ಕಿಚಡಿ ಈಗ ಸವಿಯಲು ಸಿದ್ಧ! ಇದನ್ನು ತಾಜಾ ಮೊಸರು, ಹರಳೆಕಾಯಿ ಉಪ್ಪಿನಕಾಯಿ ಅಥವಾ ಹಪ್ಪಳದ ಜೊತೆ ಸೇವಿಸಿದರೆ ದೇಹಕ್ಕೂ ಮನಸ್ಸಿಗೂ ಸಿಗುವ ತೃಪ್ತಿ ಅದ್ಭುತ. ಸರಳತೆ ಮತ್ತು ಆರೋಗ್ಯದ ಪರಿಪೂರ್ಣ ಸಂಗಮವೇ ಈ ಪೌಷ್ಟಿಕ ಕಿಚಡಿ.