ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳಿಗಾಗಿ ಮೈಸೂರಿಗೆ ಭೇಟಿ ನೀಡಿದ್ದಾರೆ. ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಆಗಮಿಸಿರುವ ಗಜಪಡೆಯನ್ನು ಮಕ್ಕಳಿಗೆ ತೋರಿಸಲು ಅವರು ಬಂದಿದ್ದು, ರಸ್ತೆ ಬದಿಯಲ್ಲಿ ಸಾಮಾನ್ಯರಂತೆ ನಿಂತು ಆನೆಗಳನ್ನು ವೀಕ್ಷಿಸಿದ್ದಾರೆ. ವಿಡಿಯೋ ವೈರಲ್ ಆಗಿದೆ.

ಮೈಸೂರು: ಸಿನಿಮಾ, ಕುಟುಂಬ, ಮಕ್ಕಳು ಅಂತಾ ಸದಾ ಬ್ಯುಸಿಯಾಗಿರುವ ನಟಿ ಅಮೂಲ್ಯ ಇದೀಗ ತಮ್ಮ ಪುಟಾಣಿ ಮಕ್ಕಳಿಗಾಗಿ ಮೈಸೂರಿಗೆ ಬಂದಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಸಮೀಪಿಸುತ್ತಿರುವ ಬೆನ್ನಲ್ಲೇ ದಸರಾ ಆನೆಗಳು ಮೈಸೂರು ಅರಮನೆಗೆ ಆಗಮಿಸಿವೆ. ಮಕ್ಕಳಿಗೆ ದಸರಾ ಆನೆ ತೋರಿಸಲು ಇದೇ ಒಳ್ಳೆ ಸಮಯ ಅಂದ್ಕೊಂಡು ಮಕ್ಕಳೊಂದಿಗೆ ಮೈಸೂರಿಗೆ ಆಗಮಿಸಿದ್ದಾರೆ.

ಜನರ ನಡುವೆ ನಿಂತು ದಸರಾ ಆನೆ ವೀಕ್ಷಿಸಿದ ಅಮೂಲ್ಯ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಲ್ಲೇ ಹೋದರೂ ಅಭಿಮಾನಿಗಳು ಸುತ್ತುವರಿಯುತ್ತಾರೆ. ಆದರೆ ನಟಿ ಅಮೂಲ್ಯ ಮಾತ್ರ ಇದಕ್ಕೆ ಅಪವಾದ. ಎಲ್ಲೆ ಹೋದ್ರೂ ತಮ್ಮ ಇಬ್ಬರು ಅವಳಿ ಮಕ್ಕಳೊಂದಿಗೆ ಸರಳವಾಗಿ ಬೆರೆಯುತ್ತಾರೆ. ಮೈಸೂರಲ್ಲಿ ಹಾಗೆಯೇ ರಸ್ತೆಯ ಬದಿಯಲ್ಲಿ ನಿಂತು ದಸರಾ ಆನೆಗಳನ್ನು ವೀಕ್ಷಿಸಿದ್ದಾರೆ. ಮೈಸೂರಿನ ಬೀದಿಗಳಲ್ಲಿ ಸಾಗುತ್ತಿದ್ದ ದಸರಾ ಆನೆಗಳನ್ನು ಮಕ್ಕಳಿಗೆ ತೋರಿಸಿದ್ದಾರೆ. ಈ ವೇಳೆ ಮಕ್ಕಳ ಸಂಭ್ರಮವನ್ನು ಕಂಡು ಅಮೂಲ್ಯ ಕೂಡ ಖುಷಿಪಟ್ಟಿದ್ದಾರೆ.

ಮಕ್ಕಳಿಗಾಗಿಯೇ ಮೈಸೂರಿಗೆ ಬಂದ ಅಮೂಲ್ಯ

ಸಿನಿಮಾ ಕೆಲಸಗಳ ನಡುವೆ ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡುವ ಅಮೂಲ್ಯ, ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಮೈಸೂರಿನ ಸಾಂಸ್ಕೃತಿಕ, ಪರಂಪರೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ.. ಪ್ರವಾಸದ ವೇಳೆ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು, ಹೊಸ ಸ್ಥಳಗಳನ್ನು ತೋರಿಸುವುದು ಅವರ ನೆಚ್ಚಿನ ಸಂಗತಿಗಳಲ್ಲೊಂದು. ಈ ಬಾರಿ ಮೈಸೂರು ದಸರಾ ಆನೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಮಕ್ಕಳಿಗೆ ನೀಡಲು ಮೈಸೂರಿಗೆ ಆಗಮಿಸಿದ್ದಾರೆ.

ಅಮೂಲ್ಯ ಮಕ್ಕಳೊಂದಿಗೆ ಆನೆ ವೀಕ್ಷಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಅಮೂಲ್ಯ ಸರಳತೆಯ ರಾಜಕುಮಾರಿ ಅಂತಾ ಫ್ಯಾನ್ಸ್ ಕೊಂಡಾಡಿದ್ದಾರೆ.