ಇಂದು ಯಶ್ ಜಗತ್ತನ್ನೇ ಗೆಲ್ಲಲು ಹೊರಟಿದ್ದಾರೆ. ಇಡೀ ಭಾರತವೇ ಯಶ್ ಸಕ್ಸಕ್ ಸ್ವಾಗತಿಸಲು ಎದುರುನೋಡುತ್ತಿದೆ. ಯಶ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು ಇನ್ನೇನು 7 ದಿನಗಳಷ್ಟೇ ಬಾಕಿ..! ಈ ಸಕ್ಸಸ್ ಸ್ಟೋರಿ ಹಿಂದಿನ ಮಹಾಮಂತ್ರದ ಸೀಕ್ರೆಟ್ ಇಲ್ಲಿದೆ ನೋಡಿ..

Brand Yash- Rocking Star Yash-Successful Story from Sandalwood to Hollywood: ಬ್ರ್ಯಾಂಡ್ 'ಯಶ್': ಗಾಂಧಿನಗರದ ಗಲ್ಲಿಯಿಂದ ಗ್ಲೋಬಲ್ ಗತ್ತಿನವರೆಗೆ - ರಾಕಿ ಭಾಯ್ ಅನ್-ಟೋಲ್ಡ್ ಸ್ಟೋರಿ!

ಕನ್ನಡ ಚಿತ್ರರಂಗದ ಇತಿಹಾಸವನ್ನು 'KGF' ಗಿಂತ ಮೊದಲು ಮತ್ತು 'KGF' ನಂತರ ಎಂದು ವಿಭಾಗಿಸಬಹುದು. ಅಂದು ಮೈಸೂರಿನಿಂದ ಬೆಂಗಳೂರಿಗೆ ಪುಡಿಗಾಸು ಹಿಡಿದುಕೊಂಡು ಬಂದ ಒಬ್ಬ ಸಾಮಾನ್ಯ ಹುಡುಗ, ಇಂದು ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಅದು ಬೇರೆ ಯಾರೂ ಅಲ್ಲ, 'ರಾಕಿಂಗ್ ಸ್ಟಾರ್' ಯಶ್. ಯಶ್ ಅವರ ಛಲಕ್ಕೆ ಸಂದ ಜಯ ಇದು ಎನ್ನಬಹುದು.

ಜಗತ್ತೇ ತಿರುಗಿನೋಡುವಂತೆ ಬೆಳೆದ ಯಶ್; ಈ ಸೀಕ್ರೆಟ್ ಹಿಂದಿನ ‘ಮಹಾಮಂತ್ರ’ ಏನು?

ಯಶ್ ಈಗ ಕೇವಲ ಹಿಟ್ ಅಥವಾ ಫ್ಲಾಪ್‌ಗಳ ಲೆಕ್ಕಾಚಾರದಲ್ಲಿಲ್ಲ. ಅವರು ದಾಟಿರೋ ಹಂತವೇ ಬೇರೆ. "ಟಾಕ್ಸಿಕ್ ಚಿತ್ರದ ಕಂಟೆಂಟ್ ಏನಾದರೂ ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಕನೆಕ್ಟ್ ಆದರೆ, ಬಾಕ್ಸ್ ಆಫೀಸ್‌ನಲ್ಲಿ ₹2000 ಕೋಟಿ ಕಲೆಕ್ಷನ್ ದಾಟಿದರೂ ಅಚ್ಚರಿಯಿಲ್ಲ" ಎನ್ನುವುದು ಹಲವರ ಲೆಕ್ಕಾಚಾರ. ಟಾಕ್ಸಿಕ್ ಮಾತ್ರವಲ್ಲ, ನವೆಂಬರ್‌ನಲ್ಲಿ ಯಶ್ ರಾವಣನಾಗಿ ನಟಿಸಿರುವ 'ರಾಮಾಯಣ' ಕೂಡ ತೆರೆಗೆ ಬರುತ್ತಿದೆ. ಈ ಮೂಲಕ ನಟ ಯಶ್ ಅವರು ಕೇವಲ 2 ತಿಂಗಳ ಅವಧಿಯಲ್ಲಿ ಇಡೀ ಜಗತ್ತಿನ ತೆರೆಯಲ್ಲಿ ಮಿಂಚಲಿದ್ದಾರೆ. ಹೀಗಾಗಿ, ನಟ ಯಶ್ ಅವರು ಗ್ಲೋಬಲ್ ಲೆವೆಲ್‌ನಲ್ಲಿ ಮಿಂಚಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗೋದು ಖಂಡಿತ!

