'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?

ತಮಿಳುನಾಡು ರಾಜಕಾರಣ ದಿನದಿನಕ್ಕೂ ಕಲರ್‌ಫುಲ್ ಆಗ್ತಾ ಇದೆ. ಸಿಎಂ ವಿಜಯ್ ಕೆಲವು ಕ್ರಾಂತಿಕಾರಿ ನಿರ್ಧಾರಗಳನ್ನ ತೆಗೆದುಕೊಂಡು ಜನರ ಗಮನ ಸೆಳಿತಾ ಇದ್ದಾರೆ. ತಮಿಳುನಾಡಿನಾದ್ಯಂತ ಜೋಸೆಪ್ ವಿಜಯ್ ಗಾಳಿ ಜೋರಾಗಿದೆ. ಆದ್ರೆ ಇದೇ ಹೊತ್ತಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ. ಏನದು ನೋಡಿ..

Share this Video
  • FB
  • Linkdin
  • Whatsapp

ಸದ್ಯಕ್ಕೆ ತಮಿಳುನಾಡು ರಾಜಕಾರಣದ ಚುಕ್ಕಾಣಿ ಜೋಸೆಪ್ ವಿಜಯ್ ಕೈಯಲ್ಲಿದೆ. ಆದ್ರೆ ಅಲ್ಲಿನ ರಾಜಕೀಯ ಮೇಲಾಟಗಳು ಹೊಸ ರೂಪ ಪಡೀತಾ ಇವೆ. ಬಿಜೆಪಿ ಬಿಟ್ಟು ಹೊರ ಬಂದಿರೋ ಅಣ್ಣಾಮಲೈ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗು ನಟ ತಲಾ ಅಜಿತ್ ಕೈ ಜೋಡಿಸುತ್ತಾರೆ ಅನ್ನೋ ಸುದ್ದಿಯೊಂದು ಹಬ್ಬಿದೆ. ಹಾಗಾದ್ರೆ ಅದು ನಿಜಾನಾ..? ನೋಡೋಣ ಬನ್ನಿ..

ತಮಿಳು ರಾಜಕಾರಣದಲ್ಲಿ ಅಣ್ಣಾ ಮಲೈ ರಜಿನಿ, ಅಜಿತ್ ಸಂಚಲನ; ದಳಪತಿಗೆ ದಾಳ ಉರುಳಿಸಲು ಸಜ್ಜಾಗುತ್ತಿದೆಯಾ ಮಹಾನ್ ವೇದಿಕೆ?
ತಮಿಳುನಾಡು ರಾಜಕಾರಣ ದಿನದಿನಕ್ಕೂ ಕಲರ್‌ಫುಲ್ ಆಗ್ತಾ ಇದೆ. ವಿಧಾನಸಭೆ ಗೆದ್ದು ಗದ್ದುಗೆ ಏರಿರೋ ವಿಜಯ್ ಕೆಲವು ಕ್ರಾಂತಿಕಾರಿ ನಿರ್ಧಾರಗಳನ್ನ ತೆಗೆದುಕೊಂಡು ಜನರ ಗಮನ ಸೆಳಿತಾ ಇದ್ದಾರೆ. ತಮಿಳುನಾಡಿನಾದ್ಯಂತ ಜೋಸೆಪ್ ವಿಜಯ್ ಗಾಳಿ ಜೋರಾಗಿದೆ. ಆದ್ರೆ ಇದೇ ಹೊತ್ತಲ್ಲಿ ಮತ್ತೊಂದು ಬಿರುಗಾಳಿ ಎದ್ದಿರೋದು, ಅಣ್ಣಾಮಲೈ, ರಜನಿಕಾಂತ್, ಅಜಿತ್ ಒಂದಾಗುತ್ತಿದ್ದಾರೆ ಅನ್ನೋ ವಿಚಾರ..

ದಳಪತಿ ವಿಜಯ್ ಈಗ ಒಬ್ಬ ಚಿತ್ರನಟನಂತೆ ಕಾಣ್ತಾ ಇಲ್ಲ, ರಾಜಕಾರಣದಲ್ಲಿ ತುಂಬಾ ಪಳಗಿದಂತೆ ಕಾಣ್ತಾ ಇದ್ದಾರೆ. ಆದ್ರೆ ಇದನ್ನ ಒಡೆಯೋಕೆ ಈಗ ಒಂದು ದೊಡ್ಡ ಅಣ್ವಸ್ತ್ರ ನಿಧಾನಕ್ಕೆ ಸಿದ್ಧವಾಗ್ತಿದೆ ಅನ್ನೋದು ಸುದ್ದಿಯೊಂದು ಗುದ್ದುತ್ತಿದೆ. ಅದು ಅಣ್ಣಾ ಮಲೈ, ರಜನಿಕಾಂತ್ ಹಾಗು ಅಜಿತ್​ಕಾಂಬಿನೇಷನ್. ಈ 'ತ್ರಿಮೂರ್ತಿ'ಗಳ ಜೋಡಿ ವಿಜಯ್ ವಿರುದ್ಧ ಸೆಟ್ ಆಗಿದೆ ಅನ್ನೋ ಮಾತುಗಳು ಹುಟ್ಟಿವೆ.. 
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..

Related Video