Asianet Suvarna News Asianet Suvarna News

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

ರಾಜಕೀಯ ಏರಿಳಿತಗಳ ಮಧ್ಯೆ ದೋಸ್ತಿ ಬಜೆಟ್| ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ಸಿಎಂ| ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯ ಬಜೆಟ್ ಮೊರೆ ಹೋದ ದೋಸ್ತಿ ಸರ್ಕಾರ| ರೈತ, ಮಧ್ಯಮ ವರ್ಗವೇ ದೋಸ್ತಿ ಸರ್ಕಾರದ ಟಾರ್ಗೆಟ್| ತೆರಿಗೆ ಹೊರೆ ಇಲ್ಲ, ಬೆಲೆ ಏರಿಕೆ ಚಿಂತೆ ಇಲ್ಲ| ದೋಸ್ತಿ ಸರ್ಕಾರಕ್ಕೆ ಲೋಕ ಸಮರದಲ್ಲಿ ಸಿಗುವುದೇ ಲಾಭ?

CM Kumarswamy Presents Popular But Deficit Budget
Author
Bengaluru, First Published Feb 8, 2019, 4:56 PM IST

ಬೆಂಗಳೂರು(ಫೆ.08): ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ರಾಜ್ಯದಲ್ಲಿ ಹಲವು ರಾಜಕೀಯ ಘಟನಾವಳಿಗಳು ನಡೆಯುತ್ತಿದ್ದು, ಪ್ರಮುಖವಾಗಿ ಸಮ್ಮಿಶ್ರ ಸರ್ಕಾರ ಉಳಿಯುತ್ತೋ ಇಲ್ಲವೋ ಎಂಬ ಆತಂಕದ ಮಧ್ಯೆಯೇ ಬಜೆಟ್ ಮಂಡನೆಯಾಗಿದೆ.

CM Kumarswamy Presents Popular But Deficit Budget

ಆಡಳಿತ ಪಕ್ಷದ ಕೆಲವು ಅತೃಪ್ತ ಶಾಸಕರು ಒಂದು ಕಡೆಯಾದರೆ, ಬಿಜೆಪಿಯ ಆಪರೇಶನ್ ಕಮಲ(ಆಡಳಿತ ಪಕ್ಷ ಆರೋಪಿಸುವ ಹಾಗೆ)ದ ಗುಮ್ಮ ದೋಸ್ತಿ ಸರ್ಕಾರಕ್ಕೆ ನಿದ್ದೆ ಮಾಡಲು ಬಿಡುತ್ತಿಲ್ಲ.

ಇಂದೂ ಕೂಡ ಬಜೆಟ್ ಮಂಡನೆಗೂ ಪೂರ್ವ ಹಲವು ರಾಜಕೀಯ ಡ್ರಾಮಾಗಳಿಗೆ ರಾಜ್ಯ ಸಾಕ್ಷಿಯಾಗಬೇಕಾಯಿತು. ಬಜೆಟ್ ಮಂಡನೆಯಾಗುತ್ತದೋ ಇಲ್ಲವೋ ಎಂಬ ಅನುಮಾನದ ನಡುವೆಯೇ ಇಂದು ಸಿಎಂ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಧ್ವನಿ ಎಂದು ಹೇಳಲಾದ ಆಮಿಷದ ಆಡಿಯೋವೊಂದನ್ನು ಬಿಡುಗಡೆ ಮಾಡಿ ತಲ್ಲಣ ಮೂಡಿಸಿದರು.

ಇನ್ನು ಸಿಎಂ ಸಿಡಿಸಿದ ಬಾಂಬ್ ನಿಂದ ವಿಚಲಿತರಾಗದ ಮಾಜಿ ಸಿಎಂ ಯಡಿಯೂರಪ್ಪ, ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸವಾಲು ಹಾಕಿದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ ಸತ 3 ಗಂಟೆಗಳ ಕಾಲ ಬಜೆಟ್ ಮಂಡಿಸಿ ಗಮನಸೆಳೆದರು.