ರಿಂಗ್‌ಟೋನ್‌ನಿಂದ ಡಿನ್ನರ್‌ ಟೇಬಲ್‌ವರೆಗೆ: ಒಂದು ಮಾಂತ್ರಿಕ ಪಯಣ

ಯಶ್ ಅವರ ಜೀವನವೇ ಒಂದು ದೊಡ್ಡ ಮ್ಯಾನಿಫೆಸ್ಟೇಷನ್ (Manifestation). "ರಾಜಾಹುಲಿ ಸಿನಿಮಾದ ಸಮಯದಲ್ಲಿ ಯಶ್ ಮೊಬೈಲ್‌ನಲ್ಲಿ ಶಾರುಖ್ ಖಾನ್ ಅವರ 'ಡಾನ್' ಚಿತ್ರದ ಬಿಜಿಎಂ ರಿಂಗ್‌ಟೋನ್ ಆಗಿತ್ತು. ವಿಶೇಷವೆಂದರೆ, ಇಂದು ಅದೇ ಶಾರುಖ್ ಖಾನ್ ಅವರು ಯಶ್ ಅವರನ್ನು ಪ್ರೀತಿಯಿಂದ ಡಿನ್ನರ್‌ಗೆ ಆಹ್ವಾನಿಸುತ್ತಾರೆ! ಇದನ್ನು ಭಾರೀ ದೊಡ್ಡ ಯಶಸ್ಸು ಎನ್ನಲೇಬೇಕು. ಶಾರುಖ್ ಖಾನ್ ನಟನೆಯ 'ಝೀರೋ' ಚಿತ್ರದ ಎದುರು 'KGF' ಬಿಡುಗಡೆಯಾಗಿ ಸೂಪರ್ ಹಿಟ್ ಆದಾಗಲೂ ಕನ್ನಡಿಗ ಯಶ್ ಅಹಂಕಾರದ ಬದಲು ವಿನಯವಂತಿಕೆ ಮೆರೆದು 'ಉತ್ತಮ ಸಂಸ್ಕಾರ' ಏನೆಂದು ತೋರಿಸಿಕೊಟ್ಟಿದ್ದಾರೆ.

ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ 'ಮಾಸ್ಟರ್ ಪೀಸ್' ಶೂಟಿಂಗ್ ನಡೆಯುತ್ತಿದ್ದಾಗ ನಡೆದ ಘಟನೆ ಯಶ್ ಅವರು ಅಂದೇ ಹೊಂದಿದ್ದ ದೂರದೃಷ್ಟಿಯನ್ನು ತಿಳಿಸುತ್ತದೆ. ಆವತ್ತು ಅಲ್ಲಿನ ಜನರು ಯಶ್ ಅವರನ್ನ ಗುರುತಿಸಿ ಮಾತನಾಡಿಸುತ್ತಿದ್ದಾಗಲೇ ಯಶ್ 'ಮುಂದೊಂದು ದಿನ ಕನ್ನಡ ಸಿನಿಮಾವನ್ನ ಇಡೀ ದೇಶಕ್ಕೆ ಎತ್ಕೊಂಡು ಹೋಗ್ಬೇಕು" ಎಂದಿರುವುದು ಈಗ ಸುದ್ದಯಾಗುತ್ತಿದೆ.

ಯಶಸ್ಸಿನ ಶಿಖರದಲ್ಲೂ ಅದೇ ಸರಳತೆ!

ಯಶ್ ಎಷ್ಟೇ ದೊಡ್ಡ ಸ್ಟಾರ್ ಆದರೂ ತನ್ನ ಹಳೆಯ ಗೆಳೆಯರನ್ನು ಮರೆತಿಲ್ಲ ಎಂಬುದು ಅವರ ಸರಳತನ ಹಾಗೂ ವಿನಯವಂತಿಕೆಗೆ ಸಾಕ್ಷಿ. ಜೊತೆಗೆ, ನಟ ಯಶ್ರ ಅವರು ತಮ್ಮ ಜೊತೆಗಿದ್ದ ಹಳೆಯ ಕಲಾವಿದರ ಜೊತೆಗೆ, ಹೊಸ ಪ್ರತಿಭೆಗಳಿಗೆ ಕೂಡ ಅವಕಾಶ ಕೊಡುವುದನ್ನು ಎಂದಿಗೂ ಮರೆತಿಲ್ಲ. 'ಉಗ್ರಂ' ಸಿನಿಮಾ ನೋಡಿ ಪ್ರಶಾಂತ್ ನೀಲ್ ಅವರ ವಿಷನ್ ಗುರುತಿಸಿದ್ದು ಇದೇ ರಾಕಿ ಭಾಯ್. ನಾಲ್ಕು ವರ್ಷದ ಹಿಂದೆ, ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರಿಗೆ 'ಟಾಕ್ಸಿಕ್' ಜವಾಬ್ದಾರಿ ಕೊಟ್ಟಿದ್ದೂ ಕೂಡ ಅವರ ಪ್ರತಿಭೆಯ ಮೇಲೆ ನಂಬಿಕೆಗೆ ಸಾಕ್ಷಿ.

ಇಂದು ಯಶ್ ಜಗತ್ತನ್ನೇ ಗೆಲ್ಲಲು ಹೊರಟಿದ್ದಾರೆ. ಅವರ ಈ ಪಯಣಕ್ಕೆ ಎಲ್ಲಾ ಕನ್ನಡಿಗರ ಬೆಂಬಲ ಸದಾ ಇರಲಿದೆ. ಇಡೀ ಭಾರತವೇ ಯಶ್ ಸಕ್ಸಕ್ ಸ್ವಾಗತಿಸಲು ಎದುರುನೋಡುತ್ತಿದೆ. ಇನ್ನೇನು 7 ದಿನಗಳಷ್ಟೇ ಬಾಕಿ ಯಶ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು! ಕನ್ನಡದ ಸಿನಿಮಾ, ಆದರೆ, ಯಶ್ ಹೇಳುವಂತೆ ಭಾರತೀಯ ಚಿತ್ರವೊಂದು ಇಂದು ಜಾಗತಿಕ ಚಿತ್ರವಾಗುವ ಅಪೂರ್ವ ಘಳಿಗೆಗೆ ಕೌಂಟ್‌ಡೌನ್ ನಡೆಯುತ್ತಿದೆ. ಟಾಕ್ಸಿಕ್ ಹಬ್ಬ ಆಚರಿಸಲು ಕನ್ನಡನಾಡು, ಭಾರತ ಸೇರಿದಂತೆ ಇಡೀ ಜಗತ್ತು ಸಜ್ಜಾಗುತ್ತಿದೆ!