Asianet Suvarna News Asianet Suvarna News

#MeToo : ಸ್ನೇಹಿತನ ನೆರವಿಗೆ ಧಾವಿಸಿದ ಖುಷ್ಬೂ

Oct 22, 2018, 9:37 PM IST

ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿರುವ ಮೀ ಟೂ ಆರೋಪಕ್ಕೆ ಸ್ಯಾಂಡಲ್ ವುಡ್ ನಲ್ಲಿ ಪರ- ವಿರೋಧ ಚರ್ಚೆ ಶುರುವಾಗಿದೆ. ಈ ಸಂದರ್ಭದಲ್ಲಿ ಕೆಲವರು ಶೃತಿ ಪರ ನಿಂತರೆ, ಇನ್ನು ಕೆಲವರು ಅರ್ಜುನ್ ಸರ್ಜಾ ಪರ ನಿಂತಿದ್ದಾರೆ. ನಟಿ ಖುಷ್ಬೂ ಅರ್ಜುನ್ ಸರ್ಜಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಅರ್ಜುನ್ ಎಂಥಾವ್ರು ಅಂತ ನನಗೆ ಚೆನ್ನಾಗಿ ಗೊತ್ತು. ಅರ್ಜುನ್ ಬಗ್ಗೆ ಬರ್ತಿರೊ ಅಷ್ಟೂ ಆರೋಪಗಳು ಸುಳ್ಳು ಅಂತ ನಾನು ಹೇಳಬಲ್ಲೆ. ಅರ್ಜುನ್ ಸರ್ಜಾ ಪರ ನಾನಿದ್ದೇನೆ. ನಾನೀಗ ಅವರ ಪರ ನಿಲ್ಲದೆ ಹೋದರೆ ನಮ್ಮ ಸ್ನೇಹಕ್ಕೆ ಬೆಲೆಯೆ ಇಲ್ಲ ಎಂದಿದ್ದಾರೆ.