Asianet Suvarna News Asianet Suvarna News

ಶಿಲ್ಪಾ ಶೆಟ್ಟಿ ಪತಿಯ ಪೋರ್ನ್​ ಕೇಸ್​ ಈಗ ಸಿನಿಮಾ? ರಾಜ್​ ಕುಂದ್ರಾ ಬಾಲಿವುಡ್​ಗೆ ಎಂಟ್ರಿ!

ಪೋರ್ನ್​ ಕೇಸ್​ನಲ್ಲಿ ಸಿಲುಕಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ. ಅಷ್ಟಕ್ಕೂ ಏನಿದು ಚಿತ್ರ? ಪೋರ್ನ್​ ಕೇಸ್​ಗೂ ಇದಕ್ಕೂ ಸಂಬಂಧ ಇದ್ಯಾ?
 

Raj Kundra to make acting debut with film on his jail term after porn scandal suc
Author
First Published Jul 22, 2023, 12:37 PM IST

ಎರಡು ವರ್ಷಗಳ ಹಿಂದೆ ಅರ್ಥಾತ್​ 2021ರಲ್ಲಿ, ಬಾಲಿವುಡ್​ ಚೆಲುವೆ ಶಿಲ್ಪಾ ಶೆಟ್ಟಿ ಜೀವನದಲ್ಲಿ ಬಿರುಗಾಳಿ ಬಂದ ವರ್ಷ. ಇದಕ್ಕೆ  ಕಾರಣ, ಇವರ ಪತಿ, ಖ್ಯಾತ ಉದ್ಯಮಿ ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು. ರಾಜ್​ ಕುಂದ್ರಾ ನಡೆಸುತ್ತಿದ್ದರು ಎನ್ನಲಾದ ಬ್ಲೂ ಫಿಲ್ಮ್​ ಪ್ರಕರಣದಲ್ಲಿ  ನಟಿ-ಮಾಡೆಲ್​ ಗೆಹನಾ ವಸಿಷ್ಠ ಕೂಡ ಅರೆಸ್ಟ್​ ಆಗಿದ್ದರು. ಆದರೆ ಅವರು, ಕೋರ್ಟ್​ನಲ್ಲಿ ನಾನು ಬೋಲ್ಡ್​ ದೃಶ್ಯಗಳಲ್ಲಿ ನಟಿಸುತ್ತಿದ್ದೆ. ಅದನ್ನು  ಅಶ್ಲೀಲ ಅಥವಾ ನೀಲಿ ಚಿತ್ರಗಳ ಜೊತೆ ಹೋಲಿಸಬಾರದು. ಮುಂಬೈ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಯಾರು ನಿಜವಾದ ಅಪರಾಧಿಗಳು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದಿದ್ದರು. 

ಇದಾದ ಬಳಿಕ ಪೊಲೀಸರು ಮತ್ತಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದರು.  ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಟ್ರೀಮಿಂಗ್ ಅಪ್ಲಿಕೇಶನ್ 'ಹಾಟ್ ಶಾಟ್ಸ್' ನ್ನು ಗೂಗಲ್ ಮತ್ತು ಆಪಲ್‌ ಪ್ಲೇ ಸ್ಟೋರ್ ಡಿಲೀಟ್ ಮಾಡಲಾಗಿತ್ತು.  ಇದರ ಜೊತೆಗೆ ರಾಜ್‌ಕುಂದ್ರಾ ಈ ಆ್ಯಪ್‌ ಮೂಲಕ ಹೇಗೆ ಗ್ರಾಹಕರ ಜೊತೆ ಸಂವಹನ ಮಾಡುತ್ತಿದ್ದರು, ಈ ಆಪ್‌ನೊಳಗೆ ಏನಿತ್ತು ಅನ್ನೋ ರಹಸ್ಯವೂ ಬಯಲಾಗಿತ್ತು.  ರಾಜ್‌ ಕುಂದ್ರಾ ಮುಂಬಯಿಯಲ್ಲಿ ಮಾಡೆಲ್‌ಗಳ ಅಶ್ಲೀಲ ವೀಡಿಯೋ ತಯಾರಿಸಿ ಅದನ್ನು ಇಂಗ್ಲೆಂಡ್‌ಗೆ ಕಳುಹಿಸಿ ಆ್ಯಪ್‌ಗೆ ಅಪ್‌ಲೋಡ್‌ ಮಾಡಿಸುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಈತನ ಸಂಬಂಧಿ ಪ್ರದೀಪ್‌ ಭಕ್ಷಿ ಎಂಬಾತನ ಕೆನ್ರಿನ್‌ ಲಿಮಿಟೆಡ್‌ (Cranin Limited) ಕಂಪನಿ ಇದನ್ನು ಈ ವೀಡಿಯೋವನ್ನು ಆ್ಯಪ್ ಮುಖಾಂತರ ಬಿಡುಗಡೆ ಮಾಡುತ್ತಿತ್ತು. ತಾನೇ ಮುಂಬೈಯಲ್ಲಿ ತಯಾರಿಸಿ ಎಡಿಟ್‌ ಮಾಡುತ್ತಿದ್ದ ಈ ವೀಡಿಯೋವನ್ನು ಭಾರತದಲ್ಲಿ ಅಪ್ ಲೋಡ್ ಮಾಡಲು ಅವಕಾಶವಿಲ್ಲದ ಕಾರಣ ಇದನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗುತ್ತಿತ್ತು.  ಈ ದಂಧೆಯಲ್ಲಿ ದಿನಕ್ಕೆ ಲಕ್ಷ ಲಕ್ಷ ಎಣಿಸುತ್ತಿದ್ದರು ಎನ್ನುವ ಆರೋಪ ಎದುರಿಸುತ್ತಿದ್ದಾರೆ. 

