Ileana D'Cruz ಬಾಯ್‌ಫ್ರೆಂಡ್ ಫೋಟೋ ರಿವೀಲ್? ಕತ್ರಿನಾಳ ಅಣ್ಣನಾ ಅಂದೋರಿಗೆ ಸಿಕ್ತು ಉತ್ತರ!
ತುಂಬು ಗರ್ಭಿಣಿಯಾಗಿರುವ ನಟಿ ಇಲಿಯಾನಾ ಡಿಕ್ರೂಜ್ ಕೊನೆಗೂ ತಮ್ಮ ಬಾಯ್‌ಫ್ರೆಂಡ್ ಫೋಟೋ ಶೇರ್ ಮಾಡಿದ್ದಾರೆ. ಮಗುವಿನ ತಂದೆಯ ವಿಷಯಕ್ಕೆ ತೆರೆ ಎಳೆದಿದ್ದಾರೆ.
ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ (Ileana D'Cruz) ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ ನಟಿ. ಇದಕ್ಕೆ ಕಾರಣ, ಈಕೆಯೀಗ ಗರ್ಭವತಿ. ಗರ್ಭಿಣಿಯಾಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಈಕೆಗೆ ಇನ್ನೂ ಮದುವೆಯಾಗಿಲ್ಲ. ಆದ್ದರಿಂದ ಈಕೆಯ ಮಗುವಿನ ತಂದೆ ಯಾರೆಂದು ತಿಳಿಯದಿರಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದರು. ಕೆಲ ತಿಂಗಳ ಹಿಂದೆ ತಾವು ಗರ್ಭಿಣಿ ಎಂದು ಫೋಟೋ ಶೇರ್ ಮಾಡಿಕೊಂಡು ಬೇಬಿ ಬಂಪ್ ತೋರಿಸಿದಾಗಿನಿಂದಲೂ ಫ್ಯಾನ್ಸ್ ಈಕೆಯ ಮಗುವಿನ ತಂದೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಫಿಲ್ಮ್‌ಫೇರ್ ನಾಮನಿರ್ದೇಶನ ಪಾರ್ಟಿಯಲ್ಲಿ ಆಸ್ಟ್ರೇಲಿಯಾದ ಸ್ನೇಹಿತನೊಂದಿಗೆ ಇಲಿಯಾನಾ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ನೀವಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ನಟಿಗೆ ಕೇಳಲಾಗಿತ್ತು. ಆಗಲೂ ಇಲಿಯಾನಾ ಡಿಕ್ರೂಜ್, ಇದರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ನುಣುಚಿಕೊಂಡಿದ್ದರು.
ನಂತರ ಎರಡು ತಿಂಗಳ ಹಿಂದೆ ಈಕೆ ಮೊದಲ ಬಾರಿಗೆ ಇಲಿಯಾನಾ ಬಾಯ್‌ಫ್ರೆಂಡ್ ಜೊತೆ ಫೋಟೋ ಹಂಚಿಕೊಂಡಿದ್ದರು. ಹಾಗಂತ ಆತ ಯಾರೆಂದು ರಿವೀಲ್ ಮಾಡಿರಲಿಲ್ಲ. ಬಾಯ್‌ಫ್ರೆಂಡ್ ಜೊತೆ ಸುತ್ತಾಡುತ್ತಿರುವ ಇಲಿಯಾನಾ ಆತನ ಕೈ ಮೇಲೆ ತಮ್ಮ ಕೈ ಇಟ್ಟಿರುವ ಫೋಟೋವನ್ನು ಶೇರ್ (Photo share) ಮಾಡಿದ್ದರು. ಇಲಿಯಾನಾ ಫೋಟೋ ಶೇರ್ ಮಾಡುವ ಮೂಲಕ ಮಗುವಿನ ತಂದೆ ಇವರೇ ಎಂದು ಹೇಳುತ್ತಿದ್ದಾರಾ ಎನ್ನುವುದು ಇನ್ನೂ ಗೊಂದಲ ಮೂಡಿಸಿತ್ತು. ಆದರೆ ಆತ ಯಾರೆಂದು ಬಹಿರಂಗ ಪಡಿಸಿಲ್ಲ. ಉಂಗುರ ಧರಿಸಿರುವ ಫೋಟೋ ಶೇರ್ ಮಾಡುವ ಮೂಲಕ ಇಬ್ಬರೂ ಎಂಗೇಜ್ ಆಗಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಇದುವರೆಗೂ ಮಗುವಿನ ತಂದೆಯ ಬಗ್ಗೆ ಯಾವುದೇ ಸುಳಿವು ನೀಡದ ಇಲಿಯಾನಾ ಇದೇ ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಫೋಟೋ ಶೇರ್ ಮಾಡಿದ್ದರು.