CM Kumarswamy Presents Popular But Deficit Budget

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರವುದರಿಂದ ರೈತ, ಮಧ್ಯಮ ವರ್ಗಕ್ಕೆ ಇಷ್ಟವಾಗುವ ಜನಪರ ಮತ್ತು ಜನಪ್ರಿಯ ಬಜೆಟ್ ಮಂಡಿಸಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರ.

ಆದರೂ ಕುಮಾರಸ್ವಾಮಿ ತಮಮ ಬಜೆಟ್ ಮೂಲಕ ಕೆಲವು ಯಶಸ್ವಿ ಗೋಲುಗಳನ್ನು ಹೊಡೆದಿದ್ದಾರೆ ಎಂಬುದು ಸತ್ಯ. ಆದರೆ ಒಟ್ಟಾರೆ ಬಜೆಟ್ ಹೂರಣ ನೋಡುವುದರಿಂದ ಕೆಲವು ನಕಾರಾತ್ಮಕ ಅಂಶಗಳೂ ಕಾಣ ಸಿಗುತ್ತವೆ.

CM Kumarswamy Presents Popular But Deficit Budget

ಪ್ರಮುಖವಾಗಿ ರಾಜ್ಯದ ಜಿಡಿಪಿ ಶೇ.9.4ರಷ್ಟಿದ್ದು, ಇಂದು ಮಂಡನೆಯಾದ ಬಜೆಟ್ ನ ಗಾತ್ರ 2,34,153 ಕೋಟಿ ರೂ. ಅದರಲ್ಲಿ ಒಟ್ಟು ಸ್ವೀಕೃತಿ 2,30,738 ಕೋಟಿ ರೂ. ಈ ಪೈಕಿ ರಾಜಸ್ವ ಸ್ವೀಕೃತಿ 1,81,863 ಕೋಟಿ ರೂ. ಮತ್ತು 48,601 ಕೋಟಿ ರೂ. ಸಾವರ್ವಜನಿಕ ಋಣವಿದ್ದು, 48,876 ಕೋಟಿ ರೂ. ಬಂಡವಾಳ ಸ್ವೀಕೃತಿ ಇದೆ.

ಅಂದರೆ ರಾಜ್ಯದ ಬಜೆಟ್ ನ್ನು ಕೊರತೆ ಬಜೆಟ್ ಎಂದು  ಕರೆಯಬಹುದು. ಕಾರಣ ಇಂದು ಸಿಎಂ ಕುಮಾರಸ್ವಾಮಿ ಅಂದಾಜು 3 ಸಾವಿರ ಕೊರತೆ ಬಜೆಟ್ ನ್ನು ಮಂಡಿಸಿದ್ದಾರೆ. ಬೊಕ್ಕಸದಲ್ಲಿ ನಿಗದಿತ ಪ್ರಮಾಣದ ಹಣವಿಲ್ಲದಿದ್ದರೂ ಯೆಥೇಚ್ಛ ಅನುದಾನ ಘೋಷಿಸುವುದರ ಮೂಲಕ ಸಿಎಂ ಚುನಾವಣೆಗೆ ಸಿದ್ಧವಾಗಿದ್ದಾರೆ ಎಂಬುದಂತೂ ಸ್ಪಷ್ಟ.

ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು 2017-18ನೇ ಸಾಲಿನಲ್ಲಿದ್ದ ಶೇ.10.4 ರಷ್ಟಕ್ಕೆ ಪ್ರತಿಯಾಗಿ 2018-19ನೇ ಸಾಲಿನಲ್ಲಿ ಶೇ.9.6ರಷ್ಟು ಬೆಳವಣಿಗೆಯಾಗುವುದೆಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ಬರ ಪರಿಸ್ಥಿತಿಯಿಂದ ಕೃಷಿ ವಲಯದಲ್ಲಿ ಶೇ.4.8ರ ಋಣಾತ್ಮಕ ಬೆಳವಣಿಗೆ ಆಗಬಹುದು. ಈ ಕಾರಣಕ್ಕಾಗಿ ರಾಜ್ಯದ ಆಂತರಿಕ ಉತ್ಪನ್ನದ ಬೆಳವಣಿಗೆ ದರದಲ್ಲಿ ಸ್ವಲ್ಪ ಮಟ್ಟದ ಕುಸಿತ ನಿರೀಕ್ಷಿಸಲಾಗಿದೆ.

