ಈ ಶೇಂಗಾ ಚಟ್ನಿ ಮಾಡುವಾಗ ಉಪಯೋಗಿಸುವ ಮುಖ್ಯ ಪದಾರ್ಥಗಳು ಎಂದರೆ ಅದು ತೆಂಗಿನ ಕಾಯಿ ತುರಿ ಹಾಗೂ ಶೇಂಗಾ. ಮಿಕ್ಕ ಪದಾರ್ಥಗಳ ಉಪಯೋಗದ ವಿಷಯದಲ್ಲಿ ಅದು ಬೇರೆಬೇರೆ ಪದಾರ್ಥಗಳು ಹಾಗೂ ಪ್ರಮಾಣದಲ್ಲಿ ಬದಲಾವಣೆ ಆಗಬಹುದು. ಆದರೆ ಹೀಗೆ ಮಾಡಿ..
ಶೇಂಗಾ ಚಟ್ನಿಯ ಹೊಸ ರೆಸಿಪಿ
ಶೇಂಗಾ (ಕಡಲೇಕಾಯಿ) ಚಟ್ನಿಯನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ, ರುಚಿ ಒಂದೇ ತರಹ ಬರಲ್ಲ. ಉತ್ತರ ಕರ್ನಾಟಕದವರು ಮಾಡೋ ರೀತಿಯೇ ಬೇರೆ, ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಶೇಂಗಾ (Groundnut) ಚಟ್ನಿ ಮಾಡೋ ರೀತಿಯೇ ಬೇರೆ. ಈ ಚಟ್ನಿಗೆ ಉಪಯೋಗಿಸುವ ಪದಾರ್ಥಗಳು ಕೂಡ ಕೆಲವೊಮ್ಮೆ ವಿಭಿನ್ನವೇ ಆಗಿದೆ. ಆದರೆ, ಹೆಚ್ಚಾಗಿ ಎಲ್ಲಾ ಕಡೆ ಉಪಯೋಗಿಸುವ ಕಾಮನ್ (ಸಾಮಾನ್ಯ) ಪದಾರ್ಥಗಳು ಹೀಗಿವೆ.
ಮಾಡುವುದು ಹೀಗೆ
ಕಡಲೇಕಾಯಿ (Peanut), ತೆಂಗಿನ ತುರಿ, ಹಸಿಮೆಣಸಿನಕಾಯಿ, ಸ್ವಲ್ಪ ಶುಂಟಿ, ಸ್ವಲ್ಪ ಹುಣುಸೇಹಣ್ಣು, ಜೀರಿಗೆ, ಕೊತ್ತಂಬರಿ ಸೇರಿದಂತೆ ಚಟ್ನಿಗೆ ಬೇಕಾದ ಎಲ್ಲವನ್ನೂ ಮಿಕ್ಸಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ. ಆ ಬಳಿಕ ಒಗ್ಗರಣೆ ಹಾಕುವಾಗ ತುಪ್ಪ ಅಥವಾ ನಿಮ್ಮಿಷ್ಟದ ಎಣ್ಣೆ, ಒಣಮೆಣಸಿನಕಾಯಿ, ಸಾಸಿವೆ ಅರಿಶಿನ ಹಾಗೂ ಕರಿಬೇವಿನಸೊಪ್ಪು ಸೇರಿಸಿ ಒಗ್ಗರಣೆ ಹಾಕಿ. ಹೀಗೆ ಮಾಡಿದಾಗ ಶೇಂಗಾ ಚಟ್ನಿ ರೆಡಿಯಾಗುತ್ತದೆ. ಆದರೆ, ಬೇರೆ ರುಚಿ ಸಿಗೋದಿಲ್ಲ.
ವಿಭಿನ್ನ ರುಚಿಗೆ ಏನು ಮಾಡಬೇಕು?
ಹಸಿ ಶೆಂಗಾವನ್ನು ಹಾಕುವ ಬದಲು ಅದನ್ನು ಸ್ವಲ್ಪ ಹುರಿಯಬೇಕು. ಒಮ್ಮೆ ಸ್ವಲ್ಪ ಎಣ್ಣೆ ಹಾಕಿ ಹುರಿಯುವುದಾದರೆ ಶೇಂಗಾ (ಕಡಲೇಕಾಯಿ) ಎಣ್ಣೆಯನ್ನೇ ಹಾಕಿ ಹುರಿಯಿರಿ. ಬೇರೆ ಎಣ್ಣೆ ಹಾಕಿದರೆ ರುಚಿ ಬದಲಾಗಬಹುದು. ಎಣ್ಣೆ ಉಪಯೋಗಿಸದೇ ಹಾಗೆಯೇ ಹುರಿದುಕೊಂಡರೆ ಹುರಿದ ಶೇಂಗಾ ರುಚಿ (aroma) ಇನ್ನೂ ಸ್ಪಷ್ಟವಾಗಿ ಉಳಿಯುತ್ತದೆ. ಹುರಿದ ಶೇಂಗಾ ಉಪಯೋಗಿಸಿ ಮಾಡಿದರೆ ರುಚಿ, ಸುವಾಸನೆ ಬೇರೆಯೇ ಸಿಗುತ್ತದೆ. ಈ ಚಟ್ನಿ ಸವಿದರೆ ಶೇಂಗಾ ಚಟ್ನಿಯ ರುಚಿ ತುಂಬಾ ವಿಭಿನ್ನ ಎನ್ನಿಸುತ್ತದೆ.
ಈ ಶೇಂಗಾ ಚಟ್ನಿ ಮಾಡುವಾಗ ಉಪಯೋಗಿಸುವ ಮುಖ್ಯ ಪದಾರ್ಥಗಳು ಎಂದರೆ ಅದು ತೆಂಗಿನ ಕಾಯಿ ತುರಿ ಹಾಗೂ ಶೇಂಗಾ. ಮಿಕ್ಕ ಪದಾರ್ಥಗಳ ಉಪಯೋಗದ ವಿಷಯದಲ್ಲಿ ಅದು ಬೇರೆಬೇರೆ ಪದಾರ್ಥಗಳು ಹಾಗೂ ಪ್ರಮಾಣದಲ್ಲಿ ಬದಲಾವಣೆ ಆಗಬಹುದು. ಆದರೆ, ಹಸಿ ಶೇಂಗಾ ಉಪಯೋಗಿಸುವ ಬದಲು ಹುರಿದ ಶೇಂಗಾ ಉಪಯೋಗಿಸಿ ನೋಡಿ.. ಈ ರುಚಿ ನಿಮ್ಮ ಅಚ್ಚರಿಗೆ ಕಾರಣವಾಗುತ್ತದೆ.