ಮದ್ವೆಯಾಗದೇ ಪ್ರೆಗ್ನೆಂಟ್ ಆದ್ರಾ ಸಾಯಿ ಪಲ್ಲವಿ? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!
ಈ ಫೋಟೋ ನೋಡಿದ್ದ ಫ್ಯಾನ್ಸ್ (Fans) ಇವರೇ ನಿಮ್ಮ ಮಗುವಿನ ತಂದೆನಾ ಎಂದು ಹಲವರು ಪ್ರಶ್ನೆ ಹಾಕಿದ್ದರು. ಇನ್ನು ಹಲವರು ದಯವಿಟ್ಟು ಮುಖ ತೋರಿಸಿ ಎಂದು ಹೇಳಿದ್ದರು. ಅಂಥವರಿಗೆ ಈಗ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಾಯ್‌ಫ್ರೆಂಡ್ ಫೋಟೋ ಶೇರ್ಮಾಡಿದ್ದಾರೆ. ಈ ಬಾರಿ ಮುಖ ಸಹಿತ ಫೋಟೋ ಶೇರ್ ಮಾಡಿದ್ದಾರೆ. ಆದರೆ ಮಗುವಿನ ತಂದೆ ಇವರೇ ಹೌದೋ ಅಲ್ಲವೋ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆದರೂ ಗರ್ಭಿಣಿಯಾಗಿರುವಾಗ ಮತ್ಯಾರ ಫೋಟೋ ಈ ರೀತಿ ಶೇರ್ ಮಾಡಲು ಸಾಧ್ಯವೇ ಇಲ್ಲ ಎಂದುಕೊಂಡಿರುವ ನೆಟ್ಟಿಗರು ಇವರೇ ಮಗುವಿನ ತಂದೆ ಎಂದು ಹೇಳುತ್ತಿದ್ದಾರೆ. ಇಲಿಯಾನಾ ಅವರು ಕತ್ರೀನಾ ಕೈಫ್ ಅವರ ಅಣ್ಣ ಸೆಬಾಸ್ಟಿಯನ್ ಲಾರೆಂಟ್ ಮೈಕಲ್ ಅವರನ್ನು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈ ಫೋಟೋದಲ್ಲಿ ಇರುವುದು ಬೇರೆಯದ್ದೇ ವ್ಯಕ್ತಿ.
ಅಂದಹಾಗೆ ಇಲಿಯಾನಾ ಅವರು ಈಗ ತುಂಬು ಗರ್ಭಿಣಿ. ಅವರಿಗೆ ಒಂಬತ್ತು ತಿಂಗಳಾಗಿದೆ. ಸದ್ಯ ನನಗೆ ಒಂಬತ್ತನೇ ತಿಂಗಳಾಗಿದ್ದು, ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಇಲಿಯಾನಾ ಇದಕ್ಕೂ ಮೊದಲು ಫೋಟೋಗ್ರಾಫರ್ ಆ್ಯಂಡ್ರ್ಯೂ ಜೊತೆ ರಿಲೇಷನ್ಶಿಪ್ನಲ್ಲಿದ್ದರು. ಇಬ್ಬರೂ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ ನಂತರ ಬೇರ್ಪಟ್ಟರು.
ರಹಸ್ಯವಾಗಿ ಮದ್ವೆಯಾದ್ರಾ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ? ಫೋಟೋ ನೋಡಿ ಫ್ಯಾನ್ಸ್ ಖುಷ್!