ಆದರೆ, ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಉತ್ಪನ್ನವು 2017-18ನೇ ಸಾಲಿನಲ್ಲಿ ಇದ್ದ ಶೇ.4.7 ಮತ್ತು ಶೇ.12.2ರಷ್ಟರ ಬೆಳವಣಿಗೆಗೆ ಹೋಲಿಸಿದಲ್ಲಿ, 2018-19ನೇ ಸಾಲಿಗೆ ಕ್ರಮವಾಗಿ ಶೇ.7.4 ರಷ್ಟು ಮತ್ತು ಶೇ.12.3ರಷ್ಟು ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. 

CM Kumarswamy Presents Popular But Deficit Budget

ಆದರೂ ಕೃಷಿ ವಲಯ, ಕೈಗಾರಿಕಾ ವಲಯ, ಆರೋಗ್ಯ ವಲಯ ಸೇರಿದಂತೆ ವಿವಿಧ ವಲಯಗಳಿಗೆ ಸಿಎಂ ನೀಡಿದ ಅನುದಾನ ಗಮನ ಸೆಳೆಯುವಂತದ್ದು. ಅದರಲ್ಲೂ ಸಿರಿಧಾನ್ಯ ಬೆಳೆಗಾರರಿಗೆ 10 ಸಾವಿರ ರೂ. ಸಹಾಯಧನ, ಹಾಲು ಉತ್ಪಾದಕರಿಗೆ ಲೀಟರ್ ಗೆ 6 ರೂ. ಸಹಾಯಧನ ಹೆಚ್ಚಳ, ಮೀನುಗಾರಿಕೆ, ರೇಷ್ಮೆ ಸಾಕಾಣಿಕೆ ಮುಂತಾದವುಗಳಿಗೆ ನೀಡಿದ ಉತ್ತೇಜನ ಗಮನಾರ್ಹ.

ಇನ್ನು ಬಿಯರ್ ಹೊರತುಪಡಿಸಿದರೆ ಇನ್ಯಾವುದೇ ವಸ್ತುವಿಗೆ ತೆರಿಗೆ ಅಥವಾ ಬೆಲೆ ಹೆಚ್ಚಳ ಮಾಡದಿರುವುದು ಇಂದಿನ ಬಜೆಟ್ ನ ಪ್ರಮುಖ ಅಂಶಗಳಲ್ಲಿ ಒಂದು.

CM Kumarswamy Presents Popular But Deficit Budget

ಇನ್ನು ಚುನಾವಣೆ ಹೊಸ್ತಿಲಲ್ಲಿರುವುದರಿಂದ ಮಠ ಮಾನ್ಯಗಳಿಗೂ ಸಿಎಂ ಭರಪೂರ ಕೊಡುಗೆ ಘೋಷಿಸಿದ್ದಾರೆ. ಪ್ರಮುಖವಾಗಿ ಲಿಂಗಾಯತ, ಒಕ್ಕಲಿಗೆ ಮಠಗಳಿಗೆ ಹೆಚ್ಚಿನ ಅನುದಾನ ಘೋಷಿಸಲಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ದೋಸ್ತಿ ಸರ್ಕಾರದ ಇಂದಿನ ಬಜೆಟ್ ರೈತ ಮತ್ತು ಮಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಜನಪ್ರಿಯ ಬಜೆಟ್ ಆಗಿದ್ದು, ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಸರ್ಕಾರಕ್ಕೆ ಇದರ ಲಾಭ ಸಿಗುವುದೋ ಇಲ್ಲವೋ ಕಾದು ನೋಡಬೇಕಿದೆ.

