- Home
- Life
- Health
- ಅರಿಶಿಣದ ಸಂಪೂರ್ಣ ಲಾಭ ಪಡೆಯಬೇಕೆಂದ್ರೆ ಈ ತಪ್ಪು ಎಂದಿಗೂ ಮಾಡಬೇಡಿ: 90% ಜನರಿಗೆ ತಿಳಿಯದ ರಹಸ್ಯವಿದು
ಅರಿಶಿಣದ ಸಂಪೂರ್ಣ ಲಾಭ ಪಡೆಯಬೇಕೆಂದ್ರೆ ಈ ತಪ್ಪು ಎಂದಿಗೂ ಮಾಡಬೇಡಿ: 90% ಜನರಿಗೆ ತಿಳಿಯದ ರಹಸ್ಯವಿದು
ಅರಿಶಿಣವು ಆರೋಗ್ಯ, ಸೌಂದರ್ಯ ಮತ್ತು ಕೀಟನಾಶಕವಾಗಿ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೇವಲ ಅರಿಶಿಣವನ್ನು ಮಾತ್ರ ಬಳಸಿದರೆ ಅದರ ಸಂಪೂರ್ಣ ಲಾಭ ದೇಹಕ್ಕೆ ಸಿಗುವುದಿಲ್ಲ. ತಜ್ಞರ ಪ್ರಕಾರ, ಇದರ 100% ಪ್ರಯೋಜನ ಪಡೆಯಲು ಕಾಳುಮೆಣಸಿನ ಪುಡಿಯೊಂದಿಗೆ ಬೆರೆಸಿ ಬಳಸಬೇಕು.

ಅರಿಶಿಣ ಪುಡಿಗೆ ವಿಶೇಷ ಸ್ಥಾನ
ಭಾರತೀಯ ಅಡುಗೆ ಮನೆಯಲ್ಲಿ ಅರಿಶಿಣ ಪುಡಿಗೆ ವಿಶೇಷ ಸ್ಥಾನ ಇದ್ದೇ ಇದೆ. ಅರಿಶಿಣ ಹಿಂದೂ ಸಂಪ್ರದಾಯಗಳಲ್ಲಿ ಪೂಜೆಗಳಲ್ಲಿಯೂ ಪ್ರಸಿದ್ಧ ಸ್ಥಾನ ಪಡೆದಿರುವುದಕ್ಕೆ ಕಾರಣ, ಅದರ ಆರೋಗ್ಯವರ್ಧಕ ಗುಣಗಳು. ಅರಿಶಿಣದ ಸೇವನೆಯಿಂದ ನೂರೆಂಟು ಪ್ರಯೋಜನಗಳು ಇರುವ ಕಾರಣದಿಂದಲೇ ಅದಕ್ಕೆ ಅಷ್ಟು ಮಹತ್ವ ಇದೆ.
ಎಲ್ಲೆಲ್ಲೂ ಅರಿಶಿಣ
ಅರಿಶಿಣಕ್ಕೆ ವಿಶೇಷವಾಗಿ ನಂಜುನಿರೋಧಕ ಗುಣ ಇರುವ ಕಾರಣದಿಂದ ಇದು ಅಡುಗೆಗೆ ಆಗಲಿ, ಔಷಧಿಯ ಬಳಕೆಗೆ ಆಗಲಿ, ಸೌಂದರ್ಯ ವರ್ಧಕಕ್ಕೆ ಆಗಲಿ ಎಲ್ಲಾದಕ್ಕೂ ದಿವ್ಯ ಔಷಧಿಯಾಗಿ ಬಳಕೆಯಾಗುತ್ತಿದೆ. ಇದು ಆಹಾರಗಳಿಗೆ ಉತ್ತಮವಾದ ಬಣ್ಣವನ್ನು ನೀಡುವುದಲ್ಲದೇ, ಆರೋಗ್ಯವನ್ನೂ ಕಾಪಾಡುತ್ತದೆ.
