ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ನವರಾತ್ರಿ ಹಬ್ಬಕ್ಕೆ ಅಕ್ಟೋಬರ್ 15 ರಂದು ತೆರೆಗೆ ಬರಲಿದೆ. ಸನ್ ಪಿಕ್ಚರ್ಸ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ರಜನಿಕಾಂತ್ ಅವರ 'ಜೈಲರ್ 2' ಸಿನಿಮಾದ ರಿಲೀಸ್ ಡೇಟ್ ಕೊನೆಗೂ ಅನೌನ್ಸ್ ಆಗಿದೆ. ಈ ಸಿನಿಮಾ ನವರಾತ್ರಿ ಹಬ್ಬದ ವಿಶೇಷವಾಗಿ ಅಕ್ಟೋಬರ್ 15 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ. ಮೊದಲು ಈ ಸಿನಿಮಾ ಜೂನ್ 12ಕ್ಕೆ ರಿಲೀಸ್ ಆಗುತ್ತೆ ಅಂತ ಹೇಳಲಾಗಿತ್ತು. ಆದರೆ, ಗೆಸ್ಟ್ ರೋಲ್ ಮಾಡುತ್ತಿದ್ದ ನಟರ ಶೂಟಿಂಗ್ ಪೂರ್ತಿಯಾಗದ ಕಾರಣ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ಭಾಗದಂತೆಯೇ ಮೋಹನ್‌ಲಾಲ್ ಮತ್ತು ನಮ್ಮ ಶಿವರಾಜ್‌ಕುಮಾರ್ ಅವರು ಎರಡನೇ ಭಾಗದಲ್ಲೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ, ಮೊದಲ ಭಾಗದಲ್ಲಿ ಇಲ್ಲದಿದ್ದ ವಿಜಯ್ ಸೇತುಪತಿ ಮತ್ತು ಮಿಥುನ್ ಚಕ್ರವರ್ತಿ ಕೂಡ ಈ ಬಾರಿ ಗೆಸ್ಟ್ ರೋಲ್ ಮಾಡಲಿದ್ದಾರೆ. ಮೊದಲ ಭಾಗದಲ್ಲಿ ಮುಖ್ಯ ವಿಲನ್ ಆಗಿದ್ದ ವಿನಾಯಕನ್, ಫ್ಲ್ಯಾಶ್‌ಬ್ಯಾಕ್ ದೃಶ್ಯಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್, ಒಂದು ಟೀಸರ್ ಜೊತೆಗೆ 'ಜೈಲರ್ 2' ಸಿನಿಮಾದ ರಿಲೀಸ್ ಡೇಟ್ ಘೋಷಿಸಿದೆ. ಟೀಸರ್‌ನಲ್ಲಿ ವಿನಾಯಕನ್ ಅವರ 'ವರ್ಮನ್' ಪಾತ್ರದ ಜೊತೆ ಸೂರಜ್ ವೆಂಜಾರಮೂಡು, ಸುಜಿತ್ ಶಂಕರ್ ಮತ್ತು ರಮ್ಯಾ ಕೃಷ್ಣನ್ ಕೂಡ ಇದ್ದಾರೆ. ರಜನಿಕಾಂತ್ ಅವರನ್ನು ಒಂದು ಲಾಂಗ್ ಶಾಟ್‌ನಲ್ಲಿ ತೋರಿಸಲಾಗಿದೆ. ಎಸ್‌ಜೆ ಸೂರ್ಯ, ಯೋಗಿ ಬಾಬು, ಮಿರ್ನಾ, ರಿಥ್ವಿಕ್, ಅನ್ನಾ ರಾಜನ್, ಜತಿನ್ ಸರ್ನಾ, ವಿದ್ಯಾ ಬಾಲನ್ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿದ್ದಾರೆ.

ಈ ಮೊದಲು ಶಾರುಖ್ ಖಾನ್ ಕೂಡ ಒಂದು ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಅವರು ಈ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದರು. ಅವರ ಬದಲು ಹೃತಿಕ್ ರೋಷನ್ ಬರಬಹುದು ಎನ್ನಲಾಗಿತ್ತಾದರೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಇದೇ ಹೊತ್ತಿಗೆ, ತಮಿಳಿನಲ್ಲಿ ಮತ್ತೊಂದು ದೊಡ್ಡ ಸಿನಿಮಾ ಕೂಡ ನವರಾತ್ರಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಅದುವೇ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ, ಧನುಷ್ ನಾಯಕರಾಗಿರುವ 'ಓಂ' ಸಿನಿಮಾ.

ಒಂದೇ ದಿನದ ಅಂತರದಲ್ಲಿ ಕ್ಲ್ಯಾಶ್

ಈ ಚಿತ್ರದಲ್ಲಿ ಮಮ್ಮುಟ್ಟಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 16 ರಂದು, ಅಂದರೆ 'ಜೈಲರ್ 2' ರಿಲೀಸ್ ಆದ ಮಾರನೇ ದಿನವೇ ಥಿಯೇಟರ್‌ಗೆ ಬರಲಿದೆ. ಬೇರೊಂದು ಭಾಷೆಯಲ್ಲಿ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಅವರ ಸಿನಿಮಾಗಳು ಒಂದೇ ದಿನದ ಅಂತರದಲ್ಲಿ ಕ್ಲ್ಯಾಶ್ ಆಗುತ್ತಿರುವುದು ಪ್ರೇಕ್ಷಕರಿಗೆ ಮಾತ್ರವಲ್ಲ, ಎಲ್ಲರಿಗೂ ಕುತೂಹಲ ಮೂಡಿಸಿದೆ. 'ಓಂ' ಚಿತ್ರವನ್ನು ವಂಡರ್‌ಬಾರ್ ಫಿಲ್ಮ್ಸ್ ನಿರ್ಮಿಸುತ್ತಿದೆ.