- Home
- Entertainment
- Sandalwood
- Actress Amulya: ಯಜಮಾನರು ಕೊಡಿಸಿದ ಇಳ್ಕಲ್ ಸೀರೇಲಿ ಮಿಂಚಿದ ಗೋಲ್ಡನ್ ಕ್ವೀನ್ ಅಮೂಲ್ಯ
Actress Amulya: ಯಜಮಾನರು ಕೊಡಿಸಿದ ಇಳ್ಕಲ್ ಸೀರೇಲಿ ಮಿಂಚಿದ ಗೋಲ್ಡನ್ ಕ್ವೀನ್ ಅಮೂಲ್ಯ
Actress Amulya: ಚಂದನವನದ ಮುದ್ದು ಬೆಡಗಿ ಗೋಲ್ಡನ್ ಕ್ವೀನ್ ಅಮೂಲ್ಯ ಗಂಡ ಜಗದೀಶ್ ನೀಡಿದಂತಹ ಇಳ್ಕಲ್ ಸೀರೆಯುಟ್ಟು ತುಂಬಾನೇ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಫೋಟೊ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಗೋಲ್ಡನ್ ಕ್ವೀನ್ ಅಮೂಲ್ಯ
ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ನಟಿ ಅಮೂಲ್ಯ, ಸಿನಿಮಾಗೆ ಕಂ ಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ. ಬರೋಬ್ಬರಿ ಎಂಟು ವರ್ಷಗಳ ಬಳಿಕ ಸಿನಿಮಾದಲ್ಲಿ ನಟಿಯನ್ನು ನೋಡುವ ಕಾತುರದಲ್ಲಿದ್ದಾರೆ ಅಭಿಮಾನಿಗಳು.
ಪಿಕಾಬು ಸಿನಿಮಾ
ಅಮೂಲ್ಯ ಮಂಜು ಸ್ವರಾಜ್ ನಿರ್ದೇಶನ ಮಾಡಿರುವ ಪಿಕಾಬೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶ್ರೀ ಕೆಂಚಾಂಬ ಫಿಲಂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಅಮೂಲ್ಯ ಅವರ ಹುಟ್ಟುಹಬ್ಬಕ್ಕೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ತಾಗಿ ಮೂಡಿ ಬಂದಿದೆ.
ನಾವು ನಮ್ಮವರು
ಸದ್ಯ ಅಮೂಲ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾವು ನಮ್ಮವರು ರಿಯಾಲಿಟಿ ಶೋನಲ್ಲಿ ಮೂವರು ಜಡ್ಜಸ್ ಗಳಲ್ಲಿ ಒಬ್ಬರಾಗಿ ಭಾಗವಹಿಸಿದ್ದಾರೆ.ಇವರ ಜೊತೆಗೆ ತಾರಾ ಅನುರಾಧ ಹಾಗೂ ಶರಣ್ ಅವರು ನಟಿಸಿದ್ದಾರೆ.
ಇಳ್ಕಲ್ ಸೀರೆಯಲ್ಲಿ ಅಮೂಲ್ಯ
ಅಮೂಲ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಳ್ಕಲ್ ಸೀರೆಯುಟ್ಟಿರುವ ಫೋಟೊಗಳನ್ನು ಶೇರ್ ಮಾಡಿದ್ದು, ಸೀರೆಯನ್ನು ತಮ್ಮ ಯಜಮಾನರು ನೀಡಿರುವುದಾಗಿ ತಿಳಿಸಿದ್ದಾರೆ. ಫೋಟೊಗಳಲ್ಲಿ ಅಮೂಲ್ಯ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ನಮ್ಮ ಹೆಮ್ಮೆ ಎಂದ ನಟಿ
ಅಮೂಲ್ಯ ಹಸಿರು ಬಾರ್ಡರ್ ಇರುವ ಪಿಂಕ್ ಬಣ್ಣದ ಸೀರೆಯುಟ್ಟು, ಹಸಿರು ಬಳೆಗಳು, ಮೂಗಿನಲ್ಲಿ ನತ್ತು, ಕಾಸಿನ ಸರ, ಸೊಂಟದ ಪಟ್ಟಿ ಧರಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ದಸರಾ ಸಂಭ್ರಮ
ಅಮೂಲ್ಯ ಫೋಟೊಗಳನ್ನು ಹಂಚಿಕೊಂಡು ನಮ್ಮ ನಾಡಿನ ಹೆಮ್ಮೆ “ಇಳಕಲ್ ಸೀರೆ “, ದಸರಾ ಹಬ್ಬದ ಶುಭಾಶಯಗಳು. ಸೀರೆ ಕೊಡಿಸಿದು- ನಮ್ಮ ಯಜಮಾನರು ಎಂದು ಹೇಳುತ್ತಾ ಪತಿ ಜಗದೀಶ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಗೊಂಬೆ ಹುಡುಗಿ
ಅಮೂಲ್ಯ ತುಂಬಾನೆ ಕ್ಯೂಟ್ ಆಗಿ ಕಾಣಿಸುತ್ತಿದ್ದು, ನಟಿಯ ಅಂದದಿಂದ ಸೀರೆಯ ಚಂದ ಹೆಚ್ಚಾದಂತಿದೆ. ಅಭಿಮಾನಿಗಳು ನಟಿಯನ್ನು ಮನಸಾರೆ ಹಾಡಿ ಹೊಗಳಿದ್ದಾರೆ.