CM Kumarswamy Presents Popular But Deficit Budget

ಇನ್ನು ಪ್ರತಿಬಾರಿಯಂತೆ ನಿಮ್ಮ ಸುವರ್ಣನ್ಯೂಸ್.ಕಾಂ ತನ್ನ ಓದುಗರಿಗೆ ರಾಜ್ಯ ಬಜೆಟ್‌ನ ಕ್ಷಣ ಕ್ಷಣದ ಮಾಹಿತಿ ಒದಗಿಸಿದ್ದು, ಓದುಗರು ತಮ್ಮ ಆಸಕ್ತಿಕರ ಕ್ಷೇತ್ರಕ್ಕೆ ಅನುಗುಣವಾಗಿ ಬಜೆಟ್ ಮಾಹಿತಿಯನ್ನು ಪಡೆಯಬಹುದಾಗಿದೆ.

ಬಜೆಟ್ ಅಧಿವೇಶನ: ರಾಜ್ಯಪಾಲ ಬಿಚ್ಚಿಟ್ಟರು ರಾಜ್ಯದ ಆರ್ಥಿಕ ‘ಸತ್ಯ’!

ರಾಜ್ಯ ಸರ್ಕಾರ ಮಾಡಲಿದೆ ಚೀನಾ ಜೊತೆ ಫೈಟ್: ರಾಜ್ಯಪಾಲರ ಉವಾಚ!

ಬೆಂಗ್ಳೂರಲ್ಲಿ ಎಷ್ಟು ಸ್ಟಾರ್ಟ್‌ಅಪ್‌?: ವಾಲಾ ಅಂದ್ರು Keep It Up!

ಬೆಳೆಸಾಲ ಮನ್ನಾಗಾಗಿ 1611 ಕೋಟಿ ರೂ. ಬಿಡುಗಡೆ: ರಾಜ್ಯಪಾಲ!

ಮೈತ್ರಿ ಬಜೆಟ್: ಇಲ್ಲಿವೆ ನಿಮ್ಮ ನಿರೀಕ್ಷೆ, ಕುಮಾರಣ್ಣ ಪಾಸಾಗಲಿದ್ದಾರಾ ಪರೀಕ್ಷೆ?

ಸಿಎಂಗೆ ಸಿದ್ದು ಬರೆದ್ರು 4 ಪತ್ರ: ಏನು ಕೇಳಿದ್ರು ಕುಮಾರಣ್ಣ ಹತ್ರ?

ಸಿದ್ಧವಾಗಿದೆ ಮಧ್ಯಮ ವರ್ಗ, ರೈತ ಸ್ನೇಹಿ ರಾಜ್ಯ ಬಜೆಟ್

ಬಜೆಟ್‌ಗೂ ಮುನ್ನವೇ ಆಫರ್: ಈರುಳ್ಳಿ ಬೆಳೆಗಾರರಿಗೆ ಬಂಪರ್!

Live|: ಚುನಾವಣೆಗೂ ದೋಸ್ತಿ? ಬಿಜೆಪಿಯೊಂದಿಗೆ ಕುಸ್ತಿ: ಕುಮಾರಣ್ಣ ಬಜೆಟ್ ರಾಜ್ಯದ ಆಸ್ತಿ!

ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

ಮತ್ತೆ ಸಿಎಂ ಕುಮಾರಸ್ವಾಮಿ ಕೈ ಹಿಡಿಯುವಳಾ ಶೃಂಗೇರಿ ಶಾರದಾಂಬೆ ?

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

ಕರ್ನಾಟಕ ಬಜೆಟ್ 2019: ಸಿದ್ದರಾಮಯ್ಯ, ಯಡಿಯೂರಪ್ಪ ಕ್ಷೇತ್ರಕ್ಕೆ ಬಂಪರ್

ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

Follow Us:
Download App:
  • android
  • ios