'ಹೃತಿಕ್ ರೋಷನ್ ಅವರ ದೇಹದಲ್ಲಿರುವ ಅತಿ ಉದ್ದದ ಮೂಳೆ ಯಾವುದು?” ಎಂಬ ರೀತಿಯ ಪ್ರಶ್ನೆಗಳನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸುವ ಯೋಚನೆ ಇತ್ತಂತೆ. ಅದನ್ನು ಕೇಳಿ ಈ ನಟ ಹೇಳಿದ್ದೇನು ನೋಡಿ..

Hrithik Roshan longest bone question in school textbook? ‘ಹೃತಿಕ್ ರೋಷನ್ ದೇಹದಲ್ಲಿರುವ ಅತಿ ಉದ್ದದ ಮೂಳೆ ಯಾವುದು?’ ಶಾಲಾ ಪಠ್ಯಪುಸ್ತಕದಲ್ಲಿ ನಟನ ಹೆಸರನ್ನೇ ಬಳಸಲು ಮುಂದಾಗಿದ್ದ ಶಿಕ್ಷಣ ಮಂಡಳಿ!

ಬಾಲಿವುಡ್‌ನ ಹ್ಯಾಂಡ್ಸಮ್ ಹೀರೋ ಹೃತಿಕ್ ರೋಷನ್ ಎಂದಾಕ್ಷಣ ಅಭಿಮಾನಿಗಳ ಕಣ್ಣ ಮುಂದೆ ಬರುವುದು ಅವರ ಅದ್ಭುತ ಲುಕ್, ಫಿಟ್‌ನೆಸ್ ಹಾಗೂ ಗ್ರೀಕ್ ಗಾಡ್‌ನಂತಿರುವ ಮೈಕಟ್ಟು. ಆದರೆ ಇದೇ ದೇಹದ ವೈಶಿಷ್ಟ್ಯ ಒಮ್ಮೆ ಶಾಲಾ ಮಕ್ಕಳ ಪಾಠಕ್ಕೂ ಕನೆಕ್ಟ್ ಆಗಿತ್ತು ಎಂದರೆ ನಂಬುತ್ತೀರಾ? ಹೌದು, ಹೃತಿಕ್ ರೋಷನ್ ಅವರ ಹೆಸರನ್ನು ಬಳಸಿಕೊಂಡು ಮಕ್ಕಳಿಗೆ ಬಯಾಲಜಿ ಪಾಠ ಕಲಿಸುವ ವಿಚಿತ್ರ ಆಲೋಚನೆಯೊಂದನ್ನು ಶಾಲಾ ಮಂಡಳಿ ಮೂಡಿತ್ತಂತೆ!

ಈ ಕುತೂಹಲಕಾರಿ ಸಂಗತಿಯನ್ನು ಸ್ವತಃ ಹೃತಿಕ್ ರೋಷನ್ ಅವರು ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಚಾಟ್ ಶೋ ‘ಕಾಫಿ ವಿತ್ ಕರಣ್’ನಲ್ಲಿ ಹಂಚಿಕೊಂಡಿದ್ದರು. ತಾವು ಆಗ ಕಲ್ಕತ್ತಾ, ಅಂದರೆ ಇಂದಿನ ಕೋಲ್ಕತ್ತಾದಲ್ಲಿದ್ದಾಗ ಶಾಲಾ ಮಂಡಳಿಯಿಂದ ತಮಗೆ ಒಂದು ಸಂದೇಶ ಬಂದಿತ್ತು ಎಂದು ನಟ ನೆನಪಿಸಿಕೊಂಡಿದ್ದಾರೆ.

ಆ ಸಂದೇಶದಲ್ಲಿದ್ದ ಪ್ರಸ್ತಾಪ ಕೇಳಿ ಹೃತಿಕ್‌ಗೂ ಅಚ್ಚರಿಯಾಗಿತ್ತಂತೆ. ಮಕ್ಕಳಿಗೆ ಪಾಠಗಳನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಪಠ್ಯಪುಸ್ತಕದ ಪ್ರಶ್ನೆಗಳಲ್ಲಿ ತಮ್ಮ ಹೆಸರನ್ನು ಬಳಸಲು ಮಂಡಳಿ ಬಯಸಿತ್ತು. ಅದರಲ್ಲೂ ಬಯಾಲಜಿ ವಿಷಯದಲ್ಲಿ ಹೃತಿಕ್ ಅವರ ದೇಹಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸೇರಿಸುವ ಆಲೋಚನೆ ಇತ್ತು.

ಅದರ ಉದಾಹರಣೆಯನ್ನೇ ಹೃತಿಕ್ ನಗುತ್ತಾ ಹೇಳಿಕೊಂಡಿದ್ದರು—“ಹೃತಿಕ್ ರೋಷನ್ ಅವರ ದೇಹದಲ್ಲಿರುವ ಅತಿ ಉದ್ದದ ಮೂಳೆ ಯಾವುದು?” ಎಂಬ ರೀತಿಯ ಪ್ರಶ್ನೆಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಯೋಚನೆ ಇತ್ತಂತೆ. ಪರಿಚಿತ ಸೆಲೆಬ್ರಿಟಿಯ ಹೆಸರನ್ನು ಪಾಠದೊಂದಿಗೆ ಜೋಡಿಸಿದರೆ ಮಕ್ಕಳು ವಿಷಯವನ್ನು ಹೆಚ್ಚು ಆಸಕ್ತಿಯಿಂದ ಕಲಿಯುತ್ತಾರೆ ಎಂಬುದು ಮಂಡಳಿಯ ಆಲೋಚನೆಯಾಗಿತ್ತು.

ಇನ್ನು ಹೃತಿಕ್ ಅವರ ಸಿನಿಮಾ ಪಯಣ ನೋಡಿದರೆ, 2000ರಲ್ಲಿ ಬಿಡುಗಡೆಯಾದ ‘ಕಹೋ ನಾ... ಪ್ಯಾರ್ ಹೈ’ ಚಿತ್ರದ ಮೂಲಕ ನಾಯಕನಾಗಿ ಭರ್ಜರಿ ಎಂಟ್ರಿ ಕೊಟ್ಟರು. ಅಮೀಷಾ ಪಟೇಲ್ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಬಳಿಕ ಆಕ್ಷನ್, ರೊಮ್ಯಾನ್ಸ್ ಹಾಗೂ ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಕಟ್ಟಿಕೊಂಡರು.

ಮುಂದೆ ‘ಕ್ರಿಷ್ 4’ (Krrish 4) ಮೂಲಕ ಮತ್ತೊಮ್ಮೆ ಕೃಷ್ಣ ಮೆಹ್ರಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯೂ ಇದೆ. ಇತ್ತೀಚೆಗೆ ಅವರು ‘ಆಲ್ಫಾ’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದು, ಇದು ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ಭಾಗವಾಗಿದೆ.