ಹಲವು ಸಮಸ್ಯೆಗಳಿಗೆ ರಾಮಬಾಣ
ಅರಿಶಿಣವು, ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಮುಖ್ಯವಾಗಿ ಅರಿಶಿಣವು ಜ್ವರ ಅಥವಾ ಶೀತ ಜ್ವರಕ್ಕೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಅರಿಶಿಣವನ್ನು ನಮ್ಮ ಹಿರಿಯರು ಗಾಯಗಳಿಂದ ಉಂಟಾಗುತ್ತಿದ್ದ, ರಕ್ತ ಸ್ರವಿಕೆಯನ್ನು ತಡೆಗಟ್ಟಲು ಹಾಗು ಸೋಂಕು ರಹಿತವಾಗಿಸಲು ಬಳಸುತ್ತಿದ್ದರು. ಅರಿಶಿಣವು ಅದರ ಗುಣಪಡಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ.
ಕೀಟಗಳಿಂದ ಮುಕ್ತಿ
ಇರುವೆ, ಜಿರಲೆ ಸೇರಿದಂತೆ ಹಲವು ಕೀಟಗಳ ಹಾವಳಿಯಿಂದ ರಕ್ಷಣೆಗೂ ಅರಿಶಿಣ ಪ್ರಯೋಜನಕಾರಿಯಾಗಿದೆ. ಸಣ್ಣದಾದ ಸ್ಪ್ರೇ ಬಾಟಲಿಯಲ್ಲಿ ಒಂದು ಚಮಚ ಅರಿಶಿಣ ಬೆರಸಿದ ನೀರನ್ನು ನೇರವಾಗಿ ಸಸ್ಯಗಳ ಮೇಲೆ ಸಿಂಪಡಿಸಿ. ಕೀಟಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಈ ಕಾರ್ಯವನ್ನು ಮೂರರಿಂದ ನಾಲ್ಕು ದಿನಗಳವರೆಗೆ ಪುನರಾವರ್ತಿಸಿದರೆ ಸಸ್ಯಗಳನ್ನು ಬಾಧಿಸುವ ಕೀಟಗಳು ನಾಶವಾಗುತ್ತವೆ.
ಪ್ರಯೋಜನ ನಿಮಗೆ ಸಿಗುತ್ತಿಲ್ಲ
ಇವೆಲ್ಲಾ ಸರಿ. ಆದರೆ ನೀವು ಅರಿಶಿಣವನ್ನು ಪ್ರತಿನಿತ್ಯ ಸೇವಿಸುತ್ತಿದ್ದರೂ ಇದರ ಪ್ರಯೋಜನ ನಿಮಗೆ 100% ಸಿಕ್ತಿಲ್ಲ ಎನ್ನೋದು ಗೊತ್ತಿದ್ಯಾ? ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ಅರಿಶಿಣವನ್ನು ಬಹುತೇಕ ಮಂದಿ ಸರಿಯಾದ ಪ್ರಮಾಣದಲ್ಲಿ ಸೇವಿಸುತ್ತಲೇ ಇಲ್ಲ. ಆದ್ದರಿಂದ ಇದರ ಪ್ರಯೋಜನ ನಿಮಗೆ ಸಿಗುತ್ತಿಲ್ಲ.
100% ಲಾಭ
ಇದಕ್ಕೆ ಕಾರಣ, ಯಾವಾಗಲೂ ಅರಿಶಿಣದ ಪುಡಿ ಬಳಸುವಾಗ, ಅದೊಂದನ್ನೇ ಬಳಸಬಾರದು. ಹೀಗೆ ಒಂದನ್ನೇ ಬಳಸಿದರೆ, ಅದು ದೇಹದ ಮೇಲೆ ನಿಮಗೆ ಅಗತ್ಯ ಇರುವಷ್ಟು ಪರಿಣಾಮ ಬೀರುವುದೇ ಇಲ್ಲ ಎನ್ನುತ್ತಾರೆ ತಜ್ಞರು. ಆದ್ದರಿಂದ ನೀವು ಅರಿಶಿಣ ಬಳಸುವಾಗ ಅದರ ಜೊತೆಗೆ ಕಾಳುಮೆಣಸಿನ ಪುಡಿಯನ್ನು ಮಿಕ್ಸ್ ಮಾಡಿಯೇ ಬಳಸಬೇಕು ಎನ್ನುವುದು ಅವರ ಮಾತು. ಹೀಗೆ ಅರಿಶಿಣದ ಪುಡಿ ಮತ್ತು ಕಾಳು ಮೆಣಸಿನ ಪೌಡರ್ ಮಿಕ್ಸ್ ಆದರೆ ಮಾತ್ರ ಅರಿಶಿಣದ ಪುಡಿಯ 100% ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

