Toxic movie : ಟಾಕ್ಸಿಕ್‌ ಸಿನಿಮಾ ತೆರೆಗೆ ಬರ್ತಿದ್ದಂತೆ ಯಶ್‌ ಹಾಗೂ ಕಿಯಾರಾ ಅಡ್ವಾನಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಅವರ ಬೋಲ್ಡ್ ಸೀನ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಸ್ಯಾಂಡಲ್‌ ವುಡ್‌ ಸೂಪರ್‌ ಸ್ಟಾರ್ ಯಶ್ ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಿದ್ದ ಆ ದಿನ ಕೊನೆಗೂ ಬಂದಿದೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಾಗಿದೆ. ಸಿನಿಮಾ ರಿಲೀಸ್ ಆಗ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದವರು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ. ಸಿನಿಮಾದ ಕೆಲ ಸೀನ್‌, ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ತಿದ್ದಾರೆ.

ಕಿಯಾರಾ ಬೋಲ್ಡ್ ಸೀನ್

ಟಾಕ್ಸಿಕ್‌ ಸಿನಿಮಾ ಪೋಸ್ಟರ್‌ ರಿಲೀಸ್‌ ಆಗ್ತಿದ್ದಂತೆ ಯಶ್‌ ಹಾಗೂ ಕಿಯಾರಾ ಸುದ್ದಿಗೆ ಬಂದಿದ್ರು. ಅವರನ್ನು ತೆರೆ ಮೇಲೆ ನೋಡಲು ಫ್ಯಾನ್ಸ್‌ ಆತುರದಲ್ಲಿದ್ರು. ಸಿನಿಮಾ ರಿಲೀಸ್‌ ಆಗ್ತಿದ್ದಂತೆ ಮತ್ತೆ ಕಿಯಾರಾ ಹಾಗೂ ಯಶ್‌ ಚರ್ಚೆಯಲ್ಲಿದ್ದಾರೆ. ಯಶ್‌ ಹಾಗೂ ಕಿಯಾರಾ ಕೆಮಿಸ್ಟ್ರಿ ಬಗ್ಗೆ ಅಭಿಮಾನಿಗಳು ಭರ್ಜರಿ ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ ಸಿನಿಮಾದಲ್ಲಿರುವ ಕೆಲವು ರೊಮ್ಯಾಂಟಿಕ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಯಶ್ ಜೊತೆ ಕಿಯಾರಾ ಅವರ ಕೆಲವು ಇಂಟಿಮೆಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಫ್ಯಾನ್ಸ್‌, ಕಿಯಾರಾ ಅಭಿನಯ ಹಾಗೂ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದಾರೆ. ಕಾರಿನಲ್ಲಿ ಯಶ್ ಜೊತೆ ಕಿಯಾರಾ ಬೋಲ್ಡ್‌ ದೃಶ್ಯಗಳು ಇಂಟರ್ನೆಟ್ನಾದ್ಯಂತ ಹರಿದಾಡ್ತಿವೆ. ಕಿಯಾರಾ ತಮ್ಮ ಬೋಲ್ಡ್‌ ಅವತಾರದಿಂದ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ಆದ್ರೆ ಕಿಯಾರಾ ಈ ಅವತಾರ, ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲರ್‌ ಬಾಯಿಗೆ ಆಹಾರ ಆಗಿದ್ದಾರೆ.

ಯಶ್ ಜೊತೆ ಕಿಯಾರಾ ಕೆಮೆಸ್ಟ್ರಿ ಅದ್ಭುತವಾಗಿದೆ. ಈ ಸಿನಿಮಾದಲ್ಲಿ ಅವರ ನಟಾನೆ ಬರೀ ಬೋಲ್ಡ್‌ನೆಸ್ ಗೆ ಸೀಮಿತವಾಗಿಲ್ಲ. ಅವರ ಅಧ್ಬುತವಾಗಿ ನಟಿಸಿದ್ದಾರೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಕಿಯಾರಾ ಅವರ ಹಾಟ್ನೆಸ್ ಇಂಟರ್ನೆಟ್ ನಲ್ಲಿ ಬೆಂಕಿ ಹತ್ತಿಸಿದೆ ಅಂತ ಇನ್ನೊಬ್ಬರು ಬರೆದಿದ್ದಾರೆ. ಕಿಯಾರಾ ಸಿನಿಮಾದ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದೂ ಕೆಲವರು ಕರೆದಿದ್ದಾರೆ.

ನಾಲ್ಕು ವರ್ಷಗಳ ನಂತ್ರ ತೆರೆಗೆ ಬಂದಿರುವ ಯಶ್‌ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಗಳಿಕೆಯಲ್ಲೂ ಸಿನಿಮಾ ದಾಖಲೆ ಮಾಡ್ತಿದೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.