Gehana Vasisth: ಮುಸ್ಲಿಂ ಯುವಕನ ಜೊತೆ ಪೋರ್ನ್​ ಕೇಸ್​ ನಟಿ ಮದ್ವೆ: ಇಸ್ಲಾಂಗೆ ಮತಾಂತರ?

ಇದರ ನಡುವೆಯೇ  ಇದೇ ಕಥಾವಸ್ತು ಇರುವ ಚಿತ್ರವೊಂದು ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಬಿ ಟೌನ್​ನಲ್ಲಿ ಸಕತ್​ ಸದ್ದು ಮಾಡುತ್ತಿದೆ. ಕುತೂಹಲದ ಸಂಗತಿ ಎಂದರೆ ಈ ಚಿತ್ರದ ಮೂಲಕ ರಾಜ್​ ಕುಂದ್ರಾ ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರಂತೆ. ಅರ್ಥಾತ್​ ಬ್ಲೂ ಫಿಲ್ಮ್​ ಕೇಸ್​ನಲ್ಲಿ (Blue film) ಪ್ರಮುಖ ಆರೋಪಿಯಾಗಿರುವ ಅವರು ತಮ್ಮದೇ ಪಾತ್ರವನ್ನು ಚಿತ್ರದಲ್ಲಿ ಮಾಡಲಿದ್ದಾರಂತೆ!  ಈ ಕೇಸ್​ನಲ್ಲಿ 63 ದಿನಗಳವರೆಗೆ ಆರ್ಥರ್ ರೋಡ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ರಾಜ್​ ಕುಂದ್ರಾ ಅವರು, ಈ ಚಿತ್ರದ ಮೂಲಕ ತಮ್ಮ ಅನುಭವವನ್ನು  ಹೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಸದ್ಯ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲ. ನಿರ್ದೇಶಕರ ಹೆಸರನ್ನು ಮುಚ್ಚಿಡಲಾಗಿದೆ ಆದರೆ ರಾಜ್ ನಿರ್ಮಾಣದಿಂದ ಸ್ಕ್ರಿಪ್ಟಿಂಗ್‌ವರೆಗೆ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ ಕುಂದ್ರಾ ಅವರ ಸಂಪೂರ್ಣ ಪ್ರಯಾಣವನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ಇದರಲ್ಲಿ ಮೊದಲ ಸುದ್ದಿಯಿಂದ ಹಿಡಿದು ಮಾಧ್ಯಮ ವರದಿಗಳವರೆಗೆ ಎಫ್‌ಐಆರ್, ಬಂಧನ ಮತ್ತು ಜಾಮೀನು ತೋರಿಸಲಾಗುತ್ತದೆ. ಚಿತ್ರವು ರಾಜ್ ಮತ್ತು ಅವರ ಕುಟುಂಬದ ದುರಂತದ ಕಥೆಯಾಗಿದೆ ಎಂದು ಮೂಲಗಳು ಹೇಳಿವೆ. ಅಂದಹಾಗೆ,  ರಾಜ್ ಕುಂದ್ರಾ (Raj Kundra) ಮತ್ತು ಶಿಲ್ಪಾ ಶೆಟ್ಟಿ 2009 ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಈ ಕೇಸ್​ನಲ್ಲಿ ಶಿಲ್ಪಾ ಶೆಟ್ಟಿಯ ಹೆಸರೂ ಥಳಕು ಹಾಕಿಕೊಂಡಿತ್ತು. ಅವರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆಯೇ ಎನ್ನುವ ಕುತೂಹಲ ಸಿನಿ ರಸಿಕರಲ್ಲಿ ಇದೆ. ಎಲ್ಲದ್ದಕ್ಕೂ ಶೀಘ್ರವೇ ಉತ್ತರ ದೊರಕಲಿದೆ. 

Ileana D'Cruz ಬಾಯ್‌ಫ್ರೆಂಡ್‌ ಫೋಟೋ ರಿವೀಲ್​? ಕತ್ರಿನಾಳ ಅಣ್ಣನಾ ಅಂದೋರಿಗೆ ಸಿಕ್ತು ಉತ್ತರ!

Follow Us:
Download App:
  • android
  • ios